ಸುಜಾತ ಭಟ್ ಸುಳ್ಳಿನ ಕೋಟೆ ಛಿದ್ರ! – ಅನನ್ಯ ಭಟ್ ಕತೆ, ನಿರ್ದೇಶನ ಯಾರದ್ದು ಗೊತ್ತಾ?

ಸುಜಾತ ಭಟ್ ಸುಳ್ಳಿನ ಕೋಟೆ ಛಿದ್ರ! – ಅನನ್ಯ ಭಟ್ ಕತೆ, ನಿರ್ದೇಶನ ಯಾರದ್ದು ಗೊತ್ತಾ?

ನಿಜಕ್ಕೂ ಸುಜಾತ ಭಟ್ ಅವರ ಈ ಮಾತು ಕೇಳಿದಾಗ  ಪ್ರತಿಯೊಬ್ಬರಿಗೂ ಕಣ್ಣಲ್ಲಿ ನೀರು ಬಂದಿತ್ತು. ಛೇ ಎಂತಹ ಅನ್ಯಾಯ ಆಯ್ತು ಅನ್ಸುತ್ತೆ.. ಆದ್ರೆ ನಿಜಕ್ಕೂ ಈ ತಾಯಿ ಇಡೀ ಕರ್ನಾಟಕಕ್ಕೆ ಮೋಸ ಮಾಡಿದ್ರಾ ಅನ್ನೋ ಡೌಟ್ ಶುರುವಾಗಿದೆ. ಧರ್ಮಸ್ಥಳದಲ್ಲಿ ಶುರುವಾದ ಸೌಜನ್ಯ ಹೋರಾಟ ಈಗ ದಿಕ್ಕು ತಪ್ಪಿ ಓಡುತ್ತಿದೆ. ಒಮ್ಮೆ ಎಲ್ಲವೂ ಸತ್ಯ ಅಂತ ನಂಬಿದವರಿಗೆ ಸುಳ್ಳಿನ ದರ್ಶನ ಆಗುತ್ತಿದೆ. ಅನಾಮಿಕ ವ್ಯಕ್ತಿ ತಲೆಬರುಡೆ ಹಿಡಿದುಕೊಂಡು ಬಂದು ನಾನು ನೇತ್ರಾವತಿ ನದಿ ಬಳಿ ಸಾಕಷ್ಟು ಹೆಣ್ಣು ಮಕ್ಕಳ ಶವವನ್ನ ಹೂತಿದ್ದೇನೆ ಅಂತ ಹೇಳಿದಾಗ ಸುಜಾತ ಭಟ್ ಪ್ರತ್ಯೇಕ್ಷವಾಗಿದ್ರು .. ನನ್ನ ಮಗಳು ಧರ್ಮಸ್ಥಳದಲ್ಲಿ 22 ವರ್ಷಗಳ ಹಿಂದೆ ಕಾಣೆಯಾಗಿದ್ದಾಳೆ.  ಮಣಿಪಾಲ್‌ನಲ್ಲಿ MBBS ಓದುತ್ತಿದ್ದ ಆಕೆ ಧರ್ಮಸ್ಥಳಕ್ಕೆ ಗೆಳತಿಯರ ಜೊತೆ ಹೋದಾಗ ಕಾಣೆಯಾಗಿದ್ದಳು. ನಾನು ಕೊಲ್ಕೊತ್ತಾದಲ್ಲಿ ಕೆಲಸ ಮಾಡುತ್ತಿದ್ದೆ. ನನ್ನ ಮಗಳಿಗೆ ನಾನು ಹುಡುಕಿದೆ. ಪೊಲೀಸರಿಗೆ ಕಂಪ್ಲೇಟ್ ಕೊಟ್ರೆ ತೆಗೆದುಕೊಂಡಿಲ್ಲ.. ನನಗೆ ಯಾರೋ ಹೊಡೆದ್ರು. ಆಮೇಲೆ ನನ್ನ ದುಃಖವನ್ನ ಒಡಲಲ್ಲಿ ಇಟ್ಟುಕೊಂಡಿದ್ದೆ. ಈಗ ನನ್ನ ಮಗಳನ್ನ ಜೀವಂತ ತಂದುಕೊಡುವುದ್ದಕ್ಕೆ ಆಗಲ್ಲ. ಅವಳ ಅಸ್ತಿಯಾದ್ರೂ ಕೊಡಿ ಮೋಕ್ಷ ಕೊಡಿಸುತ್ತೇನೆ ಅಂತ ಹೇಳಿದ ಮಾತು ಈಗಲೂ ಇಡೀ ಕರ್ನಾಟದ ಜನರ ಕಿವಿಯಲ್ಲಿದೆ.

