ಅಭಿ Vs ಸಂಜು Vs ಕೆಎಲ್ Vs ಗಿಲ್ – ಏಷ್ಯಾಕಪ್ ಟೂರ್ನಿಗೆ ಓಪನರ್ಸ್ ರೇಸ್
7 ಜನರ ನಡುವೆ ಯಾರಿಗೆ ಸಿಗುತ್ತೆ ಚಾನ್ಸ್?

ಅಭಿ Vs ಸಂಜು Vs ಕೆಎಲ್ Vs ಗಿಲ್ – ಏಷ್ಯಾಕಪ್ ಟೂರ್ನಿಗೆ ಓಪನರ್ಸ್ ರೇಸ್7 ಜನರ ನಡುವೆ ಯಾರಿಗೆ ಸಿಗುತ್ತೆ ಚಾನ್ಸ್?

ಇಂಗ್ಲೆಂಡ್ ಪ್ರವಾಸ ಮುಗಿಸಿ ಭಾರತಕ್ಕೆ ಬಂದಿರೋ ಟೀಂ ಇಂಡಿಯಾ ಮುಂದಿನ ತಿಂಗಳಲ್ಲಿ ಏಷ್ಯಾಕಪ್​ನಲ್ಲಿ ಕಣಕ್ಕಿಳಿಯಲಿದೆ.  ಸೆಪ್ಟೆಂಬರ್ 9ರಂದು ಆರಂಭವಾಗಲಿರೋ ಟೂರ್ನಿಗೆ ಬಿಸಿಸಿಐ ಇನ್ನಷ್ಟೇ ತಂಡವನ್ನ ಪ್ರಕಟ ಮಾಡಬೇಕಿದೆ. ಟಿ-20ಐ ಮಾದರಿಯಲ್ಲಿ ನಡೆಯಲಿರೋ ಈ ಪಂದ್ಯಾವಳಿಯಲ್ಲಿ ಶುಭ್​ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಕಮ್​ಬ್ಯಾಕ್ ಮಾಡೋದು ಬಹುತೇಕ ಫಿಕ್ಸ್ ಆಗಿದೆ. ಹಾಗೇನಾದ್ರೂ ಇವ್ರಿಬ್ಬರನ್ನ ತಂಡಕ್ಕೆ ಸೇರಿಸಿಕೊಂಡ್ರೆ ಮ್ಯಾನೇಜ್​ಮೆಂಟ್​​ಗೆ ಹೊಸ ತಲೆನೋವು ಶುರುವಾಗಲಿದೆ. ಟೀಮ್ ಇಂಡಿಯಾ ಪರ  ಓಪನರ್ಸ್ ಯಾರು​ ಎಂಬ ಪ್ರಶ್ನೆ ಕಾಡ್ತಿದೆ.

ಇದನ್ನೂ ಓದಿ : ಸಂಜು ಫಸ್ಟ್.. ಜಿತೇಶ್ ಬ್ಯಾಕ್ ಅಪ್? – ನಾಲ್ವರ ರೇಸ್ ನಲ್ಲಿ ಕೀಪರ್ ಯಾರು?

