ನಮ್ಮ ಮೆಟ್ರೋದಲ್ಲಿ ಸೂಟ್‌ಕೇಸ್‌ಗೂ ಶುಲ್ಕ! – ದೊಡ್ಡ ಬ್ಯಾಗ್‌ ತೆಗೆದುಕೊಂಡು ಹೋಗುವ ಮುನ್ನ ಈ ವಿಚಾರ ತಿಳಿದುಕೊಳ್ಳಿ!  

ನಮ್ಮ ಮೆಟ್ರೋದಲ್ಲಿ ಸೂಟ್‌ಕೇಸ್‌ಗೂ ಶುಲ್ಕ! – ದೊಡ್ಡ ಬ್ಯಾಗ್‌ ತೆಗೆದುಕೊಂಡು ಹೋಗುವ ಮುನ್ನ ಈ ವಿಚಾರ ತಿಳಿದುಕೊಳ್ಳಿ!  

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮಧ್ಯಮ ವರ್ಗದ ಜನರು ಜೀವನ ಮಾಡೋದೆ ಕಷ್ಟವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಒಂದ್ಕಡೆಯಾದ್ರೆ, ಮತ್ತೊಂದ್ಕಡೆ ಬಸ್‌, ನಮ್ಮ ಮೆಟ್ರೋ ಟಿಕೆಟ್‌ ದರ ಕೂಡ ಹೆಚ್ಚಾಗಿದೆ. ನಮ್ಮ ಮೆಟೆಓ ದರ ಏರಿಕೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ನಮ್ಮ ಮೆಟ್ರೋದಲ್ಲಿ ಕೊಂಡಯ್ಯುವ ಬ್ಯಾಗ್​ಗೂ ಶುಲ್ಕ ಪಾವತಿಸಿ ಟಿಕೆಟ್​ ಪಡೆಯಬೇಕು ಎಂಬ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ.

ಇದನ್ನೂ ಓದಿ: ಭಾರತ-ಪಾಕ್ ಪಂದ್ಯಕ್ಕೆ 10 ಸೆಕೆಂಡ್ ಗೆ 16 ಲಕ್ಷ – ಏಷ್ಯಾಕಪ್ ನಲ್ಲಿ ಹಣದ ಹೊಳೆ!

