ಏಷ್ಯಾಕಪ್ ಗಿಲ್ಲ ಶುಭ್ ಮನ್ ಗಿಲ್ & ಸಿರಾಜ್? – ಓಪನರ್ಸ್ ಫಿಕ್ಸ್.. ಕೀಪರ್ ಫೈನಲ್!
T-20ಯಲ್ಲಿ ಸಿಡಿದ್ರೂ KL ಡ್ರಾಪ್

ಸೆಪ್ಟೆಂಬರ್ 9ರಿಂದ ಶುರುವಾಗಲಿರೋ ಏಷ್ಯಾಕಪ್ ಟೂರ್ನಿಗೆ ಮಂಗಳವಾರ ಅಥವಾ ಬುಧವಾರ ಟೀಂ ಇಂಡಿಯಾ ಅನೌನ್ಸ್ ಆಗಬಹುದು. ಅದೂ ಅಲ್ದೇ ಏಷ್ಯಾಕಪ್ ಟೂರ್ನಿ ಟಿ-20 ಮಾದರಿಯಲ್ಲಿ ನಡೆಯುತ್ತಿರೋದ್ರಿಂದ ಆಟಗಾರರ ಆಯ್ಕೆಯಲ್ಲಿ ಸಾಕಷ್ಟು ಗೊಂದಲಗಳು ಕ್ರಿಯೇಟ್ ಆಗ್ತಿವೆ. ಯಾಕಂದ್ರೆ ಏಷ್ಯಾಕಪ್ ಟೂರ್ನಿ ಮುಗಿದ ಬೆನ್ನಲ್ಲೇ ವೆಸ್ಟ್ ಇಂಡೀಸ್ ವಿರುದ್ದದ ಟೆಸ್ಟ್ ಸರಣಿ ಆರಂಭವಾಗುತ್ತೆ. ಸೋ ಟಿ-20 ಹಾಗೇ ಟೆಸ್ಟ್ ಆಡುವಂತ ಸ್ಟಾರ್ ಪ್ಲೇಯರ್ಗಳನ್ನ ಡಿವೈಡ್ ಮಾಡಲಾಗ್ತಿದೆ. ಹೀಗಾಗಿ ಫೈನಲ್ ಟೀಂ ಔಟ್ಪುಟ್ ಕೊಡೋದು ಕೂಡ ಡಿಲೇ ಆಗ್ತಿದೆ.
ಇದನ್ನೂ ಓದಿ : ಅಭಿ Vs ಸಂಜು Vs ಕೆಎಲ್ Vs ಗಿಲ್ – ಏಷ್ಯಾಕಪ್ ಟೂರ್ನಿಗೆ ಓಪನರ್ಸ್ ರೇಸ್
ಶುಭ್ ಮನ್ ಗಿಲ್ ಮತ್ತು ಸಿರಾಜ್ ಗಿಲ್ಲ ಏಷ್ಯಾಕಪ್ ಟೂರ್ನಿ?
ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಟೆಸ್ಟ್ ತಂಡದ ನಾಯಕ ಶುಭ್ಮಲ್ ಗಿಲ್ ಅವರಿಗೆ ಏಷ್ಯಾ ಕಪ್ ತಂಡದಲ್ಲಿ ವೈಸ್ ಕ್ಯಾಪ್ಟನ್ಸಿ ಕೊಡ್ತಾರೆ ಅನ್ನೋ ಟಾಕ್ ಇದೆ. ಬಟ್ ಅಪ್ಡೇಟ್ ನ್ಯೂಸ್ ಏನಂದ್ರೆ ಗಿಲ್ ತಂಡಕ್ಕೆ ಆಯ್ಕೆ ಆಗೋದೇ ಡೌಟಿದೆ. ಹಾಗೇ ಇಂಗ್ಲೆಂಡ್ ಪ್ರವಾಸದಲ್ಲಿ ಹೈಯೆಸ್ಟ್ ವಿಕೆಟ್ ಟೇಕರ್ ಆಗಿದ್ದ ಮೊಹಮ್ಮದ್ ಸಿರಾಜ್ ರನ್ನೂ ಕೈಬಿಡೋ ಸಾಧ್ಯತೆ ಇದೆ.
ಗಿಲ್ & ಸಿರಾಜ್ ಔಟ್?
