ಸಾರಥಿಯಂತೆ ಗೆಲ್ಲುತ್ತಾ ದಿ ಡೆವಿಲ್? – ದಾಸ ಜೈಲಿಗೆ ಹೋದ್ರೆ ಪ್ರೊಡ್ಯೂಸರ್‌ಗೆ ಲಕ್
ಸಾರಥಿ ಬಜೆಟ್ ಎಷ್ಟು? ಅಂದು ಗಳಿಸಿದ್ದೆಷ್ಟು?

ಸಾರಥಿಯಂತೆ ಗೆಲ್ಲುತ್ತಾ ದಿ ಡೆವಿಲ್? –  ದಾಸ ಜೈಲಿಗೆ ಹೋದ್ರೆ ಪ್ರೊಡ್ಯೂಸರ್‌ಗೆ ಲಕ್ಸಾರಥಿ ಬಜೆಟ್ ಎಷ್ಟು? ಅಂದು ಗಳಿಸಿದ್ದೆಷ್ಟು?

ಸ್ಯಾಂಡಲ್‌ವುಡ್ ಸುಲ್ತಾನ್ ದರ್ಶನ್ ಈಗ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಹಾಗಂತ ದಾಸನಿಗೆ ಜೈಲು ದರ್ಶನ್ ಆಗುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆ ತನ್ನ ಹೆಂಡತಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ನಡೆಸಿದ ಕೇಸ್ ನಲ್ಲಿ ಜೈಲು ಪಾಲಾಗಿದ್ದರು. 2011ರ ಫೆಬ್ರವರಿ 9 ರಂದು ಹೆಂಡತಿ ವಿಜಯಲಕ್ಷ್ಮಿ , ತನ್ನ ಗಂಡ ದರ್ಶನ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬೆಂಗಳೂರಿನ ವಿಜಯ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕೇಸ್ ನಲ್ಲಿ ಪೊಲೀಸರು ಬಂಧಿಸಿ ನಟ ದರ್ಶನ್ ರನ್ನು ಜೈಲಿಗೆ ಕಳಿಸಿದ್ದರು.

ದಾಸ ಜೈಲಿನಲ್ಲಿದ್ದಾಗ ಸಾರಥಿ ಸೂಪರ್ ಹಿಟ್  

ದರ್ಶನ್ ಈ ಹಿಂದೆ ತನ್ನ ಹೆಂಡತಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ನಡೆಸಿದ ಕೇಸ್‌ನಲ್ಲಿ 2011ರಲ್ಲಿ  29 ದಿನಗಳ ಕಾಲ ಜೈಲಿನಲ್ಲಿದ್ದರು. ಆದರೆ, ದರ್ಶನ್‌ ಅವರು ಜೈಲಿಗೆ ಹೋಗುವ ಮುನ್ನವೇ ದಿನಕರ್‌ ತೂಗದೀಪ್‌ ನಿರ್ದೇಶಿಸಿ, ದರ್ಶನ್‌ ಅವರು ನಾಯಕನಾಗಿ ನಟಿಸಿದ್ದ ‘ಸಾರಥಿ’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿತ್ತು. ದರ್ಶನ್‌ ಅವರು ಜೈಲಿಗೆ ಹೋಗುತ್ತಿದ್ದಂತೆಯೇ ಇತ್ತ 2011 ಸೆಪ್ಟೆಂಬರ್‌ 30ಕ್ಕೆ ‘ಸಾರಥಿ’  ರಿಲೀಸ್ ಆಗಿತ್ತು. ಆಗ ದಾಸ ಜೈಲಿನ ಸೆಲ್ ನಲ್ಲಿ ತನ್ನ ಸಿನಿಮಾ ಏನಾಗುತ್ತೋ ಏನೋ ಎಂಬ ಚಿಂತೆಯಲ್ಲಿದ್ದಂತೆ. ನಾನು ಜೈಲಿಗೆ ಬಂದಿದ್ರಿಂದ ಸಾರಥಿ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಗೆಲ್ಲುತ್ತಾ. ಸಿನಿಮಾ ಹಿಟ್ ಆಗುತ್ತಾ ಅನ್ನೋ ಚಿಂತೆಯಲ್ಲಿದ್ದಂತೆ.. ಯಾಕಂದ್ರೆ ಆ ಟೈಂನಲ್ಲಿ ಈ ಮಟ್ಟಿಗೆ ಫ್ಯಾನ್ಸ್ ಇದ್ದಾರೆ ಅನ್ನೋದು ದರ್ಶನ್‌ಗೆ ಗೊತ್ತಿರಲಿಲ್ಲ. ಹೀಗಾಗಿ ದಾಸ ಚಿಂತೆ ಮಾಡುವಂತೆ ಮಾಡಿತ್ತು.  ಆದ್ರೆ ಅಂದುಕೊಂಡಿದ್ದಕ್ಕಿಂತೆ ಹೆಚ್ಚಾಗಿ ಸಿನಿಮಾ ಗೆದ್ದಿತ್ತು. ಕರ್ನಾಟಕದ ಮಾಸ್  ಸಿನಿಮಾ ಫ್ಯಾನ್ ಗಳು ಸಿನಿಮಾವನ್ನು ಗೆಲ್ಲಿಸಿದ್ದರು. ಸಾರಥಿ ಸಿನಿಮಾ ಕ್ಲಾಸ್ ಅಲ್ಲ, ಮಾಸ್ ಸಿನಿಮಾ.  ಹೀಗಾಗಿ ಮಾಸ್ ಸಿನಿಮಾಗಳ ಪ್ರೇಕ್ಷಕರು ಸಿನಿಮಾವನ್ನು ಗೆಲ್ಲಿಸಿದ್ದರು. 7 ಕೋಟಿ ಹಾಕಿ ನಿರ್ಮಾಣ ಮಾಡಿದ್ದ  ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 15 ಕೋಟಿ ಬಾಚಿ ಕೊಂಡಿತ್ತು. ಈಗ ಇದು ಚಿಕ್ಕ ಕಲೆಕ್ಷನ್ ಅನ್ಸಿದ್ರೂ 2011ರಲ್ಲಿ ಇಂದು ದೊಡ್ಡ ಸಕ್ಸಸ್ ಅಂತನೇ ಹೇಳಬುಹುದು.  ಸಿನಿಮಾ ತೆರೆಕಂಡ 15 ದಿನಗಳ ನಂತರ ದರ್ಶನ್‌ ಅವರು ಜೈಲಿನಿಂದ ಆಚೆ ಬಂದರು. 100 ದಿನಗಳ ಪ್ರದರ್ಶನಕಂಡು ಶತದಿನೋತ್ಸವ ಆಚರಿಸಿಕೊಂಡಿತ್ತು.

