ಕರ್ಣನ ಮದ್ವೆಗೆ ಒಪ್ಪಿದ ರಮೇಶ.. ಡಾಕ್ಟರ್‌ ಮನೆ ಸೊಸೆ ನಿಧಿ ಅಲ್ವಾ? – ತಂಗಿ ಮದ್ವೆಗೆ ನಿತ್ಯಾ ವಿಲನ್?‌ 

ಕರ್ಣನ ಮದ್ವೆಗೆ ಒಪ್ಪಿದ ರಮೇಶ.. ಡಾಕ್ಟರ್‌ ಮನೆ ಸೊಸೆ ನಿಧಿ ಅಲ್ವಾ? – ತಂಗಿ ಮದ್ವೆಗೆ ನಿತ್ಯಾ ವಿಲನ್?‌ 

ಕರ್ಣ ಇಡೀ ಊರಿಗೆ ಸೆಲೆಬ್ರಿಟಿ ಡಾಕ್ಟರ್‌ ಆಗಿದ್ರೂ ಮನೆಯಲ್ಲಿ ಮಾತ್ರ ಆತ ಕೆಲಸದವನಿಂತ ಕಡೆಯಾಗಿದ್ದಾನೆ. ಇಡೀ ಆಸ್ತಿ ಆತನ ಹೆಸರಿಗಿದ್ರೂ ನೆಮ್ಮದಿಯೇ ಇಲ್ಲ.. ಮನೆಯಲ್ಲೇ ಆತನ ವಿರುದ್ಧ ಏನಾದ್ರೂ ಒಂದು ಷಡ್ಯಂತರ ಮಾಡ್ತಾ ಬಂದಿದ್ದಾರೆ. ಇದೀಗ ಕರ್ಣನ ಆಸ್ತಿ ಹೊಡೆಯಲು ಪ್ಲ್ಯಾನ್‌ ಮಾಡಿದ್ದ ರಮೇಶ ಕಂಪ್ಲೀಟ್‌ ಚೇಂಜ್‌ ಆಗಿದ್ದಾನೆ. ಇದೀಗ ಆತ ಕರ್ಣನನ್ನ ತನ್ನ ಮಗ ಅಂತ ಒಪ್ಪಿಕೊಂಡಿದ್ದು ಮಾತ್ರವಲ್ಲ.. ಕರ್ಣನಿಗೆ ಮದುವೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾನೆ.

ಇದನ್ನೂ ಓದಿ:  ಊಟ ಮಾಡುವಾಗ ಗಂಟಲಲ್ಲಿ ಸಿಲುಕಿದ ಅನ್ನದ ಅಗುಳು! – ದುರಂತ ಅಂತ್ಯ ಕಂಡ ಯುವಕ!

