ಲವ್ವಲ್ಲಿ ಬಿದ್ರು ರಾಜ್‌ ಬಿ ಶೆಟ್ರು! – 3ನೇ ಪ್ರೇಯಸಿಯನ್ನ ಮದ್ವೆ ಆಗ್ತಾರಾ?
RBS ಮನ ಕದ್ದ ಚೆಲುವೆ ಇವರೇ! 

ಲವ್ವಲ್ಲಿ ಬಿದ್ರು ರಾಜ್‌ ಬಿ ಶೆಟ್ರು! – 3ನೇ ಪ್ರೇಯಸಿಯನ್ನ ಮದ್ವೆ ಆಗ್ತಾರಾ?RBS ಮನ ಕದ್ದ ಚೆಲುವೆ ಇವರೇ! 

ರಾಜ್‌ ಬಿ ಶೆಟ್ಟಿ.. ಸ್ಯಾಂಡಲ್‌ ವುಡ್‌ ನ ಭರವಸೆಯ ನಟ, ನಿರ್ದೇಶಕ.. ಈಗಾಗಲೇ ವಿಶೇಷ ಕತೆಗಳ ಮೂಲಕ ಬರೆದಿರೋ ರಾಜ್‌ ಬಿ ಶೆಟ್ಟಿ,  ಅವುಗಳನ್ನ ಅಷ್ಟೇ ನೀಟ್ ಆಗಿಯೇ ತೆರೆ ಮೇಲೆ ತಂದು ಅಭಿನಯಿಸಿದ್ದಾರೆ. ಸದಾ ಹೊಸತನದ ಮೂಲಕ ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ದು ಮಾಡ್ತಿದ್ದಾರೆ.. ರಾಜ್‌ ಬಿ ಶೆಟ್ಟಿ ನಿರ್ಮಾಣದ ಸು ಫ್ರಮ್‌ ಸೋ ಸಿನಿಮಾ ಥಿಯೇಟರ್‌ಗಳಲ್ಲಿ ಇನ್ನೂ ಅಬ್ಬರಿಸುತ್ತಿದೆ.. ಬಾಕ್ಸ್‌ ಆಫೀಸ್‌ನಲ್ಲೂ ದಾಖಲೆ ಬರೆಯುತ್ತಿದೆ.. ಆದ್ರೀಗ ಫ್ಯಾನ್ಸ್‌ ಮಾತ್ರ ಶೆಟ್ರ ಮದ್ವೆ ಯಾವಾಗ ಅಂತಾ ಕೇಳ್ತಿದ್ದಾರೆ.. ಇದೀಗ ಶೆಟ್ರು ತಮ್ಮ ಪ್ರೀತಿ.. ಬ್ರೇಕ್‌ ಅಪ್..‌ ಮದ್ವೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.. ಒಂದಲ್ಲ.. ಎರಡಲ್ಲ.. ಮೂರನೇ ಬಾರಿ ಪ್ರೀತಿಯಲ್ಲಿ ಬಿದ್ದಿದ್ದಾರೆ ಶೆಟ್ರು..

