ವಿಶ್ವನಿಗೆ ಮುಹೂರ್ತ ಇಟ್ಟ ಜಯಂತ್‌! – ಸೈಕೋ ಪತಿ ಕಣ್ಣಿಗೆ ಬಿದ್ದ ಚಿನ್ನುಮರಿ?
ಗೂಬೆ ಗುಟ್ಟು ರಟ್ಟು.. ಜಾನು ದೂರ?

ವಿಶ್ವನಿಗೆ ಮುಹೂರ್ತ ಇಟ್ಟ ಜಯಂತ್‌! – ಸೈಕೋ ಪತಿ ಕಣ್ಣಿಗೆ ಬಿದ್ದ ಚಿನ್ನುಮರಿ?ಗೂಬೆ ಗುಟ್ಟು ರಟ್ಟು.. ಜಾನು ದೂರ?

ಇಷ್ಟು ದಿನ ಗೂಬೆ ಯಾರು ಅನ್ನೋದು ಸೈಕೋ ಜಯಂತ್‌ನ ಕಾಡ್ತಿತ್ತು.. ಹೀಗಾಗೇ ಜಾಹ್ನವಿ ಫ್ರೆಂಡ್ಸ್‌ಗೆಲ್ಲ ನರಕ ತೋರ್ಸಿದ್ದ.. ಇದೀಗ ಜಯಂತ್‌ ಗೆ ಗೂಬೆ ಬೇರೆ ಯಾರು ಅಲ್ಲ.. ವಿಶ್ವ ಅನ್ನೋದು ಗೊತ್ತಾಗಿದೆ.. ಇದೀಗ  ಸೈಕೋಪತಿ ವಿಶ್ವನ ಮುಂದೆ ಪ್ರತ್ಯಕ್ಷವಾಗಿದ್ದಾನೆ. ಅಷ್ಟೇ ಅಲ್ಲ ವಿಶ್ವನ ಕಾಲರ್‌ ಪಟ್ಟಿ ಹಿಡಿದು ನನ್ನ ಹೆಂಡ್ತಿ ಎಲ್ಲಿ ಅಂತಾ ಕೇಳಿದ್ದಾನೆ.

