ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಹುದ್ದೆಗೆ ರಾಹುಲ್ ದಿಢೀರ್‌ ರಾಜೀನಾಮೆ!

ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಹುದ್ದೆಗೆ ರಾಹುಲ್ ದಿಢೀರ್‌ ರಾಜೀನಾಮೆ!

2026 ರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ  ಇನ್ನೇನು ಕೆಲವೇ ತಿಂಗಳು ಬಾಕಿ ಉಳಿದಿದೆ. ಆದ್ರೀಗ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಹುದ್ದೆಗೆ ರಾಹುಲ್ ದ್ರಾವಿಡ್ ದಿಢೀರ್‌ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ರಾಜಸ್ಥಾನ್ ರಾಯಲ್ಸ್ ತಂಡದ ಫ್ರಾಂಚೈಸಿ ಧೃಡಪಡಿಸಿದೆ.

ಇದನ್ನೂ ಓದಿ: ರೋಹಿತ್ ಗೆ BCCI ಫಿಟ್ ನೆಸ್ ಟೆಸ್ಟ್ – ಯೋ-ಯೋ ಓಕೆ.. ಬ್ರಾಂಕೋ ಟೆಸ್ಟ್ ಏಕೆ?

ಸೆಪ್ಟೆಂಬರ್ 6, 2024 ರಂದು ದ್ರಾವಿಡ್‌ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್‌ ಆಗಿ ನೇಮಕಗೊಂಡಿದ್ದರು. ಈ ಹಿಂದೆ ನಾಯಕತ್ವ ಮತ್ತು ತರಬೇತುದಾರರಾಗಿದ್ದ ಫ್ರಾಂಚೈಸಿಗೆ ಮತ್ತೆ ಕೋಚ್‌ ಆಗಿ ಮರಳಿದ್ದ ದ್ರಾವಿಡ್‌ 18ನೇ ಆವೃತ್ತಿಯಲ್ಲಿ ಕಾಲು ನೋವಿನ ಮಧ್ಯೆಯೂ ಅವರು ಬ್ಯಾಂಡೆಜ್‌ ಸುತ್ತಿಕೊಂಡೇ ತಂಡಕ್ಕೆ ತರಬೇತಿ ನೀಡಿದ್ದರು. ಆದಾಗ್ಯೂ, 2025 ರ ಐಪಿಎಲ್ ಸೀಸನ್‌ನಲ್ಲಿ ರಾಜಸ್ಥಾನ್‌ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ದ್ರಾವಿಡ್ ಮಾರ್ಗದರ್ಶನದಲ್ಲಿ, ರಾಜಸ್ಥಾನ್ 14 ಪಂದ್ಯಗಳಲ್ಲಿ ಕೇವಲ ನಾಲ್ಕು ಗೆಲುವುಗಳನ್ನು ಗಳಿಸಿತ್ತು. ಪಾಯಿಂಟ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಗಳಿಸಿತ್ತು.

“ರಾಯಲ್ಸ್ ತಂಡದ ಪ್ರಯಾಣದಲ್ಲಿ ರಾಹುಲ್ ಹಲವು ವರ್ಷಗಳಿಂದ ಕೇಂದ್ರ ಬಿಂದುವಾಗಿದ್ದಾರೆ. ಅವರ ನಾಯಕತ್ವವು ಒಂದು ಪೀಳಿಗೆಯ ಆಟಗಾರರ ಮೇಲೆ ಪ್ರಭಾವ ಬೀರಿದೆ. ತಂಡದೊಳಗೆ ಬಲವಾದ ಮೌಲ್ಯಗಳನ್ನು ನಿರ್ಮಿಸಿದೆ ಮತ್ತು ಫ್ರಾಂಚೈಸಿಯ ಸಂಸ್ಕೃತಿಯ ಮೇಲೆ ಅಳಿಸಲಾಗದ ಗುರುತು ಬಿಟ್ಟಿದೆ. ಫ್ರಾಂಚೈಸಿ ರಚನಾತ್ಮಕ ಪರಿಶೀಲನೆಯ ಭಾಗವಾಗಿ, ರಾಹುಲ್‌ಗೆ ಫ್ರಾಂಚೈಸಿಯಲ್ಲಿ ವಿಶಾಲವಾದ ಸ್ಥಾನವನ್ನು ನೀಡಲಾಗಿತ್ತು. ಆದರೆ ಅದನ್ನು ತೆಗೆದುಕೊಳ್ಳದಿರಲು ಅವರು ನಿರ್ಧರಿಸಿದ್ದಾರೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

“ರಾಜಸ್ಥಾನ್ ರಾಯಲ್ಸ್, ಅದರ ಆಟಗಾರರು ಮತ್ತು ಪ್ರಪಂಚದಾದ್ಯಂತದ ಲಕ್ಷಾಂತರ ಅಭಿಮಾನಿಗಳು ರಾಹುಲ್ ಫ್ರಾಂಚೈಸಿಗೆ ನೀಡಿದ ಗಮನಾರ್ಹ ಸೇವೆಗಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತದೆ” ಎಂದು ಫ್ರಾಂಚೈಸಿ ಹೇಳಿದೆ.

Shwetha M