ದತ್ತು ಪುತ್ರನಿಗಾಗಿ ಗಂಭೀರ್ ಪಾಲಿಟಿಕ್ಸ್ – KKR ಕೋಟಾದಲ್ಲಿ ಏಷ್ಯಾಕಪ್ ಗೆ ರಾಣಾ
ಕೃಷ್ಣ, ಪಟೇಲ್ ಪರ್ಫಾಮೆನ್ಸ್ ಲೆಕ್ಕಕ್ಕಿಲ್ವಾ?

ಸೆಪ್ಟೆಂಬರ್ 9ರಿಂದ ಯುಎಇಯಲ್ಲಿ ನಡೆಯಲಿರೋ ಏಷ್ಯಾಕಪ್ ಟೂರ್ನಿಗೆ ಭಾರತದ ಪರ 15 ಆಟಗಾರರ ತಂಡವನ್ನ ಅನೌನ್ಸ್ ಮಾಡಲಾಗಿದೆ. ಹಾಗೇ ಐವರು ಬ್ಯಾಕಪ್ ಪ್ಲೇಯರ್ ಆಗಿ ಇರ್ತಾರೆ. ಆದ್ರೆ 15 ಆಟಗಾರರಲ್ಲಿ ಹರ್ಷಿತ್ ರಾಣಾಗೆ ಹೇಗೆ ಚಾನ್ಸ್ ಕೊಟ್ರು ಅನ್ನೋದೇ ಕೆಲವರ ಪ್ರಶ್ನೆಯಾಗಿದೆ. ಹಾಗೇ ಸಾಮರ್ಥ್ಯ ಇರೋ ಸಾಕಷ್ಟು ಆಟಗಾರರನ್ನ ಕಡೆಗಣನೆ ಮಾಡಿರೋದು ಕೂಡ ಬೇಸರ ಮೂಡಿಸಿದೆ. ಪ್ರಸಿದ್ಧ್ ಕೃಷ್ಣ ಮತ್ತು ಹರ್ಷಲ್ ಪಟೇಲ್ ಅವರಂತಹ ಆಟಗಾರರನ್ನು ಹಿಂದಿಕ್ಕಿ ಕೆಕೆಆರ್ ವೇಗಿ ಸ್ಥಾನ ಪಡೆದಿದ್ದೇ ಚರ್ಚೆ ಹುಟ್ಟು ಹಾಕಿದೆ. ಮಾಜಿ ಕ್ರಿಕೆಟಿಗರ ಸಿಟ್ಟಿಗೂ ಕಾರಣವಾಗಿದೆ.
ಇದನ್ನೂ ಓದಿ : ಬಿಸಿಸಿಐ EGOಗೆ ಶ್ರೇಯಸ್ ಬಲಿಪಶು – ODI, IPL ರನ್ ಮಳೆಗರೆದ್ರೂ ಮೋಸ
ಗಂಭೀರ್ ಶಿಷ್ಯನಿಗೆ ಏಷ್ಯಾಕಪ್ ನಲ್ಲೂ ಒಲಿದ ಅದೃಷ್ಟ!
ಟೀಂ ಇಂಡಿಯಾದಲ್ಲಿ ಚಾನ್ಸ್ ಪಡೀಬೇಕು ಅನ್ನೋದು ಪ್ರತಿಯೊಬ್ಬ ಕ್ರಿಕೆಟಿಗನ ಕನಸು. ರಾಶಿಗಟ್ಟಲೆ ರನ್, ಡಜನ್ಗಟ್ಟಲೆ ವಿಕೆಟ್ ಬೇಟೆಯಾಡಿದ್ರೂ ಒಂದೇ ಒಂದು ಅವಕಾಶ ಸಿಗೋದಿಲ್ಲ. ಬಟ್ ಹರ್ಷಿತ್ ರಾಣಾಗೆ ಮಾತ್ರ ಪದೇಪದೆ ಅದೃಷ್ಟ ಅವ್ರನ್ನೇ ಹುಡುಕಿಕೊಂಡು ಬರ್ತಿದೆ. ಈಗ ಏಷ್ಯಾಕಪ್ನಲ್ಲೂ ಅದೇ ಆಗಿದೆ. 15 ಸದಸ್ಯರ ಅಧಿಕೃತ ತಂಡದಲ್ಲಿ ವೇಗಿಗಳ ಕೋಟಾದಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ಜೊತೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ ರಾಣಾಗೆ ಅವಕಾಶ ಸಿಕ್ಕಿರೋದ್ರ ಹಿಂದೆ ಇರೋದು ಭಾರತ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ಅವ್ರ ಕೃಪಾಕಟಾಕ್ಷ ಅನ್ನೋದನ್ನ ನಾವಿಲ್ಲಿ ಸಪರೇಟ್ ಆಗಿ ಹೇಳ್ಬೇಕಾಗಿಲ್ಲ. ಌಕ್ಚುಲಿ ರಾಣಾ ನಸೀಬು ಬದಲಿಸಿದ್ದೇ ಕೆಕೆಆರ್ ಟೀಂ.
