ಬೆಂಗಳೂರಿನಲ್ಲಿ 1 ಕಿ.ಮೀ ಆಟೋ ದರ 425 ರೂ.! – ಆಟೋ ದರ ನೋಡಿ ತಬ್ಬಿಬ್ಬಾದ ಪ್ರಯಾಣಿಕ !

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಟೋದಲ್ಲೇ ಅನೇಕರು ಓಡಾಡ್ತಾರೆ. ಇತ್ತೀಚೆಗೆ ಕೆಲ ಆ್ಯಪ್ ಆಧಾರಿತ ಕ್ಯಾಬ್ ಅಥವಾ ಆಟೋ ಬುಕಿಂಗ್ ಸೇವೆಗಳು ಲಭ್ಯವಿದೆ. ಈ ಮೂಲಕ ಕ್ಯಾಬ್ ಬುಕ್ ಮಾಡಿಕೊಂಡು ಹೋಗ್ತಾರೆ. ಇದೀಗ ಇಲ್ಲೊಬ್ಬ ವ್ಯಕ್ತಿ ಉಬರ್ ನಲ್ಲಿ ಆಟೋ ಬುಕ್ ಮಾಡಲು ಮುಂದಾಗಿದ್ದು, ದರ ನೋಡಿ ಶಾಕ್ ಆಗಿದ್ದಾರೆ.
ಇದನ್ನೂ ಓದಿ: ರೋಹಿತ್ & ಕೊಹ್ಲಿ ವಿದಾಯ ಪಂದ್ಯಕ್ಕೆ ಬಿಸಿಸಿಐ ಗರಂ – ಐಪಿಎಲ್ ನಿವೃತ್ತಿ ಬಗ್ಗೆ ವಿರಾಟ್ ಹಿಂಟ್!
ರಾಜ್ಯ ರಾಜಧಾನಿಯಲ್ಲಿ ಆಟೋ ದರ ಹೆಚ್ಚಾಗಿದ್ದು, ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆ್ಯಪ್ ಆಧಾರಿತ ಆಟೋ ಬುಕಿಂಗ್ ಸೇವೆಗಳು ದುಬಾರಿಯಾಗುತ್ತಿದೆ. ದರ ಹೆಚ್ಚಳ ಮಾಡಿರುವ ಸ್ಕ್ರೀನ್ ಶಾಟ್ ಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾ ಇರುತ್ತೆ. ಇದೀಗ ಬೆಂಗಳೂರಿನ ವ್ಯಕ್ತಿಯೊಬ್ಬರು ತಮ್ಮ ಸ್ನೇಹಿತನು ಆಟೋ ಬುಕ್ ಮಾಡಲು ಹೋಗಿದ್ದು, ಉಬರ್‌ನಲ್ಲಿ ಆಟೋ ದರ ಕೇವಲ ಒಂದು ಕಿಲೋಮೀಟರ್ ದೂರಕ್ಕೆ 425 ರೂ ಆಗಿದೆ. ಆಟೋ ದರ ನೋಡಿ ಶಾಕ್ ಆದ ಬೆಂಗಳೂರಿಗ ಕೊನೆಗೆ ನಡೆದುಕೊಂಡೆ ಹೋಗಿದ್ದು, ಈ ಬಗ್ಗೆ ವ್ಯಕ್ತಿಯೊಬ್ಬರು ಪೋಸ್ಟ್ ಹಂಚಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮಳೆ ಬಂದ ಕಾರಣ ವ್ಯಕ್ತಿಯೊಬ್ಬರು ಉಬರ್‌ನಲ್ಲಿ ಆಟೋ ಬುಕ್ ಮಾಡಲು ಹೋಗಿದ್ದಾರೆ. ಈ ವೇಳೆಯಲ್ಲಿ ಆ್ಯಪ್‌ನಲ್ಲಿ ಒಂದು ಮೀಟರ್ ಗೆ ಆಟೋ ದರವು 425 ರೂ ತೋರಿಸಿದೆ. ಈ ಬಗ್ಗೆ ಸ್ಕ್ರೀನ್ ಶಾಟ್ ಹಂಚಿಕೊಂಡು ಇದು ನನ್ನ ಸ್ನೇಹಿತನಿಗೆ ಆದ ಕಹಿ ಅನುಭವ ಎಂದಿದ್ದಾರೆ. ಇನ್ನು, ನಿನ್ನೆ ರಾತ್ರಿ ನನ್ನ ಫ್ರೆಂಡ್ ಊರಿಗೆ ಹೋಗೋಕೆ ಆಟೋ ಬುಕ್ ಮಾಡ್ಬೇಕು ಎಂದು ನೋಡಿದ. ಈ ವೇಳೆ ದರ ನೋಡಿ ಶಾಕ್ ಆದ. ಕೂಡಲೇ ಒಂದು ಛತ್ರಿ ತಗೊಂಡು ನಡ್ಕೊಂಡು ಹೋದ ಎಂದು ಹೇಳಿದ್ದಾರೆ. ಈ ಪೋ@okstand04 ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಶೇರ್ ಮಾಡಿಕೊಂಡ ಪೋಸ್ಟ್‌ನಲ್ಲಿ ಮಳೆಯ ಸಮಯದಲ್ಲಿ ಕೇವಲ 1 ಕಿಮೀಗೆ ಉಬರ್ ದರಗಳು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ಪೋಸ್ಟ್ ನೋಡಿದ ಬಳಕೆದಾರರು ಆಟೋಗಳು ಜನರಿಂದ ಹೆಚ್ಚುವರಿ ಹಣ ದೋಚುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇನ್ನೂ ಕೆಲವರು ಕಂಪನಿಯಲ್ಲಿ ದುಡಿಯೋ ಬದಲು ಆಟೋ ಓಡಿಸುವುದೇ ಬೆಸ್ಟ್ ಎನಿಸುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.

ನೋಡಿರಿ

