ಕರ್ಣನ ಕನಸು, ಮನಸಲ್ಲೂ ನಿಧಿ! – ಡಾಕ್ಟರ್ ಹೃದಯ ಕದ್ದ ಸ್ಟೂಡೆಂಟ್!
ತಂಗಿ ಲವ್‌ಗೆ ಅಕ್ಕ ನಿತ್ಯಾ ವಿಲನ್?

ನಿಧಿಗೆ ಕರ್ಣನ ಮೇಲೆ ಪ್ರೀತಿ.. ಆತನ ಹಿಂದೆಯೇ ಸದಾ ಸುತ್ತುತ್ತಾ ಇರ್ತಾಳೆ.. ಆದ್ರೆ ಕರ್ಣ ಹಾಗಲ್ಲ.. ಸದಾ ಮನೆಯವರು ಖುಷಿಯಾಗಿರ್ಬೇಕು ಅಂತಾ ಬಯಸ್ತಾನೆ. ಅವ್ರಿಗೋಸ್ಕರ ಏನ್ ಬೇಕಾದ್ರೂ ಮಾಡೋದಿಕ್ಕೆ ರೆಡಿ ಇರ್ತಾನೆ.. ಈಗಾಗಲೇ ಅಪ್ಪ ಮದುವೆ ಆಗ್ಬೇಡ ಅಂತಾ ಹೇಳಿದ್ದಕ್ಕೆ ಒಪ್ಪಿಕೊಂಡಿದ್ದ. ಆದ್ರೀಗ ಕರ್ಣ ಮೊದಲ ಬಾರಿಗೆ ಪ್ರೀತಿಯಲ್ಲಿ ಬಿದ್ದಿದ್ದಾನೆ.. ಈಗ ನಿಧಿ ಅಲ್ಲ.. ಕರ್ಣ ಕನಸಿನ ಲೋಕದಲ್ಲಿ ತೇಲಾಡಲು ಶುರು ಮಾಡಿದ್ದಾನೆ. ಇದೀಗ ಡಾಕ್ಟರ್ ಕರ್ಣನಿಗೆ ಎಲ್ಲಾ ಕಡೆ ನಿಧಿ ಕಾಣ್ತಿಸ್ತಿದ್ದಾಳೆ.
ಇದನ್ನೂ ಓದಿ : ಮೆಗಾಸ್ಟಾರ್ ಚಿರಂಜೀವಿ 70ನೇ ಜನ್ಮ ದಿನ – ಹುಟ್ಟುಹಬ್ಬಕ್ಕೆ ವಿಶ್ವಂಭರ ಗ್ಲಿಂಪ್ಸ್ ವಿಡಿಯೋ ರಿಲೀಸ್
ಕರ್ಣ ಸೀರಿಯಲ್ ವೀಕ್ಷಕರಿಗೆ ಸಖತ್ ಮನರಂಜನೆ ನೀಡ್ತಿದೆ. ಮೊದಲ ಎಪಿಸೋಡ್‌ನಿಂದಲೂ ಸೀರಿಯಲ್ ಸ್ಟೋರಿ ಭಾರಿ ಕುತೂಹಲ ಮೂಡಿಸಿದೆ. ಡಾಕ್ಟರ್ ಕರ್ಣನ ಒಳ್ಳೆತನ, ಜನಸೇವೆ ಸೀರಿಯಲ್ ಪ್ರೇಮಿಗಳಿಗೆ ಇಷ್ಟ ಆಗುತ್ತಿದೆ. ನಿಧಿ ಕರ್ಣನ ಸ್ಟೂಡೆಂಟ್ ಆಗಿದ್ರೂ ಕೂಡ ಆತನ ಹಿಂದೆಯೇ ಆಕೆ ಸದಾ ಸುತ್ತುತಾ ಇರ್ತಾಳೆ.. ಕರ್ಣನನ್ನೇ ಮದುವೆ ಆಗ್ಬೇಕು ಅಂತಾ ಕನಸು ಕೂಡ ಕಾಣ್ತಿದ್ದಾಳೆ. ನಿಧಿ ಕರ್ಣನ ಹಿಂದೆ ಬಿದ್ದಿರೋದು ರಮೇಶನಿಗೆ ಗೊತ್ತಾಗ್ತಿದ್ದಂತೆ ಆಕೆ ವಾರ್ನ್ ಮಾಡಿದ್ದ. ಶ್ರೀಮಂತಿಕೆ ನೋಡ್ಕೊಂಡು ಆತನ ಹಿಂದೆ ಬಿದ್ದಿದ್ದ ಅಂತಾ ಚುಚ್ಚು ಮಾತನಾಡಿದ್ದ. ಹೀಗಾಗಿ ಕರ್ಣನಿಂದ ನಿಧಿ ಅಂತರ ಕಾಯ್ದುಕೊಂಡಿದು. ಆದ್ರೀಗ ರಮೇಶ ಕೆಟ್ಟವನು ಅಂತಾ ನಿಧಿಗೆ ಗೊತ್ತಾಗಿದೆ. ಹೀಗಾಗಿ ನಿಧಿ ಮತ್ತೆ ಕರ್ಣನಿಗೆ ಹತ್ತಿರವಾಗಿದ್ದಾಳೆ. ಆದ್ರೀಗ ಸೀರಿಯಲ್ ಡೈರೆಕ್ಟರ್ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ.. ಇದೀಗ ಕರ್ಣನಿಗೆ ನಿಧಿ ಮೇಲೆ ಲವ್ ಆಗಿದೆ.