 ಅಂದು ಸಾರಥಿ, ಇಂದು ಡೆವಿಲ್ ಸಿನಿಮಾ

ಬೇಲ್ ಮೇಲೆ ಹೊರ ಬಂದ ಬಳಿಕ ಡೆವಿಲ್ ಸಿನಿಮಾ ಶೂಟಿಂಗ್ ಅನ್ನು ದರ್ಶನ್ ಮಾಡಿ ಮುಗಿಸಿದ್ದಾರೆ. ದರ್ಶನ್ ಇನ್ನೂ 6 ತಿಂಗಳ ಕಾಲ ಬೇಲ್‌ಗೆ ಅಪ್ಲೈ ಮಾಡೋಕೆ ಆಗಲ್ಲ. 6 ತಿಂಗಳು ಜೈಲು ಫಿಕ್ಸ್. ಹೀಗಾಗಿ ಈ ಭಾರಿ ದರ್ಶನ್ ಕೊಲೆ ಕೇಸ್ ನಲ್ಲಿ ಜೈಲುನಲ್ಲಿರುವಾಗ ಡೆವಿಲ್ ಸಿನಿಮಾ ರೀಲೀಸ್ ಮಾಡುತ್ತಾರಂತೆ. ಹೀಗಾಗಿ ಈ ಭಾರಿ ಜೈಲು ಸೇರಿದಾಗ ಡೆವಿಲ್ ಸಿನಿಮಾ ಹಿಟ್ ಆಗುತ್ತೋ ಇಲ್ಲವೋ ಎಂಬ ಕುತೂಹಲ ರಾಜ್ಯದ ಜನರಲ್ಲಿದೆ.  ಕರ್ನಾಟಕದ ಉದ್ದಗಲಕ್ಕೂ ನಟ ದರ್ಶನ್ ಫ್ಯಾನ್ ಫಾಲೋಯಿಂಗ್ ಇರೋದರಿಂದ ಡೆವಿಲ್ ಸಿನಿಮಾ ಹಿಟ್ ಆಗುತ್ತೆ ಎಂಬ ನಿರೀಕ್ಷೆಯಲ್ಲಿ ದರ್ಶನ್ ಅಭಿಮಾನಿಗಳು ಇದ್ದಾರೆ. ಈ ವರ್ಷದ ಅಂತ್ಯದಲ್ಲೇ ಡೆವಿಲ್ ರಿಲೀಸ್ ಆಗಲಿದ್ದು, ಯಾವ ಮಟ್ಟಿಗೆ ಸಕ್ಸಸ್ ಕಾಣುತ್ತೆ ಅನ್ನೋದ್ದನ್ನ ಕಾದು ನೋಡಬೇಕಿದೆ.

Kishor KV