ರಾಜ್ ಬಿ ಶೆಟ್ಟಿ.. ರೈಟಿಂಗ್.. ಡೈರೆಕ್ಟಿಂಗ್..‌ ಆ್ಯಕ್ಟಿಂಗ್..‌ ಈ ಮೂರು ಕೆಲಸದಲ್ಲಿ  ಪಳಗಿದ್ದಾರೆ. ಈಗಾಗಲೇ ತೆರೆ ಮೇಲೆ ಬಂಧಿರೋ ಸಿನಿಮಾಗಳೇ ಅವರ ಟ್ಯಾಲೆಂಟ್‌ ಏನು ಅನ್ನೋದನ್ನ ಪ್ರೂವ್‌ ಮಾಡಿವೆ.. ಸಿನಿಮಾ ಇಂಡಸ್ಟ್ರಿಯಲ್ಲಿ ರಾಜ್‌ ಬಿ ಶೆಟ್ಟಿ ಒಂದೊಳ್ಳೆ ಹೆಸ್ರು ಕೂಡ ಮಾಡಿದ್ದಾರೆ. ಆದ್ರೆ ಅವರ ಫ್ಯಾನ್ಸ್‌ ಗೆ ಒಂದು ಚಿಂತೆ ಕಾಡ್ತಾನೆ ಇದೆ.. ಸಿನಿಮಾ ಕ್ಷೇತ್ರದಲ್ಲಿ ಒಳ್ಳೆ ಹೆಸ್ರು ಮಾಡಿರೋ ರಾಜ್‌ ಅವರು ಯಾಕೆ ಇನ್ನೂ ಮದುವೆ ಆಗಿಲ್ಲ? ಯಾವಾಗ ಸ್ವೀಟ್‌ ನ್ಯೂಸ್‌ ಕೊಡ್ತಾರೆ ಅಂತಾ ಅವ್ರ ಫ್ಯಾನ್ಸ್‌ ಕೇಳ್ತಾನೆ ಇದ್ದಾರೆ. ಇದೀಗ ಶೆಟ್ರು.. ಕಡೆಗೂ ಪ್ರೀತಿ.. ಬ್ರೇಕ್‌ ಅಪ್..‌ ಮದ್ವೆ ಇವೆಲ್ಲದ್ರ ಬಗ್ಗೆ ಮಾತನಾಡಿದ್ದಾರೆ..

