ಏಷ್ಯಾಕಪ್ ನಲ್ಲಿ ಬ್ಯಾಟಿಂಗ್ & ಬೌಲಿಂಗ್ ನಲ್ಲಿ ಲಂಕನ್ನರ ಮೇಲುಗೈ – ಕೊಹ್ಲಿ & ಭುವಿ ಬರೆದ ದಾಖಲೆಗಳೇನು?

ಏಷ್ಯಾಕಪ್ ನಲ್ಲಿ ಬ್ಯಾಟಿಂಗ್ & ಬೌಲಿಂಗ್ ನಲ್ಲಿ ಲಂಕನ್ನರ ಮೇಲುಗೈ – ಕೊಹ್ಲಿ & ಭುವಿ ಬರೆದ ದಾಖಲೆಗಳೇನು?

2025ರ ಏಷ್ಯಾಕಪ್ ಟೂರ್ನಿಯು ಟಿ20 ಮಾದರಿಯಲ್ಲಿ ನಡೆಯಲಿದ್ದು, ಏಷ್ಯಾದ 8 ತಂಡಗಳ ನಡುವೆ ಫೈಟ್ ನಡೆಯಲಿದೆ. 8 ತಂಡಗಳನ್ನು ತಲಾ ಎರಡು ಗುಂಪುಗಳಾಗಿ ಡಿವೈಡ್ ಮಾಡಲಾಗಿದೆ. ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಓಮನ್ ಹಾಗೂ ಯುಎಇ ತಂಡಗಳಿದ್ರೆ ಬಿ ಗುಂಪಿನಲ್ಲಿ ಆಫ್ಘಾನಿಸ್ತಾನ, ಬಾಂಗ್ಲಾದೇಶ, ಹಾಂಕಾಂಗ್ ಹಾಗೂ ಶ್ರೀಲಂಕಾ ತಂಡಗಳು ಸ್ಥಾನ ಪಡೆದಿವೆ. ಈವರೆಗೂ ಏಷ್ಯಾಕಪ್​ನಲ್ಲಿ 16 ಆವೃತ್ತಿಗಳು ಮುಗಿದಿದ್ದು ಭಾರತ 8 ಸಲ ಚಾಂಪಿಯನ್ ಆಗಿದೆ. ಶ್ರೀಲಂಕಾ ತಂಡ ಆರು ಪ್ರಶಸ್ತಿಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಆದ್ರೆ ಲಂಕನ್ನರು ಬ್ಯಾಟಿಂಗ್ ಮತ್ತು ಬೌಲಿಂಗ್ ರೆಕಾರ್ಡ್ಸ್ ನಲ್ಲೂ ಮುಂದಿದ್ದಾರೆ.

ಇದನ್ನೂ ಓದಿ : ವೆಂಕಟೇಶ್ ಅಯ್ಯರ್ ಗೆ KKR ಗೇಟ್ ಪಾಸ್ – ₹23.50 ಕೋಟಿ.. RCB ಜಸ್ಟ್ ಮಿಸ್!

ಲಂಕನ್ನರ ಮೇಲುಗೈ!

