ಚಿತ್ರದುರ್ಗ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಗೆ ಇಡಿ ಬಿಗ್ ಶಾಕ್ –ಬೆಂಗಳೂರಿನಲ್ಲಿ ಕುಸುಮಾ ಮನೆ ಮೇಲೂ ದಾಳಿ

ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಕ್ರಮ ಆಸ್ತಿ, ತೆರಿಗೆ ವಂಚನೆ ಹಿನ್ನಲೆಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಳ್ಳಕೆರೆ ನಗರದಲ್ಲಿನ ಶಾಸಕ ಕೆಸಿ ವೀರೇಂದ್ರ ಪಪ್ಪಿ ನಿವಾಸ ಹಾಗೂ ಅಣ್ಣ ಕೆಸಿ ನಾಗರಾಜ್, ಕೆಸಿ ಸ್ವಾಮಿ ಮನೆಯ ಮೇಲೂ ದಾಳಿ ನಡೆದಿದೆ.
ಇದನ್ನೂ ಓದಿ: ಆನ್‌ಲೈನ್ ಗೇಮ್ ಬ್ಯಾನ್ – ಮಹತ್ವದ ವಿದೇಯಕಕ್ಕೆ ರಾಜ್ಯಸಭೆಯಲ್ಲೂ ಅನುಮೋದನೆ
ಚಿತ್ರದುರ್ಗದ ಚಳ್ಳಕೆರೆಯಲ್ಲಿರುವ ಪಪ್ಪಿ ನಿವಾಸ ಹಾಗೂ ಬೆಂಗಳೂರಿನ ವಸಂತನಗರದಲ್ಲಿರೋ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಪ್ರೆಸ್ಟೀಜ್ ಅಪಾರ್ಟ್ಮೆಂಟ್ ನಲ್ಲಿ ಶಾಸಕ ವಾಸವಾಗಿದ್ರು. ದಾಳಿ ವೇಳೆ ಶಾಸಕ ಪ್ಲಾಟ್ ನಲ್ಲಿ ಇರಲಿಲ್ಲ. ವಿದೇಶಕ್ಕೆ ಹೋಗಿದ್ದಾರೆ ಎನ್ನಲಾಗ್ತಿದೆ. ಭದ್ರತಾ ಪಡೆಯೊಂದಿಗೆ ಬಂದ ಇಡಿ ಆಫೀಸರ್ಸ್ ಆಸ್ತಿ ಗಳಿಕೆ ತೆರಿಗೆ ವಂಚನೆ ಕುರಿತು ದೂರು ಬಂದ ಹಿನ್ನೆಲೆ ಇಡಿ ದಾಳಿ ನಡೆದಿದ್ದು, ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದರು. ಭದ್ರತಾ ಪಡೆಯೊಂದಿಗೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. 7 ಖಾಸಗಿ ವಾಹನಗಳಲ್ಲಿ ಇಡಿ ಅಧಿಕಾರಿಗಳು ಹಾಗೂ ಸಿಬ್ಬಂದಿ ರೇಡ್ ಮಾಡಿದ್ದಾರೆ.
ಕಾಂಗ್ರೆಸ್ ನಾಯಕಿ ಕುಸುಮಾ ಮನೆ ಮೇಲೆ ಇಡಿ ರೇಡ್
ಬೆಂಗಳೂರಿನ ಮುಬೆದ್ದಿಪಾಳ್ಯ ರಸ್ತೆಯಲ್ಲಿರುವ ಕುಸುಮಾ ಹನುಮಂತರಾಯಪ್ಪ ಮನೆಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಜರಾಜೇಶ್ವರಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಕುಸುಮ ಹನುಮಂತರಾಯಪ್ಪ ನಿವಾಸದ ಮೇಲೆ ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ದಾಳಿ ನಡೆದಿದೆ. ಶಾಸಕ ವೀರೇಂದ್ರ ಪಪ್ಪಿ ಮೇಲೆ ನಡೆದಿರುವ ದಾಳಿಯ ಮುಂದುವರೆದ ಭಾಗವಾಗಿ ಈ ಇಡಿ ದಾಳಿ ನಡೆದಿದೆ ಎನ್ನಲಾಗ್ತಿದೆ. ಎರಡು ಇನ್ನೋವಾ ಕಾರಿನಲ್ಲಿ ಬಂದ ಇಡಿ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಜೊತೆಯೇ ಆಗಮಿಸಿದ್ದಾರೆ. ಹನುಮಂತರಾಯಪ್ಪ ಪುತ್ರ ಜೊತೆಗೆ ವೀರಂದ್ರ ಪಪ್ಪಿ ವ್ಯವಹಾರ ಇರುವ ಮಾಹಿತಿ ಹಿನ್ನೆಲೆ ದಾಳಿ ನಡೆದಿದೆ ಎನ್ನಲಾಗ್ತಿದೆ.

ನೋಡಿರಿ