ಈ ಸುಜಾತ ಭಟ್  ಮೊದಲು ಯಾರಿಗೆ ಕಾಂಟ್ಯಾಕ್ಟ್ ಆದ್ರೂ ಅನ್ನೋದು ಗೊತ್ತಿಲ್ಲ. ಆದ್ರೆ ಮಾಸ್ಕ್ ಮ್ಯಾನ್ ಬಂದ ಮೇಲೆ ಸುಜಾತ ಭಟ್ ಬಂದಿದ್ರು. ನನ ಮಗಳು ಅನನ್ಯ ಭಟ್ ಧರ್ಮಸ್ಥಳದಲ್ಲಿ ಕಾಣೆಯಾಗಿದ್ಲು ಅನ್ನೋ ಕಂಪ್ಲೆಟ್ ಕೊಟ್ಟಿದ್ರು. ಈ ಕೇಸ್‌ಗೆ ಲಾಯರ್ ಆಗಿದ್ದು ಮಂಜುನಾಥ್‌.. ಆದ್ರೆ ವಕೀಲ ಮಂಜುನಾಥ್‌ರನ್ನ ಸುಳ್ಳು ಹೇಳಿ ಸುಜಾತ ಭಟ್ ಪರವಿದ್ದವರು ಒಪ್ಪಿಸಿದ್ರಂತೆ. ಅದರಂತೆ ಸುಜಾತ ಭಟ್‌ಗೆ ಮಂಜುನಾಥ್‌ ಸಪೋರ್ಟ್ ಮಾಡಿದ್ದಾರೆ. ಅನ್ಯಾಯವಾದ ಹೆಣ್ಣಿಗೆ ನ್ಯಾಯ ಕೊಡಿಸೋಕೆ ಮುಂದಾದ್ರು. ಬಟ್ ಫೋಟೋ ವಿಷ್ಯ ಬರುತ್ತಿದ್ದಂತೆ ಇದು ಸುಳ್ಳು ಅನ್ನೋದು ಲಾಯರ್ ಮಂಜುನಾಥ್‌ಗೆ ಗೊತ್ತಾಗಿ ಈ ಕೇಸ್‌ನಿಂದ ಹೊರ ಬಂದಿದ್ದಾರೆ. ಈ ಬಗ್ಗೆ ನೀವೇ ಮಾಧ್ಯಮಗಳಿಗೆ ಮಾಹಿತಿ ಕೊಂಡಿ ಅಂತ ಮಂಜುನಾಥ್ ಅನನ್ಯ ಭಟ್ ಕೇಸ್‌ನಿಂದ ಕೈ ತೊಳೆದುಕೊಂಡ್ರು.

