RR, KKR, CSKಗೆ ಹೊಸ ಕ್ಯಾಪ್ಟನ್ಸ್ – ಡೆಲ್ಲಿ ಸಾರಥ್ಯದಿಂದ ಹೊರಬಿದ್ರಾ ಪಟೇಲ್?
2026ರ IPLಗೆ 4 ತಂಡಗಳಿಗೆ ಸರ್ಜರಿ!

RR, KKR, CSKಗೆ ಹೊಸ ಕ್ಯಾಪ್ಟನ್ಸ್ – ಡೆಲ್ಲಿ ಸಾರಥ್ಯದಿಂದ ಹೊರಬಿದ್ರಾ ಪಟೇಲ್?2026ರ IPLಗೆ 4 ತಂಡಗಳಿಗೆ ಸರ್ಜರಿ!

2025ರ ಐಪಿಎಲ್​ಗೂ ಮುನ್ನ ನಡೆದಿದ್ದ ಮೆಗಾ ಹರಾಜಿನಲ್ಲಿ ಸಾಕಷ್ಟು ಸ್ಟಾರ್ ಆಟಗಾರರು ತಂಡ ಬದಲಿಸಿದ್ರು. ಕ್ಯಾಪ್ಟನ್ಸ್ ಕೂಡ ಚೇಂಜ್ ಆಗಿದ್ರು. ಹೀಗಿದ್ರೂ ಮುಂದಿನ ಆವೃತ್ತಿಗೂ ಒಂದಷ್ಟು ತಂಡಗಳಲ್ಲಿ ನಾಯಕತ್ವದ ಬದಲಾವಣೆಗೆ ಸಿದ್ಧತೆ ನಡೀತಿದೆ. 19ನೇ ಸೀಸನ್ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿರೋ ಮಾಲೀಕರು ಹೊಸ ಸಾರಥಿ ಹುಟುಕಾಟದಲ್ಲಿದ್ದಾರೆ. ಮುಂದಿನ ಆವೃತ್ತಿಗೆ ನ್ಯೂ ಕ್ಯಾಪ್ಟನ್ ಜೊತೆ ಎಂಟ್ರಿ ಕೊಡೋ ಲಿಸ್ಟ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫಸ್ಟ್ ಇದೆ.

ಇದನ್ನೂ ಓದಿ : ಸೋಶಿಯಲ್‌ ಮೀಡಿಯಾದಲ್ಲಿ ಈ ಪೋಸ್ಟ್‌ ಹಾಕ್ತೀರಾ? – ನಿಮ್ಮ ಮೇಲೂ ಕೇಸ್‌ ಬೀಳುತ್ತೆ ಹುಷಾರ್!‌

ಧೋನಿ ಅಲ್ಲ, ರುತುರಾಜ್ ಅಲ್ಲ.. ಸಿಎಸ್ ಕೆಗೆ ಹೊಸ ನಾಯಕ?

MS ಧೋನಿ ನಾಯಕತ್ವದಲ್ಲಿ CSK ತಂಡ ಐದೈದು ಸಲ ಚಾಂಪಿಯನ್ ಆಗಿದೆ. ಹೀಗಿರುವಾಗ್ಲೇ ಧೋನಿ ಉತ್ತರಾಧಿಕಾರಿಯಾಗಿ 2025 ರ IPL ನಲ್ಲಿ ರುತುರಾಜ್ ಗಾಯಕ್ವಾಡ್ ಅವರಿಗೆ ಹಸ್ತಾಂತರ ಮಾಡಲಾಗಿತ್ತು. ಆದ್ರೆ ಗಾಯಕ್ವಾಡ್‌ ಗಾಯಗೊಂಡಿದ್ರಿಂದ ಧೋನಿ ತಂಡದ ಉಸ್ತುವಾರಿ ವಹಿಸಿಕೊಂಡರು. ಗಾಯಕ್ವಾಡ್ ಇನ್ನೂ ಅಧಿಕೃತ ನಾಯಕರಾಗಿದ್ದರೂ, ಅವರ ಕ್ಯಾಪ್ಟನ್ಸಿಯಡಿ ಐದು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದಿದ್ರು. ಹೀಗಾಗಿ ನೆಕ್ಸ್​ಟ್ ಸೀಸನ್​ಗೆ ಹೊಸ ನಾಯಕನ ಹುಡುಕಾಟದಲ್ಲಿದ್ದಾರೆ. ಅದ್ರಲ್ಲೂ ಸಂಜು ಸ್ಯಾಮ್ಸನ್ ಸಿಎಸ್​ಕೆಗೆ ಬರ್ತಾರೆ ಅನ್ನೋ ಟಾಕ್ ಇದೆ. ಹಾಗೇನಾದ್ರೂ ಸಂಜು ಯೆಲ್ಲೋ ಜೆರ್ಸಿ ತೊಟ್ರೆ ಕ್ಯಾಪ್ಟನ್ ಆಗೋದು ಪಕ್ಕಾ ಆಗುತ್ತೆ.

