IPLಗೆ ಧೋನಿ ಫ್ರೆಂಡ್ಸ್ ಗುಡ್ ಬೈ – ಲೇಟ್ ಆಗಿ ಬಂದ್ರೂ ಮೊದ್ಲೇ ನಿವೃತ್ತಿ!
MSD ಜೊತೆಗಿನ ಯಾರೆಲ್ಲಾ ವಿದಾಯ?

IPLಗೆ ಧೋನಿ ಫ್ರೆಂಡ್ಸ್ ಗುಡ್ ಬೈ – ಲೇಟ್ ಆಗಿ ಬಂದ್ರೂ ಮೊದ್ಲೇ ನಿವೃತ್ತಿ!MSD ಜೊತೆಗಿನ ಯಾರೆಲ್ಲಾ ವಿದಾಯ?

ಪವರ್-ಹಿಟ್ಟಿಂಗ್ ಫಿನಿಶರ್ ರೋಲ್​ಗೆ ಹೆಸರುವಾಸಿಯಾದ ಮಹೇಂದ್ರ ಸಿಂಗ್ ಧೋನಿ ಐಪಿಎಲ್​ನ ಯಶಸ್ವೀ ಆಟಗಾರ ಹಾಗೇ ನಾಯಕ ಕೂಡ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಆಗಿ ಐದೈದು ಸಲ ಟ್ರೋಫಿ ಗೆಲ್ಲಿಸಿಕೊಟ್ಟ ಲೀಡರ್. 2008ರಲ್ಲಿ ಟೂರ್ನಿ ಆರಂಭವಾದಾಗಿಂದ್ಲೂ ಐಪಿಎಲ್​ನ ಭಾಗವಾಗಿದ್ದಾರೆ. ಇನ್ನೂ ಸಹ ಸಕ್ರಿಯ ಕ್ರಿಕೆಟ್​ನಲ್ಲಿ ಭಾಗವಹಿಸುತ್ತಿದ್ದಾರೆ.  ಬಟ್ ಧೋನಿ ಜೊತೆಗೆ ಅಥವಾ ನಂತರದಲ್ಲಿ ಐಪಿಎಲ್ ಕರಿಯರ್ ಆರಂಭಿಸಿದ ಹಲವು ಆಟಗಾರರು ಧೋನಿಗಿಂದ ಮೊದಲೇ ನಿವೃತ್ತಿ ಪಡೆದಿದ್ದಾರೆ.

ಇದನ್ನೂ ಓದಿ : 84 ದಿನ ಮೌನ.. RCB ನ್ಯೂ ಪೋಸ್ಟ್ – ಫ್ಯಾನ್ಸ್ ಗಾಗಿ RCB CARES ಯೋಜನೆ

ಧೋನಿಗಿಂತ ಲೇಟಾಗಿ ಬಂದು ಬೇಗ ನಿವೃತ್ತಿಯಾದ ಪೊಲಾರ್ಡ್!

2008 ರಲ್ಲಿ ಧೋನಿ ತಮ್ಮ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದ್ರು. ಬಟ್ ಕೀರನ್ ಪೊಲಾರ್ಡ್ ಎರಡು ವರ್ಷಗಳ ನಂತರ ಅಂದ್ರೆ 2010 ರಲ್ಲಿ ಟೂರ್ನಿಗೆ ಕಾಲಿಟ್ಟು ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರರಾದ್ರು. ಮಿಡಲ್ ಆರ್ಡರ್​ನ ಬಲವಾಗಿದ್ರು. ಅದ್ರಲ್ಲೂ ಪೊಲಾರ್ಡ್ ಕೇವಲ 32 ಎಸೆತಗಳಲ್ಲಿ 60 ರನ್ ಗಳಿಸಿ ನಾಟೌಟ್ ಆಗಿ ಉಳಿದು ಮುಂಬೈ ತಂಡಕ್ಕೆ ಮೊದಲ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. 2019 ರ ಐಪಿಎಲ್ ಫೈನಲ್‌ನಲ್ಲಿ 41 ರನ್ ಗಳಿಸಿದರು. ಇದೇ ಪಂದ್ಯದಲ್ಲಿ ಮುಂಬೈ ತಂಡ ಕೇವಲ ಒಂದು ರನ್‌ನಿಂದ ಜಯ ಸಾಧಿಸಿತ್ತು. ಮುಂಬೈ ಐದು ಸಲ ಪ್ರಶಸ್ತಿ ಗೆದ್ದಾಗಲೂ ವಿಜೇತ ತಂಡದ ಭಾಗವಾಗಿದ್ರು. ಬಟ್ 2022 ರ ಋತುವಿನ ನಂತರ ಪೊಲಾರ್ಡ್ ಐಪಿಎಲ್‌ನಿಂದ ನಿವೃತ್ತಿ ಹೊಂದಿದ್ರು.

