ಏಷ್ಯಾಕಪ್ ನಲ್ಲಿ MI & KKR ದರ್ಬಾರ್ – 2 ಫ್ರಾಂಚೈಸಿಗಳಲ್ಲೇ ಅರ್ಧ ಟೀಂ ಫೈನಲ್
RCB ಜಿತೇಶ್ ಗೆ ಚಾನ್ಸ್ ಸಿಕ್ಕಿದ್ದೇ ಹೆಚ್ಚಾ?

ಏಷ್ಯಾಕಪ್ಗೆ ಭಾರತ ತಂಡ ಅನೌನ್ಸ್ ಆಗೋ ಮೊದಲು ಸಾಕಷ್ಟು ಆಟಗಾರರ ಹೆಸರು ರೇಸ್ನಲ್ಲಿತ್ತು. ಯಾಕಂದ್ರೆ ಈ ಬಾರಿ ಟಿ-20 ಮಾದರಿಯಲ್ಲಿ ಏಷ್ಯಾಕಪ್ ನಡೆಯೋದ್ರಿಂದ ಐಪಿಎಲ್ನಲ್ಲಿ ಧೂಳೆಬ್ಬಿಸಿದ್ದವ್ರಿಗೆ ಚಾನ್ಸ್ ಪಕ್ಕಾ ಅಂತಾ ಪ್ರೆಡಿಕ್ಟ್ ಮಾಡಲಾಗಿತ್ತು. ಬಟ್ ಅಂತಿಮವಾಗಿ ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್.. ಶುಭ್ ಮನ್ ಗಿಲ್ ವೈಸ್ ಕ್ಯಾಪ್ಟನ್.. ಹಾಗೇ ಸಾಕಷ್ಟು ಯಂಗ್ ಸ್ಟರ್ಸ್ ಏಷ್ಯಾಕಪ್ನಲ್ಲಿ ಅಖಾಡಕ್ಕಿಳಿಯೋಕೆ ರೆಡಿಯಾಗಿದ್ದಾರೆ. ಹಾಲಿ ಚಾಂಪಿಯನ್ ಆಗಿ ಟೂರ್ನಿಗೆ ಕಾಲಿಡಲಿರೋ ಭಾರತ ತಂಡಕ್ಕೆ 2026ರ ಟಿ-20 ವಿಶ್ವಕಪ್ ಟಾರ್ಗೆಟ್ ಕೂಡ ಇರಲಿದೆ. ಸದ್ಯ ಏಷ್ಯಾಕಪ್ಗೆ ಸೆಲೆಕ್ಟ್ ಆಗಿರೋರ ಪೈಕಿ ಮುಂಬೈ ಇಂಡಿಯನ್ಸ್ ಆಟಗಾರರ ದಂಡೇ ಇದೆ. ಎಲ್ಲರೂ ಕೂಡ ಪ್ಲೇಯಿಂಗ್ 11ನಲ್ಲಿ ಆಡೋ ಚಾನ್ಸಸ್ ಕೂಡ ಇದೆ.
ಇದನ್ನೂ ಓದಿ : 3 ವರ್ಷ.. 13 ಜನ್ರಿಗೆ ಗೇಟ್ ಪಾಸ್ – 2022 To 2025.. ಅದೆಷ್ಟು ಬದಲಾವಣೆ?
ಏಷ್ಯಾಕಪ್ ತಂಡದಲ್ಲಿ ಮುಂಬೈ & ಕೊಲ್ಕತ್ತಾ ಟೀಂ ಪಾರಮ್ಯ!
ಏಷ್ಯಾಕಪ್ಗೆ ಸೆಲೆಕ್ಟ್ ಆಗಿರೋ ಭಾರತ ತಂಡದಲ್ಲಿ ಮುಂಬೈ ಇಂಡಿಯನ್ಸ್ನ ನಾಲ್ವರು ಪ್ಲೇಯರ್ಸ್ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ, ಟಾಪ್ ಆರ್ಡರ್ ಬ್ಯಾಟರ್ ತಿಲಕ್ ವರ್ಮಾ ಮತ್ತು ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಸೆಲೆಕ್ಟ್ ಆಗಿದ್ದಾರೆ. ಪ್ಲೇಯಿಂಗ್ 11ನಲ್ಲೂ ಕೂಡ ನಾಲ್ವರೂ ಸ್ಥಾನ ಪಡೆಯೋ ಸಾಧ್ಯತೆ ಇದೆ. ಇನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ರಿಂಕು ಸಿಂಗ್, ವರುಣ್ ಚಕ್ರವರ್ತಿ ಮತ್ತು ಹರ್ಷಿತ್ ರಾಣಾಗೆ ಮಣೆ ಹಾಕಲಾಗಿದೆ. ಉಳಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟಾನ್ಸ್ ಆಟಗಾರರಿಗೂ ಅವಕಾಶ ಸಿಕ್ಕಿದೆ.
ಐಪಿಎಲ್ ಪ್ರದರ್ಶನ!
ಆಟಗಾರ ತಂಡ ಪಂದ್ಯ ರನ್/ವಿಕೆಟ್
ಸೂರ್ಯಕುಮಾರ್ ಯಾದವ್ ಮುಂಬೈ 16 717
ಹಾರ್ದಿಕ್ ಪಾಂಡ್ಯ ಮುಂಬೈ 15 224/14
ಜಸ್ಪ್ರೀತ್ ಬುಮ್ರಾ ಮುಂಬೈ 12 18
ತಿಲಕ್ ವರ್ಮಾ ಮುಂಬೈ 16 343
ರಿಂಕು ಸಿಂಗ್ ಕೊಲ್ಕತ್ತಾ 13 206
ವರುಣ್ ಚಕ್ರವರ್ತಿ ಕೊಲ್ಕತ್ತಾ 13 17
ಹರ್ಷಿತ್ ರಾಣಾ ಕೊಲ್ಕತ್ತಾ 13 14
ಜಿತೇಶ್ ಶರ್ಮಾ ಬೆಂಗಳೂರು 15 261
ಶುಭ್ ಮನ್ ಗಿಲ್ ಗುಜರಾತ್ 15 650
ಸಂಜು ಸ್ಯಾಮ್ಸನ್ ರಾಜಸ್ಥಾನ 09 285
ಕುಲ್ದೀಪ್ ಯಾದವ್ ಡೆಲ್ಲಿ 14 15
ಅಕ್ಷರ್ ಪಟೇಲ್ ಡೆಲ್ಲಿ 13 263/5
ಅರ್ಷದೀಪ್ ಸಿಂಗ್ ಪಂಜಾಬ್ 17 21
ಶಿವಂ ದುಬೆ ಚೆನ್ನೈ 14 357
ಅಭಿಷೇಕ್ ಶರ್ಮಾ ಹೈದರಾಬಾದ್ 14 439
ಹೀಗೆ ಐಪಿಎಲ್ನ 10 ಫ್ರಾಂಚೈಸಿಗಳ ಪೈಕಿ 9 ಫ್ರಾಂಚೈಸಿಗಳ ಆಟಗಾರರು ಆಯ್ಕೆಯಾಗಿದ್ದಾರೆ. ಬಟ್ ಲಕ್ನೋ ಸೂಪರ್ ಜೇಂಟ್ಸ್ ತಂಡದ ಯಾವುದೇ ಆಟಗಾರ ಸ್ಥಾನ ಪಡೆಯುವಲ್ಲಿ ವಿಫಲ ಆಗಿದ್ದಾರೆ.

ನೋಡಿರಿ