ಇದನ್ನೂ ಓದಿ: ಬಿಸಿಸಿಐ EGOಗೆ ಶ್ರೇಯಸ್ ಬಲಿಪಶು – ODI, IPL ರನ್ ಮಳೆಗರೆದ್ರೂ ಮೋಸ

ಲಕ್ಷ್ಮೀ ನಿವಾಸ ಸೀರಿಯಲ್‌ ಸ್ಟೋರಿ ಈಗ ರೋಚಕ ತಿರುವು ಪಡೆದುಕೊಂಡಿದೆ. ಜಯಂತ್‌ನ ಸೈಕೋ ವರ್ತನೆಯಿಂದ ಜಾನು ನರಕ ಅನುಭವಿಸಿದ್ಲು. ಮನೆಯೆಂಬ ಜೈಲಿನಲ್ಲಿ ಜಾನು ಬಂಧಿಯಾಗಿದ್ಲು.. ಆತನ ಸೈಕೋತನ ಅಂತಾ ಗೊತ್ತಾಗ್ತಿದ್ದಂತೆ ಎಲ್ಲರಿಂದ ದೂರ ಹೋಗಲು ನಿರ್ಧರಿಸಿದ್ಲು. ಆದ್ರೆ ಸಮುದ್ರಕ್ಕೆ ಹಾರಿದ್ರೂ ಕೂಡ ಜಾನುಗೆ ಏನು ಆಗಿಲ್ಲ.. ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಜಾನು ಸಿಕ್ಕಿದ್ಲು.. ಜಾಹ್ನವಿ ಸತ್ತಿದ್ದಾಳೆ ಅಂತಾ ಎಲ್ಲರೂ ಅಂದ್ಕೊಂಡಿದ್ದಾರೆ. ಅದ್ರೆ ಜಯಂತ್‌ ಮಾತ್ರ ಚಿನ್ನುಮರಿ ಬದುಕಿದ್ದಾಳೆ ಮತ್ತೆ ಹುಚ್ಚನಂತೆ ಆಡ್ತಿದ್ದಾನೆ.. ಜಾಹ್ನವಿ ಬಿಟ್ಟು ಹೋದ್ಮೇಲೂ ಆತನಿಗೆ ಇನ್ನೂ ಬುದ್ಧಿ ಬಂದಿಲ್ಲ. ತಾನು ಸ್ವತಂತ್ರ ಕೊಡದೆ ಕಟ್ಟಿ ಹಾಕಿದ್ದರಿಂದಲೇ ಜಾಹ್ನವಿ ಪ್ರಾಣ ಕಳೆದುಕೊಂಡಳು.. ಅವಳು ಸಾಯೋಕೆ ತಾನೇ ಕಾರಣ ಅಂತ ಗೊತ್ತಿದ್ರೂ ಜಯಂತ್‌ ಗೆ ಪಾಪ ಪ್ರಜ್ಞೆ ಕಾಡ್ತಿಲ್ಲ. ಇದೀಗ ಸೈಕೋಪತು ಜಾನು ಫ್ರೆಂಡ್‌ ಗೂಬೆಯನ್ನು ಮುಗಿಸಲು ಪ್ಲ್ಯಾನ್‌ ಮಾಡಿದ್ದಾನೆ.

ಜಯಂತ್‌ ನ ಮದುವೆ ಆದಾಗಿನಿಂದ ಜಾನು ನಕರ ಅನುಭವಿಸ್ತಿದ್ದಾಳೆ.. ಆತನ ಅತಿಯಾ ಪ್ರೀತಿಯೇ ಆಕೆಗೆ ಹಿಂಸೆಯಾಗಿದೆ. ಜಾನು ಫ್ರೆಂಡ್‌ ಜೊತೆ ಕ್ಲೋಸ್‌ ಆದ್ರೂ ಜಯಂತ್‌ ಗೆ ಇಷ್ಟ ಆಗಲ್ಲ.. ಅವಳು ತಂದೆ-ತಾಯಿ ಜೊತೆ ಒಂದಿನ ಟೈಮ್‌ ಕಳೆದರೂ ಅವನಿಗೆ ಸಹಿಸೋಕೆ ಆಗೋದಿಲ್ಲ.. ಇನ್ನು ಜಾನು ಫೋನ್‌ನಲ್ಲಿ ಸೇವ್‌ ಆಗಿದ್ದ ಗೂಬೆ ಯಾರು ಅಂತ ಕಂಡು ಹಿಡಿಯಲು ಜಯಂತ್‌ ತುಂಬಾ ಪ್ರಯತ್ನಪಟ್ಟಿದ್ದ.. ಇದೀಗ ತಾನು ಇಷ್ಟು ದಿನ ಹುಡುಕ್ತಿದ್ದ ಗೂಬೆ ವಿಶ್ವ ಅಂತಾ  ಜಯಂತ್‌ಗೆ ಗೊತ್ತಾಗಿದೆ. ಈಗ ಜಯಂತ್‌ ನೇರವಾಗಿ ವಿಶ್ವನ ಮನೆಗೆ ಎಂಟ್ರಿಕೊಟ್ಟಿದ್ದಾನೆ.

