Zee ಕನ್ನಡದ 2 ಸೀರಿಯಲ್ ಎಂಡ್? – ಯಾವ ಧಾರಾವಾಹಿಗಳಿಗೆ ಗೇಟ್‌ಪಾಸ್?

ಜೀಕನ್ನಡ ಮನರಂಜನೆ ಕೊಡೋದ್ರಲ್ಲಿ ಯಾವಾಗ್ಲೂ ಎಕ್ಸಪರ್ಟ್.. ವಿಭಿನ್ನ ಕಥಾಹಂದರ ಹೊಂದಿರೋ ಸೀರಿಯಲ್, ರಿಯಾಲಿಟಿ ಶೋಗಳನ ಮೂಲಕ ಜನರನ್ನ ರಂಜಿಸ್ತಾ ಬಂದಿದೆ. ಆದ್ರೀಗ ಸೀರಿಯಲ್ ಪ್ರೇಮಿಗಳಿಗೆ ಸ್ಯಾಡ್ ನ್ಯೂಸ್‌ವೊಂದಿದೆ. ಇದೀಗ ಜೀ ಕನ್ನಡದ ಜನಪ್ರಿಯ ಸೀರಿಯಲ್ ಅಮೃತಧಾರೆ ಹಾಗೂ ಬ್ರಹ್ಮಗಂಟು ಸೀರಿಯಲ್ ಈಗ ಕೊನೆ ಹಂತಕ್ಕೆ ತಲುಪಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸೀರಿಯಲ್ ಮುಕ್ತಾಯಗೊಳ್ಳಲಿದೆ ಅನ್ನೋ ಸುದ್ದಿ ಸದ್ದು ಮಾಡ್ತಿದೆ.
ಇದನ್ನೂ ಓದಿ: ಸೈಕೋ ಕೈಗೆ ಸಿಕ್ಕಿಬಿದ್ದ ವಿಶ್ವ!- ಜಾನು ಜೊತೆ ಗೂಬೆ ಕತೆ ಫಿನಿಶ್?
ಜೀ ಕನ್ನಡದಲ್ಲಿ ಪ್ರಸಾರವಾಗ್ತಿರೋ ಜನಪ್ರಿಯ ಸೀರಿಯಲ್ ಅಮೃತಧಾರೆ ಹಾಗೂ ಬ್ರಹ್ಮಗಂಟು ಸೀರಿಯಲ್ ವೀಕ್ಷಕರನ್ನ ರಂಜಿಸ್ತಾ ಇದೆ. ಅಮೃತಧಾರೆ ಸೀರಿಯಲ್ ಈಗಾಗಲೇ 700 ಸಂಚಿಕೆಗಳನ್ನ ಪೂರೈಸಿದ್ರೆ ಬ್ರಹ್ಮಗಂಟು ಸೀರಿಯಲ್ ಕೂಡ ಟಿಆರ್‌ಪಿ ರೇಸ್‌ನಲ್ಲಿ ಉತ್ತಮ ಸ್ಥಾನದಲ್ಲಿದೆ. ಎರಡು ಸೀರಿಯಲ್ ಸ್ಟೋರಿ ಸಾಕಷ್ಟು ಕ್ಯೂರಿಯಾಸಿಟಿ ಮೂಡಿಸಿದೆ.. ಆದ್ರೀಗ ಏಕಾಏಕಿ ಸೀರಿಯಲ್ ಎಂಡ್ ಮಾಡಲಾಗ್ತಿದೆ ಎಂದು ಹೇಳಲಾಗ್ತಿದೆ.
