ಸಂಜುಗಿಂತ ಜಿತೇಶ್ ಬೆಸ್ಟ್ ಕೀಪರ್ – ಸ್ಲಾಟ್.. ರನ್ಸ್.. ಸ್ಟ್ರೈಕ್ ರೇಟ್ ಹೇಗಿದೆ?
ಏಷ್ಯಾಕಪ್ ಗೆ RCB ಹೀರೋನೇ ಫೈನಲ್!

ಏಷ್ಯಾಕಪ್ನಲ್ಲಿ ಹಾಲಿ ಚಾಂಪಿಯನ್ ಆಗಿರೋ ಭಾರತ ಈ ಸಲವೂ ಕಪ್ ಮೇಲೆ ಕಣ್ಣಿಟಿದೆ. 15 ಆಟಗಾರರ ಬಲಿಷ್ಠ ತಂಡವನ್ನ ಪ್ರಕಟ ಮಾಡಿದೆ. ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್ಸಿಯಲ್ಲಿ ಸೆಪ್ಟೆಂಬರ್ 10ರಂದು ಯುಎಇ ವಿರುದ್ಧ ಟಿಂ ಇಂಡಿಯಾ ತನ್ನ ಮೊದಲ ಪಂದ್ಯವನ್ನ ಆಡಲಿದೆ. 2026ರ ಟಿ-20 ವಿಶ್ವಕಪ್ ಗಮನದಲ್ಲಿ ಇಟ್ಟುಕೊಂಡು ಏಷ್ಯಾಕಪ್ ನಲ್ಲಿ ಅಳೆದು ತೂಗಿ ಪ್ಲೇಯಿಂಗ್ 11 ಕಣಕ್ಕಿಳಿಸಬೇಕಿದೆ. ಬ್ಯಾಟರ್ಸ್, ಬೌಲರ್ಸ್, ಆಲ್ ರೌಂಡರ್ಸ್ ರಂತೆಯೇ ವಿಕೆಟ್ ಕೀಪರ್ಸ್ ನಡುವೆಯೂ ಯಾರನ್ನ ಫೈನಲ್ ಮಾಡೋದು ಅನ್ನೋ ಕನ್ಫ್ಯೂಷನ್ ಇದೆ. ಟೀಂ ಇಂಡಿಯಾ ಪರ ಕಳೆದೊಂದು ವರ್ಷದಿಂದ ಖಾಯಂ ಪ್ಲೇಯರ್ ಆಗಿರೋ ಸಂಜು ಸ್ಯಾಮ್ಸನ್ ಗೆ ಪ್ರಿಯಾರಿಟಿ ಕೊಡ್ಬೇಕಾ ಅಥವಾ ಐಪಿಎಲ್ನಲ್ಲಿ ತೂಫಾನ್ ನಂತೆ ಆರ್ಭಟಿಸಿದ್ದ ಜಿತೇಶ್ ಶರ್ಮಾಗೆ ಜೈಕಾರ ಹಾಕ್ಬೇಕಾ ಅನ್ನೋ ಗೊಂದಲ ಉಂಟಾಗಿದೆ.
ಗಿಲ್ ರೀ ಎಂಟ್ರಿಯಿಂದ ಪ್ಲೇಯಿಂಗ್ 11ನಲ್ಲಿ ಬದಲಾವಣೆ!
ಅಷ್ಟಕ್ಕೂ ಇಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಯಾರು ಅನ್ನೋ ಟಾಕ್ ಶುರುವಾಗೋಕೆ ಕಾರಣವೇ ಶುಭ್ಮನ್ ಗಿಲ್ ಟಿ-20ಐ ತಂಡಕ್ಕೆ ರೀ ಎಂಟ್ರಿ ಕೊಟ್ಟಿರೋದು. ಉಪನಾಯಕನಾಗಿ ಗಿಲ್ ಬಂದಿರೋದ್ರಿಂದ ಅಭಿಷೇಕ್ ಶರ್ಮಾ ಜೊತೆ ಆರಂಭಿಕರಾಗಿ ಕಣಕ್ಕಿಳಿಯಬಹುದು. ನಂತರ ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಇಂಥಾ ಸಿಚುಯೇಷನ್ನಲ್ಲಿ ಮಿಡಲ್ ಆರ್ಡರ್ನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಯಾರಿಗೆ ಅವಕಾಶ ನೀಡ್ಬೇಕು ಅನ್ನೋದೇ ಕುತೂಹಲ ಮೂಡಿಸಿದೆ. ಕಳೆದೊಂದು ವರ್ಷದಿಂದ ಸಂಜು ಓಪನರ್ ಆಗಿ ಆಡ್ತಿದ್ರು. ಬಟ್ ಈಗ ಗಿಲ್ ಇರೋದ್ರಿಂದ ಸಂಜುರನ್ನ ಮಧ್ಯಮ ಕ್ರಮಾಂಕದಲ್ಲಿ ಆಡಿಸ್ಬೇಕಾ ಅಥವಾ ಜಿತೇಶ್ ಶರ್ಮಾಗೆ ಅವಕಾಶ ಕೊಡ್ಬೇಕಾ ಅನ್ನೋ ಗೊಂದಲ ಸೃಷ್ಟಿಯಾಗಿದೆ. ಮೊದ್ಲಿಗೆ ಇಬ್ಬರ ಅಂತಾರಾಷ್ಟ್ರೀಯ ಕ್ರಿಕೆಟ್ ಅನುಭವ ಹೇಗಿದೆ ಅನ್ನೋದನ್ನ ನೋಡೋಣ.