ಇನಿಂಗ್ಸ್ ಆರಂಭಿಸುವುದು ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ
ಹೆಚ್ಚುವರಿ ಆರಂಭಿಕನಾಗಿ ಯಶಸ್ವಿ ಜೈಸ್ವಾಲ್ ಅವರನ್ನು ಆಯ್ಕೆ ಸಾಧ್ಯತೆ
ಜೈಸ್ವಾಲ್ ತಂಡದಲ್ಲಿ ಕಾಣಿಸಿಕೊಂಡರೂ ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ
ಶುಭ್ ಮನ್ ಗಿಲ್ ರನ್ನು ಯಾವ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂಬುದೇ ಪ್ರಶ್ನೆ
ಮೂರನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ, ಬ್ಯಾಕ್ ಟು ಬ್ಯಾಕ್ ಸೆಂಚುರಿ
ನಾಲ್ಕನೇ ಕ್ರಮಾಂಕಕ್ಕೆ ನಾಯಕ ಸೂರ್ಯಕುಮಾರ್ ಯಾದವ್ ಇದ್ದಾರೆ
ರೋಹಿತ್ ಶರ್ಮಾ ಟಿ20ಯಿಂದ ನಿವೃತ್ತಿ ನಂತರ ಸೂರ್ಯಕುಮಾರ್ ನಾಯಕತ್ವ
ಮೊಹಮ್ಮದ್ ಸಿರಾಜ್ ರನ್ನ ಕೈಬಿಟ್ಟು ಹರ್ಷಿತ್ ರಾಣಾ ಅಥವಾ ಪ್ರಸಿದ್ಧ್ ಕೃಷ್ಣ
2ನೇ ವಿಕೆಟ್ ಕೀಪರ್ ಆಗಿ ಬೆಂಗಳೂರು ತಂಡದ ಆಟಗಾರ ಜಿತೇಶ್ ಶರ್ಮಾ
ಜಿತೇಶ್ ಶರ್ಮಾ ದ್ವಿತೀಯ ಕೀಪರ್ ಆಗಿ ಭಾರತ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ
ಇನ್ನು ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಕೆಎಲ್ ರಾಹುಲ್ ಹೆಸರು ಮಾತ್ರ ಚರ್ಚೆಗೆ ಬರ್ತಿಲ್ಲ. ಯಾಕಂದ್ರೆ ಕೆಎಲ್ ರಾಹುಲ್ ಕಳೆದ ಮೂರು ವರ್ಷಗಳಿಂದ ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿಲ್ಲ. ಐಪಿಎಲ್ನಲ್ಲಿ ಮಾತ್ರ ಆಡುತ್ತಿದ್ದಾರೆ. 2024 ರ ಟಿ20 ವಿಶ್ವಕಪ್ನ ಭಾಗವೂ ಆಗಿರಲಿಲ್ಲ. ಆದ್ದರಿಂದ ಅವರನ್ನು ಏಷ್ಯಾ ಕಪ್ಗೆ ಆಯ್ಕೆ ಮಾಡಿರುವುದು ಅನುಮಾನ. ಕೆಎಲ್ ರಾಹುಲ್ 2024 ಮತ್ತು 2025 ರ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. 2024 ರಲ್ಲಿ 520 ರನ್ ಗಳಿಸಿದರು. ಮತ್ತು 2025ರ ಐಪಿಎಲ್ನಲ್ಲಿ ಅವರು 539 ರನ್ ಗಳಿಸಿದರು. ಇದರಲ್ಲಿ ಒಂದು ಶತಕ ಮತ್ತು 3 ಅರ್ಧಶತಕಗಳು ಸೇರಿವೆ. ಬಟ್ ಟಿ-20ಐನಲ್ಲಿ ಮಾತ್ರ ಚಾನ್ಸ್ ಸಿಗ್ತಿಲ್ಲ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಮಂಗಳವಾರ ಮುಂಬೈನಲ್ಲಿ ಸಭೆ ನಡೆಸಲಿದ್ದು ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಹೀಗೆ ಭಾರತ ತಂಡದಲ್ಲಿ ಯಾರನ್ನೆಲ್ಲಾ ಫೈನಲ್ ಮಾಡೋದು ಅನ್ನೋ ಟೆನ್ಷನ್ ನಲ್ಲಿದ್ರೆ ಅತ್ತ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಆಲ್ರೆಡಿ ಟೀಂ ಅನೌನ್ಸ್ ಮಾಡಿದೆ. ಶಾಕಿಂಗ್ ವಿಚಾರ ಅಂದ್ರೆ ಸ್ಟಾರ್ ಆಟಗಾರರನ್ನೇ ಕೈಬಿಟ್ಟು ತಂಡವನ್ನ ಘೋಷಣೆ ಮಾಡಿದೆ.
ಬಾಬರ್ ಮತ್ತು ರಿಜ್ವಾನ್ ಗೆ ಗೇಟ್ ಪಾಸ್ ಕೊಟ್ಟ ಪಿಸಿಬಿ!
ಪಾಕಿಸ್ತಾನ ಕ್ರಿಕೆಟ್ ಬೋರ್ಡ್ 2025 ರ ಏಷ್ಯಾ ಕಪ್ಗಾಗಿ 17 ಸದಸ್ಯರ ತಂಡವನ್ನು ಪ್ರಕಟಿಸಿದೆ. ಅಚ್ಚರಿ ಏನಪ್ಪಾ ಅಂದ್ರೆ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಇಬ್ಬರನ್ನೂ ಕೈಬಿಡಲಾಗಿದೆ. ಅಫ್ಘಾನಿಸ್ತಾನ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಒಳಗೊಂಡ ತ್ರಿಕೋನ ಸರಣಿ ಹಾಗೂ ಏಷ್ಯಾ ಕಪ್ಗಾಗಿ ಪಿಸಿಬಿ ತಂಡವನ್ನು ಪ್ರಕಟಿಸಿದೆ. ಸಲ್ಮಾನ್ ಅಲಿ ಆಘಾ ತಂಡವನ್ನು ಮುನ್ನಡೆಸಲಿದ್ದಾರೆ. ರಿಜ್ವಾನ್ ಬ್ಲು ಮೊಹಮ್ಮದ್ ಹ್ಯಾರಿಸ್ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ಸ್ಟಾರ್ ವೇಗಿ ಶಾಹೀನ್ ಅಫ್ರಿದಿ, ಫಖರ್ ಜಮಾನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಅನುಭವಿ ಜೋಡಿ ಬಾಬರ್ ಆಝಂ ಮತ್ತು ಮೊಹಮ್ಮದ್ ರಿಜ್ವಾನ್ ತಂಡದಿಂದ ಹೊರಗುಳಿದಿದ್ದಾರೆ.

ನೋಡಿರಿ