ಇನ್ನೂ ಈ ಸೌಜನ್ಯ ಭಟ್ ಹೋರಾಟಗಾರರಿಗೂ ಯಾಮಾರಿಸಿದ್ರಾ ಅನ್ನೋ ಪ್ರಶ್ನೆ ಎದ್ದಿದೆ. ದೂರಿನಲ್ಲಿ  ಹೇಳಿರುವುದನ್ನೇ ಹೋರಾಟಗಾರರಿಗೂ ಸುಜಾತಾ ಹೇಳಿದ್ರು. ಅನನ್ಯ ಇದ್ದಾಳೆ ಅನ್ನೋ ಸತ್ಯವನ್ನ ಸೌಜನ್ಯ ಪರ ಹೋರಾಟಗಾರರು ನಂಬಿದ್ದರಂತೆ. ಅಷ್ಟೇ ಅಲ್ಲದೆ ಕೆಲ ದಿನಗಳ ಕಾಲ ಮಹೇಶ್ ಶೆಟ್ಟಿ ತಿಮರೋಡಿ ‌ಮನೆಯಲ್ಲಿಯೇ ಸುಜಾತಾ ತಂಗಿದ್ದರು. ಈ ವೇಳೆ ಸುಜಾತಾ ಅವರಿಗೆ ಮಗಳು ಇದ್ದಳು ಎಂಬ ಬಗ್ಗೆ ದಾಖಲೆ ತೆಗೆಯಲು ಹೋರಾಟಗಾರರು ಮುಂದಾಗಿದ್ದರು. ಆದರೆ ದಾಖಲೆ ತೆಗೆಯಲು ಹಿಂದೇಟು ಅವರು ಹಾಕಿದ್ದರು. ಅದಾದ ಬಳಿಕ ಒಂದೊಂದಾಗಿ ಅಸಲಿಯತ್ತು ಬಹಿರಂಗಗೊಳ್ಳುತ್ತಿದ್ದಂತೆ ಮಹೇಶ್ ಶೆಟ್ಟಿ ತಿಮರೋಡಿ ಮನೆಯಿಂದ ಸುಜಾತಾ ಭಟ್​ಗೆ ಗೇಟ್ ಪಾಸ್​ ನೀಡಿದ್ರಂತೆ.

ಸುಜಾತ ಭಟ್ ಹೇಳಿದ್ದು ಸುಳ್ಳು ಅಂತ ಗೊತ್ತಾಗಿದ್ದು ಬಿಡುಗಡೆ ಮಾಡಿದ ಫೋಟೋದಿಂದ.. ಇದು ನನ್ನ ಮಗಳು ಅನನ್ಯ ಫೋಟೋ ಅಂತ ಸುಜಾತ ತೋರಿಸಿದಾಗ ಅದು ಅನನ್ಯ ಅಲ್ಲ ವಾಸಂತಿ ಅನ್ನೋದು ಗೊತ್ತಾಗಿದೆ. ಸುಜಾತ ಸುಳ್ಳಿನ ಕೋಟೆ ಉರುಳಿ ಹೋಯ್ತು.  ಈ ಫೋಟೋ ಕಥೆ ಈಗ ನಿಮಗೆಲ್ಲಾ ಗೊತ್ತಿದೆ.. ಹೀಗೆ ಈ ಫೋಟೋ ಸುಳ್ಳು, ಅನನ್ಯ ಭಟ್ ಇರೋದೆ ಸುಳ್ಳು ಅಂತ ಗೊತ್ತಾಗುತ್ತಿದ್ದಂತೆ ತಿಮರೋಡಿ ಮನೆಯಿಂದ ಸುಜಾತ ಭಟ್ ಹೊರ ನಡೆದ್ರು. ಆಗಸ್ಟ್ 19ರಂದು ಬೆಳ್ತಂಗಡಿ ತಾಲೂಕಿನ ಉಜಿರೆಯ ತಿಮರೋಡಿ ಮನೆಯಿಂದ ತೆರಳಿದ್ದ ಸುಜಾತಾ, ರಾತ್ರೋರಾತ್ರಿ ಬೆಂಗಳೂರು ಬಸ್ ಹತ್ತಿದ್ರು.  ಈ ವೇಳೆ ಮಾಧ್ಯಮಗಳು ಇವರಿಗೆ ಪ್ರಶ್ನೆ ಕೇಳಿದಾಗ ಸುಜಾತ ಭಟ್ ಸುಳ್ಳಿನ ಮೇಲೆ ಸುಳ್ಳು ಹೇಳಿರುವುದು ಗೊತ್ತಾಗಿದೆ. ತಿಮರೋಡಿ ಅರೆಸ್ಟ್ ಆದ್ರು, ಸಮೀರ್ ಜಸ್ಟ್ ಎಸ್ಕೇಪ್ ಆದ್ರು ಎನ್ನುತ್ತಿದ್ದಂತೆ ಸುಜಾತ ಭಟ್‌ಗೆ ಈಗ ಉಲ್ಟಾ ಹೊಡೆಯೋಕೆ ಮುಂದಾಗಿದ್ದಾರೆ. ಕೇಸ್ ವಾಪಸ್ ಪಡೆಯೋಕೆ ಮುಂದಾಗಿದ್ದಾರೆ.

