ಏಷ್ಯಾಕಪ್ ಗೆ ಸ್ಫೋಟಕ ಓಪನರ್ ಅಭಿಷೇಕ್ – ಸ್ಟ್ರೈಕ್ ರೇಟ್.. ರನ್ಸ್.. ಶತಕದಲ್ಲೂ ಚರಿತ್ರೆ
ಅಭಿ-ಸಂಜು ಜೋಡಿ ಸಿಡಿದ್ರೆ ಕಪ್ ನಮ್ದೇ!

2024ರ ಟಿ-20 ವಿಶ್ವಕಪ್ನಲ್ಲಿ ಭಾರತ ತಂಡ ಚಾಂಪಿಯನ್ ಆದ್ಮೇಲೆ ಚುಟುಕು ಸಮರದಲ್ಲಿ ಪಾರುಪತ್ಯ ಕಂಟಿನ್ಯೂ ಆಗ್ತಿದೆ. ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್ ಆದ್ಮೇಲೆ 22 ಪಂದ್ಯಗಳನ್ನ ಆಡಿದ್ದು ಅದ್ರಲ್ಲಿ 17 ಮ್ಯಾಚ್ಗಳಲ್ಲಿ ವಿನ್ ಆಗಿದ್ದಾರೆ. ಕಳೆದೊಂದು ವರ್ಷದಿಂದ ಚುಟುಕು ಸಮರದ ಖಾಯಂ ಬ್ಯಾಟರ್ ಆಗಿರೋ ಅಭಿಷೇಕ್ ಶರ್ಮಾ ವರ್ಷದಿಂದ ವರ್ಷಕ್ಕೆ ತಮ್ಮ ಬ್ಯಾಟಿಂಗ್ ಸಮಾರ್ಥ್ಯವನ್ನ ಹೆಚ್ಚಿಸಿಕೊಳ್ತಾನೇ ಹೋಗ್ತಿದ್ದಾರೆ. ಹೀಗಾಗಿ ಈ ಬಾರಿಯ ಏಷ್ಯಾಕಪ್ ಟಿ-20 ಮಾದರಿಯಲ್ಲಿ ನಡೆಯೋದ್ರಿಂದ ಮೋಸ್ಟ್ ಪವರ್ಫುಲ್ ಬ್ಯಾಟರ್ ಆಗಿದ್ದಾರೆ. ಐಸಿಸಿಯ ಬ್ಯಾಟಿಂಗ್ ಶ್ರೇಯಾಂಕದಲ್ಲೂ ಸದ್ಯ ನಂಬರ್ 1 ಪ್ಲೇಸ್ನಲ್ಲಿದ್ದಾರೆ.
ಅಭಿಷೇಕ್ ಬ್ಯಾಟಿಂಗ್ ವೈಭವ!
2024 ರ ಐಪಿಎಲ್ ನಲ್ಲಿ ಹೈದ್ರಾಬಾದ್ ಪರ 484 ರನ್ ಕಲೆ ಹಾಕಿದ್ರು
204ರ ಸ್ಟ್ರೈಕ್ ರೇಟ್ ನಲ್ಲಿ, 2025ರಲ್ಲೂ 193ರ ಸ್ಟ್ರೇಕ್ ರೇಟ್ ನಲ್ಲಿ 439 ರನ್
ಪಂಜಾಬ್ ಕಿಂಗ್ಸ್ ವಿರುದ್ಧದ ಕೇವಲ 40 ಎಸೆತಗಳಲ್ಲಿ ಶತಕ ಪೂರೈಸಿದ್ದು
IPL ನಲ್ಲಿ ಭಾರತೀಯ ಬ್ಯಾಟರ್ನಿಂದ ಬಂದ ಮೂರನೇ ವೇಗದ ಶತಕ