ಸನತ್ ಜಯಸೂರ್ಯ ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ಅಗ್ರಸ್ಥಾನ

ಏಷ್ಯಾಕಪ್‌ನಲ್ಲಿ ಜಯಸೂರ್ಯ ಒಟ್ಟಾರೆಯಾಗಿ 1220 ರನ್ ಗಳಿಸಿದ್ದಾ

ಕುಮಾರ್ ಸಂಗಕ್ಕಾರ 1075 ರನ್‌ಗಳೊಂದಿಗೆ ಎರಡನೇ ಸ್ಥಾನ

ಭಾರತದ ದಂತಕಥೆ ಸಚಿನ್ ತೆಂಡೂಲ್ಕರ್ 971 ರನ್‌, 3ನೇ ಸ್ಥಾನ

ಈ ಮೂವರು ಟೂರ್ನಮೆಂಟ್‌ನಲ್ಲಿ ಏಕದಿನ ಮಾದರಿಯಲ್ಲಿ ಮಾತ್ರ ಆಡಿದ್ದಾರೆ

ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅತ್ಯಧಿಕ ವಿಕೆಟ್ ಪಡೆದ ಬೌಲರ್

24 ಪಂದ್ಯಗಳಲ್ಲಿ 30 ವಿಕೆಟ್, ಲಸಿತ್ ಮಾಲಿಂಗ 29 ವಿಕೆಟ್ ಪಡೆದಿದ್ದರೆ

ಅಜಂತಾ ಮೆಂಡಿಸ್ ಕೇವಲ ಎಂಟು ಪಂದ್ಯಗಳಲ್ಲಿ 26 ವಿಕೆಟ್ ಬೇಟೆ

ಇದು ಓವರ್ ಆಗಿ ಆಗಿರುವಂತ ಪರ್ಫಾಮೆನ್ಸ್. ಬಟ್ ಟಿ-20 ಫಾರ್ಮೆಟ್ ಅಂತಾ ಬಂದ್ರೆ ಭಾರತದವೇ ಮುಂದಿದ್ದಾರೆ. 2016ರಿಂದ ಏಷ್ಯಾಕಪ್ ನಲ್ಲಿ ಟಿ-20 ಮಾದರಿಯನ್ನ ಪರಿಚಯಿಸಲಾಯ್ತು. ಅಂದಿನಿಂದ 2 ಬಾರಿ ಮಾತ್ರವೇ ಟಿ-20ಐ ಸ್ವರೂಪದಲ್ಲಿ ಏಷ್ಯಾಕಪ್ ನಡೆದಿದೆ. 2016 ಮತ್ತು 2022ರಲ್ಲಿ. ಈ ಎರಡು ಸೀಸನ್  ಏಷ್ಯಾಕಪ್​ನಲ್ಲಿ ನಡೆದಿರೋ ಟಿ-20 ಮಾದರಿಯಲ್ಲಿ ವೈಯಕ್ತಿಕ ಹೈಯೆಸ್ಟ್ ರನ್ ಸ್ಕೋರರ್​ಗಳ ಲಿಸ್ಟ್​ನಲ್ಲಿ ವಿರಾಟ್ ಕೊಹ್ಲಿ ಟಾಪ್​ನಲ್ಲಿದ್ದಾರೆ.

