ಸೋಶಿಯಲ್‌ ಮೀಡಿಯಾದಲ್ಲಿ ಈ ಪೋಸ್ಟ್‌ ಹಾಕ್ತೀರಾ? – ನಿಮ್ಮ ಮೇಲೂ ಕೇಸ್‌ ಬೀಳುತ್ತೆ ಹುಷಾರ್!‌

ಸೋಶಿಯಲ್‌ ಮೀಡಿಯಾದಲ್ಲಿ ಈ ಪೋಸ್ಟ್‌ ಹಾಕ್ತೀರಾ? – ನಿಮ್ಮ ಮೇಲೂ ಕೇಸ್‌ ಬೀಳುತ್ತೆ ಹುಷಾರ್!‌

ಇತ್ತೀಚೆಗೆ ಸಾರ್ವಜನಿಕ ವ್ಯಕ್ತಿಗಳ ಬಗ್ಗೆ, ಸಂಸ್ಥೆಗಳ ಬಗ್ಗೆ ಅವಹೇಳನಕಾರಿಯಾಗಿ ಕಾಮೆಂಟ್ ಹಾಕುವುದು, ಆದಾದ ಬಳಿಕ ಕೇಸ್ ಹಾಕಿಸಿಕೊಂಡು ಪೊಲೀಸರಿಂದ ಬಂಧನಕ್ಕೊಳಗಾದ ಜನರು ಇದ್ದಾರೆ. ಇನ್ಮುಂದೆ ಸೋಶಿಯಲ್‌ ಮೀಡಿಯಾದಲ್ಲಿ ಬೇಕಾಬಿಟ್ಟಿ ಕಮೆಂಟ್‌ ಹಾಕಿದ್ರೆ ಹುಷಾರ್‌.. ನೀವು ಕೂಡ ಜೈಲು ಪಾಲಾಗ್ಬೋದು.

ಇದನ್ನೂ ಓದಿ: ಊಟ ಮಾಡುವಾಗ ಗಂಟಲಲ್ಲಿ ಸಿಲುಕಿದ ಅನ್ನದ ಅಗುಳು! – ದುರಂತ ಅಂತ್ಯ ಕಂಡ ಯುವಕ!

ಇತ್ತೀಚೆಗೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ  ಬೇರೆಯವರನ್ನು ನಿಂದಿಸುವುದನ್ನು ಕೆಟ್ಟ ಪ್ರವೃತ್ತಿಯಾಗಿ ಬೆಳೆಸಿಕೊಂಡಿದ್ದಾರೆ. ಇತ್ತೀಚೆಗೆ ಚಿತ್ರನಟಿ ರಮ್ಯಾ ಹಾಗೂ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿರನ್ನು ಸೋಷಿಯಲ್ ಮೀಡಿಯಾಗಳಲ್ಲಿ ನಿಂದಿಸಿ ಅನೇಕರು ಈಗ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ. ಇನ್ಮುಂದೆ ಸೋಶಿಯಲ್‌ ಮೀಡಿಯಾದಲ್ಲಿ ಕೆಟ್ಟ ಕಾಮೆಂಟ್‌, ಮೆಸೇಜ್‌ ಹಾಕಿದ್ರೆ ಅಂಥವರ ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆ  ಮುಂದಾಗಿದೆ. ಇದೀಗ ಸೋಷಿಯಲ್ ಮೀಡಿಯಾ ಬಳಕೆದಾರರಿಕೆ ಕರ್ನಾಟಕ ಪೊಲೀಸ್ ಇಲಾಖೆ ಎಚ್ಚರಿಕೆ ಸಂದೇಶ ನೀಡಿದೆ.

ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಹಾಕುವ ಮುನ್ನ ಎಚ್ಚರ ವಹಿಸಿ. ಯಾವುದೇ ಸಂಘಟನೆ ಅಥವಾ ಸಂಸ್ಥೆಯ ವಿರುದ್ಧ ಅವಹೇಳನಕಾರಿಯಾಗಿ, ಅಥವಾ ಸಾರ್ವಜನಿಕ ಶಾಂತಿಭಂಗ ಕಾನೂನು ಸುವ್ಯವಸ್ಥೆಗೆ ತೊಡಕಾಗುವ ಪೋಸ್ಟ್ ಹಾಕಿದವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ. ಅಂತಹ ಪುನರಾವರ್ತಿತ ಚಟುವಟಿಕೆ ಕಠಿಣ ಕ್ರಮಕ್ಕೆ ದಾರಿಯಾಗಬಹುದು. ಆದ್ದರಿಂದ ಯಾವುದೇ ಪೋಸ್ಟ್ ಹಾಕುವ ಮುನ್ನ ಎಚ್ಚರ ವಹಿಸಿ ಎಂದು ಸಂದೇಶ ನೀಡಿದೆ.  ಸಾಮಾಜಿಕ ಜಾಲತಾಣದಲ್ಲಿ ಈ ಎಚ್ಚರಿಕೆ ಸಂದೇಶ  ಪೊಲೀಸ್ ಇಲಾಖೆ ಹಂಚಿಕೊಂಡಿದೆ.

Shwetha M