55 ಎಸೆತಗಳಲ್ಲಿ 14 ಬೌಂಡರಿ, 10 ಸಿಕ್ಸರ್ಗಳೊಂದಿಗೆ 141 ರನ್ ಪೇರಿಸಿದ್ರು
2024ರ ಜುಲೈ 6ರಂದು ಜಿಂಬಾಬ್ ವಿರುದ್ಧದ ಪಂದ್ಯದ ಮೂಲಕ ಡೆಬ್ಯೂ
ನಾಲ್ಕು ಎಸೆತಗಳನ್ನ ಫೇಸ್ ಮಾಡಿ ಖಾತೆ ತೆರೆಯದೇ ಶೂನ್ಯಕ್ಕೆ ಔಟಾಗಿದ್ರು
47 ಎಸೆತಗಳಲ್ಲಿ 100 ರನ್, ಅಲ್ಲಿಂದ ಹಿಂತಿರುಗಿ ನೋಡಿದ್ದೇ ಇಲ್ಲ
ಭಾರತದ ಪರ 16 ಟಿ20ಐ ಇನ್ನಿಂಗ್ಸ್ ಗಳಲ್ಲಿ 535 ರನ್ ಗಳಿಸಿದ್ದಾರೆ
ಫೆಬ್ರವರಿ 2ರಂದು ಮುಂಬೈನ ವಾಂಖೆಡೆಯಲ್ಲಿ ಇಂಗ್ಲೆಂಡ್ ವಿರುದ್ಧ ಶತಕ
54 ಎಸೆತಗಳಲ್ಲೇ 135 ರನ್, ಭಾರತೀಯನ ಅತ್ಯಧಿಕ ವೈಯಕ್ತಿಕ T20I ಸ್ಕೋರ್
ಟಿ-20ಐ ಫಾರ್ಮೆಟ್ ಪಂದ್ಯಗಳ್ಲಲಿ ಭಾರತದ ಪರ ಅಭಿಷೇಕ್ ಇದ್ದೇ ಇರ್ತಾರೆ
ಇನ್ನು ಅಭಿಷೇಕ್ ಶರ್ಮಾ ಅವ್ರ ಇನ್ನೊಂದು ಸ್ಪೆಷಾಲಿಟಿ ಅಂದ್ರೆ ಟಿ-20ಐನಲ್ಲಿ ಸಂಜು ಸ್ಯಾಮ್ಸನ್ ಜೊತೆ ಓಪನಿಂಗ್ ನಲ್ಲಿ ಅದ್ಭುತ ಪಾರ್ಟ್ನರ್ ಶಿಪ್ ನೀಡೋದು. 2024ರ ಅಕ್ಟೋಬರ್ ನಲ್ಲಿ ಬಾಂಗ್ಲಾದೇಶ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿದ ಈ ಜೋಡಿ ಸತತ 12 ಪಂದ್ಯಗಳಲ್ಲಿ ಆರಂಭಿಕರಾಗಿ ಆಡಿದ್ದಾರೆ. ಬಹುತೇಕ ಎಲ್ಲಾ ಬಾರಿ ಭಾರತಕ್ಕೆ ಸ್ಪೋಟಕ ಆರಂಭವನ್ನು ನೀಡಿದ್ದಾರೆ. ಇಬ್ಬರು ಜೊತೆಯಾಗಿ ಇನ್ನಿಂಗ್ಸ್ ಆರಂಭಿಸೋಕೆ ಶುರು ಮಾಡಿರುವಂತ ಕಳೆದ 12 ಪಂದ್ಯಗಳಲ್ಲಿ ಇಬ್ರಿಬ್ಬರ ಅಂಕಿಅಂಶಗಳನ್ನ ನೋಡಿದ್ರೆ ಆಲ್ಮೋಸ್ಟ್ ಈಕ್ವಲ್ ಇದೆ.
ಅಭಿ & ಸಂಜು ಜೋಡೆತ್ತು!
