ಭಾರತ-ಪಾಕ್ ಪಂದ್ಯಕ್ಕೆ 10 ಸೆಕೆಂಡ್ ಗೆ 16 ಲಕ್ಷ – ಏಷ್ಯಾಕಪ್ ನಲ್ಲಿ ಹಣದ ಹೊಳೆ!

ಭಾರತ-ಪಾಕ್ ಪಂದ್ಯಕ್ಕೆ 10 ಸೆಕೆಂಡ್ ಗೆ 16 ಲಕ್ಷ – ಏಷ್ಯಾಕಪ್ ನಲ್ಲಿ ಹಣದ ಹೊಳೆ!

ಏಷ್ಯಾಕಪ್ ಟೂರ್ನಿ ಸೆಪ್ಟೆಂಬರ್ 9ರಿಂದ ಆರಂಭವಾಗಲಿದ್ದು 28ಕ್ಕೆ ಕೊನೆಗೊಳ್ಳಲಿದೆ. ಭಾರತ ತನ್ನ ಮೊದಲ ಪಂದ್ಯವನ್ನ ಸೆಪ್ಟೆಂಬರ್​ 10 ರಂದು ಯುಎಇ ವಿರುದ್ಧ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಡಲಿದೆ. ನಂತರ, ಸೆಪ್ಟೆಂಬರ್ 14 ರಂದು ಪಾಕಿಸ್ತಾನವನ್ನು ಎದುರಿಸಲಿದ್ದು, ಸೆಪ್ಟೆಂಬರ್ 19 ಒಮನ್ ವಿರುದ್ಧ ಗ್ರೂಪ್​ ಹಂತದ ಮೂರನೇ ಪಂದ್ಯ ಆಡಲಿದೆ. ಅದ್ರಲ್ಲೂ ಯಾವುದೇ ಟೂರ್ನಿಯಲ್ಲೂ ಭಾರತ-ಪಾಕ್ ನಡುವಿನ ಪಂದ್ಯಗಳು ಅಂದ್ರೆ ಮೊದ್ಲಿಂದಲೂ ಡಿಮ್ಯಾಂಡ್ ಇದ್ದದ್ದೇ. ಇದೇ ಬೇಡಿಕೆ ಏಷ್ಯಾಕಪ್​ನಲ್ಲೂ ಕಂಟಿನ್ಯೂ ಆಗ್ತಿದೆ. ಈ  ಬಾರಿ ಏಷ್ಯಾಕಪ್​ನಲ್ಲಿ ಉಭಯ ತಂಡಗಳು ಒಟ್ಟಾರೆಯಾಗಿ ಮೂರು ಬಾರಿ ಮುಖಾಮುಖಿ ಆಗೋಕೆ ಚಾನ್ಸ್ ಇದೆ. ಬಟ್ ಭಾರತ-ಪಾಕ್ ಪಂದ್ಯ ಇದ್ದಷ್ಟೂ ಪ್ರಸಾರಕರಿಗೆ ಹಣದ ಹೊಳೆಯೇ ಹರಿದು ಬರುತ್ತೆ. ಇದನ್ನೇ ಬಂಡವಾಳ ಮಾಡಿಕೊಂಡು ಭರ್ಜರಿ ರೇಟ್ ಹಾಕುತ್ತಿದ್ದಾರೆ.

ಇದನ್ನೂ ಓದಿ : ಏಷ್ಯಾಕಪ್ ಗಿಲ್ಲ ಶುಭ್ ಮನ್ ಗಿಲ್ & ಸಿರಾಜ್? – ಓಪನರ್ಸ್ ಫಿಕ್ಸ್.. ಕೀಪರ್ ಫೈನಲ್!

ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ 2031 ರವರೆಗಿನ ಏಷ್ಯಾಕಪ್‌ ಪ್ರಸಾರ ಹಕ್ಕುಗಳನ್ನು 170 ಮಿಲಿಯನ್‌ ಡಾಲರ್​ಗೆ ಪಡೆದುಕೊಂಡಿದೆ. ಪಂದ್ಯಾವಳಿಯನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ಇನ್ನು ಏಷ್ಯಾಕಪ್​ನಲ್ಲಿ ಭಾರತದ ಪಂದ್ಯಗಳ ನಡುವಿನ ಜಾಹೀರಾತು ದರವನ್ನು ನಿಗದಿಪಡಿಸಿದೆ. 10 ಸೆಕೆಂಡ್​ನ ಜಾಹೀರಾತುಗಾಗಿ 14 ರಿಂದ 16 ಲಕ್ಷದವರೆಗೆ ಬೆಲೆ ನಿಗದಿ ಪಡಿಸಿದೆ. ಇದರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್​ ಪಂದ್ಯವೂ ಸೇರಿದೆ. ಅದರಲ್ಲೂ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ತಮ್ಮ ಜಾಹೀರಾತುಗಳನ್ನು ಬಿತ್ತರಿಸಲು ಕೋಟಿ ಕೋಟಿ ಹಣವನ್ನು ಹರಿಸಬೇಕಿದೆ. ಪ್ರಾಯೋಜಕತ್ವವನ್ನು ಪ್ರಸ್ತುತಪಡಿಸಲು ಬರೋಬ್ಬರಿ 18 ಕೋಟಿ ರೂ.ಗಳನ್ನು ಪಾವತಿಸಬೇಕಾಗುತ್ತದೆ. ಇದರ ಜೊತೆಗೆ ಸಹಾಯಕ ಪ್ರಾಯೋಜಕತ್ವಕ್ಕಾಗಿ ಬರೋಬ್ಬರಿ 13 ಕೋಟಿ ನೀಡಬೇಕಿದೆ. ಡಿಜಿಟಲ್ ಜಾಹೀರಾತು ಸ್ಥಳದ ಶೇಕಡಾ 30ರಷ್ಟನ್ನು ಭಾರತದ ಪಂದ್ಯಗಳಿಗೆ ಕಾಯ್ದಿರಿಸಲಾಗಿದೆ.

ಇನ್ನು ಪೆಹಲ್ಗಾಮ್ ಅಟ್ಯಾಕ್ ಆದ್ಮೇಲೆ ಉಭಯ ತಂಡಗಳ ನಡುವಿನ ಮೊದಲ ಪಂದ್ಯ ಇದೆ. ಕಾಶ್ಮೀರದಲ್ಲಿ ನಡೆದ ದಾಳಿಯಿಂದಾಗಿ ಪಾಕಿಸ್ತಾನ ವಿರುದ್ಧದ ಕ್ರಿಕೆಟ್ ಪಂದ್ಯಗಳನ್ನೂ ಆಡಡಬಾರದು ಅನ್ನೋ ಆಗ್ರಹ ಕೇಳಿ ಬಂದಿದೆ. ಅದ್ರಲ್ಲೂ ಚಾಂಪಿಯನ್ಸ್ ಲೀಗ್ಸ್​ನಲ್ಲೂ ಭಾರತದ ಆಟಗಾರರು ಪಾಕ್ ವಿರುದ್ಧದ ಪಂದ್ಯಗಳನ್ನ ಆಡೋಕೆ ನಿರಾಕರಿಸಿದ್ರು. ಬಟ್ ಏಷ್ಯಾಕಪ್​ನಲ್ಲಿ ಭಾರತ ಈ ನಿರ್ಧಾರ ಕೈಗೊಳ್ಳಲ್ಲ. ಅಂದ್ರೆ ಬಿಸಿಸಿಐ ನಿರ್ಧಾರದಂತೆಯೇ ಟೂರ್ನಿಯಲ್ಲಿ ಆಡ್ತಾರೆ. ಹೀಗಾಗಿ ಈ ಬಾರಿ ಕಮರ್ಷಿಯಲ್ ರೇಟ್ ಇನ್ನೂ ಜಾಸ್ತಿಯಾಗಿದೆ. ಒಟ್ಟಾರೆಯಾಗಿ ಈ ಬಾರಿಯ ಏಷ್ಯಾಕಪ್‌ನಲ್ಲಿ ಒಟ್ಟು ಎಂಟು ತಂಡಗಳು ಕಣಕ್ಕಿಳಿಯುತ್ತಿವೆ. ಇದರಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಹಾಂಕಾಂಗ್, ಯುಎಇ ಮತ್ತು ಓಮನ್ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಓಮನ್​ ಮತ್ತು ಯುಎಇ ತಂಡಗಳಿದ್ದರೆ, ಗ್ರೂಪ್​ ಬಿನಲ್ಲಿ ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಹಾಂಕಾಂಗ್​ ತಂಡಗಳಿವೆ. ಹಾಲಿ ಚಾಂಪಿಯನ್ ಆಗಿರೋ ಭಾರತ ಈ ಸಲವೂ ಟ್ರೋಫಿ ಗೆಲ್ಲೋ ಗುರಿಯೊಂದಿಗೆ ಕಣಕ್ಕಿಳಿಯಲಿದೆ.

Shantha Kumari