ಸಂಜು ಫಸ್ಟ್.. ಜಿತೇಶ್ ಬ್ಯಾಕ್ ಅಪ್? – ನಾಲ್ವರ ರೇಸ್ ನಲ್ಲಿ ಕೀಪರ್ ಯಾರು?
ರಾಹುಲ್ & ಪಂತ್ ಕೈ ಬಿಟ್ಟಿದ್ದೇಕೆ BCCI?

ಸಂಜು ಫಸ್ಟ್.. ಜಿತೇಶ್ ಬ್ಯಾಕ್ ಅಪ್? – ನಾಲ್ವರ ರೇಸ್ ನಲ್ಲಿ ಕೀಪರ್ ಯಾರು?ರಾಹುಲ್ & ಪಂತ್ ಕೈ ಬಿಟ್ಟಿದ್ದೇಕೆ BCCI?

ಐಪಿಎಲ್ ಬಳಿಕ ಸತತ ಒಂದೂವರೆ ತಿಂಗಳ ಕಾಲ ಇಂಗ್ಲೆಂಡ್ ಪ್ರವಾಸದಲ್ಲಿದ್ದ ಟೀಂ ಇಂಡಿಯಾ ಆಟಗಾರರು ಸದ್ಯ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ. ಆಗಸ್ಟ್ ತಿಂಗಳಲ್ಲಿ ಯಾವುದೇ ಪಂದ್ಯಗಳು ಇಲ್ಲ. ಸೆಪ್ಟೆಂಬರ್ 9ರಿಂದ ಆರಂಭ ಆಗಲಿರೋ ಏಷ್ಯಾಕಪ್ ಟೂರ್ನಿಗೆ ರೆಡಿಯಾಗ್ಬೇಕಿದೆ. ಸೆಲೆಕ್ಷನ್ ಕಮಿಟಿ ಆಗಸ್ಟ್ ಮೂರನೇ ವಾರದಲ್ಲಿ ತಂಡವನ್ನ ಘೋಷಿಸೋ ಸಾಧ್ಯತೆ ಇದೆ. ಇದೀಗ ಮ್ಯಾನೇಜ್​ಮೆಂಟ್ ಗೆ ಕಾಡ್ತಿರೋ ಪ್ರಶ್ನೆ ಅಂದ್ರೆ ವಿಕೆಟ್ ಕೀಪಿಂಗ್​ಗೆ ಯಾರನ್ನ ಸೆಲೆಕ್ಟ್ ಮಾಡೋದು ಅನ್ನೋದು. ನಾಲ್ವರ ನಡುವೆ ಫೈಟ್ ಇದ್ದು ಅಂತಿಮವಾಗಿ ಯಾರಿಗೆ ಅವಕಾಶ ನೀಡ್ಬೇಕು ಅನ್ನೋ ಬಗ್ಗೆ ಚರ್ಚೆ ನಡೀತಿದೆ. ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾ, ಇಶಾನ್ ಕಿಶನ್ ಹಾಗೇ ಧ್ರುವ್ ಜುರೇಲ್ ನಡುವೆ ಪೈಪೋಟಿ ಇದೆ. ಇವ್ರ ಪೈಕಿ ಫಸ್ಟ್ ಪ್ರಿಯಾರಿಟಿ ಸಂಜು ಸ್ಯಾಮ್ಸನ್​ಗೆ ಇದೆ.

ಇದನ್ನೂ ಓದಿ : KL ರಾಹುಲ್ ಟಿ-20 ವಿಶ್ವಕಪ್ ಕನಸು ಭಗ್ನ – ಚುಟುಕು ಸಮರದಲ್ಲಿ ಯಾಕಿಲ್ಲ ಚಾನ್ಸ್?  

ಒಂದು ವರ್ಷದಲ್ಲಿ 3 ಶತಕ ಬಾರಿಸಿದ ಸಂಜುಗೆ ಮೊದಲ ಆದ್ಯತೆ!