2025ರಲ್ಲಿ ಟಿ20 ಮಾದರಿಯಲ್ಲಿ ಭಾರತದ ಪರ ಯಾವುದೇ ಪಂದ್ಯಗಳನ್ನ ಆಡದ ಶುಭ್​ಮನ್ ಗಿಲ್​, ಏಷ್ಯಾಕಪ್​​ನೊಂದಿಗೆ ಕಮ್​ಬ್ಯಾಕ್​ ಮಾಡಲು ಎದುರು ನೋಡ್ತಿದ್ದಾರೆ. ಇದೇ ಕಮ್​​ಬ್ಯಾಕ್​, ಟೀಮ್ ಇಂಡಿಯಾ ಮ್ಯಾನೇಜ್​ಮೆಂಟ್​ಗೆ ಮಾತ್ರವಲ್ಲ. ಸೆಲೆಕ್ಷನ್ ಕಮಿಟಿಯೂ ಹೊಸ ಟೆನ್ಶನ್ ತಂದಿಟ್ಟಿದೆ. ಯಾಕಂದ್ರೆ, ಏಷ್ಯಾಕಪ್​​ನಲ್ಲಿ ಆಡಲು ಒಬ್ಬರಲ್ಲ, ಇಬ್ರಲ್ಲ ಬರೋಬ್ಬರಿ 7 ಓಪನರ್ಸ್​ ತುದಿಗಾಲಲ್ಲಿ ನಿಂತಿದ್ದಾರೆ. ಶುಭ್​ಮನ್​ ಗಿಲ್, ಯಶಸ್ವಿ ಜೈಸ್ವಾಲ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಕೆ.ಎಲ್ ರಾಹುಲ್, ಸಾಯಿ ಸುದರ್ಶನ್ & ಇಶಾನ್ ಕಿಶನ್. ಈ 7 ಮಂದಿಯಲ್ಲಿ ಟೀಮ್ ಇಂಡಿಯಾ ಪರ ಸ್ಥಾನ ಯಾರಿಗೆ ಅನ್ನೋದು ಕುತೂಹಲ ಮೂಡಿಸಿದೆ. ಸೆಲೆಕ್ಷನ್​ ಕಮಿಟಿಗೆ ಇದೇ ಬಿಗ್ ಚಾಲೆಂಜ್ ಆಗಿದೆ.

ಯಶಸ್ವಿ ಜೈಸ್ವಾಲ್ ಮತ್ತು ಶುಭ್​ಮನ್ ಗಿಲ್ ಈ ಮೊದಲು ಟೀಮ್​ ಇಂಡಿಯಾ ಪರ ಟಿ20 ತಂಡದ ಓಪನರ್ಸ್. ಆಗಿದ್ರು. ಆದ್ರೆ, ಏಕದಿನ ಹಾಗೂ ಟೆಸ್ಟ್ ತಂಡದಲ್ಲಿ ಬ್ಯುಸಿಯಾಗಿದ್ದ ಕಾರಣಕ್ಕೆ ಅಭಿಷೇಕ್ ಶರ್ಮಾ ಮತ್ತು  ಸಂಜು ಸ್ಯಾಮ್ಸನ್ ಈ ಹಿಂದಿನ ಸರಣಿಗಳಲ್ಲಿ ಟೀಮ್ ಇಂಡಿಯಾದ ಓಪನರ್​ಗಳಾಗಿದ್ದರು. ಸಿಕ್ಕ ಅವಕಾಶದಲ್ಲಿ ಅದ್ಬುತ ಪ್ರದರ್ಶನವನ್ನು ನೀಡಿದ್ರು. ಇದೀಗ ಖಾಯಂ ಓಪನರ್​ಗಳಾದ ಶುಭ್​ಮನ್ ಗಿಲ್​, ಯಶಸ್ವಿ ಜೈಸ್ವಾಲ್ ಟಿ20 ತಂಡಕ್ಕೆ ಕಮ್​ಬ್ಯಾಕ್ ಮಾಡೋಕೆ ರೆಡಿಯಾಗಿದ್ದಾರೆ. ಹೀಗಾಗಿ ಅಭಿಷೇಕ್​​​​, ಸಂಜು ಸ್ಯಾಮ್ಸನ್​​ ಸ್ಥಾನ ಅಂತತ್ರಕ್ಕೆ ಸಿಲುಕಿದೆ.

