ರೂಲ್ಸ್‌ ಅಂದ್ರೆ ರೂಲ್ಸ್‌ ಅಷ್ಟೇ..! ನೋ ಪಾರ್ಕಿಂಗ್‌ನಲ್ಲಿ ನಿಂತಿದ್ದ ಪೊಲೀಸ್ ಜೀಪ್‌ ಗೂ ಬಿತ್ತು ದಂಡ!

ರೂಲ್ಸ್‌ ಅಂದ್ರೆ ರೂಲ್ಸ್‌ ಅಷ್ಟೇ..! ನೋ ಪಾರ್ಕಿಂಗ್‌ನಲ್ಲಿ ನಿಂತಿದ್ದ ಪೊಲೀಸ್ ಜೀಪ್‌ ಗೂ ಬಿತ್ತು ದಂಡ!

ಅಪಘಾತ ತಡೆಗಟ್ಟಲು, ವಾಹನ ಸವಾರರ ಸುರಕ್ಷತೆಗಾಗಿ ರಾಜ್ಯದಲ್ಲಿ ಸಾಕಷ್ಟು ಸಂಚಾರ ನಿಯಮಗಳನ್ನ ಜಾರಿಗೆ ತರಲಾಗಿದೆ. ಆದ್ರೂ ಕೂಡ ಕೆಲವರು ರೂಲ್ಸ್‌ ಬ್ರೇಕ್‌ ಮಾಡಿ ದಂಡ ಕಟ್ಟಿಬಿಡುತ್ತಾರೆ. ಆದ್ರೀಗ ಪೊಲೀಸರೇ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದ್ದು, ದಂಡ ಕಟ್ಟುವಂತೆ ಆಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರೆಯಲಿದೆ ವರುಣನ ಆರ್ಭಟ! – ಎರಡು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಣೆ!

ಟ್ರಾಫಿಕ್ ರೂಲ್ಸ್  ಫಾಲೋ ಮಾಡಿ, ನೋ ಪಾರ್ಕಿಂಗ್‌ನಲ್ಲಿ ವಾಹನ ನಿಲ್ಲಿಸಬೇಡಿ, ಹೆಲ್ಮೆಟ್ ಹಾಕಿಕೊಂಡು ಬೈಕ್ ಚಲಾಯಿಸಿ, ಸಿಗ್ನಲ್ ಜಂಪ್ ಮಾಡಬೇಡಿ ಎಂದು ಸಲಹೆ ನೀಡೋ ಪೊಲೀಸರೇ ಕೆಲವು ಸಂದರ್ಭದಲ್ಲಿ ಈ ರೂಲ್ಸ್‌ ಪಾಲಿಸುವುದನ್ನು ಮರೆತುಬಿಡುತ್ತಾರೆ. ಆದ್ರೆ, ಪೊಲೀಸರು ಮಾತ್ರ ರೂಲ್ಸ್ ಬ್ರೇಕ್ ಮಾಡಿದಾಗ ಜನಸಾಮಾನ್ಯರಿಗೆ ದಂಡ ವಿಧಿಸಿದಂತೆ ಅವರಿಗೆ ವಿಧಿಸಿರುವುದು ತೀರಾ ಕಮ್ಮಿ. ಆದ್ರೆ, ಚಿಕ್ಕಮಗಳೂರಿನಲ್ಲಿ  ರೂಲ್ಸ್ ಬ್ರೇಕ್ ಮಾಡಿದ ಪೊಲೀಸ್ ವಾಹನಕ್ಕೆ ದಂಡ ವಿಧಿಸಿದ ಘಟನೆ ನಡೆದಿದೆ.

ಚಿಕ್ಕಮಗಳೂರಿನ ಕೊಪ್ಪ ಪಟ್ಟಣದ ಬಸ್ ನಿಲ್ದಾಣದ ಸಮೀಪ ನೋ ಪಾರ್ಕಿಂಗ್‌ನಲ್ಲಿ ನಿಂತಿದ್ದ ಪೊಲೀಸ್ ಜೀಪ್‌ಗೆ ಫೈನ್ ಹಾಕಿರುವ ಘಟನೆ ನಡೆದಿದೆ. ಪೊಲೀಸ್ ಸಿಬ್ಬಂದಿ ನೋ ಪಾರ್ಕಿಂಗ್ ನಲ್ಲಿ ಜೀಪ್ ನಿಲ್ಲಿಸಿ ಹೋಗಿದ್ದಾರೆ. ಇದನ್ನು ಗಮನಿಸಿದ ಕೊಪ್ಪದ ಟ್ರಾಫಿಕ್ ಪೊಲೀಸರು ನಿಂತಿದ್ದ ಜೀಪ್‌ನ ಚಕ್ರಕ್ಕೆ ಲಾಕ್ ಹಾಕಿ, ದಂಡ‌ ಹಾಕಿದ್ದಾರೆ.

ಕೊಪ್ಪ ಪಟ್ಟಣದ ಬಸ್ ನಿಲ್ದಾಣದ ಬಳಿ ಎನ್.ಆರ್ ಪುರ ಠಾಣೆಯ ಪೊಲೀಸ್ ಜೀಪ್ ನಿಂತಿತ್ತು. ಕೊಪ್ಪದ ಪಿಎಸ್‌ಐ ಜೀಪ್ ಡ್ರೈವರ್‌ಗೆ 500 ರೂಪಾಯಿ ದಂಡ ವಿಧಿಸಿದ್ದಾರೆ. ದಂಡ ವಿಧಿಸಿಅದರ ರಶೀದಿಯನ್ನು ವಾಹನದ ಡ್ರೈವರ್‌ಗೆ ಕೊಪ್ಪ ಪೊಲೀಸ್ ಠಾಣೆಯ ಪಿಎಸ್‌ಐ ಬಸವರಾಜ್ ನೀಡಿದ್ದಾರೆ

Shwetha M