ಓಂ ಹಂ ಹನುಮತೇ ನಮಃ – ಮಂಗಳವಾರ ಈ ಮತ್ರ ಪಠಿಸಿದ್ರೆ ಏನೆಲ್ಲಾ ಲಾಭ ಗೊತ್ತಾ?

ಆಂಜನೇಯನನ್ನ ನಾವು ಯಾವ ದಿನ ಬೇಕಾದ್ರೂ ಪೂಜೆ ಮಾಡಬಹುದು.. ಅದರಲ್ಲೂ ನೀವು ಮಂಗಳವಾರದ ದಿನದಂದು ಆಂಜನೇಯ ಸ್ವಾಮಿಯನ್ನು ಪೂಜಿಸಿ ಸರಳವಾದ ಮಂತ್ರವನ್ನು ಪಠಿಸಿದ್ರೆ ಕಷ್ಟಗಳು ದೂರವಾಗುತ್ತೆ.
ಮಂಗಳವಾರದ ದಿನದಂದು ಆಂಜನೇಯ ಸ್ವಾಮಿಯನ್ನು ಪೂಜಿಸುವುದು ವಿಶೇಷ ಮಹತ್ವವನ್ನು ಹೊಂದಿದೆ. ಈ ದಿನ ಯಾವ ವ್ಯಕ್ತಿ ಶುದ್ಧವಾದ ಮನಸ್ಸಿನಿಂದ ಆಂಜನೇಯ ಸ್ವಾಮಿಯನ್ನು ಪೂಜಿಸುತ್ತಾನೋ ಆ ವ್ಯಕ್ತಿಯು ತನ್ನೆಲ್ಲಾ ಕಷ್ಟಗಳಿಂದ ಶೀಘ್ರದಲ್ಲೇ ಪರಿಹಾರವನ್ನು ಪಡೆದುಕೊಳ್ಳುತ್ತಾನೆ ಎಂದು ಶಾಸ್ತ್ರ ಹೇಳುತ್ತೆ. ಮಂಗಳವಾರದ ದಿನದಂದು ಆಂಜನೇಯ ಸ್ವಾಮಿಯನ್ನು ಪೂಜಿಸುವುದರ ಜೊತೆಗೆ ಈ ಮಂತ್ರಗಳನ್ನು ಪಠಿಸುವುದು ಪ್ರಯೋಜನಕಾರಿಯಾಗಿದೆ. ಆಂಜನೇಯ ಸ್ವಾಮಿಯ ಈ ಮಂತ್ರಗಳನ್ನು ಪಠಿಸುವುದರಿಂದ ಆತನು ನಮ್ಮ ಮೇಲೆ ಶೀಘ್ರದಲ್ಲೇ ಸಂತುಷ್ಟನಾಗುತ್ತಾನೆ. ಧೈರ್ಯ, ಶಕ್ತಿ, ರಕ್ಷಣೆ ಮತ್ತು ಮಾನಸಿಕ ಸ್ಪಷ್ಟತೆಯನ್ನು ಕಂಡುಕೊಳ್ಳುತ್ತಾನೆ. ಇದರಿಂದ ವ್ಯಕ್ತಿಯ ಇಷ್ಟಾರ್ಥಗಳೆಲ್ಲಾ ಈಡೇರುವುದು. ಆಂಜನೇಯ ಸ್ವಾಮಿಯ ಮಂತ್ರವು ಭಕ್ತರಿಗೆ ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ನೀಡುವುದಲ್ಲದೇ, ನಕಾರಾತ್ಮಕ ಶಕ್ತಿಯನ್ನು ದೂರಾಗಿಸುವುದು. ಮಂಗಳವಾರದ ದಿನದಂದು ನಾವು ಆಂಜನೇಯ ಸ್ವಾಮಿಯ ಯಾವ ಮಂತ್ರ ಪಠಿಸಬೇಕು ಎಂಬುದನ್ನು ತಿಳಿಯೋಣ.