ಹೌದು ಜೈಸ್ವಾಲ್ ಮತ್ತು ಗಿಲ್ ರೀ ಎಂಟ್ರಿ ಕೊಟ್ರೆ ಸಂಜು ಸ್ಯಾಮ್ಸನ್ ಅವ್ರೇ ಸ್ಥಾನ ಬಿಟ್ಟುಕೊಡ್ಬೇಕಾಗುತ್ತೆ. ಈ ಹಿಂದೆ ಶುಭ್​ಮನ್ ಗಿಲ್ ಹಾಗೂ ಅಭಿಷೇಕ್ ಶರ್ಮಾ ಇನ್ನಿಂಗ್ಸ್​ ಓಪನ್ ಮಾಡಿದ್ದಿದೆ. ಅಗ್ರೆಸ್ಸಿವ್ ಇಂಟೆಂಟ್​​ನಲ್ಲಿ ಬ್ಯಾಟ್ ಬೀಸಿದ್ದೂ ಇದೆ. ಸದ್ಯ ನಂಬರ್ 1 ಟಿ20 ಬ್ಯಾಟರ್ ಆಗಿರುವ ಅಭಿಷೇಕ್ ಶರ್ಮಾರನ್ನ ತಂಡದಿಂದ ಹೊರಗಿಡೋದು ಕಷ್ಟ.. ಹೀಗಾಗಿ ಅಭಿ ಜೊತೆ ಗಿಲ್​ ಅಥವಾ ಜೈಸ್ವಾಲ್​  ಓಪನರ್​ಗಳಾಗಿ ಆಡೋ ಸಾಧ್ಯತೆ ಹೆಚ್ಚಿದೆ. ಪರಿಣಾಮ ಸಂಜು ಸ್ಯಾಮ್ಸನ್​​ಗೆ ಆರಂಭಿಕನ ಸ್ಥಾನ ಬಿಟ್ಟುಕೊಡಬೇಕಾದ ಅನಿವಾರ್ಯತೆ ಎದುರಾಗಿದೆ.

ಸದ್ಯದ ಡವಲಪ್​ಮೆಂಟ್ಸ್​​ಗಳನ್ನ ನೋಡಿದ್ರೆ ಶುಭ್​ಮನ್​ ಗಿಲ್, ಯಶಸ್ವಿ ಜೈಸ್ವಾಲ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಈ ನಾಲ್ವರೇ ತಂಡದ ಫಸ್ಟ್ ಚಾಯ್ಸ್ ಓಪನರ್ಸ್ ಎನಿಸಿದ್ದಾರೆ. ಅದ್ರ ಜೊತೆಗೆ ಐಪಿಎಲ್​​ನಲ್ಲಿ ಸದ್ದು ಮಾಡಿದ್ದ ಸಾಯಿ ಸುದರ್ಶನ್​​, ಕೆ.ಎಲ್.ರಾಹುಲ್​, ಇಶಾನ್​ ಕಿಶನ್​ ಕೂಡ ಆಕಾಂಕ್ಷಿ ಆಗಿದ್ದಾರೆ. ರಾಹುಲ್​ ಮತ್ತು ಕಿಶನ್​ ಟಿ-20ಐ ಕ್ರಿಕೆಟ್​ನಲ್ಲಿ ಕಮ್​ಬ್ಯಾಕ್  ಎದುರು ನೋಡ್ತಿದ್ರೆ, ಯಂಗ್​ಗನ್​  ಸಾಯಿ ಸುದರ್ಶನ್​ ಎರಡನೇ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಈ ಮೂಲಕ 2 ಸ್ಥಾನಗಳ ಮೇಲೆ 7 ಆಟಗಾರರ ಕಣ್ಣಿದೆ. ಇವ್ರ ಪೈಕಿ ಯಾವೊಬ್ಬ ಆಟಗಾರನನ್ನೂ ಸುಲಭಕ್ಕೆ ಸೈಡ್​​ಲೈನ್​ ಮಾಡುವಂತಿಲ್ಲ. ಹೀಗಾಗೇ ಏಷ್ಯಾಕಪ್​ಗೆ ಓಪನರ್ಸ್​ ಆಯ್ಕೆ ಸೆಲೆಕ್ಷನ್ ಕಮಿಟಿಗೆ ಕಗ್ಗಂಟು ಆಗೋದ್ರಲ್ಲಿ ಡೌಟೇ ಇಲ್ಲ.

Shantha Kumari