ನಿದ್ರೆಯಲ್ಲಿ ಕೆಟ್ಟ ಕನಸು ಬೀಳಲು ಇದೇ ಕಾರಣ! -ಕನಸು ಬಿದ್ರೆ ಚಿಕಿತ್ಸೆ ಪಡೆದುಕೊಳ್ಳಬೇಕಾ?

ಗಾಢ ನಿದ್ರೆಗೆ ಜಾರಿದಾಗ ನಮ್ಗೆಲ್ಲಾ ಕೆಟ್ಟ ಕನಸು ಬೀಳುತ್ತೆ. ಕೆಟ್ಟ ಕನಸು ಬಿದ್ರೆ ಸಡನ್ ಆಗಿ ಎಚ್ಚರವಾಗ್ತೇವೆ. ಮತ್ತೆ ನಿದ್ರೆ ಮಾಡಲು ಆಗಲ್ಲ. ಕೆಲವು ಕನಸುಗಳಿಂದಲಂತೂ ಇಡೀ ದಿನ ಮೂಡ್ ಆಫ್ ಆಗುತ್ತೆ.. ಹೀಗೆ ಕೆಟ್ಟ ಕನಸು ಬೀಳಲು ಏನ್ ಕಾರಣ? ಕನಸು ಬಿದ್ರೆ ಚಿಕಿತ್ಸೆ ಪಡೆದುಕೊಳ್ಬೇಕಾ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಹುದ್ದೆಗೆ ರಾಹುಲ್ ದಿಢೀರ್ ರಾಜೀನಾಮೆ!
ಗಾಢ ನಿದ್ರೆಗೆ ಜಾರಿದ್ರೆ ಕನಸು ಬಿಳೋದು ಸಾಮಾನ್ಯ. ಕೆಲವೊಮ್ಮೆ ತುಂಬಾ ಕೆಟ್ಟ ಕನಸು ಬೀಳುತ್ತೆ.. ಇದ್ರಿಂದಾಗಿ ದಿನದ ನೆಮ್ಮದಿಯೇ ಹಾಳಾಗುತ್ತೆ. ಮತ್ತೆ ನಿದ್ರೆ ಮಾಡಲು ಆಗಲ್ಲ. ನಾವು ಒತ್ತಡ ಮತ್ತು ಖಿನ್ನತೆಗೆ ಒಳಗಾಗಿದ್ರೆ ಪದೇ ಪದೆ ಕೆಟ್ಟ ಕನಸು ಬೀಳುತ್ತೆ. ಇದ್ರಿಂದಾಗಿ ನಾವು ಬೇಜಾರು, ಉದ್ವೇಗ, ಚಿಂತೆಗೆ ಒಳಗಾಗ್ತೇವೆ. ಇನ್ನು ನಾವು ಗಂಭೀರ ಆರೋಗ್ಯ ಸಮಸ್ಯೆಗೆ ಔಷಧಿ ತಗೊಳ್ತಾ ಇದ್ರೆ ಇದೂ ಕೂಡ ಕೆಟ್ಟ ಕನಸು ಬೀಳಲು ಕಾರಣವಾಗ್ಬೋದು.
ಹೌದು, ಜೀವನದಲ್ಲಿ ಆಘಾತಕಾರಿ ಘಟನೆ ನಡೆದಿದ್ದರೆ, ಕಿರುಕುಳ ಅನುಭವಿಸಿದ್ರೆ, ಭವಿಷ್ಯದ ಬಗ್ಗೆ ಅಂಜಿಕೆ ಅಥವಾ ತೀವ್ರವಾದ ಆಕಾಂಕ್ಷೆಗಳನ್ನು ಹೊಂದಿದ್ದರೆ ಇವು ಕೂಡ ಕೆಟ್ಟ ಕನಸು ಬೀಳಲು ಕಾರಣವಾಗುತ್ತೆ. ಇದು ಪದೇ ಪದೆ ರಿಪಿಟ್ ಆದ್ರೆ ಮನೋವೈದ್ಯರ ಸಲಹೆ ಪಡೆಯೋದು ಸೂಕ್ತ.

ನೋಡಿರಿ