ಗಂಭೀರ್ ಪಾಲಿಟಿಕ್ಸ್ ಟೀಂ!
2024ರ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ನಲ್ಲಿ ಹರ್ಷಿತ್ & ಗಂಭೀರ್
ಕ್ಯಾಪ್ಟನ್ ಆಗಿದ್ದ ಶ್ರೇಯಸ್ ಅಯ್ಯರ್ ಗೂ ಮೆಂಟರ್ ಗಂಭೀರ್ ನಡುವೆ ಬಿರುಕು
ಗಂಭೀರ್ ಟೀಂ ಇಂಡಿಯಾದಲ್ಲಿ ಕೆಕೆಆರ್ ಕೋಟಾದಲ್ಲಿ ಕೆಲವ್ರಿಗೆ ಚಾನ್ಸ್
2024ರ ಐಪಿಎಲ್ನಲ್ಲಿ 13 ಪಂದ್ಯಗಳಿಂದ ರಾಣಾ 19 ವಿಕೆಟ್ ಪಡೆದಿದ್ರು
ಬಾರ್ಡರ್ ಗವಾಸ್ಕರ್, ODI ಮತ್ತು T20I ಎರಡರಲ್ಲೂ ಪಾದಾರ್ಪಣೆ
ಇಂಗ್ಲೆಂಡ್ ವಿರುದ್ಧದ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲೂ ಅವಕಾಶ
ಭಾರತದ ಒಂದೇ ಒಂದು ಟಿ-20ಐ ಪಂದ್ಯವನ್ನ ಆಡಿರೋ ಅನುಭವ ಇದೆ
ಇಂಗ್ಲೆಂಡ್ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಬದಲಿ ಆಟಗಾರನಾಗಿ ಸ್ಥಾನ
ದುಬೆ ಗಾಯಗೊಂಡಿದ್ದರಿಂದ ಹರ್ಷಿತ್ ರಾಣಾರನ್ನ ಕನ್ಕುಶನ್ ಪ್ಲೇಯರ್
ಟಿ-20ಐ ಮೊದಲ ಓವರ್ನಲ್ಲಿ ಕೇವಲ 5 ರನ್ ನೀಡಿ ಲಿಯಾಮ್ ವಿಕೆಟ್
4 ಓವರ್ಗಳನ್ನ ಬೌಲ್ ಮಾಡಿ 33 ರನ್ ನೀಡಿ 3 ವಿಕೆಟ್ ಪಡೆದರು
ಐಪಿಎಲ್ ನಲ್ಲಿ 13 ಪಂದ್ಯಗಳಲ್ಲಿ ಕಣಕ್ಕಿಳಿದು 15 ವಿಕೆಟ್, 10.18ರ ಎಕಾನಮಿ
ಅಷ್ಟಕ್ಕೂ 23 ವರ್ಷದ ಹರ್ಷಿತ್ ರಾಣಾ ಟ್ಯಾಲೆಂಟೆಡ್ ಪ್ಲೇಯರ್. ಗಂಟೆಗೆ 140ಕಿಲೋ ಮೀಟರ್ ವೇಗದಲ್ಲಿ ಬೌಲ್ ಮಾಡೋ ಸಾಮರ್ಥ್ಯ ಹೊಂದಿದ್ದಾರೆ. ಬಟ್ ಪ್ರಶ್ನೆ ಅದಲ್ಲ. ರಾಣಾಗಿಂತ ಬೆಸ್ಟ್ ಪರ್ಫಾಮೆನ್ಸ್ ಕೊಡೋರು ಇದ್ದಾಗ ಅವ್ರನ್ನೇ ಯಾಕೆ ಪಿಕ್ ಮಾಡಿದ್ದು ಅನ್ನೋದಷ್ಟೇ ಇಲ್ಲಿರೋ ವಾದ. ಅದ್ರಲ್ಲೂ ಹರ್ಷಲ್ ಪಟೇಲ್ ಮತ್ತು ಪ್ರಸಿದ್ಧ್ ಕೃಷ್ಣ ಹೆಸರು ಮುನ್ನಲೆಗೆ ಬಂದಿದೆ. ಇನ್ನು ಮೊಹಮ್ಮದ್ ಸಿರಾಜ್ ಹೆಸರು ಸದ್ದು ಮಾಡ್ತಿದೆ.
