ಭಾಗ್ಯಗೆ ಆದೀಶ್ವರ್ ಚಾಲೆಂಚ್! – ಶ್ರೀಮಂತಿಕೆಯೇ ಬೇಡ ಎಂದ ಆದಿ?
ಭಾಗ್ಯ ಮನೆಗೆ ಬರ್ತಾನಾ ಉದ್ಯಮಿ?

ಭಾಗ್ಯ ಮಿಡಲ್ ಕ್ಲಾಸ್ನಲ್ಲಿ ಹುಟ್ಟಿ ಬೆಳೆದವಳು. ಅವಳಿಗೆ ಜೀವನ ಅಂದ್ರೆ ಏನು ಅನ್ನೋದು ಗೊತ್ತಿದೆ. ಹಣ, ಆಸ್ತಿಗಾಗಿ ಯಾವತ್ತೂ ಆಸೆಪಟ್ಟವಳಲ್ಲ. ಆದ್ರೀಗ ಭಾಗ್ಯ ಲೈಫ್ನಲ್ಲಿ ಬ್ಯುಸಿನೆಸ್ ಮ್ಯಾನ್ ಆದೀಶ್ವರ್ ಎಂಟ್ರಿಯಾಗಿದೆ. ಭಾಗ್ಯ ಸಿಂಪ್ಲಿಸಿಟಿ ನೋಡಿ ಆದಿ ಫುಲ್ ಇಂಪ್ರೆಸ್ ಆಗಿದ್ದಾನೆ. ಇತ್ತೀಚೆಗಷ್ಟೇ ಭಾಗ್ಯ ಆದೀಶ್ವರ್ಗೆ ಆಗ್ತಿದ್ದ ದೊಡ್ಡ ಲಾಸ್ನ ತಡೆದಿದ್ದಾಳೆ.. ಹೀಗಾಗಿ ಆದಿ ಭಾಗ್ಯಗೆ ಗಿಫ್ಟ್ ಕೂಡ ಕೊಟ್ಟಿದ್ದಾನೆ. ಆದ್ರೆ ಸ್ವಾಭಿಮಾನಿ ಭಾಗ್ಯ ಇದನ್ನ ತೆಗೆದುಕೊಳ್ಳಲು ರೆಡಿಯಿಲ್ಲ.. ಇದೀಗ ಆದೀಶ್ವರ್ ಭಾಗ್ಯಗೆ ಬಿಗ್ ಚಾಲೆಂಜ್ ಹಾಕಿದ್ದಾನೆ. ಭಾಗ್ಯಳಂತೆ ನಾನೂ ಮಿಡಲ್ ಕ್ಲಾಸ್ ಜೀವನ ಮಾಡ್ತೀನಿ ಅಂತಾ ಹೇಳಿದ್ದಾನೆ.
ಇದನ್ನೂ ಓದಿ: ಪಾಕ್ ಕ್ರಿಕೆಟಿಗರ ಕಳಪೆ ಪ್ರದರ್ಶನ – ಸ್ಯಾಲರಿಗೆ ಕತ್ತರಿ ಹಾಕೋಕೆ ಮುಂದಾದ ಪಿಸಿಬಿ
ಭಾಗ್ಯಲಕ್ಷ್ಮೀ ಸೀರಿಯಲ್ ಸ್ಟೋರಿ ಮುಂದಕ್ಕೆ ಹೋಗ್ತಿಲ್ಲ. ಬರೀ ಭಾಗ್ಯ ಆದೀಶ್ವರ್ ಮಧ್ಯೆಯೇ ಸುತ್ತುತಾ ಇದೆ.. ಭಾಗ್ಯಳನ್ನ ಹೇಟ್ ಮಾಡ್ತಿದ್ದ ಆದೀಶ್ವರ್ ಈಗ ಫುಲ್ ಬದಲಾಗಿದ್ದಾನೆ. ಭಾಗ್ಯಳ ಪ್ರಾಮಾಣಿಕತೆ, ಒಳ್ಳೆತನ ಆತನಿಗೆ ಗೊತ್ತಾಗಿದೆ. ಇದೀಗ ಆದೀಶ್ವರ್ ಭಾಗ್ಯ ಹಿಂದೆಯೆ ಸುತ್ತಾತಾ ಇರ್ತಾನೆ.. ಆಕೆಯದ್ದೇ ಜಪ ಮಾಡ್ತಿದ್ದಾನೆ. ಇತ್ತೀಚೆಗೆ ಆದೀಶ್ವರ್ ಗೆ ಕೈತಪ್ಪುತ್ತಿದ್ದ ದೊಡ್ಡ ಪ್ರಾಜೆಕ್ಟ್ ಭಾಗ್ಯಳಿಂದಾಗಿ ವಾಪಾಸ್ ಸಿಕ್ಕಿದೆ. ಹೀಗಾಗಿ ಆಕೆಯನ್ನ ಆದೀಶ್ವರ್ ಕೊಂಡಾಡಿದ್ದಾನೆ.. ಭಾಗ್ಯಗೆ ಏನಾದ್ರೂ ದೊಡ್ಡದಾಗೇ ಗಿಫ್ಟ್ ಕೊಡಬೇಕು ಅಂತಾ ಯೋಚಿಸಿದ್ದ.. ಬಳಿಕ 25 ಲಕ್ಷ ಕ್ಯಾಶ್ನ ಭಾಗ್ಯ ಮನೆಗೆ ತಂದು ಕೊಟ್ಟಿದ್ದಾನೆ.. ಆದ್ರೀಗ ಭಾಗ್ಯಗೆ ಇದು ತಲೆನೋವು ತರಿಸಿದೆ. ಭಾಗ್ಯ ಇಷ್ಟೊಂದು ಹಣ ನೋಡಿ ಶಾಕ್ ಆಗಿದ್ದು, ಇದು ನನಗೆ ಬೇಡ ಅಂತಾ ಹೇಳಿದ್ದಾಳೆ. ಆದ್ರೆ ಆದಿ ಈ ಹಣ ಬೇಡ ಅಂದ್ರೆ ನನ್ನ ಬ್ಯುಸಿನೆಸ್ ಪಾರ್ಟ್ನರ್ ಆಗ್ಬೇಕು ಅಂತಾ ಕಂಡೀಷನ್ ಹಾಕಿದ್ದ. ಆದ್ರೆ ಸ್ವಾಭಿಮಾನಿ ಭ್ಯಾಗ್ಯ ಈ ಆಫರ್ನ ಕೂಡ ರಿಜೆಕ್ಟ್ ಮಾಡಿದ್ದಾಳೆ.. ಇದೀಗ ಆದೀಶ್ವರ್ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾನೆ.. ಭಾಗ್ಯಗೆ ದೊಡ್ಡ ಚಾಲೆಂಜ್ ಹಾಕಿದ್ದಾನೆ.
ಭಾಗ್ಯ ಆದೀಶ್ವರ್ ಕೊಟ್ಟ ಹಣವನ್ನ ವಾಪಾಸ್ ಕೊಡಲು ಆತನ ಮನೆಗೆ ಹೋಗಿದ್ಲು.. ಮನೆ ಹೊರಗೆ ನಿಂತು ಆತನನ್ನ ಅಲ್ಲಿಗೆ ಬರುವಂತೆ ಹೇಳಿದ್ಲು.. ಆದ್ರೆ ಆದೀಶ್ವರ್ ಹೊರ ಬಂದು, ನೀವು ನನಗೆ ವಾಪಾಸ್ ಹಣ ಕೊಡಲು ಬಂದಿದ್ದರೆ ನಾನು ನಿಮ್ಮ ಹತ್ರ ಬರೋದೆ ಇಲ್ಲ ಎಂದಿದ್ದಾನೆ. ದಯವಿಟ್ಟು ಈ ಹಣವನ್ನು ಪುನಃ ತೆಗೆದುಕೊಳ್ಳಿ.. ನೀವಿದನ್ನ ನನಗೆ ಕೊಟ್ಟಾಗಿನಿಂದ ಇದು ಉಡುಗೊರೆ ಅನಿಸುತ್ತಿಲ್ಲ.. ಹೊರೆ ಅನಿಸುತ್ತಿದೆ ಎಂದು ಭಾಗ್ಯ ಹೇಳಿದ್ದಾಳೆ. ಸರಿ.. ನಾನು ಈ ದುಡ್ಡನ್ನ ವಾಪಾಸ್ ತೆಗೆದುಕೊಳ್ಳುತ್ತೇನೆ ಆದ್ರೆ ಒಂದು ಕಂಡೀಷನ್.. ನೀವು ನಮ್ಮ ಕಂಪನಿಯ ಬ್ಯುಸಿನೆಸ್ ಪಾರ್ಟ್ನರ್ ಆಗಬೇಕು ಎಂದು ಹೇಳಿದ್ದಾನೆ ಆದೀ. ಒಂದು ದುಡ್ಡು ಇಟ್ಟುಕೊಳ್ಳಿ ಅಥವಾ ಬ್ಯುಸಿನೆಸ್ ಪಾರ್ಟ್ನರ್ ಆಗಿ ಎರಡೇ ಆಯ್ಕೆ ಇರೋದು ಎಂದು ಹೇಳಿದ್ದಾನೆ. ಅಲ್ಲದೆ ಬ್ಯುಸಿನೆಸ್ ಪಾರ್ಟ್ನರ್ ಆದ್ರೆ ಜಾಸ್ತಿ ಹಣ ಬರಲ್ಲ ವರ್ಷಕ್ಕೆ 10 ಲಕ್ಷ ಅಥವಾ ಕೋಟಿ ಬರಬಹುದು ಎಂದಿದ್ದಾನೆ. ಇದನ್ನ ಕೇಳಿ ಭಾಗ್ಯಾಗೆ ಮತ್ತೆ ಶಾಕ್ ಆಗಿದೆ. ಇವೆರಡರಲ್ಲಿ ನಿಮ್ಮ ಆಯ್ಕೆ ಯಾವುದು ಅಂತ ಹೇಳಿ ಎಂದು ಆದೀ ಹೊರಟು ಆಫೀಸ್ಗೆ ಹೋಗಿದ್ದಾನೆ. ಇದ್ರಿಂದಾಗಿ ಭಾಗ್ಯ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾಳೆ.