ದೇಶದಲ್ಲೇ ಬೆಂಗಳೂರು ಮೆಟ್ರೋ ಅತ್ಯಂತ ದುಬಾರಿ ಎನ್ನುವ ಮಾತುಗಳು ಕೇಳಿ ಬರುತ್ತಿರುವ ಸಮಯದಲ್ಲೇ ಲಗೇಜ್‌ಗೂ ಶುಲ್ಕ ವಿಧಿಸಿರುವ ಈ ಕ್ರಮ ಜನಾಕ್ರೋಶಕ್ಕೆ ಕಾರಣವಾಗಿದೆ.   ಸೋಶಿಯಲ್‌ ಮೀಡಿಯಾದಲ್ಲಿ ಪ್ರಯಾಣಿಕರೊಬ್ಬರು ಲಗೇಜ್‌ಗೆ ಶುಲ್ಕ ವಿಧಿಸಿದ ಬಗ್ಗೆ ಪೋಸ್ಟ್‌ ಹಾಕಿದ್ದಾರೆ. ಪ್ರಯಾಣಿಕ ತನ್ನ ದೊಡ್ಡ ಗಾತ್ರದ ಬ್ಯಾಗ್​ ಅನ್ನು ಮೆಟ್ರೋ ರೈಲಿನಲ್ಲಿ ಕೊಂಡೊಯ್ಯಲು 30 ರೂ. ಶುಲ್ಕ ಪಾವತಿ ಮಾಡಿದ್ದಾರೆ. ಈ ಕುರಿತು ಪ್ರಯಾಣಿಕ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್​ ಹಾಕಿ ಬಿಎಂಆರ್​ಸಿಎಲ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಮೆಟ್ರೋ ರೈಲಿನಲ್ಲಿ ಬ್ಯಾಗ್​ ಕೊಂಡೊಯ್ಯಲು 30 ರೂ. ಶುಲ್ಕ ಪಾವತಿಸಬೇಕು ಎಂದು ಕೇಳಿ ನಾನು ದಿಗ್ಬ್ರಾಂತ​ನಾದೆ. ಬೆಂಗಳೂರು ನಮ್ಮ ಮೆಟ್ರೋ ಈಗಾಗಲೇ ದೇಶದಲ್ಲೇ ಅತ್ಯಂತ ದುಬಾರಿಯಾಗಿದೆ. ಬ್ಯಾಗ್​ಗೆ ಶುಲ್ಕ ಪಾವತಿ ಮಾಡುವುದು ಪ್ರಯಾಣಿಕರ ಮೇಲೆ ಮತ್ತಷ್ಟು ಹೊರೆಯಾಗುತ್ತದೆ. ಜನರು ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವುದನ್ನು ಬಿಎಂಆರ್​ಸಿಎಲ್ ಹೇಗೆ ತಡೆಯುತ್ತಿದೆ ಎಂಬುವುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂದ್ಹಾಗೆ ನಮ್ಮ ಮೆಟ್ರೋದಲ್ಲಿ ಒಬ್ಬ ವ್ಯಕ್ತಿ 60 ಸೆಂ.ಮೀ X 45 ಸೆಂ ಮೀ X 25 ಸೆಂ ಮೀ (ಉದ್ದ X ಅಗಲ X ಎತ್ತರ) 15 ಕೆಜಿ ಒಳಗಿನ ಬ್ಯಾಗ್​ ಅನ್ನು ಉಚಿತವಾಗಿ ಕೊಂಡೊಯ್ಯಲು ಅವಕಾಶವಿದೆ. ಒಂದು ವೇಳೆ ಪ್ರಯಾಣಿಕರು ಹೆಚ್ಚುವರಿ ಬ್ಯಾಗ್​ /ಹೆಚ್ಚುವರಿ ಬ್ಯಾಗ್​ ಮತ್ತು ದೊಡ್ಡ ಗಾತ್ರದ ಬ್ಯಾಗ್​ ಅನ್ನು ಕೊಂಡೊಯ್ಯಲು ಪ್ರತಿ ಬ್ಯಾಗ್​ಗೆ 30 ರೂ. ಶುಲ್ಕ ಪಾವತಿಸಿ ಟಿಕೆಟ್​ ಪಡೆಯಬೇಕು. ಈ ಲಗೇಜ್ ಟಿಕೆಟ್ ಅನ್ನು ಗ್ರಾಹಕ ಸೇವಾ ಕೇಂದ್ರದಲ್ಲಿ ಖರೀದಿಸಬಹುದು  ಎಂದು ನಮ್ಮ ಮೆಟ್ರೋ ನಿಯಮಗಳಲ್ಲಿ ಇದೆ.

ಬ್ಯಾಗ್ಟಿಕೆಟ್ಪಡೆಯದಿದ್ದರೆ ಎಷ್ಟು ದಂಡ?

ಹೆಚ್ಚುವರಿ ಬ್ಯಾಗ್​ಗೆ ಟಿಕೆಟ್ ಖರೀದಿಸದಿದ್ದರೆ, ರೂ. 250 ದಂಡ ವಿಧಿಸಲಾಗುತ್ತದೆ. ಹೆಚ್ಚುವರಿ ಬ್ಯಾಗ್​ಗೆ ಶುಲ್ಕ ಪಾವತಿಸದೆ ಪ್ರಯಾಣಿಸುವಾಗ, ಮೆಟ್ರೋ ರೈಲ್ವೆ ಆಡಳಿತ ಮಂಡಳಿಯ ಯಾವುದೇ ಅಧಿಕಾರಿ ಆ ಪ್ರಯಾಣಿಕನನ್ನು ರೈಲಿನಿಂದ ಹೊರಗೆ ಕಳುಹಿಸುವ ಅಧಿಕಾರ ಹೊಂದಿದ್ದಾರೆ ಎಂದು ನಿಯಮದಲ್ಲಿ ಉಲ್ಲೇಖಿಸಲಾಗಿದೆ.

Shwetha M