ಏಷ್ಯಾಕಪ್ ನಲ್ಲಿವೆ ಅತ್ಯದ್ಭುತ ದಾಖಲೆಗಳು – ವಿರಾಟ್, ರೋಹಿತ್ ರೆಕಾರ್ಡ್ಸ್ ಹೇಗಿವೆ?

ಏಷ್ಯಾಕಪ್ ನಲ್ಲಿವೆ ಅತ್ಯದ್ಭುತ ದಾಖಲೆಗಳು – ವಿರಾಟ್, ರೋಹಿತ್ ರೆಕಾರ್ಡ್ಸ್ ಹೇಗಿವೆ?

14 ಬಾರಿ ಏಕದಿನ ಮಾದರಿ ಹಾಗೇ 2 ಸಲ ಟಿ20ಐ ಮಾದರಿಯಲ್ಲಿ ಟೋಟಲ್ಲಾಗಿ 16 ಆವೃತ್ತಿಗಳು ಏಷ್ಯಾಕಪ್​ನಲ್ಲಿ ಕಂಪ್ಲೀಟ್ ಆಗಿವೆ. ಇದೀಗ 17ಸೀಸನ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ 16 ಆವೃತ್ತಿಗಳ ಇತಿಹಾಸದಲ್ಲಿ ಮಹೇಂದ್ರ ಸಿಂಗ್ ಧೋನಿ ಮಾತ್ರವೇ ಎರಡೂ ಮಾದರಿಯಲ್ಲಿ ಕಪ್ ಗೆದ್ದಿರೋ ಏಕೈಕ ನಾಯಕ. ಅಲ್ದೇ ದಶಕದವರೆಗೂ ಏಷ್ಯಾಕಪ್​ನಲ್ಲಿ ಸ್ಟಾರ್ ಆಟಗಾರರಾಗಿದ್ದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ ಟೂರ್ನಿಯಲ್ಲಿ ಹಲವು ದಾಖಲೆಗಳನ್ನ ಬರೆದಿದ್ದಾರೆ.

ಇದನ್ನೂ ಓದಿ : ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಹುದ್ದೆಗೆ ರಾಹುಲ್ ದಿಢೀರ್‌ ರಾಜೀನಾಮೆ!

ಏಷ್ಯಾಕಪ್ ನ ಅದ್ಭುತ ದಾಖಲೆಗಳು!

ಅತಿದೊಡ್ಡ ವೈಯಕ್ತಿಕ ಇನ್ನಿಂಗ್ಸ್ ದಾಖಲೆ ವಿರಾಟ್ ಕೊಹ್ಲಿಯವ್ರ ಹೆಸರಲ್ಲಿ

ಪಾಕಿಸ್ತಾನ ವಿರುದ್ಧ ಢಾಕಾದಲ್ಲಿ 148 ಎಸೆತಗಳಲ್ಲಿ 183 ರನ್‌ ಗಳಿಸಿದ್ದರು

ರೋಹಿತ್ ಶರ್ಮಾ ಏಷ್ಯಾಕಪ್ ​ನಲ್ಲೂ ಸಿಕ್ಸರ್​ಗಳ ಸರದಾರ ಆಗಿದ್ದಾರೆ

40 ಸಿಕ್ಸರ್‌ ಬಾರಿಸಿರುವ ರೋಹಿತ್ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಪ್ಲೇಯರ್

ಏಕದಿನ ಮತ್ತು ಟಿ20ಐ ಸೇರಿದಂತೆ ಒಟ್ಟು 37 ಪಂದ್ಯಗಳನ್ನು

ಅತೀ ಹೆಚ್ಚು ರನ್ ​ಗಳ ಅಂತರದ ಗೆಲುವಿನಲ್ಲೂ ಭಾರತದ ಹೆಸರಿದೆ

2008 ರ ಏಷ್ಯಾ ಕಪ್‌ನಲ್ಲಿ ಹಾಂಗ್ ಕಾಂಗ್ ವಿರುದ್ಧ 256 ರನ್‌ ಗಳ ಗೆಲುವು

ಅತೀಹೆಚ್ಚು ರನ್ ಗಳಿಸಿದ ದಾಖಲೆ ಶ್ರೀಲಂಕಾದ ಸನತ್ ಜಯಸೂರ್ಯ ಹೆಸರಲ್ಲಿ

2008 ರಲ್ಲಿ ಕೇವಲ 5 ಪಂದ್ಯಗಳಲ್ಲಿ 378 ರನ್‌ ಗಳನ್ನು ಗಳಿಸಿದ್ದೇ ದಾಖಲೆ

ಶತಕಗಳ ಲಿಸ್ಟ್​ಗೆ ಬರೋದಾದ್ರೆ ಸನತ್ ಜಯಸೂರ್ಯ 6 ಶತಕಗಳು ಕಂಪ್ಲೀಟ್

5-ವಿಕೆಟ್ ಗೊಂಚಲು ವಿಭಾಗದಲ್ಲಿ ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗ

ಅತೀ ಹೆಚ್ಚು ವಿಕೆಟ್ ಬೇಟೆಯಾಡಿದ ಸಾಧನೆಯನ್ನ ಮುತ್ತಯ್ಯ ಮುರಳೀಧರನ್

ಮೆಂಡಿಸ್ 2008ರ ಏಷ್ಯಾ ಕಪ್‌ನಲ್ಲಿ ಭಾರತ ವಿರುದ್ಧ 13 ರನ್‌ ಗಳಿಗೆ 6 ವಿಕೆಟ್‌

ಪಾಕಿಸ್ತಾನ ಮಾತ್ರ ನಂದೂ ಒಂದು ಇರ್ಲಿ ಅಂತಾ ಬೇಡದ ದಾಖಲೆ ಮಾಡಿದೆ

ವೈಡ್‌ಗಳು, ನೋ-ಬಾಲ್‌, ಲೆಗ್-ಬೈ ಸೇರಿದಂತೆ 98 ಹೆಚ್ಚುವರಿ ರನ್ಸ್

Shantha Kumari