2008 ರಿಂದ 2024ರವರೆಗೆ ಐಪಿಎಲ್ ನಲ್ಲಿ ಮಿಂಚಿದ ಧವನ್!

ಟೀಂ ಇಂಡಿಯಾ ಕಂಡತಹ ಸ್ಟಾರ್ ಆಟಗಾರರಲ್ಲಿ ಶಿಖರ್ ಧವನ್ ಕೂಡ ಒಬ್ರು. ಧವನ್ 2008 ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಅಂದ್ರೆ ಈಗಿನ ದೆಹಲಿ ಕ್ಯಾಪಿಟಲ್ಸ್ ಪರ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದರು. 2024 ರಲ್ಲಿ ನಿವೃತ್ತರಾಗುವ ಮೊದಲು ಹಲವು ತಂಡಗಳನ್ನು ಪ್ರತಿನಿಧಿಸಿದ್ದರು. ಒಟ್ಟಾರೆಯಾಗಿ, ಧವನ್ ಐಪಿಎಲ್‌ನಲ್ಲಿ 6769 ರನ್‌ಗಳನ್ನು ಗಳಿಸಿದ್ದಾರೆ. ಇದು ಟೂರ್ನಮೆಂಟ್ ಇತಿಹಾಸದಲ್ಲಿ ಮೂರನೇ ಅತಿ ಹೆಚ್ಚು ರನ್‌ಗಳಾಗಿವೆ.

2008 ರಿಂದ 2021ರವರೆಗೆ ಐಪಿಲ್ ಸ್ಟಾರ್ ಆಗಿದ್ದ ಡಿವಿಲಿಯರ್ಸ್!

ಇನ್ನು ಎಬಿ ಡಿವಿಲಿಯರ್ಸ್ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅದ್ರಲ್ಲೂ ಆರ್ ಸಿಬಿ ಫ್ಯಾನ್ಸ್ ಗೆ ಎಬಿಡಿ ಅಂದ್ರೆ ಜಾಸ್ತಿನೇ ಪ್ರೀತಿ. ಮೈದಾನದ ಅಷ್ಟೂ ದಿಕ್ಕುಗಳಲ್ಲೂ ಬ್ಯಾಟಿಂಗ್ ಮಾಡ್ತಿದ್ದ ಡಿವಿಲಿಯರ್ಸ್ ಭಾರತದಲ್ಲಿ ಬಹುದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ತಮ್ಮದೇ ಆಟ ವಿಭಿನ್ನ ಬ್ಯಾಟಿಂಗ್ ಶೈಲಿಯಿಂದ ಅತ್ಯಂತ ಪ್ರತಿಭಾನ್ವಿತ ಆಟಗಾರನಾಗಿದ್ದಾರೆ. ಡಿವಿಲಿಯರ್ಸ್ ತಮ್ಮ ಮೊದಲ ಐಪಿಎಲ್ ಆವೃತ್ತಿಯನ್ನ ದೆಹಲಿಯೊಂದಿಗೆ ಆರಂಬಿಸಿದ್ರೂ ನಂತರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ  ದಂತಕಥೆಯಾಗಿ ಬದಲಾದ್ರು. ವಿರಾಟ್ ಕೊಹ್ಲಿ ಮತ್ತು ಕ್ರಿಸ್ ಗೇಲ್ ಅವರೊಂದಿಗೆ ಅವರು ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ತ್ರಿಮೂರ್ತಿಗಳೆಂದೇ ಪ್ರಸಿದ್ಧರಾದ್ರು. ಇನ್ನೂ ಕೆಲವು ವರ್ಷಗಳ ಕಾಲ ಆಡುವ ಸಾಮರ್ಥ್ಯ ಹೊಂದಿದ್ದರೂ, ಡಿವಿಲಿಯರ್ಸ್ 2021 ರ ಋತುವಿನ ನಂತರ ಐಪಿಎಲ್‌ನಿಂದ ನಿವೃತ್ತಿ ಘೋಷಿಸಿದ್ರು.

