ಸುಶಾಂತ್ ಸಿಂಗ್ ಗೆಳತಿಗೆ ಪ್ರಭಾವಿ ರಾಜಕಾರಣಿಯಿಂದ 44 ಬಾರಿ ಕರೆ? – ಬಾಲಿವುಡ್ ನಟನ ಸಾವಿಗೆ ರಾಜಕೀಯದ ನಂಟು?
ಬಾಲಿವುಡ್ ಸಿಂಪಲ್ ಸ್ಟಾರ್ ಸುಶಾಂತ್ ಸಿಂಗ್ ರಜಪೂತ್ ಇಲ್ಲದೇ ಎರಡು ವರ್ಷ ಕಳೆದಿದೆ. ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದ್ದರೂ ಕೆಲವರು ಮಾತ್ರ ಇದೊಂದು ಕೊಲೆ ಅಂತಾನೇ ಹೇಳುತ್ತಿದ್ದಾರೆ. ಈ ಬಗ್ಗೆ ತನಿಖೆ ಸಾಗುತ್ತಲೇ ಇದೆ. ಹೀಗಿರುವಾಗಲೇ ಈ ಪ್ರಕರಣಕ್ಕೆ ರಾಜಕೀಯದ ಜತೆ ನಂಟಿರುವ ವಿಚಾರ ಬೆಳಕಿಗೆ ಬಂದಿದೆ. ತನಿಖೆ ನಡೆಯುವ ಸಂದರ್ಭದಲ್ಲಿ ರಿಯಾಗೆ ‘ಎಯು’ ಹೆಸರಿನ ವ್ಯಕ್ತಿಯಿಂದ 44 ಬಾರಿ ಕರೆ ಬಂದಿದೆ. ಎಯು ಎಂದರೆ ಆದಿತ್ಯ ಉದ್ಧವ್ ಠಾಕ್ರೆ ಎಂದು ಬಿಹಾರ್ ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ‘ದ್ವೇಷವೇ ಎಲ್ಲದಕ್ಕೂ ಉತ್ತರವಲ್ಲ’ -ದರ್ಶನ್ ಮೇಲೆ ಚಪ್ಪಲಿ ಎಸೆತಕ್ಕೆ ಕಿಚ್ಚ ಸುದೀಪ್ ಪ್ರತಿಕ್ರಿಯೆ
ಸುಶಾಂತ್ ಸಿಂಗ್ ರಜಪೂತ್ ಅವರ ಗರ್ಲ್ಫ್ರೆಂಡ್ ಆಗಿದ್ದ ರಿಯಾ ಚಕ್ರವರ್ತಿ ಈ ಪ್ರಕರಣದ ಪ್ರಮುಖ ಆರೋಪಿ. ಅವರು ಈ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದರು. ಸದ್ಯ ಜಾಮೀನು ಪಡೆದು ಅವರು ಹೊರಗಿದ್ದಾರೆ. ತನಿಖೆ ನಡೆಯುವ ಸಂದರ್ಭದಲ್ಲಿ ರಿಯಾಗೆ ‘ಎಯು’ ಹೆಸರಿನ ವ್ಯಕ್ತಿಯಿಂದ 44 ಬಾರಿ ಕರೆ ಬಂದಿದೆ. ಎಯು ಎಂದರೆ ಆದಿತ್ಯ ಉದ್ಧವ್ ಠಾಕ್ರೆ ಎಂದು ಬಿಹಾರ್ ಪೊಲೀಸರು ಹೇಳಿದ್ದಾರೆ. ಇದರಿಂದಾಗಿ ಈ ಪ್ರಕರಣಕ್ಕೆ ಹಾಗೂ ಆದಿತ್ಯ ಠಾಕ್ರೆಗೆ ಲಿಂಕ್ ಆಗಿದೆ. ಶಿವ ಸೇನೆಯ ಏಕನಾಥ್ ಶಿಂಧೆ ಬಣದ ಎಂಪಿ ರಾಹುಲ್ ಶೆವಾಲೆ ಅವರು ಲೋಕಸಭೆಯಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ‘ರಿಯಾ ಚಕ್ರವರ್ತಿ ಅವರು ಎಯು ನಿಂದ 44 ಬಾರಿ ಕರೆ ಸ್ವೀಕರಿಸಿದ್ದಾರೆ. ಎಯು ಎಂದರೆ ಆದಿತ್ಯ ಉದ್ಧವ್ ಠಾಕ್ರೆ ಎಂದು ಬಿಹಾರ ಪೊಲೀಸರು ಹೇಳಿದ್ದಾರೆ. ಸಿಬಿಐ ತನಿಖೆ ಯಾವ ಹಂತದಲ್ಲಿದೆ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡು ಎರಡೂವರೆ ವರ್ಷ ಕಳೆದರೂ ಅವರು ಬಾಡಿಗೆಗೆ ಇದ್ದ ಮನೆಗೆ ಯಾರೂ ಬಾಡಿಗೆಗೆ ಬರುತ್ತಿಲ್ಲ ಎಂದು ಮನೆಯ ಮಾಲೀಕ ರಫೀಕ್ ಹೇಳಿದ್ದಾರೆ. ಮಾಸಿಕ 5 ಲಕ್ಷ ರು. ಬಾಡಿಗೆ ದುಬಾರಿ ಎನ್ನುವ ಕಾರಣಕ್ಕೆ ಮತ್ತು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ಮನೆ ಎನ್ನುವ ಕಾರಣಕ್ಕೆ ಜನರು ಮನೆಗೆ ಬಾಡಿಗೆ ಬರುತ್ತಿಲ್ಲ ಎಂದು ರಫೀಕ್ ಹೇಳಿದ್ದಾರೆ. ನಟ ಸುಶಾಂತ್ ಸಿಂಗ್ ರಜಪೂತ್ ತಮ್ಮ ಪ್ರೇಯಸಿ ರಿಯಾ ಚಕ್ರವರ್ತಿಯೊಂದಿಗೆ ಬಾಂದ್ರಾದಲ್ಲಿರುವ ಬಂಗಲೆಯಲ್ಲಿ ವಾಸವಿದ್ದರು.