ಏಷ್ಯಾಕಪ್ TO ವಿಶ್ವಕಪ್.. ಫುಲ್ ಬ್ಯುಸಿ – 6 ತಿಂಗಳಲ್ಲಿ INDಗೆ ಇಷ್ಟೊಂದು ಪಂದ್ಯ
T-20 World Cup ಟಾರ್ಗೆಟ್ ಹೇಗಿದೆ?

2026ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಭಾರತ ಮತ್ತು ಶ್ರೀಲಂಕಾ ರಾಷ್ಟ್ರಗಳು ಜಂಟಿಯಾಗಿ ಐಸಿಸಿ ಟಿ20 ವಿಶ್ವಕಪ್ ಆಯೋಜನೆ ಮಾಡಲಿವೆ. ಬಹುನಿರೀಕ್ಷಿತ ಟೂರ್ನಿಗೆ ಇನ್ನು ಆರು ತಿಂಗಳಷ್ಟೇ ಬಾಕಿ. ಹೀಗಾಗಿ ಮೆನ್ ಇನ್ ಬ್ಲ್ಯೂ ತಂಡ ಚುಟುಕು ಸಮರದಲ್ಲಿ ಬ್ಯುಸಿ ಆಗಲಿದೆ. ಸಾಲು ಸಾಲು ವೈಟ್ ಬಾಲ್ ಸರಣಿಗಾಗಿ ಶೆಡ್ಯೂಲ್ ಕೂಡ ಫಿಕ್ಸ್ ಆಗಿದೆ. ಮುಂದಿನ ಆರು ತಿಂಗಳ ಕಾಲ ಬ್ಯಾಕ್ ಟು ಬ್ಯಾಕ್ ಪರೀಕ್ಷೆಗಳನ್ನ ಎದುರಿಸಬೇಕಿದೆ.
ಇದನ್ನೂ ಓದಿ : ಭಾರತ ಮಹಿಳಾ ತಂಡದ ಎಡಗೈ ಸ್ಪಿನ್ನರ್ ಗೌಹರ್ ನಿವೃತ್ತಿ – 17 ವರ್ಷಗಳ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ
2026 ರ ಜನವರಿವರೆಗೂ ಸಾಲು ಸಾಲು ಸರಣಿ!
ಸೆಪ್ಟೆಂಬರ್ 9 ರಿಂದ 28 ರವರೆಗೆ ಯುಎಇಯಲ್ಲಿ ನಡೆಯಲಿರುವ ಏಷ್ಯಾಕಪ್ 2025 ರೊಂದಿಗೆ ಭಾರತದ ಸಿದ್ಧತೆಗಳು ಶುರುವಾಗುತ್ತವೆ. ಈ ಪಂದ್ಯಾವಳಿಯು ಭಾರತದ ಪಾಲಿಗೆ ನಿರ್ಣಾಯಕವಾಗುತ್ತೆ. ಭಾರತವು ಗ್ರೂಪ್ ಎ ನಲ್ಲಿ ಯುಎಇ ಮತ್ತು ಒಮನ್ ಜೊತೆಗೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತಿಯ ನಂತರ ತಂಡವು ಪರಿವರ್ತನೆಯ ಹಾದಿಯಲ್ಲಿದ್ದು, ಹೊಸ ಆಟಗಾರರ ತಂಡವನ್ನ ಪರೀಕ್ಷಿಸಲು ಇದು ಮೊದಲ ಅವಕಾಶವಾಗಿರುತ್ತೆ. ಏಷ್ಯಾಕಪ್ ನಂತರ, ಭಾರತ ತಂಡವು ಅಕ್ಟೋಬರ್ ಕೊನೆಯಲ್ಲಿ ಮತ್ತು ನವೆಂಬರ್ ಆರಂಭದಲ್ಲಿ ಐದು ಪಂದ್ಯಗಳ T20I ಸರಣಿಗಾಗಿ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿದೆ. ಮೆಲ್ಬೋರ್ನ್, ಸಿಡ್ನಿ, ಬ್ರಿಸ್ಬೇನ್ ಸೇರಿದಂತೆ ಪ್ರತಿಷ್ಠಿತ ಸ್ಥಳಗಳಲ್ಲಿ ಪಂದ್ಯಗಳನ್ನು ನಿಗದಿಪಡಿಸಲಾಗಿದೆ. ಈ ಸರಣಿಯು ಕ್ರಿಕೆಟ್ ಜಗತ್ತಿನಲ್ಲಿ ಬಲಿಷ್ಠ ತಂಡದೆದುರು ವೈಟ್ ಬಾಲ್ ಸರಣಿಯಯಲ್ಲಿ ಅಗ್ನಿ ಪರೀಕ್ಷೆಯಾಗಲಿದೆ. ಆಸ್ಟ್ರೇಲಿಯಾ ಸರಣಿ ಬಳಿಕ ಡಿಸೆಂಬರ್‌ನಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಐದು ಪಂದ್ಯಗಳ ಟಿ20ಐ ಸರಣಿಯನ್ನ ತವರಿನಲ್ಲೇ ಆಡಲಿದೆ. ಡಿಸೆಂಬರ್ 9ರಿಂದ ಡಿಸೆಂಬರ್ 19ರವರೆಗೆ ಪಂದ್ಯಗಳು ನಡೆಯಲಿವೆ. ದ್ವಿಪಕ್ಷೀಯ ಟಿ20 ಪಂದ್ಯಗಳಲ್ಲಿ ಸವಾಲಾಗಿರುವ ಈ ತಂಡದ ವಿರುದ್ಧದ ಸರಣಿಗಳು ಟೀಂ ಇಂಡಿಯಾಗೆ ಹೊಸ ಚೈತನ್ಯ ನೀಡಲಿದೆ. ಇನ್ನು ವಿಶ್ವಕಪ್ಗೆ ಭಾರತದ ಅಂತಿಮ ಪೂರ್ವಸಿದ್ಧತಾ ಸರಣಿಯು ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆಯಲಿದ್ದು, ಐದು ಟಿ20 ಪಂದ್ಯಗಳ ಮತ್ತೊಂದು ಸೆಟ್ ಶುರುವಾಗುತ್ತೆ. 2026ರ ಜನವರಿ 21ರಿಂದ ಜನವರಿ 31ರವರೆಗೆ ಐದು ಟಿ-20ಐ ಪಂದ್ಯಗಳು ನಡೆಯಲಿವೆ. ವಿಶ್ವಕಪ್‌ಗೂ ಮುನ್ನ ಭಾರತದ ಕೊನೆಯ ದ್ವಿಪಕ್ಷೀಯ ಸರಣಿ ಇದಾಗಿದ್ದ ಆ ಬಳಿಕ ಟಿ-20 ವಿಶ್ವಕಪ್ಗೆ ತಯಾರಿ ನಡೆಸಲಿದೆ. ಸೋ ಇದಿಷ್ಟು ಟಿ-20 ಮಾದರಿಯಲ್ಲಿ ಭಾರತದ ಪಂದ್ಯಗಳು. ಬಟ್ ಓವರ್ ಆಲ್ ಆಗಿ ಮುಂದಿನ ಜನವರಿವರೆಗೆ ಯಾವ್ಯಾವ ಮಾದರಿಯಲ್ಲಿ ಎಷ್ಟು ಪಂದ್ಯಗಳನ್ನ ಆಡಲಿದೆ ಅನ್ನೋದನ್ನ ನೋಡೋದಾದ್ರೆ..
ಭಾರತ ಫುಲ್ ಬ್ಯುಸಿ!
ಪಂದ್ಯಾವಳಿ ಸ್ಥಳ ದಿನಾಂಕ ಪಂದ್ಯಗಳು
ಏಷ್ಯಾ ಕಪ್ – ಯುಎಇ ಸೆಪ್ಟೆಂಬರ್ 9-28 3-7 ಟಿ20ಐ
ಭಾರತ vs ವೆಸ್ಟ್ ಇಂಡೀಸ್ –ಭಾರತ ಅಕ್ಟೋಬರ್ 2-14 2 ಟೆಸ್ಟ್‌ಗಳು
ಭಾರತ vs ಆಸ್ಟ್ರೇಲಿಯಾ – ಆಸ್ಟ್ರೇಲಿಯಾ ಅ.19 ರಿಂದ ನ. 8 3 ಏಕದಿನ, 5 ಟಿ-20
ಭಾರತ vs ದಕ್ಷಿಣ ಆಫ್ರಿಕಾ – ಭಾರತ ನ.14ರಿಂದ ಡಿ.19 2 ಟೆಸ್ಟ್, 3 ಒಡಿಐ, 5ಟಿ20
ಭಾರತ vs ನ್ಯೂಜಿಲೆಂಡ್ – ಭಾರತ ಜನವರಿ 11-31 3 ಏಕದಿನ, 5 ಟಿ20
ಐಸಿಸಿ ಟಿ20 ವಿಶ್ವಕಪ್ ಭಾರತ, ಶ್ರೀಲಂಕಾ ಫೆಬ್ರವರಿ-ಮಾರ್ಚ್ 4-9 ಟಿ20ಐಗಳು
ಮುಂದಿನ ಆರು ತಿಂಗಳಲ್ಲಿ 15 ಟಿ20ಐ ಪಂದ್ಯಗಳು ಸೇರಿ ಏಕದಿನ, ಟೆಸ್ಟ್ನಲ್ಲೂ ಭಾರತ ಸಾಕಷ್ಟು ಸರಣಿಗಳನ್ನ ಆಡಲಿದೆ. ಈ ವೇಳೆ ಆಯ್ಕೆದಾರರು ಮತ್ತು ಆಡಳಿತ ಮಂಡಳಿಯು ಪರಿಪೂರ್ಣ ತಂಡವನ್ನು ಆಯ್ಕೆ ಮಾಡಲು ಟೈಂ ಸಿಗಲಿದೆ. ಯುವ ಮತ್ತು ಅನುಭವಿ ಪ್ಲೇಯರ್ಸ್, ಫಿನಿಷರ್‌ಗಳು, ಸ್ಪಿನ್ನರ್‌ಗಳು ಮತ್ತು ತವರಿನ ಪರಿಸ್ಥಿತಿಗಳಿಗೆ ಅನುಗುಣವಾಗಿ ವೇಗದ ಬೌಲಿಂಗ್ ಬಲವನ್ನ ಫೈನಲ್ ಮಾಡಲು ಸಹಕಾರಿಯಾಗಲಿದೆ.

ನೋಡಿರಿ