ಕೊಲ್ಕತ್ತಾ ನೈಟ್ ರೈಡರ್ಸ್ ನಲ್ಲಿ ಯಾರಿಗೆ ಪಟ್ಟಾಭಿಷೇಕ?

2024ರ ಐಪಿಎಲ್ ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದ ಕೊಲ್ಕತ್ತಾ ತಂಡ 2025ರಲ್ಲಿ ಹೇಳಿಕೊಳ್ಳುವಂತ ಪರ್ಫಾಮೆನ್ಸ್ ನೀಡಿರಲಿಲ್ಲ. ಪ್ರಶಸ್ತಿ ವಿಜೇಯ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಕೈಬಿಟ್ಟು ಬದಲಾಗಿ,  ವೆಂಕಟೇಶ್ ಅಯ್ಯರ್ ಅವರನ್ನು 23.75 ಕೋಟಿ ರೂಪಾಯಿಗಳಿಗೆ ಉಳಿಸಿಕೊಂಡಿದ್ರು. ಕೊನೆಗೆ ಅಜಿಂಕ್ಯ ರಹಾನೆಗೆ ನಾಯಕತ್ವವನ್ನು ನೀಡಿದ್ರು. ಆದ್ರೆ KKR ಗೆ ಸಕ್ಸಸ್ ಸಿಗ್ಲಿಲ್ಲ. ಪಾಯಿಂಟ್ಸ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿ ಟೂರ್ನಿ ಮುಗಿಸಿತ್ತು. ಹೀಗಾಗಿ ಕೆಕೆಆರ್ ಗೆ ಹೊಸ ನಾಯಕನ ಅನಿವಾರ್ಯತೆ ಇದೆ. ಹಾಗೇ ಕೆಎಲ್ ರಾಹುಲ್ ಜೊತೆ ಮಾತುಕತೆ ನಡೆಯುತ್ತಿದೆ ಅನ್ನೋ ಸುದ್ದಿಯೂ ಇದೆ. ರಾಹುಲ್ ಕೆಕೆಆರ್ ಸೇರಿದ್ರೆ ಕ್ಯಾಪ್ಟನ್ ಕಂ ವಿಕೆಟ್ ಕೀಪರ್ ಕೂಡ ಆಗಬಹುದು.

ರಾಜಸ್ಥಾನದಲ್ಲಿ ಕೋಚ್ ಜೊತೆ ಕ್ಯಾಪ್ಟನ್ ಕೂಡ ಚೇಂಜ್!

ಇನ್ನು ರಾಜಸ್ಥಾನ ರಾಯಲ್ಸ್ ನಲ್ಲಿ ಈಗಾಗ್ಲೇ ಕೋಚ್ ಹುದ್ದೆಗೆ ರಾಹುಲ್ ದ್ರಾವಿಡ್ ರಾಜೀನಾಮೆ ಕೊಟ್ಟಿದ್ದಾರೆ. ಹೀಗಾಗಿ ರಾಜಸ್ಥಾನ ತಂಡ ನೆಕ್ಸ್ ಟ್ ಸೀಸನ್​ಗೆ ಹೊಸ ಕೋಚ್ ನೇಮಕ ಮಾಡ್ಬೇಕಿದೆ. ಅದ್ರ ಜೊತೆಗೆ ಕ್ಯಾಪ್ಟನ್ ಕೂಡ ಬದಲಾಗೋ ಸಾಧ್ಯತೆಗಳಿವೆ. ಈಗಾಗ್ಲೇ ಸಂಜು ಸ್ಯಾಮ್ಸನ್ RR ತೊರೆಯಲು ಬಹುತೇಕ ಸಿದ್ಧರಾಗಿರೋದ್ರಿಂದ ಹೊಸ ನಾಯಕನ ನೇಮಕ ಮಾಡ್ಬೇಕಾಗುತ್ತೆ. ಸಂಜು ಸ್ಯಾಮ್ಸನ್ 2018 ರಿಂದ RR ತಂಡದ ಭಾಗವಾಗಿದ್ದಾರೆ.  2025 ರ ಐಪಿಎಲ್‌ನಲ್ಲಿ ಸ್ಯಾಮ್ಸನ್ ಗಾಯಗೊಂಡಾಗ ರಿಯಾನ್ ಪರಾಗ್ ತಂಡವನ್ನ ಮುನ್ನಡೆಸಿದ್ರು. ಬಹುಶಃ ಮುಂದಿನ ಆವೃತ್ತಿಗೆ ಪರಾಗ್ ಅಧಿಕೃತ ಕ್ಯಾಪ್ಟನ್ ಆಬಹುದು. ಪರಾಗ್ ಅಲ್ಲದಿದ್ದರೆ, ಯಶಸ್ವಿ ಜೈಸ್ವಾಲ್ ಕೂಡ ಲಾಂಗ್ ಟರ್ಮ್ ಆಪ್ಶನ್ ಆಗಲಿದ್ದಾರೆ.

