ಭೂಮಿಕಾಗೆ ಗೌತಮ್ ದಾಂಪತ್ಯದಲ್ಲಿ ಬಿರುಕು – ‘ಅಮೃತಧಾರೆ’ ಧಾರಾವಾಹಿಯಲ್ಲಿ ಇದೆಂಥಾ ಟ್ವಿಸ್ಟ್?

ಭೂಮಿಕಾಗೆ ಗೌತಮ್ ದಾಂಪತ್ಯದಲ್ಲಿ ಬಿರುಕು – ‘ಅಮೃತಧಾರೆ’ ಧಾರಾವಾಹಿಯಲ್ಲಿ  ಇದೆಂಥಾ ಟ್ವಿಸ್ಟ್?

ಅಮೃತಧಾರೆ ಧಾರಾವಾಹಿಯಲ್ಲಿ ಈ ವಾರ ಸಾಕಷ್ಟು ತಿರುವುಗಳು ಸಿಕ್ಕಿವೆ. ನಾಯಕ ಗೌತಮ್ ದಿವಾನ್ ಮತ್ತು ಭೂಮಿಕಾ ದಾಂಪತ್ಯದ ನಡುವೆ ಬಿರುಕು ಮೂಡಿದೆ. ಇವರನ್ನು ಬೇರೆ ಮಾಡಬೇಕು ಎಂಬುದು ಶಕುಂತಾಳ ಪ್ಲ್ಯಾನ್ ಆಗಿತ್ತು. ಆದರೆ, ಶಕುಂತಲ ಪ್ಲ್ಯಾನ್ ಪ್ರತಿ ಬಾರಿಯೂ ವಿಫಲ ಆಗುತ್ತಲೇ ಇತ್ತು. ಆದರೆ, ಈಗ ಭೂಮಿಕಾ ಹಾಗೂ ಗೌತಮ್ ಮಧ್ಯೆ ಬೆಂಕಿ ಬೀಳುವ ಎಲ್ಲಾ ಸಾಧ್ಯತೆ ಇದೆ. ಇದರಿಂದ ಶಕುಂತಲಾ ಖುಷಿ ಆಗಿದ್ದಾಳೆ.