ಭಾಗ್ಯ ಮತ್ತೆ ಇದೇ ಹಣವನ್ನ ಹಿಡ್ಕೊಂಡು ಆದೀಶ್ವರ್ ಆಫೀಸ್ಗೆ ಹೋಗಿ, ಈ ದುಡ್ಡು ಎಷ್ಟು ಭಾರ ಆಗ್ತಿದೆ ಗೊತ್ತ.. ನಮ್ಮಂತ ಮಿಡಲ್ ಕ್ಲಾಸ್ ಜನರಿಗೆ ಇಷ್ಟೊಂದು ದುಡ್ಡು ಬಂದಾಗ ಅದು ಭಾರ ಅಂತಾನೆ ಅನಿಸುತ್ತದೆ ಎಂದಿದ್ದಾಳೆ.. ಆಗ ಆದೀಶ್ವರ್, ದುಡ್ಡು ಭಾರ ಎನ್ನುತ್ತಿರುವ ಮೊದಲ ವ್ಯಕ್ತಿ ನೀವೇ ಇರಬೇಕು.. ಆಗಿದ್ದು ಆಗಲಿ ಒಂದು ವಾರ ನಾನು ನಿಮ್ಮ ಥರ ಜೀವನ ಮಾಡಿ ನೋಡುತ್ತೇನೆ ಎಂದು ಭಾಗ್ಯಾಗೆ ಚಾಲೆಂಜ್ ಹಾಕಿರುವುದು ಹೊಸ ಪ್ರೊಮೋದಲ್ಲಿ ತೋರಿಸಲಾಗಿದೆ. ಸದ್ಯ ಆದೀಶ್ವರ್ ಈ ಹಣ ತೆಗೆದುಕೊಂಡಿದ್ದಾನಾ?, ಒಂದು ವಾರ ಆದೀ ಮಿಡಲ್ ಕ್ಲಾಸ್ ಜೀವನ ಹೇಗೆ ನಡೆಸುತ್ತಾನೆ? ಎಂಬುದೆಲ್ಲ ಮುಂದಿನ ಎಪಿಸೋಡ್ನಲ್ಲಿ ನೋಡಬೇಕಿದೆ.
ಆದ್ರೀಗ ಸೀರಿಯಲ್ ನೋಡಿದ ವೀಕ್ಷಕರು ನಾನಾ ಕಾಮೆಂಟ್ ಮಾಡ್ತಿದ್ದಾರೆ.. ಅಯ್ಯೋ ಆದಿ, ಭಾಗ್ಯ ಡ್ರಾಮಾ ನೋಡೋಕೆ ಆಗ್ತಿಲ್ಲ.. ಇನ್ನೆಷ್ಟು ಡ್ರಾಮಾ ಮಾಡ್ತಾರೋ.. ಸುಮ್ನೆ ಸೀರಿಯಲ್ ನಿಲ್ಲಿಸಿ ಬಿಟಿ.. ಇದ್ರಿಂದ ಸಮಾಜಕ್ಕೆ ಏನ್ ಸಂದೇಶ ಕೊಡ್ತಿದ್ದೀರಾ ಅಂತ ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಆದಿ ಹಾಕಿರೋ ಚಾಲೆಂಜ್ ನೋಡಿದ್ರೆ, ಸೀರಿಯಲ್ ಸ್ಟೋರಿ ಅರಸು ಫಿಲಂ ಸ್ಟೋರಿ ಹಾಗೇ ಹೋಗ್ತಿದ್ಯಲ್ಲ ಅಂತಾ ಕಮೆಂಟ್ ಮಾಡ್ತಿದ್ದಾರೆ.

ನೋಡಿರಿ