ಕರ್ಣ ಯಾವುದೇ ಕಾರಣಕ್ಕೂ ಮದುವೆ ಆಗ್ಬಾರ್ದು.. ಆಸ್ತಿ ಎಲ್ಲಾ ತಮ್ಮ ಪಾಲಾಗ್ಬೇಕು ಅಂತಾ ಕುತಂತ್ರಿಗಳು ಕರ್ಣನ ವಿರುದ್ಧ ಒಂದಲ್ಲ ಒಂದು ಷಡ್ಯಂತರ ಮಾಡ್ತಾನೇ ಬಂದ್ರು. ಕರ್ಣ ಮದುವೆ ಆಗ್ಬಾರ್ದು ಅಂತಾ ರಮೇಶ ಬಾಂಡ್ ಪೇಪರ್‌ಗೆ ಸಿಗ್ನೇಚರ್ ಬೇರೆ ಹಾಕಿಸಿದ್ದ. ಆದ್ರೆ ಅಜ್ಜಿಗೆ ಗೊತ್ತಾಗ್ತಿದ್ದಂತೆ ಆ ಅಗ್ರಿಮೆಂಟ್‌ನ ಹರಿದು ಹಾಕಿದ್ರು.. ಬಳಿಕ ನಾನು ಮದುವೆ ಆಗ್ತೀನಿ ಅಂತ ಕರ್ಣ ಮಾತು ಕೊಟ್ಟಿದ್ದಾನೆ. ಬಳಿಕ ನಿಧಿ ಯಾರಿಗೂ ಹೇಳದೇ ರಾತ್ರಿ ಕರ್ಣನ ಮನೆಗೆ ಬಂದಿದ್ಲು.. ಕರ್ಣ ಎಷ್ಟು ಭಾರಿ ಮನೆಗೆ ಹೋಗು ಎಂದು ಹೇಳಿದ್ರೂ ಆಕೆ ಹೋಗಿಲ್ಲ.. ತನ್ನ ಆಸೆಗಳನ್ನ ಈಡೇರಿಸಿದ್ರೆ ಮಾತ್ರ ನಾನು ಮನೆಗೆ ಹೋಗೋದು ಅಂತಾ ಹೇಳಿದ್ದಾಳೆ. ಬಳಿಕ ನಿಧಿ ಆಸೆಯಂತೆ ಕರ್ಣ ಆಕೆಯನ್ನ ಹೊರಗೆ ಕರ್ಕೊಂಡು ಹೋಗಿದ್ದ. ಈ ವೇಳೆ ನಾನು ಇರೋದು ನಿಮಗೋಸ್ಕರ ಅಂತಾ ಹೇಳಿದ್ದಾಳೆ. ಬೆಳಗಾಗ್ತಿದ್ದಂತೆ ಕರ್ಣ ನಿಧಿಯನ್ನ ಮನೆಗೆ ಬಿಟ್ಟು ಬಂದಿದ್ದಾನೆ. ಆದ್ರೀಗ ಕರ್ಣನಿಗೆ ನಿಧಿ ಮೇಲೆ ಪ್ರೀತಿ ಚಿಗುರಿದೆ.