ಆಟಗಾರ ಪಂದ್ಯಗಳು ರನ್ಸ್ ಸ್ಟ್ರೈಕ್ ರೇಟ್
ಅಭಿಷೇಕ್ ಶರ್ಮಾ 12 411 200.49
ಇನ್ನು ಅಭಿ ಮತ್ತು ಸಂಜು ನಡುವಿನ ಮತ್ತೊಂದು ಅಚ್ಚರಿಯ ವಿಚಾರ ಇದೆ. ಇವ್ರಿಬ್ಬರ ಜೋಡಿ ಓಪನರ್ಸ್ ಆದ್ಮೇಲೆ ಭಾರತ 12 ಪಂದ್ಯಗಳನ್ನ ಆಡಿದ್ದು 10ರಲ್ಲಿ ಗೆಲುವನ್ನ ಸಾಧಿಸಿದೆ. ಹೀಗಾಗೇ ಅಭಿಷೇಕ್ ಮತ್ತು ಸ್ಯಾಮ್ಸನ್ ಜೋಡಿ ಇತ್ತೀಚಿನ ವರ್ಷಗಳಲ್ಲಿ ಭಾರತದ ಅತ್ಯಂತ ವಿಶ್ವಾಸಾರ್ಹ T201 ಆರಂಭಿಕ ಜೋಡಿಯಾಗಿದೆ. ಸದ್ಯ ಟಿ-20 ಮಾದರಿಯಲ್ಲಿ ಭಾರತದ ಬ್ಯಾಟರ್ಗಳಲ್ಲಿ ಬೆಸ್ಟ್ ಪರ್ಫಾಮೆನ್ಸ್ ಕೊಡ್ತಿದ್ದಾರೆ. ಅದ್ರಲ್ಲೂ ಭಾರತದ ಪರ ಚುಟುಕು ಸಮರದಲ್ಲಿ ಅಭಿಷೇಕ್ ಶರ್ಮಾ ಟಿ20ಐ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ.
ಟ್ರಾವಿಸ್ ಹೆಡ್ ಹಿಂದಿಕ್ಕಿದ ಅಭಿಷೇಕ್ ಶರ್ಮಾ!
ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್ ಬಗ್ಗೆ ನಿಮ್ಗೆಲ್ಲಾ ಗೊತ್ತೇ ಇದೆ. ಒಂದ್ಸಲ ಕ್ರಿಸ್ ಕಚ್ಚಿ ನಿಂತ್ರೆ ಸಿಕ್ಸ್, ಫೋರ್ಗಳಿಗೆ ಲೆಕ್ಕನೇ ಸಿಗೋದಿಲ್ಲ. ಹೀಗಾಗೇ ಟಿ-20ಐ ಬ್ಯಾಟರ್ಗಳ ಐಸಿಸಿ ಶ್ರೇಯಾಂಕದಲ್ಲಿ ಯಾವಾಗ್ಲೂ ಫಸ್ಟೇ ಇರ್ತಿದ್ರು. ಬಟ್ ಇಂಥಾ ಹೆಡ್ಗೆ ಚಳ್ಳೆ ಹಣ್ಣು ತಿನ್ಸಿದ್ದು ಅಭಿಷೇಕ್ ಶರ್ಮಾ. ಪ್ರಸ್ತುತ ಐಸಿಸಿ ಟಿ20 ಬ್ಯಾಟರ್ಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಯುವ ಬ್ಯಾಟರ್ ಅಭಿಷೇಕ್ ಶರ್ಮಾ ನಂಬರ್ 1 ಪ್ಲೇಸ್ನಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಅಭಿ ಇದೀಗ 829 ಅಂಕಗಳನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಕಳೆದ ಬಾರಿ ಮೊದಲ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಅವರನ್ನು ಹಿಂದಿಕ್ಕಿ ಅಭಿಷೇಕ್ ಶರ್ಮಾ ಅಗ್ರಸ್ಥಾನಕ್ಕೇರಿದ್ದಾರೆ. ಈ ಮೂಲಕ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದ ಭಾರತದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿತ್ತು. ಕಿಂಗ್ ಕೊಹ್ಲಿ 2014 ರಲ್ಲಿ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದರು. 26ನೇ ವಯಸ್ಸಿನಲ್ಲಿ ಮೊದಲ ಸ್ಥಾನಕ್ಕೇರುವ ಮೂಲಕ ಟಿ20 ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನಕ್ಕೇರಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಕೊಹ್ಲಿ ಬರೆದಿದ್ದರು. ಈ ದಾಖಲೆಯನ್ನು ಅಭಿಷೇಕ್ ಶರ್ಮಾ ಅಳಿಸಿ ಹಾಕಿದ್ದಾರೆ. 24ನೇ ವಯಸ್ಸಿನಲ್ಲಿ ಮೊದಲ ಸ್ಥಾನಕ್ಕೇರುವ ಮೂಲಕ ಯುವ ಎಡಗೈ ದಾಂಡಿಗ ಟಿ20 ಕ್ರಿಕೆಟ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ನೋಡಿರಿ