2022 ರ ಆವೃತ್ತಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಅಜೇಯ 122 ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಟಿ20 ಏಷ್ಯಾಕಪ್‌ನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಕೊಹ್ಲಿ ಟಿ20 ಏಷ್ಯಾಕಪ್ ಇತಿಹಾಸದಲ್ಲಿ ಒಟ್ಟಾರೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದು, 10 ಪಂದ್ಯಗಳಲ್ಲಿ 429 ರನ್ ಗಳಿಸಿದ್ದಾರೆ. ಒಂದು ಶತಕ ಮತ್ತು ಮೂರು ಅರ್ಧಶತಕಗಳು ಸೇರಿವೆ. ಇನ್ನು ವೈಯಕ್ತಿಕ ರನ್ಸ್ ಲಿಸ್ಟ್ ನಲ್ಲಿ ಹಾಂಗ್ ಕಾಂಗ್ ನ ಬಾಬರ್ ಹಯಾತ್ ಕೂಡ ಕೊಹ್ಲಿ ಜೊತೆ ಈ ದಾಖಲೆ ಹಂಚಿಕೊಂಡಿದ್ದಾರೆ. 2016 ರಲ್ಲಿ, ಬಾಬರ್ ಒಮಾನ್ ವಿರುದ್ಧ 60 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಏಳು ಸಿಕ್ಸರ್ ಸೇರಿದಂತೆ 122 ರನ್ ಗಳಿಸಿದರು. ಇನ್ನು ಮೂರನೇ ಸ್ಥಾನದಲ್ಲಿ ರಹಮಾನುಲ್ಲಾ ಗುರ್ಬಾಜ್ ಇದ್ದಾರೆ. ಅಫ್ಘಾನಿಸ್ತಾನದ ಸ್ಫೋಟಕ ವಿಕೆಟ್ ಕೀಪರ್-ಬ್ಯಾಟರ್ ರಹಮಾನುಲ್ಲಾ ಗುರ್ಬಾಜ್ 2022 ರ ಟೂರ್ನಮೆಂಟ್‌ನಲ್ಲಿ ಶ್ರೀಲಂಕಾ ವಿರುದ್ಧ 84 ರನ್ ಗಳಿಸುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ. ನಾಲ್ಕನೇ ಪ್ಲೇಸ್​ನಲ್ಲಿ ಭಾರತದ ಮಾಜಿ ನಾಯಕ ರೋಹಿತ್ ಶರ್ಮಾ  ಇದ್ದು 2022 ರಲ್ಲಿ ಬಾಂಗ್ಲಾದೇಶ ವಿರುದ್ಧ 83 ರನ್ ಗಳಿಸಿದ್ರು. ಭಾರತದ ಪರ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಟಿ20 ಏಷ್ಯಾಕಪ್‌ನಲ್ಲಿ ರೋಹಿತ್ 9 ಪಂದ್ಯಗಳಲ್ಲಿ 271 ರನ್ ಗಳಿಸಿದ್ದು, ಟೂರ್ನಿಯ ಇತಿಹಾಸದಲ್ಲಿ ಭಾರತದ ಎರಡನೇ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಾಂಗ್ಲಾದೇಶದ ಸಬ್ಬೀರ್ ರೆಹಮಾನ್ 2016 ರಲ್ಲಿ ಶ್ರೀಲಂಕಾ ವಿರುದ್ಧ 80 ರನ್‌ಗಳ ಇನ್ನಿಂಗ್ಸ್‌ನೊಂದಿಗೆ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.

ಇದು ರನ್ ಗಳಿಸಿದವ್ರ ದಾಖಲೆಯಾದ್ರೆ ವಿಕೆಟ್ ಬೇಟೆಯಲ್ಲೂ ಭಾರತೀಯ ಆಟಗಾರನದ್ದೇ ಪಾರುಪತ್ಯ ಇದೆ. ಭಾರತದ ಭುವನೇಶ್ವರ್ ಕುಮಾರ್ ಟಿ-20ಐ ಏಷ್ಯಾಕಪ್​ನಲ್ಲಿ ಆರು ಇನ್ನಿಂಗ್ಸ್‌ಗಳಿಂದ 9.46 ಸರಾಸರಿಯಲ್ಲಿ 13 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ ಒಂದು ಐದು ವಿಕೆಟ್ ಗೊಂಚಲು ಮತ್ತು ಒಂದು ನಾಲ್ಕು ವಿಕೆಟ್ ಗೊಂಚಲು ಸೇರಿವೆ. ಅವರ ಎಕಾನಮಿ ದರ ಪ್ರತಿ ಓವರ್‌ಗೆ 5.34 ರನ್‌ಗಳು. ಹಾಗೇ ಟಿ20 ಏಷ್ಯಾಕಪ್ ಪಂದ್ಯಗಳಲ್ಲಿ ಐದು ವಿಕೆಟ್ ಪಡೆದ ಏಕೈಕ ಬೌಲರ್ ಭುವನೇಶ್ವರ್. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಅವರು ನಾಲ್ಕು ಓವರ್‌ಗಳ ಕೋಟಾದಲ್ಲಿ ನಾಲ್ಕು ರನ್ ನೀಡಿ ಐದು ವಿಕೆಟ್‌ಗಳನ್ನು ಕಬಳಿಸಿದರು, ಅದರಲ್ಲಿ ಒಂದು ಮೇಡನ್ ಕೂಡ ಸೇರಿತ್ತು.

Shantha Kumari