ಡೆಲ್ಲಿ ನಾಯಕನ ಸ್ಥಾನದಿಂದ ಅಕ್ಷರ್ ಪಟೇಲ್ ವಜಾ?

ಇನ್ನು ಇದೆಲ್ಲದ್ರ ನಡುವೆ ಲೇಟೆಸ್ಟ್ ಎನ್ನುವಂತೆ ಡೆಲ್ಲಿ ಕ್ಯಾಪಿಟಲ್ಸ್​ನಲ್ಲೂ ದೊಡ್ಡ ಬದಲಾವಣೆಯ ಹಿಂಟ್ ಸಿಕ್ಕಿದೆ.  ಅಕ್ಷರ್ ಪಟೇಲ್ ಅವರನ್ನು ಫ್ರಾಂಚೈಸಿಯು ನಾಯಕತ್ವದಿಂದ ವಜಾಗೊಳಿಸಲಿದ್ದಾರೆ ಎನ್ನಲಾಗಿದೆ. ಹೊಸ ನಾಯಕ ಯಾರೆಂಬುದು ಇನ್ನೂ ಸಹ ಬಹಿರಂಗವಾಗಿಲ್ಲ. ಇದಾಗ್ಯೂ ಕ್ಯಾಪ್ಟನ್ ರೇಸ್​ನಲ್ಲಿ ಮೂವರ ಹೆಸರುಗಳು ರೇಸ್​ನಲ್ಲಿವೆ. ಕೆಎಲ್ ರಾಹುಲ್​ರನ್ನ ತಂಡದಲ್ಲೇ ಉಳಿಸಿಕೊಂಡು ನಾಯಕತ್ವದ ಜವಾಬ್ದಾರಿ ಕೊಡೋದು. ರಾಹುಲ್​ಗೆ ಈಗಾಗ್ಲೇ ನಾಯಕತ್ವದ ಅನುಭವ ಇದೆ. ಫಾಫ್ ಡುಪ್ಲೆಸಿಸ್ ಕೂಡ ಆಯ್ಕೆ ಇದೆ. ಆರ್​ಸಿಬಿಯನ್ನ 3 ವರ್ಷ ಕ್ಯಾಪ್ಟನ್ ಆಗಿ ಲೀಡ್ ಮಾಡಿದ್ರು. ಅಥವಾ ಅಚ್ಚರಿ ಎನ್ನುವಂತೆ ಟ್ರಿಸ್ಟನ್ ಸ್ಟಬ್ಸ್ ಗೆ ನಾಯಕತ್ವ ನೀಡಿದ್ರೂ  ನೀಡಬಹುದು.

ಉಳಿದಂತೆ ಆರ್​ಸಿಬಿಯಲ್ಲಿ ರಜತ್ ಪಾಟೀದಾರ್, ಮುಂಬೈ ಇಂಡಿಯನ್ಸ್​ನಲ್ಲಿ ಹಾರ್ದಿಕ್ ಪಾಂಡ್ಯ, ಗುಜರಾತ್ ಟೈಟನ್ಸ್​ನಲ್ಲಿ ಶುಭ್​ಮನ್ ಗಿಲ್, ಸನ್ ರೈಸರ್ಸ್ ಹೈದ್ರಾಬಾದ್​ನಲ್ಲಿ ಪ್ಯಾಟ್ ಕಮಿನ್ಸ್, ಲಕ್ನೋ ಸೂಪರ್ ಜೇಂಟ್ಸ್ ಗೆ ರಿಷಭ್ ಪಂತ್ ಮತ್ತು ಪಂಜಾಬ್ ಕಿಂಗ್ಸ್​ನಲ್ಲಿ ಶ್ರೇಯಸ್ ಅಯ್ಯರ್ ನಾಯಕರಾಗಿ ಕಂಟಿನ್ಯೂ ಆಗ್ತಾರೆ.

Shantha Kumari