ಸಂಜು Vs ಜಿತೇಶ್ ವಾರ್!
ಆಟಗಾರ ಪಂದ್ಯ ರನ್ಸ್ ಆವರೇಜ್ ಸ್ಟ್ರೈಕ್ ರೇಟ್
ಸಂಜು ಸ್ಯಾಮ್ಸನ್ 42 861 25.32 152.39
ಜಿತೇಶ್ ಶರ್ಮಾ 7 100 14.29 147.06
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಜು ಸ್ಯಾಮ್ಸನ್ ಹೆಚ್ಚು ಪಂದ್ಯಗಳನ್ನ ಆಡಿರೋ ಅನುಭವ ಹೊಂದಿದ್ದಾರೆ. ಬಟ್ ಜಿತೇಶ್ಗೆ ಅಷ್ಟೊಂದು ಅವಕಾಶ ಸಿಕ್ಕಿಲ್ಲ. ಹೀಗಿದ್ರೂ ಜಿತೇಶ್ ಏಷ್ಯಾಕಪ್ಗೆ ಸೆಲೆಕ್ಟ್ ಆಗೋಕೆ ಕಾರಣವೇ ಐಪಿಎಲ್ ಪ್ರದರ್ಶನ. ಸೋ 2025ರ ಐಪಿಎಲ್ನಲ್ಲಿ ಇಬ್ಬರ ಪ್ರದರ್ಶನ ಹೇಗಿತ್ತು ಅನ್ನೋದನ್ನೂ ನೋಡೋಣ.
ಸಂಜುಗಿಂತ ಜಿತೇಶ್ ಬೆಸ್ಟ್!
18ನೇ ಸೀಸನ್ ನಲ್ಲಿ 9 ಪಂದ್ಯಗಳಲ್ಲಿ ಮಾತ್ರವೇ ಕಣಕ್ಕಿಳಿದಿದ್ದು ಸಂಜು
35.63ರ ಆವರೇಜ್ನಲ್ಲಿ 285 ರನ್, ಸ್ಟ್ರೈಕ್ ರೇಟ್ 140.39 ಇದೆ
ಐಪಿಎಲ್ ನಲ್ಲಿ 177 ಪಂದ್ಯಗಳನ್ನ ಆಡಿದ್ದು 172 ಇನ್ನಿಂಗ್ಸ್ ಗಳಲ್ಲಿ 4,704 ರನ್
ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವಾಗ ಮಾತ್ರ ಅವರ ಪ್ರದರ್ಶನ ಅತ್ಯುತ್ತಮ
ನಂಬರ್ 3 ಸ್ಲಾಟ್ನಲ್ಲಿ 94 ಇನ್ನಿಂಗ್ಸ್ಗಳಲ್ಲಿ 3096 ರನ್ ಗಳಿಸಿರುವ ಸಂಜು
ಸರಾಸರಿ 38.22 ಮತ್ತು ಸ್ಟ್ರೈಕ್ ರೇಟ್ 143.33, ಐದು ಮತ್ತು ಆರನೇ ಸ್ಥಾನದಲ್ಲಿ ಕುಸಿತ
ಐದನೇ ಸ್ಥಾನದಲ್ಲಿ, ಅವರ ಸರಾಸರಿ 11.33 ಮತ್ತು ಸ್ಟ್ರೈಕ್ ರೇಟ್ 136
ಆರನೇ ಸ್ಥಾನದಲ್ಲಿ, ಅವರ ಸರಾಸರಿ 20.00 ಮತ್ತು ಸ್ಟ್ರೈಕ್ ರೇಟ್ 102.56