ಇದನ್ನೂ ಓದಿ: ಮಹಾನಟಿ ಗಗನಾ ಈಗ ರಾಜಕುಮಾರಿ! -ದತ್ತುಪುತ್ರಿಗೆ Zee ಕನ್ನಡ ಭರ್ಜರಿ ಗಿಫ್ಟ್!‌ 

ಗೌತಮ್ ದಿವಾನ್ ಗೆ ಪತ್ನಿ ಭೂಮಿಕಾ ಅಂದರೆ ಜೀವ. ಆದರೆ, ಸಿಟ್ಟಿನ ಭರದಲ್ಲಿ ಡುಮ್ಮ ಸಾರ್ ಪತ್ನಿ ಭೂಮಿಕಾ ಮೇಲೆ ವಿಪರೀತ ಸಿಟ್ಟಾಗಿದ್ದಾರೆ. ಗೌತಮ್ ದಿವಾನ್,  ಮೀಟಿಂಗ್ ಕಾರಣಕ್ಕೆ ಆತ ವಿದೇಶಕ್ಕೆ ಹೋಗಬೇಕಿತ್ತು. ವಿದೇಶಕ್ಕೆ ಹೋಗಬೇಡಿ ಎಂದು ಗೌತಮ್ ಬಳಿ ಭೂಮಿಕಾ ಕೇಳಿಕೊಂಡಳು. ಪತ್ನಿ ಮಾತಿಗೆ ಗೌತಮ್ ಒಪ್ಪಿರಲಿಲ್ಲ. ಆಗ ಭೂಮಿಕಾ, ‘ನಿಮ್ಮ ಪಾಸ್​ಪೋರ್ಟ್ ಕದ್ದಿಟ್ಟರೆ ಹೇಗೆ ಹೋಗ್ತೀರಾ’ ಎಂದು ಹೇಳಿ ನಕ್ಕಳು. ಇಲ್ಲೇ ಇರೋದು ಟ್ವಿಸ್ಟ್. ಪತ್ನಿ ಜೊತೆ ಮಾತುಕತೆ ನಂತರ, ಗೌತಮ್ ದೀವಾನ್ ಕಾರಿನಲ್ಲಿ ಹೋಗುವಾಗ ತನ್ನ ಬಳಿ ಪಾಸ್​ಪೋರ್ಟ್ ಇಲ್ಲ ಎಂಬ ವಿಚಾರ ಗೊತ್ತಾಗುತ್ತದೆ. ಹೋಗುತ್ತಿರುವ ದಾರಿಯಿಂದಲೇ ಆತ ಮರಳಿ ಬರುತ್ತಾನೆ. ಈ ವೇಳೆ ಬಂದು ಭೂಮಿಕಾ ಬಳಿ ಪಾಸ್​​ಪೋರ್ಟ್ ಕೇಳುತ್ತಾನೆ. ಆದರೆ, ಪಾಸ್​ಪೋರ್ಟ್ ಇಲ್ಲ ಎಂದು ಆಕೆ ನೇರವಾಗಿ ಹೇಳುತ್ತಾಳೆ. ‘ನಾನು ಅದನ್ನು ಯಾಕೆ ತೆಗೆದು ಇಡಲಿ ನಿಮ್ಮ ಬ್ಯಾಗ್​ನಲ್ಲೇ ಇಟ್ಟಿದ್ದೇನೆ’ ಎಂದು ಭೂಮಿಕಾ ಪ್ರಶ್ನೆ ಮಾಡುತ್ತಾಳೆ. ‘ನಿಮಗೆ ಇತ್ತೀಚೆಗೆ ಹುಚ್ಚು ಹಿಡಿದಿದೆ. ಅದಕ್ಕಾಗಿ ಈ ರೀತಿ ಆಡುತ್ತಿದ್ದೀರಾ’ ಎಂದು ಗೌತಮ್ ಹೇಳಿದರು. ‘ನಾನು ಅದನ್ನು ಎತ್ತಿಟ್ಟಿಲ್ಲ. ನೀವು ನಂಬೋದಾದರೆ ನಂಬಿ ಬಿಡೋದಾದರೆ ಬಿಡಿ’ ಎಂದು ಹೇಳುತ್ತಲೇ ಭೂಮಿಕಾ ಹೊರಟು ಹೋಗುತ್ತಾಳೆ. ‘ಅಮೃತಧಾರೆ’ ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾರ ಮಧ್ಯೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಭೂಮಿಕಾ ಗೌತಮ್‌ನ ಪಾಸ್‌ಪೋರ್ಟ್ ಅನ್ನು ಮರೆಮಾಡಿದ್ದು, ಅವರ ವಿದೇಶ ಪ್ರವಾಸಕ್ಕೆ ಅಡ್ಡಿಯಾಗಿದೆ. ಇದರಿಂದ ಇಬ್ಬರ ನಡುವೆ ಜಗಳ ನಡೆದು, ಶಕುಂತಲಾ ತನ್ನ ಯೋಜನೆಯಲ್ಲಿ ಯಶಸ್ವಿಯಾಗಿದ್ದಾಳೆ. ಇಬ್ಬರ ಮಧ್ಯೆ ಆಗುತ್ತಿರುವ ಜಗಳವನ್ನು ನೋಡಿ ಶಕುಂತಲಾ ಖುಷಿ ಪಡ್ತಾಳೆ. ಗೌತಮ್ ಹಾಗೂ ಭೂಮಿಕಾ ಮಧ್ಯೆ ತಂದಿಡಬೇಕು ಎಂದು ಆಕೆ ಸಾಕಷ್ಟು ಪ್ರಯತ್ನ ಮಾಡುತ್ತಲೇ ಇದ್ದಳು. ಆದರೆ, ಅದು ಯಶಸ್ಸು ಕಂಡಿರಲಿಲ್ಲ. ಈಗ ಇವರೇ ಕಿತ್ತಾಡಿಕೊಳ್ಳುತ್ತಿರುವುದನ್ನು ನೋಡಿ ಆಕೆ ಖುಷಿ ಪಡುತ್ತಾಳೆ. ‘ಈ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳಬೇಕು’ ಎಂದು ಆಕೆ ಹೇಳುತ್ತಾಳೆ.

ಈ ಮೂಲಕ ಅಮೃತಧಾರೆ ಸೀರಿಯಲ್‌ನಲ್ಲಿ ನಾಯಕ ನಾಯಕಿ ನಡುವೆ ಮನಸ್ತಾಪ ಬಂದಿದೆ. ಅತ್ತೆ ಶಕುಂತಲಾ ಖುಷಿಯಾಗಿದ್ದಾಳೆ.

Sulekha