ಫೇಸ್‌ಬುಕ್‌ನಲ್ಲಿ ಲವ್..‌ ದೇವಸ್ಥಾನದಲ್ಲಿ ಮದುವೆ – ಮನೆಗೆ ಬರ್ತಿದ್ದಂತೆ ನಿನ್ಯಾರೆಂದುಗೊತ್ತಿಲ್ಲ ಎಂದ ಪತಿರಾಯ!

ಫೇಸ್‌ಬುಕ್‌ನಲ್ಲಿ ಲವ್..‌ ದೇವಸ್ಥಾನದಲ್ಲಿ ಮದುವೆ – ಮನೆಗೆ ಬರ್ತಿದ್ದಂತೆ ನಿನ್ಯಾರೆಂದುಗೊತ್ತಿಲ್ಲ ಎಂದ ಪತಿರಾಯ!

ಫೇಸ್‌ಬುಕ್‌ ನಲ್ಲಿ ಇತ್ತೀಚೆಗೆ ಪ್ರೀತಿ ಹುಟ್ಟೋದು ಕಾಮನ್‌ ಆಗಿದೆ. ಅದು ಫೇಕ್‌ ಅಕೌಂಟ್‌ ಅಥವಾ ಅಲ್ಲಿರುವ ವ್ಯಕ್ತಿ ಒಳ್ಳೆಯವನ ಅನ್ನೋದನ್ನ ಯೋಚಿಸೋದು ಕೂಡ ಇಲ್ಲ.. ಈ ವಿಚಾರದಲ್ಲಿ ಈಗಾಗಲೇ ಸಾಕಷ್ಟು ಮಂದಿ ಮೋಸ ಹೋಗಿದ್ದಾರೆ.. ಆದ್ರೂ ಕೂಡ ಯುವಕ. ಯುವತಿಯರು ಎಚ್ಚೆತ್ತುಕೊಳ್ಳುವುದಿಲ್ಲ. ಇದೀಗ ಇಲ್ಲೊಬ್ಬಳು ಯುವತಿ ಫೇಸ್‌ಬುಕ್‌ನಲ್ಲಿ ಲವ್‌ ಮಾಡಿ, ಮನೆ ಬಿಟ್ಟು ಬಂದು  ಯುವಕನನ್ನ ಮದುವೆ ಆಗಿದ್ದಾಳೆ. ಮದುವೆ ಬೆನ್ನಲ್ಲೇ ಆತ ಉಲ್ಟಾ ಹೊಡೆದಿದ್ದಾನೆ.

ಇದನ್ನೂ ಓದಿ: ನಿರೂಪಕಿ, ನಟಿ ಅನುಶ್ರೀ ಮದುವೆಗೆ ಕೌಂಟ್‌ಡೌನ್ – ಆಗಸ್ಟ್ 28ರಂದು ಬೆಂಗಳೂರಿನ ರೆಸಾರ್ಟ್‌ನಲ್ಲಿ ವಿವಾಹ

ಏನಿದು ಘಟನೆ?

ಈ ಘಟನೆ ಉತ್ತರ ಪ್ರದೇಶದ ಸೋಬ್‌ಭದ್ರದಲ್ಲಿ ನಡೆದಿದೆ. ಸೋನ್‌ಭದ್ರದ ಯುವಕ ಜಾರ್ಖಂಡ್‌ನ ಯುವತಿಗೆ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದಾನೆ. ಬಳಿಕ ಆನ್‌ಲೈನ್ ಚಾಟಿಂಗ್, ವಿಡಿಯೊ ಕರೆಗಳು ನಡೆದು ಸಲುಗೆ ಪ್ರೀತಿ-ಪ್ರೇಮಕ್ಕೆ ತಿರುಗಿ ಶೀಘ್ರವೇ ಸಂಬಂಧವಾಗಿ ಬೆಳೆದಿದೆ. ಬಳಿಕ ಆ ಯುವತಿ ಆತನನ್ನ ಮದುವೆಯಾಗಲು ಮನೆಬಿಟ್ಟು ಬಂದಿದ್ದಾಳೆ. ಇಬ್ಬರು ಖುದ್ದಾಗಿ ಭೇಟಿಯಾಗಿ ಸ್ಥಳೀಯ ದೇವಸ್ಥಾನದಲ್ಲಿ ಮದುವೆ ಆಗಿದ್ದಾರೆ. ಬಳಿಕ ಯುವನ ಮನೆಗೆ ಬಂದಿದ್ದಾಳೆ. ಈ ವೇಳೆ ಯುವ ಉಲ್ಟಾ ಹೊಡೆದಿದ್ದಾನೆ.

ಮದುವೆ ಬೆನ್ನಲ್ಲೇ ಯುವತಿ ಯುವಕನೊಂದಿಗೆ ಆತನ ಮನೆಗೆ ತೆರಳಿದ್ದಾಳೆ. ಆದರೆ ಆತ ಆಕೆಯನ್ನು ಮನೆಗೆ ಸ್ವಾಗತಿಸುವ ಬದಲು, “ನೀವು ಯಾರು? ನನಗೆ ಗೊತ್ತಿಲ್ಲ” ಎಂದು ವಿವಾಹವನ್ನೇ ನಿರಾಕರಿಸಿದ್ದಾನೆ. ಈ ನಿರಾಕರಣೆಯಿಂದ ಆಘಾತಗೊಂಡ ಯುವತಿ ಕಣ್ಣೀರಿಡುತ್ತಾ ಅವನ ಮನೆಯ ಮುಂದೆ ಧರಣಿ ಕುಳಿತು ವಂಚನೆಯ ಆರೋಪ ಮಾಡಿದ್ದಾಳೆ. ಇನ್ನೂ ಸ್ಥಳದಲ್ಲಿ ಜನಸಂದಣಿ ಹೆಚ್ಚಾಗಿ ವಿಷಯ ಗಂಭೀರವಾದ ಹಿನ್ನೆಲೆ ಪೊಲೀಸರು ಮಧ್ಯಸ್ಥಿಕೆಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಯುವತಿ, ಅನ್ಪಾರಾ ಠಾಣೆಯಲ್ಲಿ ವಂಚನೆ ಕುರಿತು ಲಿಖಿತ ದೂರು ಸಲ್ಲಿಸಿದ್ದಾಳೆ. ಫೇಸ್‌ಬುಕ್ ಮೂಲಕ ಯುವಕ ತನ್ನನ್ನು ಆಕರ್ಷಿಸಿ, ವಿವಾಹವಾಗಿ ಈಗ ಪತ್ನಿಯಾಗಿ ಸ್ವೀಕರಿಸಲು ನಿರಾಕರಿಸುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ. ಅಲ್ಲದೆ ನ್ಯಾಯ ಮತ್ತು ತನ್ನ ಹಕ್ಕುಗಳ ರಕ್ಷಣೆಗೆ ಒತ್ತಾಯಿಸಿದ್ದಾಳೆ. ಸದ್ಯ ಪೊಲೀಸರು ಪ್ರಕರಣವನ್ನು ತನಿಖೆಗೆ ಒಳಪಡಿಸಿದ್ದಾರೆ. ವಿವಾಹದ ಕಾನೂನು ಆಯಾಮಗಳನ್ನು ಮತ್ತು ಯುವತಿಯ ಆರೋಪಗಳನ್ನು ಪರಿಶೀಲಿಸಲಾಗುವುದು. ಆರೋಪಗಳು ಸತ್ಯವೆಂದು ಕಂಡುಬಂದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Shwetha M