8 ತಿಂಗಳು.. ಕ್ರಿಕೆಟ್ ನಿಂದ 18 ದಿಗ್ಗಜರ ನಿವೃತ್ತಿ – 2025ರ ವಿದಾಯ ಲಿಸ್ಟ್ ನಲ್ಲಿ ಯಾರೆಲ್ಲಾ?

ಟೀಂ ಇಂಡಿಯಾ ಅಭಿಮಾನಿಗಳ ಪಾಲಿಗೆ 2025ನೇ ವರ್ಷ ಸಾಕಷ್ಟು ಹೊಸತನವನ್ನ ನೀಡಿದೆ. ಅದ್ರಲ್ಲೂ ಅಭಿಮಾನಿಗಳ ಪಾಲಿಗೆ ಒಂಥರಾ ಎಮೋಷನಲ್ ಇಯರ್ ಅಂದ್ರೂ ತಪ್ಪಾಗಲ್ಲ. ಈ ವರ್ಷ ಸಾಕಷ್ಟು ಸ್ಟಾರ್ ಆಟಗಾರರು ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ದಶಕಗಳ ಕಾಲ ದಿಗ್ಗಜರಾಗಿ ಮೆರೆದು ಅಭಿಮಾನಿಗಳಿಗೆ ಗೆಲುವಿನ ಖುಷಿ ನೀಡಿದ್ದ ಆಟಗಾರರು ತೆರೆ ಮರೆಗೆ ಸರಿದಿದ್ದಾರೆ. ಇತ್ತೀಚೆಗಷ್ಟೇ ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡಿದ್ರು. ಆಗಸ್ಟ್ 24 ರಂದು ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ ಚೇತೇಶ್ವರ ಪೂಜಾರ ಈ ವರ್ಷ ನಿವೃತ್ತಿ ಹೊಂದುತ್ತಿರುವ 18 ನೇ ಆಟಗಾರರಾಗಿದ್ದಾರೆ. ಪೂಜಾರಗಿಂತ ಮೊದಲು, ಪ್ರಸ್ತುತ ವರ್ಷದಲ್ಲಿ ಅನೇಕ ಸ್ಟಾರ್ ಆಟಗಾರರು ವಿದಾಹ ಹೇಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ಇದನ್ನೂ ಓದಿ : 5,590 ಕೋಟಿ ಅಕ್ರಮ – ದೆಹಲಿ ಮಾಜಿ ಸಚಿವ ಸೌರಭ್ ಭಾರದ್ವಾಜ್ ನಿವಾಸದ ಮೇಲೆ ಇಡಿ ದಾಳಿ
ಸಾಲು ಸಾಲು ಆಟಗಾರರ ಅಂತಾರಾಷ್ಟ್ರೀಯ ಕರಿಯರ್ ಎಂಡ್!
ವಿಶ್ವಕ್ರಿಕೆಟ್ನಲ್ಲಿ ನಿವೃತ್ತಿಯ ಪರ್ವವೇ ನಡೆದಿದ್ದು ಸಾಕಷ್ಟು ಸ್ಟಾರ್ ಆಟಗಾರರು ನಿವೃತ್ತಿ ಘೋಷಿಸಿದ್ದಾರೆ. ಅದ್ರಲ್ಲಿ ಕೆಲವರದ್ದು ನಿರೀಕ್ಷಿತ ಎನ್ನಿಸಿದ್ರೆ ಇನ್ನೂ ಕೆಲವ್ರು ದಿಢೀರ್ ಅಂತಾ ಘೋಷಣೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಾರ್ಟಿನ್ ಗುಪ್ಟಿಲ್, ತಮೀಮ್ ಇಕ್ಬಾಲ್, ವರುಣ್ ಆರೋನ್, ಶಪೂರ್ ಜದ್ರಾನ್, ವೃದ್ಧಿಮಾನ್ ಸಹಾ, ದಿಮುತ್ ಕರುಣರತ್ನೆ, ಹೆನ್ರಿಕ್ ಕ್ಲಾಸೆನ್, ಪಿಯೂಷ್ ಚಾವ್ಲಾ, ನಿಕೋಲಸ್ ಪೂರನ್, ಆಂಡ್ರೆ ರಸೆಲ್ ಸೇರಿದ್ದಾರೆ. ಅದ್ರಲ್ಲೂ ಹೆನ್ರಿಕ್ ಕ್ಲಾಸೆನ್ ಮತ್ತು ನಿಕೋಲಸ್ ಪೂರನ್ ಅವರ ನಿರ್ಧಾರ ಅಭಿಮಾನಿಗಳನ್ನ ಆಘಾತಗೊಳಿಸಿತ್ತು. ಬಹಳ ಚಿಕ್ಕ ವಯಸ್ಸಿನಲ್ಲಿಯೇ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದರು. ಮುರೂ ಮಾದರಿಯ ಕ್ರಿಕೆಟ್ನಿಂದಲೂ ಹಿಂದೆ ಸರಿದಿದ್ದಾರೆ.
