RCB ಕಾಲ್ತುಳಿತಕ್ಕೆ ಸಿಎಂ ಆನ್ಸರ್ – ಮಾತಿನಲ್ಲೇ ವಿಪಕ್ಷಗಳಿಗೆ ಗುನ್ನಾ
ಫೇಲ್ ಆಗಿ ಪಾಸ್ ಎಂದ್ರಾ ಸಿದ್ದು?

RCB ಕಾಲ್ತುಳಿತಕ್ಕೆ ಸಿಎಂ ಆನ್ಸರ್  – ಮಾತಿನಲ್ಲೇ ವಿಪಕ್ಷಗಳಿಗೆ ಗುನ್ನಾಫೇಲ್ ಆಗಿ ಪಾಸ್ ಎಂದ್ರಾ ಸಿದ್ದು?

ಆರ್‌ಸಿಬಿ 18 ವರ್ಷದ ಬಳಿಕ ಕಪ್ ಗೆಲ್ತು. ಕಪ್ ಗೆದ್ದ ಖುಷಿಯಲ್ಲಿದ್ದ ಜನರ ಖುಷಿ 18 ಗಂಟೆ ಕಳೆಯುವ ಹೊತ್ತಿಗೆ ಮಾಯವಾಗಿತ್ತು. ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ 11 ಜನ ಪ್ರಾಣ ಬಿಟ್ಟ ಘಟನೆ ಇನ್ನೂ ಕಣ್ಮಂದೆ ಇದೆ. ಈ ನಡುವೆ ಈ ಘಟನೆಯಲ್ಲಿ ಯಾರದ್ದು ತಪ್ಪು ಅನ್ನೋ ಪ್ರಶ್ನೆಗೆ ಉತ್ತರವೇ ಇರಲಿಲ್ಲ.  ಆರ್‌ಸಿಹಿ ಮ್ಯಾನೇಜ್‌ಮೆಂಟ್ ಅವರದ್ದ. ಸರ್ಕಾರದ್ದ ಅಥವಾ ಪೊಲೀಸರ ತಪ್ಪಾ ಅನ್ನೋದು ಯಕ್ಷ ಪ್ರಶ್ನೆಯಾಗೇ ಉಳಿದಿದೆೆ.  ಈ ನಡುವೆ ಆರ್‌ಸಿಬಿ ಕಾಲ್ತುಳಿತ ಕೇಸ್ ಸಂಬಂಧ ಸದನದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿದೆ.   ಆರ್‌ಸಿಬಿ ಕಾಲ್ತುಳಿತದ ಬಿಸಿಬಿಸಿ ಚರ್ಚೆ ಇವತ್ತು ವಿಧಾನಸೌಧದಲ್ಲಿ ನಡೆದಿದೆ.  ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಘಟನೆಯ ಬಗ್ಗೆಯೂ ವಿಪಕ್ಷಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಇದೇ ವಿಚಾರದಲ್ಲಿ ವಿರೋಧ ಪಕ್ಷ ಬಿಜೆಪಿಯ ಕಾಲೆಳೆದರು.

ಸದನದಲ್ಲಿ ಮಾತನಾಡಿದ ಸಿದ್ದರಾಮಯ್ಯ,  ಆರ್‌ಸಿಬಿ ಜಗತ್ತಿನಲ್ಲೇ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ. 18 ವರ್ಷಗಳ ಬಳಿಕ ಟ್ರೋಫಿ ಗೆದ್ದಾಗ, ನಮ್ಮ ಕರ್ನಾಟಕದ್ದೇ ತಂಡ ಗೆದ್ದಿದೆ ಅಂದುಕೊಂಡ್ರು. ಆದ್ರೆ ನನ್ನನ್ನ ಕಾರ್ಯಕ್ರಮಕ್ಕೆ ಕರೆದಾಗ ಓ ಬಿಡಪ್ಪ, ಆರ್‌ಸಿಬಿ ನಮ್ಮ ಟೀಮೇ ಅಲ್ಲ, ಅವರು ನಮ್ಮ ಕರ್ನಾಟಕದವರೇ ಅಲ್ಲ, ನಾನು ಕಾರ್ಯಕ್ರಮಕ್ಕೆ ಬರಲ್ಲ ಅಂತ ಹೇಳಿದ್ದೆ ಎಂದು ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಹೇಳಿದರು.

ಆ ದಿನ ನನ್ನ ಮೊಮ್ಮಗ ಲಂಡನ್ ನಿಂದ ಬಂದಿದ್ದ. ಅವ್ನು ದೋಸೆ ತಿನ್ನೋಕೆ ಹೋಗೋಣ ಅಂದಿದ್ದ. ಅದಕ್ಕಾಗಿ ನಾನು ಅವನನ್ನು ಕರೆದುಕೊಂಡು ಹೋಗಿದ್ದೆ. 5.30ಗೆ ಪೊನ್ನಣ್ಣ ಫೋನ್ ಮಾಡಿದಾಗ್ಲೇ ನನಗೆ ಆ ಘಟನೆ ಗೊತ್ತಾಗಿದ್ದು, ಇದನ್ನು ನಂಬಿದ್ರೆ ನಂಬಿ, ಬಿಟ್ರೆ ಬಿಡಿ ಎಂದು ಸಿಎಂ ಸದನದಲ್ಲಿ ಗುಡುಗಿದ್ರು. ಮನುಷತ್ವ ಇರೋರಿಗೆ ಈ ಸುದ್ದಿ ತಿಳಿದ ತಕ್ಷಣ ದುಃಖ ಆಗುತ್ತೆ. ನನಗೂ ದೊಡ್ಡ ಶಾಕಿಂಗ್ ಆಗಿತ್ತು. ತಕ್ಷಣ ಕಮಿಷನರ್ ಬಳಿ ಮಾಹಿತಿ ಪಡೆದಿದ್ದೆ. ಅಷ್ಟರಲ್ಲಿ 11 ಮಂದಿ ಸಾವನ್ನಪ್ಪಿದ್ರು ಎಂದು ಬಿಜೆಪಿಗರ ಪ್ರಶ್ನೆಗಳಿಗೆ ಸಿಎಂ ಸ್ಪಷ್ಟನೆ ನೀಡಿದ್ದಾರೆ.