ರಾಜ್‌ ಬಿ ಶೆಟ್ಟಿ ಮೊನ್ನೆ ಮೊನ್ನೆಯಷ್ಟೇ 38ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ರು.. ಮದುವೆ ವಯಸ್ಸು ದಾಟಿತು.. ಮದುವೆ ಯಾವಾಗ ಅಂತಾ ಕೇಳ್ತಿದ್ದ ಫ್ಯಾನ್ಸ್‌ ಗೆ ಈ ಬಗ್ಗೆ ಅಪ್‌ಡೇಟ್‌ ಕೊಟ್ಟಿದ್ದಾರೆ. ಇದೀಗ ಹಳೆ ಪ್ರೀತಿ.. ಹೊಸ ಪ್ರೀತಿ.. ಮದುವೆ ಬಗ್ಗೆ ಸಂದರ್ಶನವೊಂದ್ರಲ್ಲಿ ಮಾತನಾಡಿದ್ದಾರೆ. ರಾಜ್‌ ಬಿ ಶೆಟ್ಟಿ ಕಾಲೇಜು ದಿನಗಳಲ್ಲೇ ಪ್ರೀತಿಯಲ್ಲಿ ಬಿದ್ದಿದ್ರಂತೆ.. ಸುಮಾರು 6 ವರ್ಷಗಳ ಕಾಲ ಪ್ರೀತಿಸಿದ್ರಂತೆ.. ಪ್ರೀತಿ ಶುರುವಾದಾಗಲೇ ಆ ಹುಡುಗಿ ಬಳಿ ನೀನು ಬಿಟ್ಟು ಹೋಗುತ್ತೀಯಾ ಅಂದರೆ ನಾನು ಕಾರಣ ಕೇಳೊದಿಲ್ಲ ಅಂತಾ ಹೇಳಿದ್ರಂತೆ.. ಅದು ಹಾಗೇ ಆಯ್ತಂತೆ. 6 ವರ್ಷದ ನಂತರ ನಮ್ಮಿಬ್ಬರ ಬ್ರೇಕಪ್ ಆಯಿತು. ಅವಳು ಬಿಟ್ಟು ಹೋಗದೇ ಹಾಗೆಯೇ ಇದ್ದರೆ ನಾನು ಕೆಟ್ಟ ಮನುಷ್ಯನಾಗಿಯೇ ಉಳಿತಿದ್ದೆ. ಹಾಗಂತ ನಾನೀಗ ಒಳ್ಳೆಯವನಾಗಿದ್ದೇನೆ ಅಂತಲ್ಲ. ಕೊನೆಪಕ್ಷ ನಾನು ಎಷ್ಟು ಕೆಟ್ಟವನು ಅನ್ನೋದು ಈಗ ನನಗೆ ಗೊತ್ತಾಗಿದೆ. ಅವಳು ಬ್ರೇಕಪ್ ಮಾಡಿದ್ದರಿಂದಲೇ ನಾನು ಬೆಳೆದೆ. ಅವಳು ನನಗೆ ಪ್ರೀತಿ ಕೊಡಲು ಬಂದಿರ್ಲಿಲ್ಲ ಅನ್ನೋದು ಆಮೇಲೆ ಗೊತ್ತಾಯಿತು. ಹಾಗಂತ ನಾನು ಅವಳನ್ನು ಬ್ಲೇಮ್‌ ಮಾಡಲ್ಲ ಗೌರವಿಸುತ್ತೇನೆ. ನಾನು ಯೋಗ್ಯ ಅಲ್ಲ ಅನ್ನೋದನ್ನು ತೋರಿಸಿ ಹೋದಳು.. ಇಲ್ಲಿವರೆಗೂ ಆಕೆ ಯಾಕೆ ಬಿಟ್ಟು ಹೋದ್ಲು ಅಂತಾ ಗೊತ್ತಿಲ್ಲ  ಎಂದಿದ್ದಾರೆ. ಆ ಬ್ರೇಕಪ್‌ ಬಳಿಕ ಬಾಳಲ್ಲಿ ಮತ್ತೊಂದು ಹುಡುಗಿ ಬಂದಿದ್ದಳು. ಆದರೆ ಆ ಸಂಬಂಧ ಕೂಡ ಅರ್ಧಕ್ಕೆ ಮುರಿದುಬಿತ್ತು ಎಂದಿದ್ದಾರೆ ರಾಜ್‌ ಬಿ ಶೆಟ್ಟಿ.. ಇನ್ನು ಈ ಹಿಂದೆ ಕಾರ್ಯಕ್ರಮವೊಂದ್ರಲ್ಲಿ ರಾಜ್‌ ಬಿ ಶೆಟ್ಟಿ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದೇನೆ ಅಂತಾ ಕೂಡ.. ಇಬ್ಬರು ಜೀವನದ ಹುಡುಕಾಟದಲ್ಲಿದ್ದೇವೆ. ನಂದೇನೂ ರೂಲ್ಸ್ ಇಲ್ಲ. ಹಾಗೆಯೇ ಅವಳದ್ದೂ ಇಲ್ಲ. ನಾವು ಖುಷಿಯಾಗಿದ್ದೇವೆ ಎಂದು ಹೇಳಿದ್ರು.. ಈ ರಿಲೇಷನ್‌ ಶಿಪ್‌ ಸ್ಟೇಟಸ್‌ ಏನು.. ಇನ್ನೂ ಇದ್ಯಾ ಅಂತಾ ಕೇಳಲಾಯ್ತು.. ಸದ್ಯಕ್ಕೆ ನಾವು  ಆರಾಮಾಗಿ ಇದ್ದೀವಿ ಅಂತಾ ಮಾತ್ರ ಹೇಳಿದ್ದಾರೆ. ಆದ್ರೆ ಆ ಹುಡುಗಿ ಯಾರು ಎಂದು ಎಲ್ಲೂ ಗುಟ್ಟು ಬಿಟ್ಟುಕೊಟ್ಟಿಲ್ಲ..  ಮುಂದಿನ ದಿನಗಳಲ್ಲಿ ರಾಜ್‌ ಬಿ ಶೆಟ್ಟಿ ಹುಡುಗಿ ಯಾರು.. ಮದ್ವೆ ಯಾವಾಗ ಅಂತಾ ರಿವೀಲ್‌ ಮಾಡ್ತಾರಾ ಕಾದು ನೋಡ್ಬೇಕು..

Shwetha M