12 ಸ್ವಂತ ಮನೆ ಇದ್ದರೂ ಬಾಡಿಗೆ ಮನೆಯಲ್ಲೇ ವಾಸ ಮಾಡುತ್ತಾರೆ ಅಮೀರ್ ಖಾನ್ – ಕಾರಣ ಏನು ಗೊತ್ತಾ?

12 ಸ್ವಂತ ಮನೆ ಇದ್ದರೂ ಬಾಡಿಗೆ ಮನೆಯಲ್ಲೇ ವಾಸ ಮಾಡುತ್ತಾರೆ ಅಮೀರ್ ಖಾನ್ – ಕಾರಣ ಏನು ಗೊತ್ತಾ?

ಬಾಲಿವುಡ್‌ನ ಸ್ಟಾರ್ ಹೀರೋಗಳಲ್ಲಿ ಅಮೀರ್ ಖಾನ್ ಒಬ್ಬರು. ಅವರಿಗೆ ಆಸ್ತಿ ಕೂಡಾ ಸಾಕಷ್ಟಿದೆ. ಸುಮಾರು 2000 ಕೋಟಿ ರೂಪಾಯಿಗಳ ಸಂಪತ್ತಿನ ಒಡೆಯ ಅಮೀರ್ ಖಾನ್.. ಮುಂಬೈನಲ್ಲಿ ಕನಿಷ್ಠ 12 ಫ್ಲಾಟ್‌ಗಳನ್ನು ಹೊಂದಿದ್ದಾರೆ. ಆದರೆ, ಅಮೀರ್ ಖಾನ್ ಮಾತ್ರ ತನ್ನ ಸ್ವಂತ ಮನೆಯಲ್ಲಿ ವಾಸ ಮಾಡೋದೇ ಇಲ್ಲ.

ಇದನ್ನೂ ಓದಿ:ನಿರೂಪಕಿ, ನಟಿ ಅನುಶ್ರೀ ಮದುವೆಗೆ ಕೌಂಟ್‌ಡೌನ್ – ಆಗಸ್ಟ್ 28ರಂದು ಬೆಂಗಳೂರಿನ ರೆಸಾರ್ಟ್‌ನಲ್ಲಿ ವಿವಾಹ

ಬಾಲಿವುಡ್ ಹೀರೋ ಅಮೀರ್ ಖಾನ್ ಮುಂಬೈನಲ್ಲಿ 12 ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದಾರೆ. ಆದರೆ, ಈಗಲೂ ಕೂಡಾ ಬಾಂದ್ರಾ ವೆಸ್ಟ್‌ನಲ್ಲಿ ಬಾಡಿಗೆ ಮನೆಯಲ್ಲೇ ವಾಸ ಮಾಡುತ್ತಾದೆರ. ತಿಂಗಳಿಗೆ ನಾಲ್ಕು ಲಕ್ಷ ರೂಪಾಯಿ ಬಾಡಿಗೆ ನೀಡಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದಾರೆ. ಇನ್ನು ಅಮೀರ್ ಖಾನ್ ಮುಂದಿನ ಐದು ವರ್ಷಗಳವರೆಗೆ ಫ್ಲಾಟ್ ನ್ನು ಬಾಡಿಗೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಬಾಡಿಗೆ ಒಪ್ಪಂದಕ್ಕೆ 1.46 ಕೋಟಿಗೂ ಹೆಚ್ಚು ಭದ್ರತಾ ಠೇವಣಿ ಇಟ್ಟಿದ್ದಾರೆ.

ಅಮೀರ್ ಖಾನ್‌ಗೆ ವಿರ್ಗೋ ಹೌಸಿಂಗ್ ಸೊಸೈಟಿಯಲ್ಲಿ 12 ಅಪಾರ್ಟ್‌ಮೆಂಟ್‌ಗಳಿವೆ. ಆದರೆ ಈ ಎಲ್ಲಾ ಅಪಾರ್ಟ್‌ಮೆಂಟ್‌ಗಳಲ್ಲಿ ಉನ್ನತ ಮಟ್ಟದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಇದನ್ನು ಅಲ್ಟ್ರಾ ಪ್ರೀಮಿಯಂ ಆಗಿ ಪರಿವರ್ತಿಸಲಾಗುತ್ತಿದೆ. ಇವುಗಳನ್ನು ಸಮುದ್ರಕ್ಕೆ ಎದುರಾಗಿ ರೀಮಾಡೆಲಿಂಗ್ ಮಾಡಲಾಗುತ್ತಿದೆ. ಹೀಗೆ ಮಾಡುವುದರಿಂದ ಅಪಾರ್ಟ್‌ಮೆಂಟ್‌ಗಳ ಬೆಲೆ ಮತ್ತಷ್ಟು ಹೆಚ್ಚಾಗುತ್ತದೆ. ಈ ಫ್ಲಾಟ್‌ಗಳ ಬೆಲೆ 100 ಕೋಟಿ ರೂಪಾಯಿಗಳನ್ನು ಮೀರಬಹುದು. ಅದಕ್ಕಾಗಿಯೇ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳ್ಳುವವರೆಗೆ ಅಮೀರ್ ಖಾನ್ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿದ್ದಾರೆ.

Sulekha