ಯುಎಇಯಲ್ಲಿ ನಡೆಯಲಿರುವಂತ ಏಷ್ಯಾ ಕಪ್ ಟೂರ್ನಿಗೆ ವಿಕೆಟ್ ಕೀಪರ್ ಆಗಿ ಯಾರನ್ನು ಆಯ್ಕೆ ಮಾಡಬೇಕೆಂಬ ಕಠಿಣ ಸವಾಲು ಎದುರಾಗಿದೆ. ಈ ಪೈಕಿ ಸಂಜು ಸ್ಯಾಮ್ಸನ್ ಹೆಸರು ಮುಂಚೂಣಿಯಲ್ಲಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 109 ರನ್ ಗಳಿಸಿದ್ದ ಸಂಜು ಒಂದು ವರ್ಷದಲ್ಲಿ ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ಮೂರು ಶತಕಗಳನ್ನು ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ರು, ಹಾಗೇ ಅನ್ ವಾಂಟೆಡ್ ರೆಕಾರ್ಡ್​ನೂ ಮಾಡಿದ್ದಾರೆ. ಸಂಜು ಸ್ಯಾಮ್ಸನ್ ಟಿ20ಐ ಕ್ರಿಕೆಟ್‌ನಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಐದು ಬಾರಿ ಡಕ್​ಔಟ್ ಆದ ಮೊದಲ ಬ್ಯಾಟ್ಸ್​ಮನ್ ಆಗಿದ್ದಾರೆ. 13 ಪಂದ್ಯಗಳಲ್ಲಿ ಐದು ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ರು. ಹೀಗಾಗಿ ಬಿಸಿಸಿಐ ಡಕ್ ಔಟ್ ಬಗ್ಗೆಯೂ ಯೋಚಿಸುತ್ತಿದೆ.

ಐಪಿಎಲ್ ನಲ್ಲಿ ಮಿಂಚಿದ್ದ ಜಿತೇಶ್ ಗೆ ಸಿಗುತ್ತಾ ಚಾನ್ಸ್?

2025ರ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿಕೆಟ್ ಕೀಪರ್ ಬ್ಯಾಟರ್ ಆಗಿ ಅದ್ಭುತ ಪ್ರದರ್ಶನ ನೀಡಿದ್ದ ಜಿತೇಶ್ ಶರ್ಮಾ ಹೆಸರೂ ಕೂಡ ರೇಸ್​ನಲ್ಲಿದೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಆಡಿದ ಅನುಭವ ಇದ್ದು ಒಂಬತ್ತು ಪಂದ್ಯಗಳನ್ನು ಆಡಿ 100 ರನ್‌ಗಳನ್ನು ಗಳಿಸಿದ್ದಾರೆ. ಇಲ್ಲಿ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ 35 ಆಗಿತ್ತು. ಈ ಅಂಕಿಅಂಶಗಳನ್ನು ನೋಡಿದ್ರೆ ತಂಡಕ್ಕೆ ಸೆಲೆಕ್ಷನ್ ಮಾಡೋದು ಕಷ್ಟ. ಬಟ್ 2025ರ ಐಪಿಎಲ್​ನಲ್ಲಿ ಆರ್​ಸಿಬಿ ಪರ ಸಿಕ್ಕಾಪಟ್ಟೆ ಶೈನ್ ಆಗಿದ್ರು. ಎಲ್‌ಎಸ್‌ಜಿ ವಿರುದ್ಧದ ಮಸ್ಟ್ ವಿನ್ ಮ್ಯಾಚಲ್ಲಿ 33 ಎಸೆತಗಳಲ್ಲಿ 85 ರನ್‌ ಸಿಡಿಸಿ ಪಂದ್ಯ ಗೆಲ್ಲಿಸಿಕೊಟ್ಟಿದ್ರು. 257 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದರು. ಟೂರ್ನಿಯುದ್ದಕ್ಕೂ ಸಾಲಿಡ್ ಫಾರ್ಮ್​ನಲ್ಲಿ ಕಾಣಿಸಿಕೊಂಡಿದ್ರು. ಹೀಗಾಗಿ ಜಿತೇಶ್ ಹೆಸರನ್ನ ಸಹ ಇಲ್ಲಿ ಚರ್ಚೆಗೆ ಇಡಲಾಗಿದೆ.

ಕಿಶನ್ ಅಥವಾ ಜುರೇಲ್.. ಯಾರಿಗೆ ಅವಕಾಶ?

