ಏಷ್ಯಾಕಪ್ ಶೆಡ್ಯೂಲ್ ದಿಢೀರ್ ಚೇಂಜ್ – 18 ಪಂದ್ಯಗಳಿಗೆ ಹೊಸ ಟೈಮಿಂಗ್ಸ್ ಏಕೆ?
IND Vs PAK ಫೈಟ್ ಟಿಕೆಟ್ ₹15 ಲಕ್ಷ!

ಏಷ್ಯಾಕಪ್ ಶೆಡ್ಯೂಲ್ ದಿಢೀರ್ ಚೇಂಜ್ – 18 ಪಂದ್ಯಗಳಿಗೆ ಹೊಸ ಟೈಮಿಂಗ್ಸ್ ಏಕೆ?IND Vs PAK ಫೈಟ್ ಟಿಕೆಟ್ ₹15 ಲಕ್ಷ!

ಏಷ್ಯಾಕಪ್​ನಲ್ಲಿ ಅತೀಹೆಚ್ಚು ಬಾರಿ ಚಾಂಪಿಯನ್ ಪಟ್ಟಕ್ಕೇರಿರೋ ಟೀಂ ಇಂಡಿಯಾ ಇದೀಗ 9ನೇ ಬಾರಿಗೆ ಟ್ರೋಫಿ ಗೆಲುವಿನ ಟಾರ್ಗೆಟ್ ಇಟ್ಕೊಂಡಿದೆ. ಹಾಗಂತ ಭಾರತ ಬಲಿಷ್ಠ ತಂಡವೇ ಆಗಿದ್ರೂ ಉಳಿದ ಟೀಂಗಳನ್ನ ಅಷ್ಟು ಈಸಿಯಾಗಿ ತಗೊಳ್ಳೋಕೆ ಆಗಲ್ಲ. ಅದೂ ಅಲ್ದೇ ಈ ಸಲ ಬರೋಬ್ಬರಿ 17 ವರ್ಷಗಳ ನಂತರ ಮೊದಲ ಬಾರಿಗೆ ಟೀಂ ಇಂಡಿಯಾ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಲ್ಲದೆ ಆಡಲಿದೆ. 2012ರ ನಂತರ ಈ ಇಬ್ಬರು ಸೀನಿಯರ್ ಆಟಗಾರರು ಟೂರ್ನಮೆಂಟ್‌ನಿಂದ ಹೊರಗುಳಿದಿದ್ದಾರೆ. ಟಿ-20 ಮಾದರಿಯಲ್ಲಿ ಭಾರತದ ರೆಕಾರ್ಡ್ಸ್ ಅತ್ಯದ್ಭುತವಾಗಿದ್ದು ಏಷ್ಯಾಕಪ್​ನಲ್ಲೂ ಕಪ್ ಗೆಲ್ಲೋ ಫೇವರೆಟ್ ಟೀಂ ಎನಿಸಿಕೊಂಡಿದೆ. ಹಾಗೇ ಏಷ್ಯಾಕಪ್ ಆಯೋಜನೆಯಲ್ಲಿ ಕೆಲವೊಂದಿಗೆ ಚೇಂಜಸ್ ಕೂಡ ಆಗ್ತಿದೆ.

ಇದನ್ನೂ ಓದಿ : ಸೆಪ್ಟೆಂಬರ್‌ 1ರಿಂದ ಹಲವು ರೂಲ್ಸ್ ಚೇಂಜ್ – ಯುಪಿಎಸ್‌ ಡೆಡ್‌ಲೈನ್‌, ಆಧಾರ್‌ ಅಪ್‌ ಡೇಟ್ ಸೇರಿ ಏನೆಲ್ಲಾ ಬದಲಾವಣೆ ಆಗಿವೆ ಗೊತ್ತಾ?

