ಹಿತಾ ಆಸೆಯಂತೆ ಶರತ್ ಮದ್ವೆ! – ದುರ್ಗಾಗೆ ತಾಳಿ ಕಟ್ಟಿದ ಶರತ್?
ಮಾಯ, ಮಾಳವಿಕಾ ಕುತಂತ್ರಕ್ಕೆ ಬ್ರೇಕ್!

ಶರತ್ ತನ್ನವನಾಗ್ಬೇಕು ಅಂತ ಮಾಯ ಏನ್ ಬೇಕಾದ್ರೂ ಮಾಡೋದಿಕ್ಕೆ ರೆಡಿ ಇದ್ದಾಳೆ. ಈಗಾಗಲೇ ತನ್ನ ಸ್ನೇಹಿತೆ ಅಂತಾ ನೋಡದೇ ಅಂಬಿಕಾಳನ್ನ ಸಾಯಿಸಿದ್ಲು. ಅದಾದ ಬಳಿಕ ತನ್ನ ದಾರಿಗೆ ಅಡ್ಡ ಬಂದವರಿಗೆ ಒಂದು ಗತಿ ಕಾಣಿಸಿದ್ದಾಳೆ. ಇದೀಗ ಮಾಯ ಶರತ್ ಜೊತೆ ಮದುವೆಯಾಗಲು ತಯಾರಿ ಕೂಡ ನಡೆಸಿದ್ದಾಳೆ. ಮದುವೆ ಸಂಭ್ರಮ ನಡಿತಾ ಇದೆ. ಆದ್ರೀಗ ಶರತ್ ಗೆ ಏಕಾಏಕಿ ಜ್ಞಾನೋದಯವಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಹೋಟೆಲ್, ಪಬ್, ಬಾರ್ಗಳಿಗೆ ಶಾಕ್! – ಸ್ಮೋಕಿಂಗ್ ಝೋನ್ ಇರದಿದ್ರೆ ಲೈಸನ್ಸ್ ಕ್ಯಾನ್ಸಲ್!
ನಾನಿನ್ನ ಬಿಡಲಾರೆ ಸೀರಿಯಲ್ ರೋಚಕ ಘಟ್ಟ ತಲುಪಿದೆ. ಟಿಆರ್ಪಿ ರೇಸ್ನಲ್ಲೂ ಮುಂದಿದೆ. ಶರತ್ ತನ್ನವನಾಗ್ಬೇಕು ಅಂತಾ ಮಾಯ ಏನೇನೋ ಮಾಡ್ತಿದ್ದಾಳೆ. ಈಗಾಗಲೇ ಮಾಯ ಅಂಬಿಕಾಳನ್ನ ಸಾಯಿಸಿದ್ಲು. ಅಂಬಿಕಾ ಸಾಯ್ತಿದ್ದಂತೆ ಹಿತಾಳನ್ನ ನೋಡಿಕೊಳ್ತೇನೆ. ಆಕೆಗೆ ತಾಯಿ ಪ್ರೀತಿ ಬೇಕು ಅಂತ ಶರತ್ ಮನೆ ಸೇರಿಕೊಂಡಿದ್ದಾಳೆ. ಆದ್ರೆ ಮಾಯ ಪ್ಲ್ಯಾನ್ ಬೇರೆಯೇ ಇದೆ. ಶರತ್ ನ ಮದುವೆ ಆದ್ಮೇಲೆ ಹಿತಾಳನ್ನ ಮನೆಯಿಂದ ಆಚೆ ಹಾಕೋ ಪ್ಲ್ಯಾನ್ ಮಾಡಿದ್ದಾಳೆ. ಈಗಾಗಲೇ ಹಿತಾಗೆ ಮಾಯ ಸಾಕಷ್ಟು ತೊಂದ್ರೆ ಕೊಟ್ಟಿದ್ದಾಳೆ. ಹಿತಾಳನ್ನ ಸಾಯಿಸೋಕೂ ಹೊರಟಿದ್ಲು. ಆದ್ರೀಗ ಹಿತಾಗೆ ದುರ್ಗಾ ಕಾವಲಾಗಿದ್ದಾಳೆ. ಏನೇ ಸಮಸ್ಯೆ ಬಂದ್ರೂ ಆಕೆಯೇ ಪರಿಹಾರ ಆಗಿದ್ದಾಳೆ. ಇದೀಗ ಕುತಂತ್ರಿ ಮಾಯಾ ಶರತ್ ಮದುವೆ ಆಗ್ಬೇಕು ಅಂತಾ ಹೊರಟ್ಟಿದ್ದಾಳೆ. ಈಗಾಗಲೇ ಮದುವೆ ಶಾಸ್ತ್ರಗಳು ಶುರುವಾಗಿದೆ. ಒಂದಾದ ಮೇಲೊಂದು ವಿಘ್ನ ಎದುರಾದ್ರೂ ಮಾಯಾ ಮದುವೆ ಆಗೇ ಆಗ್ತೀನಿ ಅಂತಾ ಹೊರಟಿದ್ದಾಳೆ. ಶರತ್ ಮಗಳಿಗಾಗಿ ದೊಡ್ಡ ನಿರ್ಧಾರ ತೆಗೆದುಕೊಳ್ಳೋದು ಫಿಕ್ಸ್!
