ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್ ಕಂಟ್ರೋಲ್ ಮೀಟಿಂಗ್..!
ಕರ್ನಾಟಕದಲ್ಲಿ ಕೋವಿಡ್ ಎಂಬ ಮಹಾಮಾರಿಯ ಭಯ ಮತ್ತೆ ಶುರುವಾಗಿದೆ. ಭಾರತದಲ್ಲಿ ಬಿಎಫ್ 7 ತಳಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇವತ್ತು ಸಿಎಂ ಬೊಮ್ಮಾಯಿ ಮಹತ್ವದ ಸಭೆ ನಡೆಸಿದ್ದಾರೆ. ಬೆಳಗಾವಿಯ ಸುವರ್ಣಸೌಧದ ಮೂರನೆ ಮಹಡಿಯಲ್ಲಿ ನಡೆದ ಸಭೆಯಲ್ಲಿ ಒಂದಷ್ಟು ನಿರ್ಣಯಗಳನ್ನ ತೆಗೆದುಕೊಳ್ಳಲಾಯ್ತು. ಸಭೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗು ತಾಂತ್ರಿಕ ಸಲಹಾ ಸಮಿತಿ ವರ್ಚುವಲ್ ಮೂಲಕ ಸಭೆಯಲ್ಲಿ ಭಾಗಿಯಾಗಿ ಒಂದಷ್ಟು ಸಲಹೆಗಳನ್ನ ನೀಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಕೋವಿಡ್ ಸ್ಥಿತಿಗತಿ ಬಗ್ಗೆ ವರದಿ ಕೊಟ್ಟಿದ್ದಾರೆ..ಅದರ ಆಧಾರದಲ್ಲಿ ಮುನ್ನೆಚ್ಚರಿಕೆ ಕ್ರಮಕ್ಕೆ ಸಿಎಂ ನಿರ್ದೇಶನ ನೀಡಿದ್ದಾರೆ
ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು..!
*ಐಎಲ್ ಐ ಹಾಗೂ ಸಾರಿ ಇರುವ ಎಲ್ಲ ಪ್ರಕರಣಗಳಲ್ಲಿ ಕಡ್ಡಾಯ ಟೆಸ್ಟಿಂಗ್ ಮಾಡಲು ತೀರ್ಮಾನ ಮಾಡಲಾಗಿದೆ
* ಒಳಾಂಗಣ ಪ್ರದೇಶದ ಮಾಸ್ಕ್ ಧರಿಸಲು ಸಲಹೆ ನೀಡಲಾಗಿದೆ
*ಏರ್ ಪೋರ್ಟ್ ನಲ್ಲಿ ವಿದೇಶಿ ಪ್ರಯಾಣಿಕರ ರ್ಯಾಂಡಮ್ ಟೆಸ್ಟಿಂಗ್ ಮಾಡಲು ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಕ್ರಮ
*ಆಸ್ಪತ್ರೆಯಲ್ಲಿ ಆಕ್ಸಿಜನ್ ಘಟಕ ಕಾರ್ಯನಿರ್ವಹಣೆ ಬಗ್ಗೆ ತಾಂತ್ರಿಕ ಪರಿಶೀಲನೆ ಹಾಗೂ ಸುಗಮ ಕೆಲಸ ಮಾಡುವ ನಿಟ್ಟಿನಲ್ಲಿ ಸಿದ್ದತೆ
*ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಗೆ ಹಾಸಿಗೆ ಮೀಸಲು ಇಡಲು ಸೂಚನೆ
*ಖಾಸಗಿ ಆಸ್ಪತ್ರೆಗಳಿಗೂ ಕೋವಿಡ್ ಪ್ರತ್ಯೇಕ ಬೆಡ್ ಮೀಸಲಿಡಲು ಸೂಚನೆ
*ಬೂಸ್ಟರ್ ಡೋಸ್ ಲಸಿಕೆಗೆ ವಿಶೇಷ ಪ್ರಾಶಸ್ತ್ಯ. ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕಿನಲ್ಲಿ ವಿಶೇಷ ಲಸಿಕೆ ಕ್ಯಾಂಪ್ ನಡೆಸಲು ನಿರ್ಧಾರ
*ಮೂರನೇ ಡೋಸ್ 100% ಟಾರ್ಗೆಟ್ ಪೂರ್ಣಗೊಳಿಸಲು ಕ್ರಮ ಹಾಗೂ ರಾಜ್ಯದಲ್ಲಿ ಅಗತ್ಯ ಲಸಿಕೆ ಸಂಗ್ರಹ ಮಾಡಲು ಕ್ರಮ ಕೈಗೊಳ್ಳಲಾಗುವುದು
* ರಾಜ್ಯ ಸರ್ಕಾರ ಸರ್ವ ರೀತಿಯಲ್ಲಿ ಸಿದ್ಧತೆ ಕೈಗೊಳ್ಳುತ್ತಿದೆ. ಮೂರನೇ ಡೋಸ್ ಆದಷ್ಟು ಶೀಘ್ರವಾಗಿ ಕೈಗೊಳ್ಳಬೇಕು,ಈ ಬಗ್ಗೆ ಉದಾಸೀನತೆ ಬೇಡ ಅಂತಾ ಜನರಿಗೆ ಮನವರಿಕೆ ಮಾಡುವುದು
ಇನ್ನು ಸಭೆ ಬಳಿಕ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮಾತನಾಡಿ, ಮೂರನೇ ಡೋಸ್ ನಿಂದ ಯಾವುದೇ ಅಪಾಯ ಇಲ್ಲ. ಲಸಿಕೆಯಿಂದ ಅಪಾಯ ಆಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ವರದಿ ಇಲ್ಲ. ಲಸಿಕೆ ತೆಗೆದುಕೊಳ್ಳುವ ಮೂಲಕ ರಕ್ಷಣೆ ಮಾಡಿಕೊಳ್ಳಿ ಎಂದು ಮನವಿ ಮಾಡಿದರು. ಮಾಸ್ಕ್ ಧರಿಸುವ ಮೂಲಕ ಕೋವಿಡ್ ತಡೆಗಟ್ಟಬಹುದು. ಯಾವುದೇ ಆತಂಕ ಸೃಷ್ಟಿ ಬೇಡ. ಬಿಎಫ್ 7 ಯಾವುದೇ ಕ್ಷಣಕ್ಕೂ ನಮ್ಮ ರಾಜ್ಯಕ್ಕೆ ಕಾಲಿಡುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆಯ ಕ್ರಮ ಅಗತ್ಯ ಎಂದರು. ಮಾಸ್ಕ್ ಧರಿಸುವುದರಿಂದ ಕೋವಿಡ್ ತಡೆಗಟ್ಟಲು ಸಾಧ್ಯ. ಸರಳ ಕ್ರಮ ಕೈಗೊಳ್ಳುವ ಮೂಲಕ ಕೋವಿಡ್ ನಿಯಂತ್ರಣ ಮಾಡೋಣ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ. ಹೊರಾಂಗಣ ಪ್ರದೇಶದಲ್ಲಿ ದೊಡ್ಡ ಸಮಸ್ಯೆ ಆಗಲ್ಲ. ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಧರಿಸಬೇಕು ಎಂದು ಸಚಿವರು ಹೇಳಿದ್ದಾರೆ.