ದರ್ಶನ್‌ ನ ಬೇರೆ ಜೈಲಿಗೆ ಶಿಫ್ಟ್‌ ಮಾಡಲು ಒತ್ತಡ! – ಪರಪ್ಪನ ಅಗ್ರಹಾರದಲ್ಲೇ ಉಳಿಸಿಕೊಳ್ಳಲು ವಕೀಲರ ಹರಸಾಹಸ

ದರ್ಶನ್‌ ನ ಬೇರೆ ಜೈಲಿಗೆ ಶಿಫ್ಟ್‌ ಮಾಡಲು ಒತ್ತಡ! – ಪರಪ್ಪನ ಅಗ್ರಹಾರದಲ್ಲೇ ಉಳಿಸಿಕೊಳ್ಳಲು ವಕೀಲರ ಹರಸಾಹಸ

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಜೈಲು ಪಾಲಾಗಿದ್ದಾರೆ.. ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್‌, ಅಲ್ಲಿಯ ದಿನಚರಿಗೆ ಒಗ್ಗಿಕೊಳ್ತಿದ್ದಾರೆ. ಇದೀಗ ದರ್ಶನ್‌ನ ಪರಪ್ಪನ ಅಗ್ರಹಾರದಿಂದ ಶಿಫ್ಟ್‌ ಮಾಡಲು ಜೈಲಾಧಿಕಾರಿಗಳಿಂದ ಒತ್ತಡ ಹೆಚ್ಚಾಗ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ತಾಯ್ನಾಡಿಗೆ ಬಂದ ಶುಭಾಂಶು ಶುಕ್ಲಾ – ಇಂದು ಪ್ರಧಾನಿ ಮೋದಿ ಜೊತೆ ಮಾತುಕತೆ!  

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಗೆ ಸಂಕಷ್ಟ ತಪ್ಪಿದ್ದಲ್ಲ.. ಈ ಹಿಂದೆ ದರ್ಶನ್ ಜೈಲಿನಲ್ಲಿರುವ ರೌಡಿಗಳ ಜೊತೆ ಸಂಪರ್ಕ ಪಡೆದು ರಾಜನಂತೆ ಇದ್ದ ವಿಡಿಯೋ ವೈರಲ್ ಆಗಿತ್ತು. ಮಾದ್ಯಮಗಳಲ್ಲಿ ದರ್ಶನ್‍ಗೆ ಜೈಲಿನಲ್ಲಿ ರಾಜಾಥಿತ್ಯ ನೀಡುತ್ತಿದ್ದ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ಬಳಿಕ ದರ್ಶನ್‍ರನ್ನು ಬಳ್ಳಾರಿ ಜೈಲಿಗೆ ಕಳಿಸಲಾಗಿತ್ತು. ಬಳ್ಳಾರಿ ಜೈಲಿನಲ್ಲಿದ್ದ ದರ್ಶನ್ ಜಾಮೀನು ಪಡೆದು ಹೊರಗಡೆ ಬಂದಿದ್ದರು. ಸುಪ್ರೀಂ ಕೋರ್ಟ್‍ನಲ್ಲಿ ಆರೋಪಿಗಳ ಬೇಲ್ ಕ್ಯಾನ್ಸಲ್ ಆದ ಕಾರಣ ಮತ್ತೆ ಏಳು ಜನರನ್ನ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿದೆ. ಮತ್ತೆ ಜೈಲಿನಲ್ಲಿ ದರ್ಶನ್ ತನ್ನ ಪ್ರಭಾವ ಬಳಸಿ ತನಗೆ ಬೇಕಾಗುವ ರೀತಿ ವ್ಯವಸ್ಥೆ ಮಾಡಿಕೊಳ್ಳಬಹುದೆಂದು ದಯಾನಂದ್ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ಮಾಡಿ ಖಡಕ್ ಎಚ್ಚರಿಕೆ ನೀಡಲಿದ್ದಾರೆಂದು ತಿಳಿದು ಬಂದಿದೆ.

ಇದೀಗ ದರ್ಶನ್‍ರನ್ನು ಪರಪ್ಪನ ಅಗ್ರಹಾರ ಜೈಲಿಂದ ಶಿಫ್ಟ್ ಮಾಡಲು ಜೈಲಾಧಿಕಾರಿಗಳಿಂದ ಒತ್ತಡ ಬರುತ್ತಿದೆ. ಹೀಗಾಗಿಯೇ ಕೋರ್ಟ್ ಮೊರೆ ಹೋಗಲು ಅಧಿಕಾರಿಗಳು ತಯಾರಿ ಮಾಡಿಕೊಂಡಿದ್ದಾರೆ. ಇದಕ್ಕೂ ಮೊದಲು ದರ್ಶನ್‍ರನ್ನು ಪರಪ್ಪನ ಅಗ್ರಹಾರದಲ್ಲೇ ಉಳಿಸಲು ವಕೀಲರು ಪ್ರಯತ್ನ ಮಾಡುತ್ತಿದ್ದಾರೆ. ದರ್ಶನ್ ಅರೆಸ್ಟ್ ಆದ ದಿನವೇ ವಕೀಲರು ದರ್ಶನ್ ಪರಪ್ಪನ ಅಗ್ರಹಾರ ಜೈಲಿಂದ ಬೇರೆ ಕಡೆ ಶಿಫ್ಟ್ ಮಾಡಬಾರದು ಎಂದು ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ.

ಇನ್ನು ಟ್ರಯಲ್ ಶುರುವಾದರೆ ಬೇರೆ ಜಿಲ್ಲೆಗಳಿಂದ ಕರೆದುಕೊಂಡು ಬರುವುದು ಕಷ್ಟವಾಗಲಿದೆ. ಹೀಗಾಗಿ ಬೇರೆ ಜೈಲಿಗೆ ಶಿಫ್ಟ್ ಮಾಡಬಾರದು ಎಂದು ಕೋರ್ಟ್‍ಗೆ ವಕೀಲ ಸುನೀಲ್ ಅರ್ಜಿ ಸಲ್ಲಿಸಿದ್ದಾರೆ. ಇದೀಗ ಎಸ್‍ಪಿಪಿ ಮುಖಾಂತರ ಜೈಲಾಧಿಕಾರಿಗಳು ಅರ್ಜಿ ಸಲ್ಲಿಕೆ ಮಾಡ್ತಾರಾ ವಕೀಲರು ಕಾದು ನೋಡಬೇಕಿದೆ. ಹಾಗೇನಾದ್ರೂ ಅರ್ಜಿ ಸಲ್ಲಿಕೆ ಮಾಡಿದ್ರೆ ನಮ್ಮ ವಾದವನ್ನು ಪರಿಗಣಿಸಿ ಅಂತಾ ಮನವಿ ಮಾಡುವ ಸಾಧ್ಯತೆ ಇದೆ. ಬೇರೆ ಜೈಲಿಗೆ ಶಿಫ್ಟ್ ಮಾಡಿದ್ರೆ ಓಡಾಟ ಕಷ್ಟವಾಗುತ್ತೆ. ಟ್ರಯಲ್ ಇದ್ದಾಗೆಲ್ಲಾ ಕರೆತರೋದು ಕಷ್ಟವಾಗುತ್ತೆ. ಹೀಗಾಗಿ ಪರಪ್ಪನ ಅಗ್ರಹಾರ ಜೈಲಲ್ಲೇ ಉಳಿಸುವಂತೆ ವಾದ ಮಂಡನೆ ಸಾಧ್ಯತೆ ಇದೆ.

Shwetha M