ಅಮೃತಧಾರೆ ಸೀರಿಯಲ್‌ನಲ್ಲಿ ಗೌತಮ್ ದಿವಾನ್‌ಗೆ ತನ್ನ ಚಿಕ್ಕಮ್ಮನ ಮೇಲೆ ಅತಿಯಾದ ನಂಬಿಕೆ. ಹೀಗಾಗಿ ಆಕೆಯ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಇದ್ದ.. ಶಕುಂತಲಾ ಹೇಳಿದ್ದೇ ನಡಿತಾ ಇತ್ತು.. ಆದ್ರೇ ಭೂಮಿಕಾ ಗೌತಮ್ ನ ಮದುವೆಯಾಗಿ ಬಂದ್ಮೇಲೆ ಶಕುಂತಲಾ ಆಟ ನಡಿತಾ ಇಲ್ಲ.. ಎಷ್ಟೇ ಷಡ್ಯಂತರ ನಡೆಸಿದ್ರೂ ಆಕೆಯ ಪ್ಲ್ಯಾನ್ ಎಲ್ಲಾ ಉಲ್ಟಾ ಆಗ್ತಿದೆ. ಇದೀಗ ಶಕುಂತಲಾ ಭೂಮಿಕಾಗಳನ್ನ ಮುಗಿಸಲು ಮುಂದಾಗಿದ್ದಾಳೆ, ಆದ್ರೆ ಭೂಮಿಕಾ ಬುದ್ದಿವಂತೆ.. ಈಗಾಗಲೇ ಗೌತಮ್ ಚಿಕ್ಕಮ್ಮಳ ಇನ್ನೊಂದು ಮುಖ ಆಕೆಗೆ ಗೊತ್ತಾಗಿದೆ. ಹೀಗಾಗಿ ತನ್ನ ಗಂಡ ಹಾಗೂ ಮನೆಯವರ ಸುದ್ದಿಗೆ ಬಂದ್ರೆ ಹುಷಾರ್ ಎಂದು ವಾರ್ನ್ ಮಾಡಿದ್ಲು. ಅಷ್ಟೇ ಅಲ್ಲ ಆಕೆಗೆ ಕಪಾಳ ಮೋಕ್ಷ ಮಾಡಿದ್ಲು.. ಇದೀಗ ಸೃಜನ್ ಭೂಮಿಕಾ ಜೊತೆ ಸೇಕೊಂಡು ಶಕುಂತಲಾ ಫೋನ್ ಕೂಡ ಟ್ರ್ಯಾಪ್ ಮಾಡಿಸಿದ್ದಾಳೆ. ಶಕುಂತಲಾ ಹಾಗೂ ಜೈದೇವ್ ಭೂಮಿಕಾಳನ್ನ ಕೊಲ್ಲಲು ಮಾಡಿದ ಪ್ಲ್ಯಾನ್ ಗೊತ್ತಾಗಿದೆ. ಆದರೆ ಅಷ್ಟೊತ್ತಿಗಾಗಲೇ ವಿಲನ್ಗಳಿಗೆ ಈ ವಿಷಯ ತಿಳಿದುಬಿಟ್ಟಿದೆ. ಅಲ್ಲಿಗೆ ಭೂಮಿಕಾ ಪ್ಲ್ಯಾನ್ ಫ್ಲಾಪ್ ಆಗಿದೆ. ಆದರೂ, ಮೊದಲು ಮಾಡಿದ ಟ್ರ್ಯಾಪ್ ಬಗ್ಗೆ ಗೌತಮ್ಗೆ ವಿಷಯ ತಿಳಿಸಿದ್ದಾಳೆ. ಅಲ್ಲಿ ಜೈದೇವ್ ನ ವಾಯ್ಸ್ ಮಾತ್ರ ಇರೋದ್ರಿಂದ ಶಕುಂತಲಾ ವಿರುದ್ಧ ಸಾಕ್ಷಿ ಇನ್ನೂ ಭೂಮಿಕಾಗಿ ಸಿಕ್ಕಿಲ್ಲ. ಇದೀಗ ಭೂಮಿಕಾ ಅತ್ತೆ ವಿರುದ್ಧ ಸಾಕ್ಷಿ ಹುಡುಕೇ ಹುಡುಕಿದ್ರೂ ಅದನ್ನ ಗೌತಮ್ ಅಷ್ಟು ಬೇಗ ನಂಬ್ಲಿಕ್ಕೆ ಇಲ್ಲ.. ಯಾಕಂದ್ರೆ ತನ್ನ ಚಿಕ್ಕಮ್ಮನನ್ನ ಅಷ್ಟು ಕುರುಡಾಗಿ ನಂಬಿದ್ದಾನೆ. ಇನ್ನು ಗೌತಮ್ ಮೊದಲ ಮಗು ಕೂಡ ಸಿಗ್ಬೇಕು.. ಹೀಗಾಗಿ ಇಷ್ಟು ಬೇಗ ಸೀರಿಯಲ್ ಮುಗಿರೋದು ಡೌಟ್.. ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ಸೀರಿಯಲ್ ಎಂಡ್ ಆಗುತ್ತೆ ಅನ್ನೋ ಚರ್ಚೆ ನಡಿತಾ ಇದೆ..