ಬೆಸ್ಟ್ ಇದ್ರೂ ಚಾನ್ಸ್ ಯಾಕೆ?
ಆಟಗಾರ ಪಂದ್ಯಗಳು ವಿಕೆಟ್ ಬೆಸ್ಟ್ ಎಕಾನಮಿ
ಹರ್ಷಲ್ ಪಟೇಲ್ 13 16 28/4 9.8
ಹರ್ಷಿತ್ ರಾಣಾ 13 15 3/25 10.18
ಪ್ರಸಿದ್ಧ್ ಕೃಷ್ಣ 15 25 4/41 8.5
ಈ ಎಲ್ಲಾ ಕಾರಣಗಳಿಂದಲೇ ಹರ್ಷಿತ್ ರಾಣಾ ಆಯ್ಕೆ ಬಗ್ಗೆ ಮಾಜಿ ಕ್ರಿಕೆಟಿಗರು ಕೂಡ ಧ್ವನಿ ಎತ್ತಿದ್ದಾರೆ. ಏಷ್ಯಾಕಪ್ ತಂಡದಲ್ಲಿ ತಮ್ಮ ಸ್ಥಾನವನ್ನು ಸಮರ್ಥಿಸಿಕೊಳ್ಳಲು ಒಂದು ಅತ್ಯುತ್ತಮ ಪ್ರದರ್ಶನ ಸಾಕಾಗಲ್ಲ ಅಂತಾ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ. ಕೆ ಶ್ರೀಕಾಂತ್ ಕೂಡ ಅಸಮಾಧಾನ ಹೊರ ಹಾಕಿದ್ದಾರೆ. ರಾಣಾ 2025 ರ ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ನೀಡಿರೋ ಪ್ರದರ್ಶನ ಸಾಮಾನ್ಯವಾಗಿದೆ. ರಾಣಾಗಿಂತ ಉತ್ತಮ ಆಯ್ಕೆಗಳಿದ್ವು ಎಂದಿದ್ದಾರೆ. ಒಟ್ನಲ್ಲಿ ಕೆಕೆಆರ್ ಮೇಲೆ ಗಂಭೀರ್ಗೆ ಸ್ಪೆಷಲ್ ಲವ್ ಇದೆ ಅನ್ನೋದು ಪದೇಪದೆ ಪ್ರೂವ್ ಆಗ್ತಿದೆ. ಪ್ರಸ್ತುತ ಏಷ್ಯಾಕಪ್ ಟೂರ್ನಿಗೆ ಸೆಲೆಕ್ಟ್ ಆಗಿರೋರ ಪೈಕಿ ಕೆಕೆಆರ್ನ ರಿಂಕು ಸಿಂಗ್, ವರುಣ್ ಚಕ್ರವರ್ತಿ ಹಾಗೇ ಹರ್ಷಿತ್ ರಾಣಾಗೆ ಚಾನ್ಸ್ ನೀಡಲಾಗಿದೆ.

ನೋಡಿರಿ