ನಿಧಿಯನ್ನ ಮನೆಗೆ ಬಿಟ್ಟು ಬರ್ತಿದ್ದಂತೆ ಕರ್ಣನಿಗೆ ಎಲ್ಲೆಲ್ಲೂ ನಿಧಿಯೇ ಕಾಣಿಸ್ತಿದ್ದಾಳೆ. ಯಾರನ್ನ ನೋಡಿದ್ರೂ ಕೂಡ ನಿಧಿ ಹಾಗೇ ಕಾಣ್ತಿದೆ.. ಯಾರನ್ನ ನೋಡಿದ್ರೂ ಕೂಡ ನೀವೇನಿಲ್ಲಿ ಅಂತಾ ಕೇಳ್ತಿದ್ದಾನೆ.. ಮನೆಗೆ ಬಂದ್ಮೇಲಂತೂ ಆತ ಖುಷಿಯಲ್ಲಿ ತೇಲಾಡ್ತಿದ್ದಾನೆ. ಮನೆಯವರ ಮುಂದೆ ಫುಲ್ ಡ್ಯಾನ್ಸ್ ಮಾಡಿದ್ದಾನೆ. ಇದೀಗ ಸೀರಿಯಲ್ ನೋಡಿದ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಅಂತೂ ಇಂತೂ ನಮ್ ಕರ್ಣ ಲವ್ ಲ್ಲಿ ಬಿದ್ದೂ ಕಳ್ದೊದ್ರು.. ಇಷ್ಟು ದಿನ ಕರ್ಣ ತುಂಬಾ ಡವ್ ಮಾಡ್ತಾತಿದ್ದ.. ಈಗ ಲವ್ ಲ್ಲಿ ಬಿದ್ದಿದ್ಯಾ ಇನ್ ಆಚೆ ಬರೋಕೆ ಆಗಲ್ಲ ಬಿಡು.. ಇದಕ್ಕೆ ಇದಕ್ಕೆ ಔಷಧಿ ಅಂದ್ರೆ ಮದುವೆ ಮಾತ್ರ ಅಂತಾ ಕೆಲವರು ಕಾಮೆಂಟ್ ಮಾಡಿದ್ದಾರೆ.. ಇನ್ನೂ ಕೆಲವರು, ಕರ್ಣ ಏನೋ ಲವ್ವಲ್ಲಿ ಬಿದ್ದಿದ್ದಾನೆ.. ಆದ್ರೀಗ ಈ ಲವ್‌ಗೆ ವಿಲನ್ ಗಳು ಹುಟ್ಟಿಕೊಳ್ತಾರೆ.. ಇವರಿಬ್ರು ಒಂದಾಗೋಕೆ ರೆಡಿ ಇದ್ರೂ, ಇವರನ್ನ ದೂರ ಮಾಡೋಕೆ ವಿಲನ್‌ಗಳು ಹುಟ್ಟಿಕೊಳ್ತಾರೆ ಅಂತಾ ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಕರ್ಣ ನಿಧಿ ಲವ್‌ಗೆ ನಿತ್ಯಾಳೇ ವಿಲನ್ ಆಗ್ಬೋದು ಅಂತಾ ಕಾಮೆಂಟ್ ಮಾಡ್ತಿದ್ದಾರೆ. ಯಾಕಂದ್ರೆ ಆರಂಭದಲ್ಲಿ ನಿತ್ಯಾ ಕರ್ಣನನ್ನ ಹೇಟ್ ಮಾಡ್ತಿದ್ಲು. ಈಗ ಆತ ಒಳ್ಳೆಯವನು ಅಂತಾ ಗೊತ್ತಾಗಿದೆ. ಆತನ ಮೇಲೆ ಸಾಪ್ಟ್ ಕಾರ್ನರ್ ಬಂದಿದೆ. ಮತ್ತೊಂದ್ಕಡೆ ತೇಜಸ್ ಮನೆಯಲ್ಲಿ ಕೂಡ ಈ ಮದುವೆಗೆ ಒಪ್ಪಿಲ್ಲ. ಹೀಗಾಗಿ ತೇಜಸ್ ಜೊತೆ ನಿತ್ಯಾ ಬ್ರೇಕ್‌ಅಪ್ ಮಾಡಿಕೊಳ್ಳೋ ಸಾಧ್ಯತೆ ಇದೆ ಅನ್ನೋ ಲೆಕ್ಕಾಚಾರ ಕೂಡ ಹಾಕಿದ್ದಾರೆ ವೀಕ್ಷಕರು.

ನೋಡಿರಿ

