ರೋಹಿತ್ ಗೆ BCCI ಫಿಟ್ ನೆಸ್ ಟೆಸ್ಟ್ – ಯೋ-ಯೋ ಓಕೆ.. ಬ್ರಾಂಕೋ ಟೆಸ್ಟ್ ಏಕೆ?
ಪಾಸ್ ಆದ್ರಷ್ಟೇ ಚಾನ್ಸ್.. ಫೇಲಾದ್ರೆ ಔಟ್?

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ. ಟೀಂ ಇಂಡಿಯಾ ಕಂಡಂತಹ ಲೆಜೆಂಡರಿ ಪ್ಲೇಯರ್ಸ್ ಌಂಡ್ ಕ್ಯಾಪ್ಟನ್ಸ್. ಈ ದಿಗ್ಗಜ ನಾಯಕರು ಈಗ ತಮ್ಮ ಕ್ರಿಕೆಟ್ ಕರಿಯರ್ ನ ಕ್ಲೈಮ್ಯಾಕ್ಸ್ ನಲ್ಲಿದ್ದಾರೆ. ಈಗಾಗ್ಲೇ ಇಬ್ಬರೂ ಕೂಡ ಟಿ-20ಐ ಹಾಗೇ ಟೆಸ್ಟ್ ಫಾರ್ಮೆಟ್ಗೆ ಗುಡ್ ಬೈ ಹೇಳಿದ್ದಾರೆ. ಏಕದಿನ ಮಾದರಿ ಪಂದ್ಯಗಳಲ್ಲಿ ಮಾತ್ರವೇ ಭಾರತದ ಪರ ಕಣಕ್ಕಿಳಿಯಲಿದ್ದಾರೆ. 2027ರ ಏಕದಿನ ವಿಶ್ವಕಪ್ ಎತ್ತಿ ಹಿಡಿಯೋದು ಇಬ್ಬರ ಅಜೆಂಡಾ ಆಗಿದೆ. ಆದ್ರೆ ಈಗ ರೋಹಿತ್ ಕರಿಯರ್ ಕಂಟಿನ್ಯೂ ಮಾಡ್ಬೇಕು ಅಂದ್ರೆ ಬಿಸಿಸಿಐ ನೀಡಿರೋ ಈ ಟೆಸ್ಟ್ ಪಾಸಾಗಲೇ ಬೇಕಿದೆ.
ಇದನ್ನೂ ಓದಿ : 5 ರಿಂದ 15 ವರ್ಷ ವಯಸ್ಸಿನ ಮಕ್ಕಳ ಆಧಾರ್ ಬಯೋಮೆಟ್ರಿಕ್ ಕಡ್ಡಾಯ!
ಭಾರತ ಏಕದಿನ ತಂಡದ ನಾಯಕ ರೋಹಿತ್ ಶರ್ಮಾಗೆ ಬಿಸಿಸಿಐ ಫಿಟ್ ನೆಸ್ ಪರೀಕ್ಷೆಗೆ ಮುಂದಾಗಿದೆ. ಅಕ್ಟೋಬರ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಹಿಟ್ಮ್ಯಾನ್ ಅವರ ಫಿಸಿಕಲ್ ಫಿಟ್ನೆಸ್ ಪರೀಕ್ಷಿಸಲು ಬಿಸಿಸಿಐ ಮುಂದಾಗಿದೆ. ಅದಕ್ಕಾಗಿ 2 ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವಂತೆ ನಿರ್ದೇಶಿಸಲಾಗಿದೆ. ಸೆಪ್ಟೆಂಬರ್ 13 ರಂದು ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ರೋಹಿತ್ ಶರ್ಮಾ ಫಿಟ್ನೆಸ್ ಟೆಸ್ಟ್ಗೆ ಒಳಗಾಗಲಿದ್ದಾರೆ. ಇದೇ ವೇಳೆ ಬ್ರಾಂಕೋ ಟೆಸ್ಟ್ಗೂ ಒಳಗಾಗಲಿದ್ದಾರೆ. ಬ್ರಾಂಕೋ ಟೆಸ್ಟ್ ಎಂಬುದು ರಗ್ಬಿ ಆಟಗಾರರ ಫಿಟ್ನೆಸ್ ಪರೀಕ್ಷೆಗಾಗಿ ಬಳಸಲಾಗುವ ಟೆಸ್ಟ್. ಇದೀಗ ಇದನ್ನು ಭಾರತೀಯ ಆಟಗಾರರ ದೈಹಿಕ ಪರೀಕ್ಷಾ ಸಾಮರ್ಥ್ಯವನ್ನು ಅಳೆಯಲು ಬಳಕೆ ಮಾಡಲಾಗ್ತಿದೆ.
ಟೆಸ್ಟ್ ಪಾಸಾದ್ರೆ ಮಾತ್ರವೇ ಚಾನ್ಸ್!
