ನಾಡ ಹಬ್ಬ ಮೈಸೂರು ದಸರಾಗೆ ಕೌಂಟ್‌ಡೌನ್!‌ – ಭೀಮನಿಗಿಂತ ಸುಗ್ರೀವ ಆನೆಯೇ ಬಲಶಾಲಿ!

ನಾಡ ಹಬ್ಬ ಮೈಸೂರು ದಸರಾಗೆ ಕೌಂಟ್‌ಡೌನ್!‌ – ಭೀಮನಿಗಿಂತ ಸುಗ್ರೀವ ಆನೆಯೇ ಬಲಶಾಲಿ!

ನಾಡ ಹಬ್ಬ ಮೈಸೂರು ದಸರಾಗೆ ಭರ್ಜರಿ ತಯಾರಿಗಳು ನಡೆಯುತ್ತಿದೆ. ಮೈಸೂರು ದಸರಾ ಹಬ್ಬಕ್ಕಾಗಿ ಈಗಾಗಲೇ ಆನೆಗಳನ್ನು ಕಾಡಿನಿಂದ ನಾಡಿಗೆ ಕರೆ ತರಲಾಗಿದೆ. ಕಾಡಿನಿಂದ ಅರಮನೆಗೆ ಆಗಮಿಸಿದ ಆನೆಗಳ ತೂಕ ಪರಿಶೀಲನೆ ಮಾಡಲಾಗಿದ್ದು, ಭೀಮನಿಗಿಂತ ಸುಗ್ರೀವ ಆನೆಯೇ ಬಲಶಾಲಿ ಅನ್ನೋದು ಗೊತ್ತಾಗಿದೆ.

ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಕೇಸ್‌! – ತಿಮರೋಡಿ ಮನೆ ಮೇಲೆ ಎಸ್‌ಐಟಿ ದಾಳಿ!

ಮೊದಲ ದಿನದ ತಾಲೀಮಿಗೂ ಮುನ್ನ ಅರಮನೆ ಅಂಗಳಕ್ಕೆ ಆಗಮಿಸಿರುವ ಆನೆಗಳ ತೂಕ ಪರೀಕ್ಷಿಸಲಾಗಿದೆ. ನಗರದ ಧನ್ವಂತ್ರಿ ರಸ್ತೆಯಲ್ಲಿರುವ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ಇಂದು ಆನೆಗಳ ತೂಕ ಪರಿಶೀಲನೆ ಮಾಡಲಾಗಿದ್ದು, ಈ ಪೈಕಿ ಮೊದಲ ತಂಡದಲ್ಲಿ ಹೆಚ್ಚು ತೂಕ ಹೊಂದಿರುವ ಭೀಮನಿಗಿಂತ ಸುಗ್ರೀವ ಆನೆ ಹೆಚ್ಚು ಬಲಶಾಲಿಯಾಗಿದ್ದಾನೆ ಅನ್ನೋದು ಗೊತ್ತಾಗಿದೆ. ಆನೆಗಳ ತೂಕ ಹಾಗೂ ಆರೋಗ್ಯಕ್ಕೆ ಅನುಗುವಣವಾಗಿ ಅವುಗಳಿಗೆ ಪೌಷ್ಠಿಕ ಆಹಾರ ನೀಡಲಾಗುತ್ತದೆ. ಬೆಳಗ್ಗೆ, ಸಂಜೆ ಎರಡು ಸಮಯ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಸಲಾಗುತ್ತದೆ. ನಗರದ ಸದ್ದುಗದ್ದಲಕ್ಕೆ ವಿಚಲಿತವಾಗದಂತೆ ಆನೆಗಳಿಗೆ ತರಬೇತಿ ನೀಡಲಾಗುತ್ತದೆ.

ಎರಡನೇ ತಂಡದ ಆನೆಗಳ ತೂಕದ ವಿವರ

ಸುಗ್ರೀವ: 5,545 ಕೆ.ಜಿ, ಶ್ರೀಕಂಠ: 5,540 ಕೆ.ಜಿ, ಗೋಪಿ: 4,990 ಕೆ.ಜಿ, ರೂಪ: 3,320 ಕೆ.ಜಿ, ಹೇಮಾವತಿ: 2440 ಕೆ.ಜಿ

ಮೊದಲ ತಂಡದ ಆನೆಗಳ ತೂಕದ ವಿವರ

ಅಭಿಮನ್ಯು: 5,360 ಕೆ.ಜಿ, ಭೀಮ: 5,465 ಕೆ.ಜಿ, ಧನಂಜಯ: 5,310 ಕೆ.ಜಿ, ಕಾವೇರಿ: 3,010 ಕೆ.ಜಿ. ಲಕ್ಷ್ಮೀ: 3,730 ಕೆ.ಜಿ, ಏಕಲವ್ಯ: 5,305 ಕೆ.ಜಿ, ಮಹೇಂದ್ರ: 5,120 ಕೆ.ಜಿ, ಕಂಜನ್: 4,880 ಕೆ.ಜಿ, ಪ್ರಶಾಂತ: 5,110 ಕೆ.ಜಿ

Shwetha M