2022ರಿಂದ ಐಪಿಎಲ್ ಆಡ್ತಿರೋ ಜಿತೇಶ್ ಶರ್ಮಾ 2025ರಲ್ಲಿ ಆರ್ಸಿಬಿ ಪರ
ಬೆಂಗಳೂರು ಪರ ಟೋಟಲ್ಲಾಗಿ 15 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 261 ರನ್ಸ್
37.29 ಸರಾಸರಿ ಹೊಂದಿದ್ರೆ 176.35 ಸ್ಟ್ರೈಕ್ ರೇಟ್, 85 ರನ್ ಬೆಸ್ಟ್
ಒಟ್ಟಾರೆ ಐಪಿಎಲ್ ನಲ್ಲಿ 47 ಇನ್ನಿಂಗ್ಸ್ ಗಳಲ್ಲಿ ಬ್ಯಾಟ್ ಬೀಸಿದ್ದು 991 ರನ್
ಆರನೇ ಸ್ಥಾನದಲ್ಲಿ ಬ್ಯಾಟಿಂಗ್ ನಲ್ಲಿ ಸರಾಸರಿ 31.15 ಮತ್ತು ಸ್ಟ್ರೈಕ್ ರೇಟ್ 168.75
ಆರನೇ ಸ್ಥಾನದಲ್ಲಿ, ಜಿತೇಶ್ 16 ಇನ್ನಿಂಗ್ಸ್ಗಳಲ್ಲಿ 405 ರನ್ ಗಳಿಸಿದ್ದಾರೆ
ಕಳೆದ ಐಪಿಎಲ್ ಸೀಸನ್ ನಲ್ಲಿ ಆರ್ ಸಿಬಿ ಪರ ಫಿನಿಶರ್ ಪಾತ್ರವನ್ನು ಅದ್ಭುತ
ಬಿಸಿಸಿಐ ಕೂಡ ಏಷ್ಯಾಕಪ್ ತಂಡಕ್ಕೆ ವಿಕೆಟ್ ಕೀಪರ್ ಬ್ಯಾಟರ್ ಕೋಟಾ
ಹೇಳಿ ಕೇಳಿ ಟಿ-20 ಮಾದರಿ ಪಂದ್ಯಗಳಲ್ಲಿ ಮಿಡಲ್ ಆರ್ಡರ್ ಬ್ಯಾಟರ್ಗಳ ಪರ್ಫಾಮೆನ್ಸ್ ಮುಖ್ಯ ಆಗುತ್ತೆ. ಎಷ್ಟು ಸಾಧ್ಯವೋ ಅಷ್ಟು ಬೇಗ ರನ್ಸ್ ಕಲೆ ಹಾಕ್ಬೇಕು. ಗಿಲ್ ಮತ್ತು ಅಭಿಷೇಕ್ ಆರಂಭದಲ್ಲಿ ಪವರ್ ಹಿಟ್ಟಿಂಗ್ ಮೂಲಕ ರನ್ಸ್ ಗಳಿಸಿದ್ರೆ ಮಿಡಲ್ ಆರ್ಡರ್ನವರ ವೇಗ ಕೂಡ ಜಾಸ್ತಿ ಇರ್ಬೇಕು. ಸ್ಟ್ರೈಕ್ ರೇಟ್ ಮೋಸ್ಟ್ ಇಂಪಾರ್ಟೆಂಟ್. ಇದೇ ಕಾರಣಕ್ಕೆ ಅಜಿತ್ ಅಗರ್ಕರ್ ನಾಯಕತ್ವದ ಸೆಲೆಕ್ಷನ್ ಕಮಿಟಿ ಜಿತೇಶ್ಗೆ ಮಣೆ ಹಾಕಿದೆ. ಸೋ ಮೇಲಿನ ಅಂಕಿ ಅಂಶಗಳನ್ನ ನೋಡಿದ್ರೆ ಮಿಡಲ್ ಆರ್ಡರ್ನಲ್ಲಿ ಸಂಜುಗಿಂತ ಜಿತೇಶ್ ಶರ್ಮಾ ಅತ್ಯುತ್ತಮ ಆಯ್ಕೆಯಾಗ್ತಾರೆ.

ನೋಡಿರಿ