ಹೌದು ಮಾಯಾ ಶರತ್ನ ಮದುವೆ ಆದ್ರೆ ಹಿತಾಗೆ ತೊಂದರೆ ಫಿಕ್ಸ್ ಅಂತಾ ಎಲ್ಲರಿಗೂ ಗೊತ್ತೇ ಇದೆ. ಹೀಗಾಗಿ ಶರತ್ ತಂದೆ ಕೂಡ ಆತನ ಬಳಿ ವಿಚಾರಿಸಿದ್ದಾರೆ, ನಿಜವಾಗಿಯೂ ಈ ಮದುವೆ ಇಷ್ಟ ಇದ್ಯಾ ಅಂತಾ ಕೇಳಿದ್ದಾರೆ. ಆದ್ರೆ ಆತನ ಬಳಿ ಇದಕ್ಕೆ ಉತ್ತರವಿಲ್ಲ. ಬಳಿಕ ಶರತ್ ತಂಗಿಯೂ ಈ ಮದುವೆ ಆಗ್ಬೇಡ ಅಂತಾ ಯಾರು ಹೇಳಿದ್ರೆ ಕೇಳ್ತೀಯಾ ಅಂತಾ ಕೇಳಿದ್ದಾಳೆ. ಇದಕ್ಕೆ ಅಂಬಿಕಾ ಹೇಳಿದ್ರೆ ಕೇಳ್ತೀನಿ ಅಂರಾ ಶರತ್ ಹೇಳಿದ್ದಾನೆ. ಬಳಿಕ ದುರ್ಗಾ ಕೂಡ ಶರತ್ ಬಳಿ ಮಾತನಾಡಿದ್ದಾಳೆ. ಮಾಯಾಳನ್ನ ಮದುವೆ ಆಗ್ಬಾರ್ದು ಅಂತಾ ಹೇಳಿದ್ದಕ್ಕೆ ಶರತ್ ಯಾಕೆ ಆಗ್ಬಾರ್ದು ಅಂತಾ ಹೇಳಿದ್ದಾಳೆ. ಈ ಮದುವೆ ಆದ್ರೆ ಹಿತಾ ನೊಂದುಕೊಳ್ತಾಳೆ. ಪ್ರಾಣಕ್ಕೆ ಕುತ್ತು ಬರುತ್ತೆ ಅಂತಾ ದುರ್ಗಾ ಹೇಳಿದ್ದಾಳೆ. ಇದ್ರಿಂದಾಗಿ ಶರತ್ ಶಾಕ್ ಆಗಿದ್ದಾನೆ, ಇದೀಗ ದುರ್ಗಾ ಮಾತಿನಿಂದಾಗಿ ಶರತ್ ಗೆ ಜ್ಞಾನೋದಯವಾಗಿದೆ. ಹೀಗಾಗಿ ಶರತ್ ಮಾಯಾ ಜೊತೆ ಬ್ರೇಕ್ಅಪ್ ಮಾಡಿಕೊಳ್ಳೋದು ಫಿಕ್ಸ್!
ಇನ್ನೊಂದ್ಕಡೆ ಮಾಳವಿಕಾ ಶಂಭು, ಅಂಬಿಕಾಗೆ ದಿಗ್ಭಂಧನ ಹಾಕಲು ಮುಂದಾಗಿದ್ರೆ, ಶಂಭು ಮಗಳ ಬಗ್ಗೆ ಭವಿಷ್ಯ ನುಡಿದ್ದಾನೆ. ಎರಡು ದೇಹ ಒಂದೇ ಆತ್ಮ. ವಧು, ವರ.. ದೈವ ಇಚ್ಛೆ. ಮದುವೆ ನಿಶ್ಚಿತ ಎಂದು ಹೇಳಿದ್ದಾನೆ. ಇದೀಗ ಶರತ್ ಮಗಳಿಗಾಗಿ ದುರ್ಗಾಳನ್ನ ಮದುವೆ ಆಗೋದು ಫಿಕ್ಸ್.. ದುರ್ಗಾಳನ್ನ ಶರತ್ ಮದುವೆ ಆದ್ರೆ ಮಾಳವಿಕಾ ಶಕ್ತಿ ಕಡಿಮೆಯಾಗುತ್ತೆ. ಇನ್ನು ಮಾಯಾ ಕುತಂತ್ರಕ್ಕೂ ಬ್ರೇಕ್ ಬಿದ್ದಂತಾಗುತ್ತೆ.

ನೋಡಿರಿ

