ಕೊನೆಗೊಳ್ಳುತ್ತಾ ರಷ್ಯಾ – ಉಕ್ರೇನ್ ವಾರ್! ಪುಟಿನ್ ಹೇಳಿದ್ದೇನು?  

ಕೊನೆಗೊಳ್ಳುತ್ತಾ ರಷ್ಯಾ – ಉಕ್ರೇನ್ ವಾರ್! ಪುಟಿನ್ ಹೇಳಿದ್ದೇನು?  

ಮಾಸ್ಕೋ: ಸುಮಾರು 10 ತಿಂಗಳುಗಳಿಂದ ನಡೆಯುತ್ತಿರುವ ರಷ್ಯಾ ಹಾಗೂ ಉಕ್ರೇನ್  ನಡುವಿನ ಭೀಕರ ಯುದ್ಧವನ್ನು ಶೀಘ್ರವೇ ನಿಲ್ಲಿಸುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಿಳಿಸಿದ್ದಾರೆ.

ಉಕ್ರೇನ್‌ನೊಂದಿಗಿನ ಸಂಘರ್ಷವನ್ನು ಕೊನೆಗೊಳಿಸುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ನಾವು ಶ್ರಮಿಸುತ್ತಿದ್ದೇವೆ. ಆದಷ್ಟು ಬೇಗ ಎಲ್ಲವನ್ನೂ ಕೊನೆಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನಿಲ್ಲುತ್ತಿಲ್ಲ ಚೀನಾ ಕುತಂತ್ರ – ಅತಿಕ್ರಮಣದ ಸಾಕ್ಷ್ಯ ನುಡಿಯುತ್ತಿವೆ ಉಪಗ್ರಹದ ಚಿತ್ರಗಳು

ಫೆಬ್ರವರಿ 24ರಂದು ಉಕ್ರೇನ್ ನ ಮೇಲೆ ರಷ್ಯಾದ ಆಕ್ರಮಣದಿಂದ ಪ್ರಾರಂಭವಾದ ಯುದ್ಧದ ಅಂತ್ಯಕ್ಕೆ ಪುಟಿನ್ ಎಂದೂ ಸಿದ್ಧವಿದ್ದಂತೆ ವರ್ತಿಸಿಲ್ಲ ಎಂದು ಶ್ವೇತಭವನದ ವಕ್ತಾರ ಜಾನ್ ಕಿರ್ಬಿ ಆರೋಪಿಸಿದ್ದರು. ಇದರ ಬಳಿಕ ಪುಟಿನ್ ಆದಷ್ಟು ಬೇಗ ಯುದ್ಧ ನಿಲ್ಲಿಸುವುದಾಗಿ ಹೇಳಿದ್ದಾರೆ.

ಅಮೆರಿಕ ಉಕ್ರೇನ್‌ಗೆ ನೀಡಿರುವ ಮಿಲಿಟರಿ ಸಹಾಯದಿಂದ ಯುದ್ಧವನ್ನು ನಿಲ್ಲಿಸಲು ಅಥವಾ ಮಾಸ್ಕೋ ತನ್ನ ಗುರಿಯನ್ನು ಸಾಧಿಸುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ರಷ್ಯಾ ಹೇಳಿದೆ. ಪೇಟ್ರಿಯಾಟ್ ವಾಯು ರಕ್ಷಣಾ ವ್ಯವಸ್ಥೆ ಶಕ್ತಿಶಾಲಿ ಹಾಗೂ ಸುಧಾರಿತ ಎಂದು ಪರಿಗಣಿಸಲಾಗುತ್ತದೆಯಾದರೂ ಅದು ತುಂಬಾ ಹಳೆಯದು ಎಂದು ಪುಟಿನ್ ತಳ್ಳಿಹಾಕಿದ್ದಾರೆ.

ಇದರ ಬೆನ್ನಲ್ಲೇ ಮಾಧ್ಯಮದೊಂದಿಗೆ ಮಾತನಾಡಿರುವ ಪುಟಿನ್, ರಷ್ಯಾ ಉಕ್ರೇನ್‌ನೊಂದಿಗಿನ ಯುದ್ಧವನ್ನು ಕೊನೆಗೊಳಿಸಲು ಬಯಸುತ್ತದೆ. ಇದು ಅನಿವಾರ್ಯ ರಾಜತಾಂತ್ರಿಕ ಪರಿಹಾರವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

suddiyaana