ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಆರಂಭಕ್ಕೆ ಮುಹೂರ್ತ ಫಿಕ್ಸ್!‌ – ಡೇಟ್‌ ಅನೌನ್ಸ್‌ ಮಾಡಿದ ಕಿಚ್ಚ ಸುದೀಪ್!

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಆರಂಭಕ್ಕೆ ಮುಹೂರ್ತ ಫಿಕ್ಸ್!‌ – ಡೇಟ್‌ ಅನೌನ್ಸ್‌ ಮಾಡಿದ ಕಿಚ್ಚ ಸುದೀಪ್!

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಅಂದ್ರೆ ಅದು ಬಿಗ್‌ ಬಾಸ್‌.. ಸೀಸನ್‌ 11 ಯಶಸ್ವಿಯಾಗಿ ಮುಗಿದಿದೆ. ಸೀಸನ್‌ 12 ಯಾವಾಗ ಶುರುವಾಗುತ್ತೆ ಅಂತಾ ಕಾಯ್ತಿದ್ದ ಫ್ಯಾನ್ಸ್‌ ಗೆ ಕಡೆಗೂ ಕಿಚ್ಚ ಸುದೀಪ್‌ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ಸೆಪ್ಟೆಂಬರ್‌ ತಿಂಗಳಲ್ಲಿ ಕಿರುತೆರೆಗೆ ಮತ್ತೆ ಬರಲಿದ್ದೇನೆ ಎಂದು ಕಿಚ್ಚ ಸುದೀಪ್‌ ಅನೌನ್ಸ್‌ ಮಾಡಿದ್ದಾರೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಗುಡ್​​ನ್ಯೂಸ್! – LPG ವಾಣಿಜ್ಯ ಸಿಲಿಂಡರ್‌ ಬೆಲೆಯಲ್ಲಿ ಭಾರೀ ಇಳಿಕೆ!

ಕಲರ್ಸ್‌ ಕನ್ನಡ ವಾಹಿನಿ ಮೊನ್ನೆ ಮೊನ್ನೆಯಷ್ಟೇ ಬಿಗ್ ಬಾಸ್ ಕನ್ನಡ ಸೀಸನ್ 12ರ ಹೊಸ ಲೋಗೋ ಬಿಡುಗಡೆ ಮಾಡುವ ಮೂಲಕ ಶೀಘ್ರದಲ್ಲೇ ಅತಿ ದೊಡ್ಡ ರಿಯಾಲಿಟಿ ಶೋ ಶುರುವಾಗುವ ಸೂಚನೆ ನೀಡಿತ್ತು. ಸೆಪ್ಟೆಂಬರ್ 2 ರಂದು ಕಿಚ್ಚ ಸುದೀಪ್‌ ಅವರ ಮೊದಲ ಪ್ರೋಮೋ ಔಟ್ ರಿಲೀಸ್‌ ಆಗಲಿದೆ. ಈ ಮಧ್ಯೆ ಸುದೀಪ್ ಅವರು ಬಿಬಿಕೆ 12 ಶುರುವಾಗುವ ದಿನಾಂಕವನ್ನು ಕೂಡ ಘೋಷಿಸಿದ್ದಾರೆ.

ಮೈಸೂರಿನಲ್ಲಿ ನಿನ್ನೆ (ಆಗಸ್ಟ್ 31) ನಿರ್ಮಾಪಕ, ಉದ್ಯಮಿ, ರಾಜಕಾರಣಿ ಸಂದೇಶ್ ನಾಗರಾಜ್ ಹುಟ್ಟುಹಬ್ಬದ‌ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸುದೀಪ್ ಸಹ ಅತಿಥಿಯಾಗಿ ಭಾಗಿ ಆಗಿದ್ದರು. ಈ ವೇಳೆ ಮಾತನಾಡಿದ ಸುದೀಪ್, ಶೀಘ್ರವೇ ತೆರೆ ಮೇಲೆ ಬರಲಿದ್ದೇನೆ. ಸೆಪ್ಟೆಂಬರ್ 28ರಿಂದ ಕಿರುತೆರೆಗೆ ಬರಲಿದ್ದೇನೆ ಆಶೀರ್ವಾದ ಮಾಡಿ  ಎಂದರು. ಆ ಮೂಲಕ ಬಿಗ್​​ಬಾಸ್ ಸೀಸನ್ 12 ಸೆಪ್ಟೆಂಬರ್ 28ಕ್ಕೆ ಪ್ರಾರಂಭ ಆಗಲಿದೆ ಎಂದು ಘೋಷಣೆ ಮಾಡಿದರು.

ಇನ್ನು ಕಿಚ್ಚ ಸುದೀಪ್ ಅವರು ಸೆಪ್ಟೆಂಬರ್ 2ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವಿಶೇಷ ದಿನಕ್ಕಾಗಿ ಫ್ಯಾನ್ಸ್ ಕೂಡ ಕಾದಿದ್ದಾರೆ. ಈ ದಿನದಂದು ಬಿಗ್ ಬಾಸ್ ಪ್ರೋಮೋ ಬಿಡುಗಡೆ ಕಾಣಲಿದೆ. ಸೆ. 2 ರಂದು ಆಯೋಜಕರು ಪ್ರೋಮೋ ರಿಲೀಸ್‌ ಮಾಡಲಿದ್ದು, ಹೊಸ ಸೀಸನ್‌ಗೆ ತಕ್ಕಂತೆ ವಿಶೇಷ ಪ್ರೋಮೋವನ್ನು ಶೂಟ್‌ ಮಾಡಲಾಗಿದೆ. ಇದರ ಜೊತೆಗೆ ಇಂದು ಸಂಜೆ 7:02ಕ್ಕೆ ಸುದೀಪ್ ಹೊಸ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ಟೀಸರ್ ಬಿಡುಗಡೆ ಆಗಲಿದೆ.‌

Shwetha M