ಕರ್ಣ ಸೀರಿಯಲ್‌ ಈಗ ರೋಚಕ ತಿರುವು ಪಡೆದುಕೊಂಡಿದೆ. ಕರ್ಣನ ಹೆಸರಲ್ಲಿದ್ದ ಆಸ್ತಿ ಹೊಡಿಬೇಕು ಅಂತಾ  ನಯನತಾರಾ, ರಮೇಶ ಏನಾದ್ರೂ ಒಂದು ಕುತಂತ್ರ ಮಾಡ್ತಾನೆ ಬಂದಿದ್ದಾರೆ. ಹೀಗಾಗಿ ಕರ್ಣ ಮದುವೆ ಆಗ್ಬಾರ್ದು ಅಂತಾ ರಮೇಶ ಅಗ್ರಿಮೆಂಟ್‌ಗೂ ಸಿಗ್ನೇಚರ್‌ ಹಾಕಿಸಿದ್ದ.. ಈ ವಿಚಾರ ಗೊತ್ತಾಗ್ತಿದ್ದಂತೆ ಅಜ್ಜಿ ಅಗ್ರಿಮೆಂಟ್‌ನ ಹರಿದು ಹಾಕಿದ್ರು, ಆದ್ರೂ ರಮೇಶ ಸುಮ್ನೆ ಇರ್ಲಿಲ್ಲ.. ಬಳಿಕ ಅಷ್ಟೇ ಅಲ್ಲ ಕರ್ಣನಿಗೆ ಬಂದ ಸಂಬಂಧವೆಲ್ಲಾ ಮುರಿದು ಬೀಳುವಂತೆ ಮಾಡ್ತಿದ್ದ.. ಕರ್ಣನ ತಾಯಿ ಬಗ್ಗೆ ಕೆಟ್ಟದಾಗಿ ಕಮೆಂಟ್‌ ಮಾಡಿ ಆತನನ್ನ ಕೆರಳಿಸಿದ್ದ.. ಇದ್ರಿಂದಾಗಿ ಕರ್ಣ ಫುಲ್‌ ಸಿಟ್ಟು ಮಾಡಿಕೊಂಡಿದ್ದ. ರಮೇಶನಿಗೆ ಚಾಚು ತೋರಿಸಿ, ತಾಯಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ರೆ ಸುಮ್ನೆ ಇರಲ್ಲ ಅಂತಾ ವಾರ್ನ್‌ ಕೂಡ ಮಾಡಿದ್ದ. ಮೊಮ್ಮಗನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ, ರಮೇಶನನ್ನ ಮನೆಯಿಂದ ಆಚೆ ಕೂಡ ಹಾಕಿದ್ಲು ಅಜ್ಜಿ. ಆದ್ರೆ ಕರ್ಣ ರಮೇಶನಿಗೆ ಸಾರಿ ಕೇಳಿ ಮತ್ತೆ ಮನೆಗೆ ಕರ್ಕೊಂಡು ಬಂದಿದ್ದಾನೆ. ಆದ್ರೀಗ ರಮೇಶ ಮನೆಗೆ ಬರ್ತಿದ್ದಂತೆ ಕಂಪ್ಲೀಟ್‌ ಚೇಂಜ್‌ ಆಗಿದ್ದಾನೆ.. ಇದೀಗ ರಮೇಶ ಕರ್ಣನನ್ನ ಮಗ ಅಂತ ಒಪ್ಪಿಕೊಂಡಿದ್ದು ಮಾತ್ರವಲ್ಲ.. ಮದುವೆಗೂ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾನೆ.