ಹೌದು, ಜಯಂತ್‌ ವಿಶ್ವನೇ ಗೂಬೆ ಅಂತಾ ಗೊತ್ತಾಗ್ತಿದ್ದಂತೆ, ಸೈಕೋತನ ಜಾಗೃತವಾಗಿದೆ.. ನನ್ನ ಜೊತೆ ಇದ್ಕೊಂಡು ಎಂಥಾ ಮೋಸ ಮಾಡ್ಬಿಟ್ರು.. ಈ ಜಯಂತನಿಗೇ ಮೋಸ ಮಾಡ್ಬಿಟ್ರು ಅಂತಾ ಅಂದ್ಕೊಂಡಿದ್ದಾನೆ. ಬಳಿಕ ಜಯಂತ್‌  ನೇರವಾಗಿ ವಿಶ್ವನ ಮನೆಗೆ ಬಂದಿದ್ದಾನೆ.. ನನ್ನ ಹೆಂಡ್ತಿ ಎಲ್ಲಿ ವಿಶ್ವ ಎಂದು ಹೇಳಿದ್ದಾನೆ.. ವಿಶ್ವ ಮಾತು ಶುರು ಮಾಡ್ತಿದ್ದಂತೆ, ನನಗೆ ಕತೆಗಳು ಬೇಡ.. ನೀನು ಯಾರು? ಜಾಹ್ನವಿ ಮತ್ತೆ ನಿನ್ನ ಮಧ್ಯೆ ಏನ್‌ ಸಂಬಂಧ ಇತ್ತು.. ನಿನ್ನನ್ನ ಗೂಬೆ ಅಂತ ಕರಿತಿದ್ದು ಎಲ್ಲಾ ಗೊತ್ತಿದೆ.. ನನ್ನ ಹೆಂಡ್ತಿ ಎಲ್ಲಿ ಎಂದು ಹೇಳು.. ಇಲ್ಲ ಅಂದ್ರೆ ಕರುಳು ಬಗೆದು  ರಕ್ತ ಹೀರ್ತೀನಿ ಅಂತಾ ಹೇಳಿದ್ದಾನೆ.. ಇದನ್ನ ಜಾಹ್ನವಿ ಮರೆಯಲ್ಲೇ ನಿಂತು ಕೇಳಿಸಿಕೊಂಡಿದ್ದಾಳೆ.. ಇದೀಗ ವಿಶ್ವನ ಮನೆಯಲ್ಲಿ ಜಾಹ್ನವಿ ಇರುವ ವಿಷ್ಯ ಗೊತ್ತಾದ್ರೆ ಇನ್ನೊಂದು ಮಹಾ ಯುದ್ಧ ಆಗೋದು ಪಕ್ಕಾ.. ಸೈಕೋಪತಿ ವಿಶ್ವನನ್ನು ಸುಮ್ಮನೆ ಬಿಡೋದಿಲ್ಲ.

ಇನ್ನು ವಿಶ್ವ ಈಗಾಗಲೇ ಜಾಹ್ನವಿ ಬಳಿ ಜಯಂತ್‌ ನ ಬಗ್ಗೆ ಕೇಳಿದ್ದಾನೆ.. ಆಗ ಜಯಂತ್‌ ಮದುವೆ ಆದ್ಮೇಲೆ ಏನಾಯ್ತು.. ಆತ ಎಷ್ಟು ಕೆಟ್ಟವನು ಅಂತಾ ಹೇಳಿದ್ದಾಳೆ. ಇದೀಗ ವಿಶ್ವ ಜಾಹ್ನವಿಯನ್ನ ಕಾಪಾಡಲು ಹೋಗಿ ತೊಂದರೆಗೆ ಸಿಲುಕಿದ್ದಾನೆ. ಈಗ ವಿಶ್ವನನ್ನು ಕಾಪಾಡೋರು ಯಾರು? ವಿಶ್ವನನ್ನು ಕಾಪಾಡಲು ಹೋಗಿ ಜಾನು, ಜಯಂತ್‌ ಕಣ್ಣಿಗೆ ಬೀಳ್ತಾಳಾ? ಮತ್ತೆ ಚಿನ್ನುಮರಿ ಜಯಂತ್‌ ಮನೆಯಲ್ಲಿ ಬಂಧಿ ಆಗ್ತಾಳಾ ಅನ್ನೋ ಕ್ಯೂರಿಯಾಸಿಟಿ ಮೂಡಿದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿದೆ.

Shwetha M