ಇನ್ನೊಂದೆಡೆ, ಬ್ರಹ್ಮಗಂಟು ಸೀರಿಯಲ್‌ನಲ್ಲಿ ಕೂಡ ಮುಕ್ತಾಯ ಆಗುತ್ತೆ ಅನ್ನೋ ಚರ್ಚೆ ಶುರುವಾಗಿದೆ. ಚಿರು ಅತ್ತಿಗೆ ಸೌಂದರ್ಯಳನ್ನ ಅತಿಯಾಗಿ ನಂಬುತ್ತಿದ್ದ. ಆದ್ರೀಗ ದೀಪಾ ಬಂದ್ಮೇಲೆ ಸೌಂದರ್ಯ ಮಾಡುತ್ತಿರೋ ತಪ್ಪುಗಳ ಬಗ್ಗೆ ಅರಿವಾಗ್ತಿದೆ. ಆದ್ರೆ ಕೆಟ್ಟವಳು ಅನ್ನೋದು ಇನ್ನೂ ಆತನಿಗೆ ಗೊತ್ತಾಗ್ತಿಲ್ಲ.. ಸೌಂದರ್ಯ ನಿಜ ಬಣ್ಣ ಬಯಲು ಮಾಡಲು ದೀಪಾಗೆ ಕಷ್ಟವಾಗಿದೆ. ಅವಳು ಎಲ್ಲರನ್ನೂ ಕೊಲ್ಲಿಸಲು ಮಾಡಿರುವ ಸಂಚು ದೀಪಾಗೆ ತಿಳಿದಿದ್ದರೂ ಅದಕ್ಕೆ ಸಾಕ್ಷಿ ಇಲ್ಲ. ಇದೀಗ ಮೋಸದಿಂದ ಅರ್ಚನಾಳ ಮದುವೆಯನ್ನು ಯಾವನದ್ದೋ ಜೊತೆ ಮಾಡಿಸಲು ಹೊರಟಿದ್ದಾಳೆ ಸೌಂದರ್ಯ. ಅರ್ಚನಾ ಮದುವೆಯಾಗಬೇಕು ಎಂದಿರೋ ರಾಹುಲ್ಗೆ ಅಪಘಾತ ಮಾಡಿಸಿದ್ದಾಳೆ. ಆದರೆ ಇದಕ್ಕೆ ಸಾಕ್ಷಿ ಇಲ್ಲ. ಇದೀಗ ದೀಪಾ ಸೌಂದರ್ಯ ವಿರುದ್ಧ ಸಾಕ್ಷಿ ಹುಡುಕಿ ಚಿರುನಾ ನಂಬಿಸ್ಬೇಕು ಅಂದ್ರೆ ಇನ್ನೂ ಒಂದು ವರ್ಷ ಆದ್ರೂ ಟೈಮ್ ಬೇಕೇ ಬೇಕು.. ಹೀಗಾಗಿ ಈ ಸೀರಿಯಲ್ ಕೂಡ ಎಂಡ್ ಆಗೋದು ಡೌಟ್ ಅಂತಾ ಹೇಳ್ತಿದ್ದಾರೆ ವೀಕ್ಷಕರು.

ನೋಡಿರಿ