ಹಲವಾರು ವರ್ಷಗಳ ಕನಸನ್ನು ಆರ್‌ಸಿಬಿ ನನಸು ಮಾಡಿದೆ. ಆದರೆ ತೆರೆದ ರಾಜ್ಯ ಸರ್ಕಾರ ವಿಜಯೋತ್ಸವಕ್ಕೆ ನಿರಾಕರಣೆ ಮಾಡುವ ಮೂಲಕ ಗೃಹ ಸಚಿವರು ಅಸಮರ್ಥ. ಅಭಿಮಾನಿಗಳ ಕನಸ್ಸಿಗೆ ಕಲ್ಲು ಹಾಕಿದ ಪರಮೇಶ್ವರ್ ಎಂದು ಎಂದು ಬಿಜೆಪಿಯವರು ಟ್ವಿಟ್ ಮಾಡಿದ್ದಾರೆ. ಹೀಗಂತ ನಾನು ಹೇಳಿದ್ದಲ್ಲ, ಬಿಜೆಪಿಯವರು ಹೇಳಿದ್ದಾರೆ ಎಂದು ಸಿಎಂ ವಿವರಿಸಿದರು.

ನಾವು ಏನಾದರೂ ಅನುಮತಿ ಕೊಟ್ಟಿದ್ರೆ ಇವ್ರು ಏನು ಮಾಡ್ತಿದ್ರು ಎಂದು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ, ಇವಾಗ ಧರ್ಮಸ್ಥಳದ ಪ್ರಕರಣದಲ್ಲಿ ಚಳುವಳಿ ಮಾಡ್ತಿದ್ದಾರೆ. ಧರ್ಮಸ್ಥಳದ ಹೆಗಡೆಯವರೇ ಎಸ್ಐಟಿ ನಿರ್ಧಾರ ಸ್ವಾಗತ ಮಾಡಿದ್ದಾರೆ. ಇವ್ರು ಹಿಡ್ಕೊಂಡು ಅಲ್ಲಾಡಿಸುತ್ತಿದ್ದಾರೆ. ಎಸ್ಐಟಿ ಮಾಡಿದಾಗ ಇವ್ರು ಮಾತಾಡೇ ಇರಲಿಲ್ಲ, ಒಂದು ಕಡೆ ಅಸ್ಥಿ ಪಂಜರ, ಮತ್ತೆ ಮೂಳೆ, ಆದಾದ ಮೇಲೆ ಗುಂಡಿಗಳಲ್ಲಿ ಏನು ಸಿಗದಿದ್ದಾಗ, ಇವ್ರು ಶುರು ಮಾಡ್ತಾರೆ ಎಂದು ಬಿಜೆಪಿಯ ಧರ್ಮಸ್ಥಳ ಚಳುವಳಿಗೆ ಸಿಎಂ ಟಾಂಗ್ ನೀಡಿದರು.

ಸಿದ್ದರಾಮಯ್ಯ ನೀಡಿದ ಉತ್ತರ ಸಮಾಧಾನಕರವಾಗಿರಲಿಲ್ಲ ಅನ್ನೋದನ್ನ ರಸವತ್ತಾಗಿ ಬಣ್ಣಿಸುತ್ತಾ ಆರ್ ಆಶೋಕ್ ಸಿಎಂ ಕಾಲೆಳೆದರು. ತಮ್ಮ ಪರೀಕ್ಷೆಯ ಫಲಿತಾಂಶವನ್ನು ತಂದೆಗೆ ತಿಳಿಸುವಾಗ ಸಿದ್ದರಾಮಯ್ಯ, ಅವನು ಫೇಲ್, ಇವನು ಫೇಲು  ಅಂತ ಹೇಳಿದರೆ ಹೊರತು ತಾವು ಫೇಲಾಗಿರುವ ವಿಷಯವನ್ನು ಹೇಳಲೇ ಇಲ್ವಂತೆ! ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದ ಉತ್ತರಗಳನ್ನು ಸಿಎಂ ಹಾಗೆಯೇ ನೀಡಿದರು. ಜಗತ್ತು ಸುತ್ತಿಸಿದರಾದರೂ ವಿಪಕ್ಷದವರು ಕೇಳಿದ ಪ್ರಶ್ನೆಗಳಿಗೆ ಉತ್ತರ ಮಾತ್ರ ಕೊಡಲಿಲ್ಲ ಎಂದು ಆಶೋಕ ಹೇಳಿದರು.

 

Kishor KV