ಇನ್ನು ವಿಕೆಟ್ ಕೀಪಿಂಗ್ ಕೋಟಾದಲ್ಲಿ ಇಶಾನ್ ಕಿಶನ್ ಮತ್ತು ಧ್ರುವ್ ಜುರೆಲ್ ಹೆಸರೂ ಇದೆ. ಕಿಶನ್ ಕೊನೆಯ ಬಾರಿಗೆ 2023ರ ನವೆಂಬರ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ-20 ಮಾದರಿಯಲ್ಲಿ ಕಣಕ್ಕಿಳಿದಿದ್ರು.  ಎರಡು ಅರ್ಧಶತಕಗಳನ್ನು ಬಾರಿಸಿದ್ದ ಕಿಶನ್ ನಂತರ ಶೂನ್ಯಕ್ಕೆ ಔಟಾದರು. ಕಳೆದ ವರ್ಷದಿಂದ ಅವ್ರನ್ನ ಕೇಂದ್ರೀಯ ಒಪ್ಪಂದದಿಂದ ಕೈಬಿಡಲಾಗಿತ್ತು. ಹೀಗಾಗಿ ಏಷ್ಯಾಕಪ್ ಮೂಲಕ ಮತ್ತೆ ತಂಡಕ್ಕೆ ಕಮ್ ಬ್ಯಾಕ್ ಮಾಡೋ ನಿರೀಕ್ಷೆಯಲ್ಲಿದ್ದಾರೆ. ಮತ್ತೊಂದೆಡೆ ಧ್ರುವ್ ಜುರೆಲ್ ನಾಲ್ಕು ಟಿ20ಐಗಳಲ್ಲಿ ಭಾರತದ ಪರ ಕಣಕ್ಕಿಳಿದಿದ್ದಾರೆ. ಬಟ್ ಕಲೆ ಹಾಕಿದ್ದು ಕೇವಲ 12 ರನ್ ಅಷ್ಟೇ. ಐಪಿಎಲ್​ನ ಪ್ರದರ್ಶನ ಕೊಂಚ ಭರವಸೆ ಮೂಡಿಸಿದೆಯಾದ್ರೂ ರಾಷ್ಟ್ರೀಯ ತಂಡಕ್ಕೆ ಅವರ ತಯಾರಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಇವ್ರಿಷ್ಟೇ ಅಲ್ಲದೆ ವಿಕೆಟ್ ಕೀಪಿಂಗ್ ಕೋಟಾದಲ್ಲಿ ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್ ಹೆಸರೂ ಇದೆ. ಬಟ್ ಇವ್ರಿಬ್ಬರು ಆಯ್ಕೆಯಾಗೋದು ಕಷ್ಟ. ಇಂಗ್ಲೆಂಡ್ ಪ್ರವಾಸದಲ್ಲಿ ಕಾಲು ಬೆರಳಿನ ಮುರಿತದಿಂದ ಇಂಜುರಿಯಾಗಿರೋ ರಿಷಭ್ ಪಂತ್ ವಿಶ್ರಾಂತಿ ಪಡೆಯಬೇಕಿದೆ. ಹೀಗಾಗಿ ಅವ್ರನ್ನ ಏಷ್ಯಾಕಪ್​ನಿಂದ ಹೊರಗಿಡೋ ಸಾಧ್ಯತೆ ಇದೆ. ಇನ್ನು ಕಳೆದ ಮೂರು ವರ್ಷಗಳಿಂದ ಭಾರತ ತಂಡದ ಟಿ-20ಐ ಸ್ವರೂಪದಲ್ಲಿ ಸ್ಥಾನ ಕಳ್ಕೊಂಡಿರೋ ಕನ್ನಡಿಗ ಕೆಎಲ್ ರಾಹುಲ್​ರನ್ನೂ ಪರಿಗಣಿಸೋದು ಡೌಟಿದೆ. ಸದ್ಯದ ಡವಲಪ್​ಮೆಂಟ್ಸ್ ನೋಡಿದ್ರೆ ಸಂಜು ಸ್ಯಾಮ್ಸನ್ ಮೊದಲ ಆಯ್ಕೆ ಆಗಬಹುದು. ಹಾಗೇ ಜಿತೇಶ್ ಶರ್ಮಾರನ್ನ ಬ್ಯಾಕ್ ಅಪ್ ಆಗಿ ತಂಡಕ್ಕೆ ಸೇರಿಸಿಕೊಳ್ಳೋ ಸಾಧ್ಯತೆ ಇದೆ.

Shantha Kumari