ಟೆಸ್ಟ್ ಮಾದರಿ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ ಸೂಪರ್ ಸ್ಟಾರ್ಸ್!
ಇನ್ನೂ ಒಂದಷ್ಟು ಕ್ರಿಕೆಟರ್ಸ್ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಹೊಂದಿ ದೀರ್ಘ ಸ್ವರೂಪಕ್ಕೆ ವಿದಾಯ ಹೇಳಿದ್ದಾರೆ. ಅದ್ರಲ್ಲೂ ಕಳೆದೊಂದುದ ದಶಕದಿಂದ ಟೀಂ ಇಂಡಿಯಾದ ಆಧಾರಸ್ತಂಭಗಳಾಗಿದ್ದ ಟೀಂ ಇಂಡಿಯಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ರು. ಅಷ್ಟೇ ಅಲ್ದೇ ಶ್ರೀಲಂಕಾದ ಏಂಜೆಲೊ ಮ್ಯಾಥ್ಯೂಸ್ ಕೂಡ ಈ ವರ್ಷ ಟೆಸ್ಟ್ ಕ್ರಿಕೆಟ್ನಿಂದ ದೂರ ಸರಿದಿದ್ದಾರೆ.
ಏಕದಿನ ಫಾರ್ಮೆಟ್ ಗೆ ವಿದಾಯ ಹೇಳಿದ ಲೆಜೆಂಡರ್ಸ್!
2025ರ ಕ್ರಿಕೆಟ್ನಲ್ಲಿ ಹಲವು ಕ್ರಿಕೆಟಿಗರು ಏಕದಿನ ಮಾದರಿಗೆ ಗುಡ್ ಬೈ ಹೇಳಿದ್ದಾರೆ. ಆಸ್ಟ್ರೇಲಿಯಾದ ಮಾರ್ಕಸ್ ಸ್ಟೊಯಿನಿಸ್, ಗ್ಲೆನ್ ಮ್ಯಾಕ್ಸ್ವೆಲ್, ಸ್ಟೀವ್ ಸ್ಮಿತ್, ಬಾಂಗ್ಲಾದೇಶದ ಮುಷ್ಫಿಕರ್ ರಹೀಮ್ರಂತಹ ಸ್ಟಾರ್ ಬ್ಯಾಟ್ಸ್ಮನ್ಗಳೇ ನಿವೃತ್ತಿ ಹೇಳಿದ್ದಾರೆ. 2025ರ ವರ್ಷ ಕಂಪ್ಲೀಟ್ ಆಗೋಕೆ ಇನ್ನೂ ನಾಲ್ಕು ತಿಂಗಳು ಬಾಕಿ ಇದೆ. ಈಗಲೇ ಹಲವು ಸ್ಟಾರ್ ಆಟಗಾರರೇ ವಿದಾಯ ಘೋಷಣೆ ಮಾಡಿದ್ದಾರೆ.

ನೋಡಿರಿ

