ಗಣೇಶ ಹಬ್ಬಕ್ಕೆ ವಿಜಯದೇವರಕೊಂಡ ಫ್ಯಾನ್ಸ್‌ಗೆ ಗುಡ್‌ ನ್ಯೂಸ್ – ಒಟಿಟಿಗೆ ಬರ್ತಿದೆ ಕಿಂಗ್‌ಡಮ್ ಮೂವಿ!

ಗಣೇಶ ಹಬ್ಬಕ್ಕೆ ವಿಜಯದೇವರಕೊಂಡ ಫ್ಯಾನ್ಸ್‌ಗೆ ಗುಡ್‌ ನ್ಯೂಸ್ – ಒಟಿಟಿಗೆ ಬರ್ತಿದೆ ಕಿಂಗ್‌ಡಮ್ ಮೂವಿ!

ಆಗಸ್ಟ್ 27ಕ್ಕೆ ಗಣೇಶ ಚತುರ್ಥಿ ಹಬ್ಬದ ಖುಷಿಯಲ್ಲಿದ್ದ ಚಿತ್ರರಸಿಕರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಅಭಿನಯದ ಸ್ಪೈ ಆಕ್ಷನ್ ಥ್ರಿಲ್ಲರ್ ಕಿಂಗ್‌ಡಮ್ ಒಟಿಟಿಗೆ ಬರಲಿದೆ. ಐದು ಭಾಷೆಗಳಲ್ಲಿ ಸ್ಟ್ರೀಮ್ ಆಗಲಿದೆ. ಮನೆಯಲ್ಲೇ ಕುಳಿತು ವಿಜಯ್ ದೇವರಕೊಂಡ ಅಭಿನಯದ ಸಿನಿಮಾ ನೋಡಬಹುದು.

ಇದನ್ನೂ ಓದಿ:ನಟಿ ಅನುಷ್ಕಾ ಶೆಟ್ಟಿ ಸಿನಿಮಾ ಜೊತೆ ಕೈಜೋಡಿಸಿದ ಯಶ್‌ ತಾಯಿ! – ಚಿತ್ರರಂಗದಲ್ಲಿ ಹೊಸ ಹೆಜ್ಜೆ ಇಟ್ಟ ಪುಷ್ಪಾ ಅರುಣ್ ಕುಮಾರ್!

ತೆಲುಗು ಚಿತ್ರರಂಗದ ಯುವ ಟೈಗರ್ ವಿಜಯ್ ದೇವರಕೊಂಡ ಮೊಟ್ಟ ಮೊದಲ ಬಾರಿಗೆ ವಿಶೇಷ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದರು. ಸ್ಪೈ ಆಕ್ಷನ್ ಥ್ರಿಲ್ಲರ್ ಚಿತ್ರ ಕಿಂಗ್‌ಡಮ್ ಮೂಲಕ ಫ್ಯಾನ್ಸ್‌ಗೂ ಇಷ್ಟವಾದರು. ಅಭಿಮಾನಿಗಳು ಕಿಂಗ್‌ಡಮ್ ಸಿನಿಮಾ ಮೂಲಕ ವಿಜಯ್ ರನ್ನ ಮತ್ತಷ್ಟು ಇಷ್ಟಪಟ್ಟಿದ್ದಾರೆ. ಇದೇ ಖುಷಿಯಲ್ಲಿ ಈ ಚಿತ್ರ OTT ನಲ್ಲಿ ಸ್ಟ್ರೀಮ್ ಆಗೋಕೆ ರೆಡಿಯಾಗಿದೆ. ಆಗಸ್ಟ್ 27ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ. ವಿಶೇಷವೆಂದರೆ ಇದು ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ. ಈ ದಿನಾಂಕ ವಿಜಯ್ ದೇವರಕೊಂಡ ಅವರ ವೃತ್ತಿಜೀವನಕ್ಕೆ ಬಹಳ ವಿಶೇಷವಾಗಿದೆ, ಏಕೆಂದರೆ ಆಗಸ್ಟ್ 27 ರಂದು ಅವರ ಸೂಪರ್‌ಹಿಟ್ ಚಿತ್ರ ‘ಅರ್ಜುನ್ ರೆಡ್ಡಿ’ 8 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದೆ.

130 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ಕಿಂಗ್‌ಡಮ್ ಚಿತ್ರವನ್ನು ಗೌತಮ್ ತಿನ್ನನುರಿ ನಿರ್ದೇಶಿಸಿದ್ದಾರೆ. ವಿಜಯ್ ದೇವರಕೊಂಡ ಅವರ ಆಕ್ಷನ್ ಡ್ರಾಮಾ ‘ಕಿಂಗ್‌ಡಮ್’ 25 ದಿನಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

ಕಿಂಗ್‌ಡಮ್ ಸಿನಿಮಾದ ಕಥೆ ಕೂಡಾ ಕುತೂಹಲಭರಿತವಾಗಿದೆ. ಚಿತ್ರದ ಕಥೆಯು ಕಾನ್‌ಸ್ಟೆಬಲ್ ಸೂರಿ (ವಿಜಯ್ ದೇವರಕೊಂಡ) ಸುತ್ತ ಸುತ್ತುತ್ತದೆ, ಅವನು ಗೂಢಚಾರನಾಗುತ್ತಾನೆ ಮತ್ತು ತನ್ನ ಕಾಣೆಯಾದ ಸಹೋದರ ಶಿವ (ಸತ್ಯದೇವ್) ನನ್ನು ಹುಡುಕುತ್ತಾ ಶ್ರೀಲಂಕಾದ ಅಪಾಯಕಾರಿ ಪ್ರದೇಶಗಳನ್ನು ತಲುಪುತ್ತಾನೆ. ಅಲ್ಲಿ ಅವನು ಕಾರ್ಟೆಲ್ ನಾಯಕ ಒಡಿಯಪ್ಪನ್ (ಬಾಬುರಾಜ್) ಅವರ ಮಗ ಮುರುಗನ್ (ವೆಂಕಟೇಶ್) ಜೊತೆ ಸಿಕ್ಕಿಹಾಕಿಕೊಳ್ಳುತ್ತಾನೆ. ಇದು ಅವನ ಕಾರ್ಯಾಚರಣೆಯನ್ನು ಹೆಚ್ಚು ಅಪಾಯಕಾರಿಯನ್ನಾಗಿ ಮಾಡುತ್ತದೆ. ಈ ಸಮಯದಲ್ಲಿ, ಡಾ. ಮಧು (ಭಾಗ್ಯಶ್ರೀ ಬೋರ್ಸೆ) ಅವರಿಗೆ ಸಹಾಯ ಮಾಡುತ್ತಾರೆ. ಅವರು  ಪ್ರೀತಿಸಲು ಪ್ರಾರಂಭಿಸುತ್ತಾರೆ. ಇದು ಚಿತ್ರದ ಕಥಾ ಹಂದರ.

Sulekha