2025ರ ಏಷ್ಯಾ ಕಪ್ ಪಂದ್ಯದ ಆರಂಭದ ಸಮಯದಲ್ಲಿ ದಿಢೀರ್ ಬದಲಾವಣೆಯಾಗಿದೆ. ದುಬೈನ  ವೆದರ್​ ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ಮಾಡಲಾಗಿದೆ. ಸೆಪ್ಟೆಂಬರ್ 9ರಿಂದ ಸೆಪ್ಟೆಂಬರ್28ರ ನಡುವೆ ನಡೆಯಲಿರುವ ಏಷ್ಯಾ ಕಪ್‌ನ ಒಟ್ಟು 19 ಪಂದ್ಯಗಳಲ್ಲಿ 18 ಪಂದ್ಯಗಳು ಈ ಮೊದಲು ಶೆಡ್ಯೂಲ್ ಆಗಿದ್ದ ಟೈಮಿಂಗ್ಸ್ ಗಿಂತ ಅರ್ಧಗಂಟೆ ತಡವಾಗಿ ಸ್ಟಾರ್ಟ್ ಆಗಲಿದೆ. ಅಂದ್ರೆ ಪಂದ್ಯಗಳು ನಡೆಯುವ ಯುಎಇಯ ಸಮಯ ಸಂಜೆ 6.30ಕ್ಕೆ ಪ್ರಾರಂಭವಾಗಲಿವೆ. ಭಾರತೀಯ ಕಾಲಮಾನದ ಪ್ರಕಾರ, ಈ ಎಲ್ಲಾ ಪಂದ್ಯಗಳು ರಾತ್ರಿ  ಗಂಟೆಗೆ ಪ್ರಾರಂಭವಾಗಲಿವೆ. ಇದಕೂ ಮೊದಲು ಭಾರತದ ಕಾಲಮಾನ ರಾತ್ರಿ 7.30ಕ್ಕೆ ಪಂದ್ಯಗಳು ಪ್ರಾರಂಭವಾಗಬೇಕಿತ್ತು. ಆದ್ರೆ ದುಬೈನಲ್ಲಿ ಬಿಸಿಲಿನ ತಾಪದ ತೀವ್ರತೆ ಹೆಚ್ಚಾಗಿರೋದ್ರಿಂದ ಅಲ್ಲಿ 6 ಗಂಟೆ ಬದ್ಲಿಗೆ 6.30ಕ್ಕೆ ಶುರು ಮಾಡ್ತಾರೆ. ಇಂಡಿಯನ್ ಟೈಮಿಂಗ್ಸ್ ಪ್ರಕಾರ ರಾತ್ರಿ 8 ಗಂಟೆಯಾದಂತಾಗುತ್ತೆ. ಹೀಗಿದ್ರೂ ಸೆಪ್ಟೆಂಬರ್ 15 ರಂದು ಯುಎಇ ಮತ್ತು ಓಮನ್ ನಡುವಿನ ಪಂದ್ಯ ಅಬುಧಾಬಿಯ ಜಾಯೆದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಧ್ಯಾಹ್ನದ ಹೊತ್ತಲ್ಲಿ ನಡೆಯೋದ್ರಿಂದ ಇದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಇನ್ನು ಐಸಿಸಿ ಮತ್ತು ಏಷ್ಯಾಕಪ್​ನಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆಯೋ ಭಾರತ ಮತ್ತು ಪಾಕ್ ಪಂದ್ಯದ ಟಿಕೆಟ್​ಗೆ ಈಗಲೂ ಕೂಡ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ.ಅದ್ರಲ್ಲೂ ಕಾಳಸಂತೆಯ ಮಾರಾಟದ ರೇಟ್ ಕೇಳಿದ್ರೆ ಶಾಕಿಂಗ್ ಆಗಿದೆ.

ಅಭಿಮಾನಿಗಳ ಜೇಬಿಗೆ ಕತ್ತರಿ!

ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನ ಸೆಪ್ಟೆಂಬರ್ 14

ಪಂದ್ಯದ ಟಿಕೆಟ್‌ ಗಳು ಕಾಳ ಸಂತೆಯಲ್ಲಿ 15 ಲಕ್ಷ ರೂಪಾಯಿಗೆ ಮಾರಾಟ

ಅನಧಿಕೃತ ವೆಬ್‌ಸೈಟ್‌ಗಳಲ್ಲಿ 15.75 ಲಕ್ಷ ರೂ.ಗಳಿಗೆ ಮಾರಾಟವಾಗುತ್ತಿವೆ

ಸುಭಾನ್ ಅಹ್ಮದ್ ಈ ವಂಚನೆ ಬಗ್ಗೆ ಅಭಿಮಾನಿಗಳಲ್ಲಿ ಜಾಗೃತಿ

ಟಿಕೆಟ್‌ ಗಳ ಬೆಲೆ 26,256 ರೂಪಾಯಿಗಳಿಂದ ಪ್ರಾರಂಭವಾಗಿ 15.75 ಲಕ್ಷ ರೂ

ಅನಧಿಕೃತ ವೆಬ್‌ ಸೈಟ್‌ ಗಳಿಂದ ಟಿಕೆಟ್ ಖರೀದಿಸುವವರಿಗೆ ಇಸಿಬಿ ಸಿಒಒ ಎಚ್ಚರಿಕೆ

ಸೆಪ್ಟೆಂಬರ್ 21 ರಂದು ನಡೆಯಲಿರುವ ಸೂಪರ್ 4 ಪಂದ್ಯಗಳ ಟಿಕೆಟ್ ​ಗಳು ಸೇಲ್

ಭಾರತ vs ಯುಎಇ ಮತ್ತು ಭಾರತ vs ಓಮನ್ ಸೇರಿದಂತೆ ಇತರ ಪಂದ್ಯಗಳ ಟಿಕೆಟ್

​ ಭಾರತದ ಜೊತೆಗೆ ಪಾಕಿಸ್ತಾನದ ಪಂದ್ಯಗಳ ಟಿಕೆಟ್‌ ಗಳನ್ನು ಸಹ ಮಾರಾಟಕ್ಕೆ

Shantha Kumari