ಕಿಚ್ಚನ ಹುಟ್ಟುಹಬ್ಬದಂದೇ ಬಿಗ್ ಬಾಸ್ನಿಂದ ಬಿಗ್ ಸರ್ಪ್ರೈಸ್ ! – ಈ ದಿನ ಸೀಸನ್ 12 ಆರಂಭ

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12 ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಈಗಾಗಲೇ ತೆರೆಯಹಿಂದೆ ಕಾರ್ಯಕ್ರಮದ ತಯಾರಿ ನಡೆಯುತ್ತಿದೆ. ಇದೀಗ ಬಿಗ್ ಬಾಸ್ ಶೋ ಪ್ರೋಮೋ ರಿಲೀಸ್ ಹಾಗೂ ಶೋ ಆರಂಭಕ್ಕೆ ದಿನಾಂಕಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದಂದೇ ಶೋ ಆರಂಭದ ದಿನಾಂಕ ರಿವೀಲ್ ಆಗಲಿದೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ: ನಟಿ ಅನುಷ್ಕಾ ಶೆಟ್ಟಿ ಸಿನಿಮಾ ಜೊತೆ ಕೈಜೋಡಿಸಿದ ಯಶ್ ತಾಯಿ! – ಚಿತ್ರರಂಗದಲ್ಲಿ ಹೊಸ ಹೆಜ್ಜೆ ಇಟ್ಟ ಪುಷ್ಪಾ ಅರುಣ್ ಕುಮಾರ್!
ಹೌದು, ಇದೇ ಸಪ್ಟೆಂಬರ್ 2 ರಂದು ಕಿಚ್ಚ ಸುದೀಪ್ 52ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಹುಟ್ಟುಹಬ್ಬದ ಆಚರಣೆ ಕುರಿತಾಗಿ ಈಗಾಗ್ಲೇ ಅಭಿಮಾನಿಗಳಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಸುದೀಪ್ ಹುಟ್ಟುಹಬ್ಬದ ದಿನದಂದೇ ಕನ್ನಡದ ಬಿಗ್ಬಾಸ್ ಸೀಸನ್ 12ರ ಪ್ರಸಾರದ ಡೇಟ್ ಅನೌನ್ಸ್ ಮಾಡಿ ಟೀಸರ್ ರಿಲೀಸ್ ಮಾಡೋ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ.
ಬಿಗ್ಬಾಸ್ಗೆ ವಿದಾಯ ಹೇಳಿದ್ದ ಕಿಚ್ಚ ಮತ್ತೆ ವಾಪಸ್ ಬಂದ್ರು. ಈ ಬಾರಿ ಒಂದಷ್ಟು ಬದಲಾವಣೆಗಳನ್ನ ಸೂಚಿಸಿದ್ದರು ಕಿಚ್ಚ. ಅದರ ಪ್ರಕಾರ ಈ ಸೀಸನ್ ಬಹು ನಿರೀಕ್ಷಿತ ಸೀಸನ್ ಆಗಿರಲಿದೆ. ಹೀಗಾಗಿ ಬಿಗ್ಬಾಸ್ ಬರುವ ದಿನಾಂಕ ಅಂದೇ ರಿವೀಲ್ ಆಗುವ ಸಾಧ್ಯತೆ ಇದೆ. ಹೊಸ ಸೀಸನ್ನಲ್ಲಿ ಕಿಚ್ಚನ ಪ್ರೋಮೋ ನೋಡಲು ಫ್ಯಾನ್ಸ್ ಕಾದಿದ್ದಾರೆ. ಬಿಗ್ಬಾಸ್ ಶೋ, ಇದೇ ಬರುವ ಸಪ್ಟೆಂಬರ್ 28 ರಿಂದ ಪ್ರಸಾರವಾಗುವ ಸಾಧ್ಯತೆ ಇದೆ. ಹೀಗಾಗಿ ದಿನಾಂಕ ಘೋಷಣೆಯನ್ನ ಕಿಚ್ಚನ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಸಪ್ರ್ರೈಸ್ ಮಾಡಲು ತಂಡ ಸಿದ್ಧವಾಗಿದೆ ಎಂದು ಹೇಳಲಾಗ್ತಿದೆ.

ನೋಡಿರಿ