ಓಂ ಹಂ ಹನುಮತೇ ನಮಃ
ಇದು ಆಂಜನೇಯ ಸ್ವಾಮಿಗೆ ಸಮರ್ಪಿತವಾದ ಒಂದು ಅದ್ಭುತವಾದ ಮಂತ್ರವಾಗಿದೆ. ಇದು ಓದುವುದಕ್ಕೆ ನೋಡುವುದಕ್ಕೆ ಪುಟ್ಟ ಮಂತ್ರವೆನಿಸಿದರೂ ಇದು ಪಠಿಸುವ ವ್ಯಕ್ತಿಯ ಜೀವನದಲ್ಲಿ ಪವಾಡವನ್ನೇ ಸೃಷ್ಟಿಸುತ್ತದೆ. ಯಾವ ವ್ಯಕ್ತಿ ಈ ಮಂತ್ರವನ್ನು ಪಠಿಸುತ್ತಾನೋ ಅವನ ಇಷ್ಟಾರ್ಥಗಳೆಲ್ಲವೂ ಈಡೇರುವುದು. ಓಂ ಎನ್ನುವುದು ಬ್ರಹ್ಮಾಂಡವನ್ನೇ ಪ್ರತಿನಿಧಿಸುವ ಶಬ್ಧವಾಗಿದೆ. – ಹಂ: ಇದು ಬೀಜ ಮಂತ್ರವಾಗಿದೆ. – ಹನುಮತೇ: ಇದು ಆಂಜನೇಯ ಸ್ವಾಮಿಯ ನಾಮವನ್ನು ಸ್ಮರಿಸುವುದಾಗಿದೆ. – ನಮಃ: ಇದರರ್ಥ ನಮಸ್ಕಾರವನ್ನು ಮಾಡುವುದಾಗಿದೆ. ಒಟ್ಟಾರೆಯಾಗಿ ಓಂ ಹಂ ಹನುಮತೇ ನಮಃ ಎನ್ನುವ ಮಂತ್ರದ ಅರ್ಥವೇನೆಂದರೆ, ನಾನು ಹನುಮಂತನಿಗೆ ನಮಸ್ಕರಿಸುತ್ತಿದ್ದೇನೆ ಎಂಬುದಾಗಿದೆ.
ಈ ಮಂತ್ರವನ್ನು ನೀವು ಮಂಗಳವಾರದ ದಿನದಂದು ಜಪಿಸುವುದು ಉತ್ತಮ. ಮಂಗಳವಾರದ ದಿನದಂದು ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ. ಶುದ್ಧವಾದ ಬಟ್ಟೆಯನ್ನು ಧರಿಸಬೇಕು. ಶಾಂತವಾದ ಹಾಗೂ ಪವಿತ್ರವಾದ ಸ್ಥಳದಲ್ಲಿ ಕುಳಿತುಕೊಳ್ಳಿ. – ಮುಂಜಾನೆ ಮತ್ತು ಸಂಜೆ ಯಾವುದೇ ಸಮಯದಲ್ಲಿ ಬೇಕಾದರೂ ನೀವು ಈ ಮಂತ್ರವನ್ನು ಪಠಿಸಬಹುದಾಗಿದೆ. ರುದ್ರಾಕ್ಷಿ ಅಥವಾ ತುಳಸಿ ಮಾಲೆಯನ್ನು ಹಿಡಿದು ಈ ಮಂತ್ರವನ್ನು ಪಠಿಸಬಹುದು. ಕನಿಷ್ಟ 108 ಬಾರಿಯಾದರೂ ನೀವು ಈ ಮಂತ್ರವನ್ನು ಪಠಿಸಬೇಕು. – ಮಂತ್ರವನ್ನು ಪಠಿಸುವ ಮಧ್ಯದಲ್ಲಿ ಯಾರೊಂದಿಗೂ ಮಾತನಾಡಬಾರದು.

ನೋಡಿರಿ