ಹೌದು, ರಮೇಶ ಮನೆಗೆ ಬರ್ತಿದ್ದಂತೆ ತಾಯಿ ಬಳಿಯೂ ಕ್ಷಮೆ ಕೇಳಿದ್ದಾನೆ. ಕರ್ಣನನ್ನ ಕಂಡು ಕೆಂಡ ಕಾರ್ತಿದ್ದ ರಮೇಶ ಆತನನ್ನ ಗಟ್ಟಿಯಾಗಿ ಅಪ್ಪಿಕೊಂಡಿದ್ದಾನೆ. ನಾನು ನಿನ್ನತ್ರ ಹೇಗೆ ಕ್ಷಮೆ ಕೇಳಲಿ.. ಬದಲಾಗೋದಿಕ್ಕೆ ಒಂದು ಅವಕಾಶ ಕೊಡ್ತೀಯಾ.. ಸಾಧ್ಯವಾದಷ್ಟು ನನ್ನನ್ನ ನಾನು ಬದಲಾಯಿಸಿಕೊಳ್ತೀನಿ ಅಂತಾ ರಮೇಶ ಹೇಳಿದ್ದಾನೆ. ಇದೀಗ ಕರ್ಣನ ಮೇಲೆ  ಮೇಲೆ ಪ್ರೀತಿ ಉಕ್ಕಿ ಹರಿತಿದೆ. ಅಷ್ಟೇ ಅಲ್ಲ.. ನೀನು ಮದುವೆ ಆಗು ಕರ್ಣ.. ಇನ್ನು ಯಾವುದೇ ಕಾರಣಕ್ಕೂ ಅಡ್ಡಗಾಲು ಹಾಕಲ್ಲ.. ನೀನು ಮದುವೆ ಆಗ್ಬೇಕು ಅಷ್ಟೇ ಅಂತಾ ಹೇಳಿದ್ದಾನೆ ರಮೇಶ. ಆತನ ಮಾತು ಕೇಳಿ ಎಲ್ಲರೂ ಶಾಕ್‌ ಆಗಿದ್ದಾರೆ. ಆದ್ರೆ ಕರ್ಣ ಮಾತ್ರ ಫುಲ್‌ ಖುಷಿಯಲ್ಲಿ ತೇಲಾಡ್ತಿದ್ದಾನೆ. ಆದ್ರೆ ರಮೇಶ ಇಷ್ಟು ಬೇಗ ಬದಲಾಗೋದಿಕ್ಕೆ ಚಾನ್ಸೇ ಇಲ್ಲ ಅಂತಾ ವೀಕ್ಷಕರು ಕಮೆಂಟ್‌ ಮಾಡ್ತಿದ್ದಾರೆ. ಯಾಕಂದ್ರೆ ರಮೇಶ ಕರ್ಣನ ಆಸ್ತಿ ಹೊಡಿಬೇಕು ಅಂತ ಅಂದ್ಕೊಂಡಿದ್ದಾನೆ. ಹೀಗಾಗಿ ಒಳ್ಳೆಯವನಂತೆ ಡ್ರಾಮಾ ಮಾಡ್ತಿದ್ದಾನೆ ಅಂತ ಹೇಳ್ತಿದ್ದಾರೆ.

ಇದೀಗ ರಮೇಶ ಕರ್ಣನ ಮದುವೆಗೆ ಒಪ್ಪಿದ್ದಾನೆ. ಆದ್ರೆ ಕರ್ಣ ನಿಧಿ ಪ್ರಪೋಸಲ್‌ ನ ಒಪ್ಪಿಕೊಳ್ತಾನಾ ಅಥವಾ ರಮೇಶ ನೋಡಿದ ಹುಡುಗಿಯನ್ನೇ ಮದುವೆ ಆಗ್ತಾನಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ. ಮತ್ತೊಂದ್ಕಡೆ, ನಿತ್ಯಾಳಿಗೆ ನಿಧಿ ಕರ್ಣನನ್ನ ಲವ್‌ ಮಾಡ್ತಿದ್ದಾಳಾ ಅನ್ನೋ ಅನುಮಾನ ಶುರುವಾಗಿದೆ. ಇದೀಗ ಆಕೆಯ ಬಳಿ ನಿತ್ಯಾ ವಿಚಾರಿಸಿದ್ದಾಳೆ.  ಇದೀಗ ನಿತ್ಯಾಳೇ ಈ  ಪ್ರೀತಿಗೆ ವಿಲನ್‌ ಆಗೋ ಸಾಧ್ಯತೆ ಇದೆ. ಯಾಕಂದ್ರೆ, ತೇಜಸ್‌ ಮನೆಯಲ್ಲಿ ನಿತ್ಯಾಳನ್ನ ಒಪ್ಪಿಕೊಳ್ತಿಲ್ಲ.. ಇತ್ತ ನಿತ್ಯಳಾ ಮನಸ್ಸು ಕರ್ಣನ ಕಡೆಗೆ ವಾಲ್ತಿದೆ. ಹೀಗಾಗಿ ನಿತ್ಯಾಳೇ ತಂಗಿ ಪ್ರೀತಿಗೆ ವಿಲನ್‌ ಆಗ್ಬೋದು ಅನ್ನೋ ಲೆಕ್ಕಾಚಾರ ಹಾಕ್ತಿದ್ದಾರೆ ವೀಕ್ಷಕರು.

Shwetha M