ಟೀಮ್ ಇಂಡಿಯಾ ಆಟಗಾರರು ಫಿಟ್ ನೆಸ್ ಗಾಗಿ ಯೋ ಯೋ ಟೆಸ್ಟ್
ವೇಗವಾಗಿ ಓಡುವ ಮೂಲಕ ತಮ್ಮ ದೈಹಿಕ ಸಾಮರ್ಥ್ಯವನ್ನು ಪರೀಕ್ಷೆಗೆ
ಟೆಸ್ಟ್ ನಲ್ಲಿ 20 ಮೀಟರ್ ಅಳತೆಯಲ್ಲಿ ಎರಡು ಕೋನಗಳನ್ನು ನೇರವಾಗಿ
ಎರಡು ಲೈನ್ ಗಳಲ್ಲಿಟ್ಟಿರುವ ಕೋನಗಳ ಬೀಪ್ ಧ್ವನಿಯನ್ನು ಅನುಸರಿಸಿ ರೀಚ್
8.15 ನಿಮಿಷದೊಳಗೆ 2 ಕಿ.ಮೀ ಓಡಬೇಕು, ಸಾಧ್ಯವಾಗದಿದ್ದರೆ ಫೇಲ್
ಯೋ ಯೋ ಟೆಸ್ಟ್ ಪಾಸಾಗುವುದು ಆಟಗಾರರ ಪಾಲಿಗೆ ಅಗ್ನಿ ಪರೀಕ್ಷೆ
ಟೀಂ ಇಂಡಿಯಾದ ಹೊಸ ತರಬೇತುದಾರ ಆಡ್ರಿಯನ್ ಲೆ ರೂಕ್ಸ್
ಆಟಗಾರರಿಗೆ ಬ್ರಾಂಕೋ ಟೆಸ್ಟ್ ಎಂಬ ಹೊಸ ಫಿಟ್‌ನೆಸ್ ಪರೀಕ್ಷೆ
ರಗ್ಬಿ ಮತ್ತು ಫುಟ್ ಬಾಲ್ ಆಟಗಾರರ ಫಿಟ್ ನೆಸ್ ಪರೀಕ್ಷಿಸಲು ಬಳಕೆ
ಮೊದಲು 20 ಮೀಟರ್, ನಂತರ 40 ಮತ್ತು ನಂತರ 60 ಮೀಟರ್ ಓಡಬೇಕು
ಆಟಗಾರರು ಒಟ್ಟು 5 ಸೆಟ್ ಗಳನ್ನು 6 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು
2 KM ಟೈಮ್ ಟ್ರಯಲ್‌ನಲ್ಲಿ ಬೌಲರ್ ಗಳು 8 ನಿಮಿಷ 15 ಸೆಕೆಂಡ್ಸ್
ವಿಕೆಟ್-ಕೀಪರ್ ಗಳು ಮತ್ತು ಬ್ಯಾಟರ್‌ಗಳು 8 ನಿಮಿಷ 30 ಸೆಕೆಂಡುಗಳು
20 ಮೀಟರ್ ಅಂತರದಲ್ಲಿ 2 ಮಾರ್ಕರ್‌ಗಳ ನಡುವೆ ಹೆಚ್ಚಿನ ವೇಗದಲ್ಲಿ ಓಟ
40 ಮೀಟರ್ ಓಟದ ನಂತರ ಆಟಗಾರರು 10-ಸೆಕೆಂಡ್ ವಿರಾಮ
ಅತ್ಯಂತ ಕಠಿಣವೆನಿಸಿದ ಬ್ರಾಂಕೊ ಟೆಸ್ಟ್ ಪಾಸ್ ಮಾಡುವುದು ಕಡ್ಡಾಯ
ಕ್ರಿಕೆಟಿಗರು ಮೈದಾನಕ್ಕಿಂತ ಜಿಮ್‌ನಲ್ಲಿ ಹೆಚ್ಚು ಟೈಂ ಸ್ಪೆಂಡ್ ಮಾಡ್ತಿದ್ದಾರೆ
ಅಷ್ಟಕ್ಕೂ ಈಗ ರೋಹಿತ್ ಶರ್ಮಾ ಅವರಿಗೆ ಈ ಟೆಸ್ಟ್ ಮಾಡ್ತಿರೋದಕ್ಕೆ ಕಾರಣವೂ ಇದೆ. ಭಾರತ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ನಿವೃತ್ತಿಯ ಅಂಚಿನಲ್ಲಿದ್ದಾರೆ. ಕಳೆದ 6 ತಿಂಗಳಿಂದ ಟೀಮ್ ಇಂಡಿಯಾ ಪರ ಯಾವುದೇ ಪಂದ್ಯವಾಡಿಲ್ಲ. ಹೀಗಿದ್ರೂ 2027ರ ಏಕದಿನ ವಿಶ್ವಕಪ್ ಆಡುವ ಆಸೆಯಲ್ಲಿದ್ದಾರೆ. ಹೀಗಾಗಿ ಏಕದಿನ ಮಾದರಿ ಪಂದ್ಯಗಳು ಸ್ಟಾರ್ಟ್ ಆಗೋ ಮುನ್ನವೇ ಫಿಟ್ನೆಸ್ ಟೆಸ್ಟ್ಗೆ ಒಳಪಡಿಸಲು ಬಿಸಿಸಿಐ ನಿರ್ಧರಿಸಿದೆ. ಏಕದಿನ ಕ್ರಿಕೆಟ್ ನಲ್ಲಿ ಮುಂದುವರಿಯಬೇಕಾದರೆ ರೋಹಿತ್ ಶರ್ಮಾ ಅವರೂ ಈ ಪರೀಕ್ಷೆಗಳನ್ನು ಪಾಸ್ ಮಾಡಬೇಕಿದೆ. ಸೆಪ್ಟೆಂಬರ್ 13ರಂದು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ ನಲ್ಲಿ ಈ ಫಿಟ್ನೆಸ್ ಪರೀಕ್ಷೆಗಳು ನಡೆಯಲಿವೆ. ಇದು ಹಿಟ್ ಮ್ಯಾನ್ ಕ್ರಿಕೆಟ್ ಭವಿಷ್ಯವನ್ನು ನಿರ್ಧರಿಸಲಿದೆ.

ನೋಡಿರಿ

