ಸು ಫ್ರಮ್‌ ಸೋ ಚಿತ್ರದ ತಮಿಳು ರಿಮೇಕ್ ಹಕ್ಕು ಸೇಲ್‌! -ದಾಖಲೆ ಮೊತ್ತಕ್ಕೆ ಖರೀದಿಸಿದ ಪುನೀತ್ ರಾಜ್‌ಕುಮಾರ್‌ ಚಿತ್ರದ ನಿರ್ಮಾಪಕ

ಸು ಫ್ರಮ್‌ ಸೋ ಚಿತ್ರದ ತಮಿಳು ರಿಮೇಕ್ ಹಕ್ಕು ಸೇಲ್‌! -ದಾಖಲೆ ಮೊತ್ತಕ್ಕೆ ಖರೀದಿಸಿದ ಪುನೀತ್ ರಾಜ್‌ಕುಮಾರ್‌ ಚಿತ್ರದ ನಿರ್ಮಾಪಕ

ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ‘ಸು ಫ್ರಮ್ ಸೋ’ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಕಾಣುತ್ತಾ ಸಾಗಿದೆ. ದಿನ ಕಳೆದಂತೆಯೂ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಕರೆಸುವಲ್ಲಿ ಯಶಸ್ವಿಯಾಗಿದೆ. ಜೆಪಿ ತುಮಿನಾಡ್ ನಿರ್ದೇಶನದ ಈ ಚಿತ್ರವು ಕೆಲವೇ ಕನ್ನಡ ಚಿತ್ರಗಳು ಕಂಡ ದಾಖಲೆಯನ್ನು ಮುಟ್ಟಿದೆ. ಇದೀಗ ಈ ಸಿನಿಮಾ ತಮಿಳು ಭಾಷೆಗೆ ರಿಮೇಕ್‌ ಆಗ್ತಿದ್ದು, ಅದ್ರ ಹಕ್ಕು ಮಾರಾಟ ಆಗಿದೆ. ಪುನೀತ್‌ ರಾಜ್‌ ಕುಮಾರ್‌ ಚಿತ್ರದ ನಿರ್ಮಾಪಕ ಈ ಸಿನಿಮಾದ ರಿಮೇಕ್‌ ರೈಟ್‌ ಅನ್ನ ದಾಖಲೆ ಮೊತ್ತಕ್ಕೆ ಖರೀದಿಸಿದ್ದಾರೆ.

ಸು ಫ್ರಮ್ ಸೋ ಚಿತ್ರ ಸೂಪರ್ ಹಿಟ್ ಆಗಿದೆ. ಕನ್ನಡ ಮಾತ್ರವಲ್ಲದೆ, ತೆಲುಗು ಹಾಗೂ ಮಲಯಾಳಂನಲ್ಲೂ ಸಿನಿಮಾ ಮೆಚ್ಚುಗೆ ಪಡೆದಿದೆ. ಈ ಚಿತ್ರ ತಮಿಳಿಗೆ ರಿಮೇಕ್ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಈಗ ಆ ಮಾತುಕತೆ ಫೈನಲ್ ಆಗಿದೆ. ದೊಡ್ಡ ಮೊತ್ತಕ್ಕೆ ಎನ್​ಎಸ್ ರಾಜ್​ಕುಮಾರ್ ಅವರು ಸು ಫ್ರಮ್ ಸೋ ಚಿತ್ರದ ತಮಿಳು ರಿಮೇಕ್ ಹಕ್ಕನ್ನು ಪಡೆದಿದ್ದಾರೆ.

ಇದನ್ನೂ ಓದಿ: ಭಾರತ ಮತ್ತು ಚೀನಾ ಮತ್ತೆ ದೋಸ್ತಿ – ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಭಾರತಕ್ಕೆ ಭೇಟಿ

‘ಸು ಫ್ರಮ್ ಸೋ’ ಚಿತ್ರವನ್ನು ರಾಜ್​ ಬಿ ಶೆಟ್ಟಿ ಅವರ ‘ಲೈಟರ್ ಬುದ್ಧ ಫಿಲ್ಮ್ಸ್’ ಮೂಲಕ ನಿರ್ಮಾಣ ಮಾಡಲಾಗಿದೆ. ಈ ಚಿತ್ರ ಆರಂಭದಲ್ಲಿ ಕನ್ನಡದಲ್ಲಿ ಮಾತ್ರ ರಿಲೀಸ್ ಆಯಿತು. ಆ ಬಳಿಕ ಚಿತ್ರ ಮಲಯಾಳಂನಲ್ಲಿ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ತೆಲುಗು ಮಂದಿ ಕೂಡ ಚಿತ್ರವನ್ನು ಇಷ್ಟಪಟ್ಟರು. ಈ ಸಿನಿಮಗೆ ಜೆಪಿ ತುಮಿನಾಡ್ ನಿರ್ದೇಶನ ಇದೆ. ಅವರು ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಶನೀಲ್ ಗೌತಮ್, ಸಂಧ್ರ ಅರಕೆರೆ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಜೆ ನಟಿಸಿದ್ದಾರೆ.

ಸದ್ಯ ಎನ್​ಎಸ್ ರಾಜ್​ಕುಮಾರ್ ಅವರು ‘ಸು ಫ್ರಮ್ ಸೋ’ ತಮಿಳು ಹಕ್ಕನ್ನು ಪಡೆದಿದ್ದಾರೆ. ಅವರು ಕನ್ನಡದಲ್ಲಿ ‘ಮೈನಾ’, ‘ಮೈತ್ರಿ’, ‘ಪೃಥ್ವಿ’ ರೀತಿಯ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. 60ಕ್ಕೂ ಹೆಚ್ಚು ಚಿತ್ರಗಳನ್ನು ಅವರು ಹಂಚಿಕೆ ಮಾಡಿದ್ದಾರೆ. ಅವರು ದೊಡ್ಡ ಮೊತ್ತಕ್ಕೆ ‘ಸು ಫ್ರಮ್ ಸೋ’ ಹಕ್ಕನ್ನು ಖರೀದಿ ಮಾಡಿದ್ದಾರೆ. ‘ಸು ಫ್ರಮ್ ಸೋ’ ಸಿನಿಮಾನ ತಮಿಳಿಗೆ ಡಬ್ ಮಾಡುವ ಬದಲು ಆ ಭಾಷೆಗೆ ರಿಮೇಕ್ ಮಾಡಿದರೆ ಹೆಚ್ಚು ಸೂಕ್ತ ಎಂದು ತಂಡದವರು ನಿರ್ಧರಿಸಿತ್ತು. ಈಗ ಸೂಕ್ತ ಎನಿಸಿದವರಿಗೆ ಹಕ್ಕನ್ನು ಮಾರಲಾಗಿದೆ. ಸಿನಿಮಾದ ಪಾತ್ರವರ್ಗ, ತಾಂತ್ರಿಕ ತಂಡದ ಬಗ್ಗೆ ಶೀಘ್ರವೇ ಘೋಷಣೆ ಆಗಲಿದೆ.

Shwetha M