ಅನನ್ಯಾ ಭಟ್ ಪ್ರಕರಣವನ್ನು ಎಸ್​ಐಟಿ ಗಂಭೀರವಾಗಿ ಪರಿಗಣಿಸಿದೆ. ಈ ಪ್ರಕರಣವನ್ನ ಎಸ್ಐಟಿಗೆ ಹಸ್ತಾಂತರ ಮಾಡಿದ ಬೆನ್ನಲ್ಲೇ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಸುಜಾತ ಭಟ್​ ಹಿನ್ನೆಲೆ ಹಾಗೂ ಆಕೆಯ ಊರು, ಕೆಲಸ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕ್ತಿದ್ದಾರೆ ಎನ್ನಲಾಗ್ತಿದೆ.  ಅನನ್ಯಾ ಭಟ್ ಅಸ್ತಿತ್ವದ ಬಗ್ಗೆ ಮಾಹಿತಿ ಸಂಗ್ರಹಿಸಿರೋ ಎಸ್ಐಟಿ, ಪ್ರಕರಣ ಸತ್ಯಾನಾ? ಸುಳ್ಳಾ? ಎಂಬ ಬಗ್ಗೆ ಎಸ್​ಐಟಿ ಅನೇಕ ಮಾಹಿತಿ ಸಂಗ್ರಹ ಮಾಡಿದೆ ಎನ್ನಲಾಗ್ತಿದೆ. ಸಂಗ್ರಹಿಸಿದ ಮಾಹಿತಿ ಗಳ ಆಧಾರದಲ್ಲಿ ಸುಜಾತ್ ಭಟ್ ವಿಚಾರಣೆ ನಡೆಯೋ ಸಾಧ್ಯತೆ ಇದೆ. ಅನನ್ಯಾ ಭಟ್ ಅಸ್ತಿತ್ವದ ಬಗ್ಗೆ ದಾಖಲೆ ಸಲ್ಲಿಸಲು ಎಸ್ಐಟಿ ಸೂಚಿಸಿದೆ. ಸುಳ್ಳು ದೂರು ಸಾಬೀತಾದ್ರೆ ಸುಜಾತ ಭಟ್ ವಿರುದ್ದ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದ್ದು. ಸುಜಾತಾ ಭಟ್ ಬಗ್ಗೆ ಈಗಾಗಲೇ ಶಿವಮೊಗ್ಗ, ಬೆಂಗಳೂರು, ಉಡುಪಿ ತೆರಳಿ ದಾಖಲೆ ಸಂಗ್ರಹ ಮಾಡಿದ್ದಾರೆ. ಇದರ ಆಧಾರದಲ್ಲೇ ಸುಜಾತ ಭಟ್ ಅವರನ್ನು ಎಸ್ಐಟಿ ಪ್ರಶ್ನೆ ಮಾಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಹೀಗಾಗಿ ಸುಜಾತ ಭಟ್ ಹೇಳಿದ್ದು ಸತ್ಯನಾ? ಸುಳ್ಳಾ? ಅನನ್ಯ ಭಟ್ ಅನ್ನೋದು ಕಟ್ಟು ಕಥೆನಾ ಅನ್ನೋದ್ದು ಎಸ್‌ಐಟಿ ತನಿಖೆಯಂದ ಕೆಲವೇ ಕೆಲವು ದಿನಗಳಲ್ಲಿ ಗೊತ್ತಾಗಲಿದೆ.

Kishor KV