2018ರ ಬಳಿಕ ಐಪಿಎಲ್ ಗೆ ಗಂಭೀರ್ ಗುಡ್ ಬೈ

ಗೌತಮ್ ಗಂಭೀರ್ ಮತ್ತು ಎಂಎಸ್ ಧೋನಿ 2000 ರ ದಶಕದ ಆರಂಭದಲ್ಲಿ ಟೀಮ್ ಇಂಡಿಯಾಗೆ ಕಾಲಿಟ್ಟಿದ್ರು. ಇಬ್ಬರೂ ಐಪಿಎಲ್‌ನ ಉದ್ಘಾಟನಾ ಋತುವಿನಲ್ಲಿ ಶ್ರೇಷ್ಠ ಆಟಗಾರರಾಗಿದ್ದರು. ಧೋನಿ ಸಿಎಸ್‌ಕೆ ತಂಡವನ್ನು ಐದು ಐಪಿಎಲ್ ಪ್ರಶಸ್ತಿಗಳಿಗೆ ಮುನ್ನಡೆಸಿದರೆ, ಗಂಭೀರ್ 2010 ರ ದಶಕದ ಮಧ್ಯಭಾಗದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಾಬಲ್ಯದ ಹಿಂದಿನ ಮಾಸ್ಟರ್ ಮೈಂಡ್ ಆಗಿ ಹೊರಹೊಮ್ಮಿದರು, 2012 ಮತ್ತು 2014 ರಲ್ಲಿ ಅವರು ಪ್ರಶಸ್ತಿ ಗೆಲ್ಲೋಕೆ ಕಾರಣರಾಗಿದ್ರು. ಹೀಗಿದ್ರೂ 2018ರಲ್ಲಿ ಐಪಿಎಲ್‌ಗೆ ವಿದಾಯ ಹೇಳಿ, ನಿರೂಪಕ ಮತ್ತು ತರಬೇತುದಾರರಾಗಿ ವೃತ್ತಿಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ರು.

2008 ರಿಂದ 2022ರವರೆಗೆ ಐಪಿಎಲ್ ನಲ್ಲಿ ಬ್ರಾವೋ ಮಿಂಚು!

ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ಅತ್ಯಂತ ಪ್ರತಿಷ್ಠಿತ ಆಟಗಾರರಲ್ಲಿ ಡ್ವೇನ್ ಬ್ರಾವೋ ಕೂಡ ಒಬ್ಬರು. 2011, 2018 ಮತ್ತು 2021 ರಲ್ಲಿ ಮೂರು ಪ್ರಶಸ್ತಿ ವಿಜೇತ ಸೀಸನ್​ಗಳಲ್ಲಿ ಸಿಎಸ್‌ಕೆ ಪರ ನಿರ್ಣಾಯಕ ಪಾತ್ರ ವಹಿಸಿದ್ರು. ಮಧ್ಯಮ ಮತ್ತು ಡೆತ್ ಓವರ್‌ಗಳಲ್ಲಿ ಎಂಎಸ್ ಧೋನಿಯ ಅತ್ಯಂತ ಪ್ರಬಲ ಅಸ್ತ್ರವಾಗಿದ್ದರು. ಐಪಿಎಲ್ ಇತಿಹಾಸದಲ್ಲಿ 183 ವಿಕೆಟ್‌ಗಳೊಂದಿಗೆ ಏಳನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿರುವ ಬ್ರಾವೋ, 2022 ರ ಋತುವಿನಲ್ಲಿ ಸಿಎಸ್‌ಕೆ ಕಳಪೆ ಪ್ರದರ್ಶನದ ನಂತರ 39 ನೇ ವಯಸ್ಸಿನಲ್ಲಿ ನಿವೃತ್ತಿ ಘೋಷಿಸಿದರು.

Shantha Kumari