ಮೆಗಾಸ್ಟಾರ್ ಚಿರಂಜೀವಿ 70ನೇ ಜನ್ಮ ದಿನ – ಹುಟ್ಟುಹಬ್ಬಕ್ಕೆ ವಿಶ್ವಂಭರ ಗ್ಲಿಂಪ್ಸ್ ವಿಡಿಯೋ ರಿಲೀಸ್

ಮೆಗಾ ಸ್ಟಾರ್ ಚಿರಂಜೀವಿ ಅವರು 70 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಚಿರಂಜೀವಿ ಅವರು ಭಾರತೀಯ ಚಿತ್ರರಂಗದಲ್ಲಿ 46 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. 156 ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಮೆಗಾಸ್ಟಾರ್ ಬರ್ತ್‌ಡೇ ಪ್ರಯುಕ್ತ ಬಿಗ್‌ಸರ್‌ಪ್ರೈಸ್ ಕೂಡಾ ಸಿಕ್ಕಿದೆ.
ಇದನ್ನೂ ಓದಿ: ನಿರೂಪಕಿ, ನಟಿ ಅನುಶ್ರೀ ಮದುವೆಗೆ ಕೌಂಟ್‌ಡೌನ್ – ಆಗಸ್ಟ್ 28ರಂದು ಬೆಂಗಳೂರಿನ ರೆಸಾರ್ಟ್‌ನಲ್ಲಿ ವಿವಾಹ
ಜಿರಂಜೀವಿ ಜನ್ಮ ದಿನಕ್ಕೆ ವಿಶ್ವಂಭರ ಚಿತ್ರದ ಗ್ಲಿಂಪ್ಸ್ ವಿಡಿಯೋ ರಿಲೀಸ್ ಆಗಿದೆ. ಅದ್ಭುತ ಅನಿಸೋ ಈ ಒಂದು ವಿಡಿಯೋದಲ್ಲಿ ಮೆಗಾ ಸ್ಟಾರ್ ಎಂಟ್ರಿ ರೋಮಾಂಚನ ಮೂಡಿಸುವಂತೆ ಇದೆ. ಇದರಲ್ಲಿ ಬರೋ ಬೃಹತ್ ಚೇಳು ಕೂಡ ಕುತೂಹಲ ಮೂಡಿಸುತ್ತಿದೆ. ಇದನ್ನ ನೋಡ್ತಾ ಹೋದ್ರೆ ಇದು ಇಂಗ್ಲಿಷ್ ಚಿತ್ರದ ಅನುಭವ ಕೊಡುತ್ತವೆ. ಹಿನ್ನೆಲೆಯಲ್ಲಿ ಹೇಳುವ ಕಥೆನೂ ಕುತೂಹಲ ಮೂಡಿಸುತ್ತದೆ. ಪುಟ್ಟ ಬಾಲಕನ ಎದುರು ಗಟ್ಟಿ ಧ್ವನಿಯ ಹಿರಿಯ ಅಜ್ಜ ಹೇಳುವ ವಿಶ್ವಂಭರನ ವಿಶೇಷ ಕಥೆ ಗಮನ ಸೆಳೆಯುತ್ತಲೇ ಸಾಗುತ್ತದೆ. ವಿಶ್ವಂಭರನ ಅಬ್ಬರ ಹೇಗಿತ್ತು ಅನ್ನುವ ಹೊತ್ತಿಗೆ ಮೆಗಾಸ್ಟಾರ್ ಚಿರಂಜೀವಿ ಸಖತ್ ಎಂಟ್ರಿ ಆಗುತ್ತದೆ. ರೋಮಾಂಚಕ ಫೈಟ್ ಸೀನ್ ಮೂಲಕವೇ ಚಿರಂಜೀವಿ ಇಲ್ಲಿ ಎಂಟ್ರಿಕೊಡ್ತಾರೆ. ಈ ಒಂದು ಮೆಗಾ ಬ್ಲಾಸ್ಟ್ ಗ್ಲಿಂಪ್ಸ್ ಅಲ್ಲಿ ಇನ್ನು ಸುಮಾರು ವಿಷಯಗಳು ರಿವೀಲ್ ಆಗಿವೆ. ಬಹು ವರ್ಷಗಳ ಬಳಿಕ ಮಾಡಿರೋ ಫ್ಯಾಂಟಸಿ ಸಿನಿಮಾ ಕೂಡ ಇದಾಗಿದೆ. ಈ ಚಿತ್ರದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಎಂಟ್ರಿ ಸೂಪರ್ ಆಗಿದೆ. ಈ ಸಿನಿಮಾದ ವಿಎಫ್‌ಎಕ್ಸ್ ಕೆಲಸ ತಡವಾಗಿದೆ. ಹಾಗಾಗಿಯೇ ಚಿತ್ರದ ರಿಲೀಸ್ ಪ್ಲಾನ್ ಕೂಡಾ ಚೇಂಜ್ ಆಗಿದೆ.
ಚಿರಂಜೀವಿ ಅವರು ಭಾರತೀಯ ಚಿತ್ರರಂಗದಲ್ಲಿ 46 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. 156 ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಚಿರಂಜೀವಿ ಅವರಿಗೆ ಕಳೆದ ವರ್ಷ ‘ಪದ್ಮ ವಿಭೂಷಣ’ ಪ್ರಶಸ್ತಿ ಸಿಕ್ಕಿದೆ. ಕೇಂದ್ರ ಸರ್ಕಾರ ನೀಡುವ ಈ ವಿಶೇಷ ಗೌರವಕ್ಕೆ ಅವರು ಭಾಜನರಾಗಿದ್ದಾರೆ. ಇದಲ್ಲದೆ, ಅವರ ಹೆಸರು ಗಿನ್ನಿಸ್ ದಾಖಲೆಯಲ್ಲಿದೆ. ಅವರಿಗೆ ‘ಭಾರತೀಯ ಚಿತ್ರರಂಗದ ಮೋಸ್ಟ್ ಪ್ರೊಫೈಲಿಕ್ ಸ್ಟಾರ್’ ಎಂದು ಪ್ರಮಾಣಪತ್ರ ನೀಡಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಈ ಗೌರವ ಸಿಕ್ಕಿದೆ. ಚಿರಂಜೀವಿ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 1978ರಲ್ಲಿ. ಅವರು ಚಿತ್ರರಂಗಕ್ಕೆ ಬಂದು 46 ವರ್ಷಗಳ ಮೇಲೆ ಆಗಿದೆ. ಈವರೆಗೂ 156 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಒಳ್ಳೆಯ ಡ್ಯಾನ್ಸರ್ ಕೂಡ ಹೌದು. ತಮ್ಮ ವೃತ್ತಿ ಜೀವನದಲ್ಲಿ ಈವರೆಗಿನ ಚಿರಂಜೀವಿ ಅವರು 537 ಹಾಡುಗಳಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಈ ವೇಳೆ ಅವರು ಮಾಡಿದ ಸ್ಟೆಪ್ಸ್ 24 ಸಾವಿರ. ಈ ಕಾರಣಕ್ಕೆ ಅವರು ಹೆಸರು ಗಿನ್ನಿಸ್ ವರ್ಲ್ಡ್ ರೆಕಾರ್ಡ್ನಲ್ಲಿ ಸೇರಿಕೊಂಡಿದೆ. ಕಳೆದ ವರ್ಷ ಚಿರಂಜೀವಿ ಅವರಿಗೆ ಈ ವಿಶೇಷ ಪ್ರಮಾಣ ಪತ್ರ ನೀಡಲಾಗಿದೆ.

ನೋಡಿರಿ

