ನಟ ದರ್ಶನ್, ಕೈದಿ ಸಂಖ್ಯೆ 7314..! – ಮತ್ತೆ ಶುರುವಾಗುತ್ತಾ ಟ್ಯಾಟೂ ಟ್ರೆಂಡ್?

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸುಪ್ರೀಂ ಕೋರ್ಟ್ ಆರೋಪಿಗಳ ಜಾಮೀನು ರದ್ದು ಮಾಡಿದೆ. ಹೀಗಾಗಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳು ಮತ್ತೆ ಜೈಲು ಪಾಲಾಗಿದ್ದಾರೆ. ಇದೀಗ ಡಿ ಗ್ಯಾಂಗ್‌ಗೆ ವಿಚಾರಣಾಧೀನ ಕೈದಿ ಸಂಖ್ಯೆ ನೀಡಲಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಮನೆಯೊಂದರಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟ – ಬಾಲಕ ಸಾವು, ಹಲವರಿಗೆ ಗಾಯ!
ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಏಳು ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ ಆಗಸ್ಟ್ 14ರಂದು ರದ್ದು ಮಾಡಿದೆ. ಈ ವೇಳೆ ದರ್ಶನ್ ಬೆಂಗಳೂರಿನಲ್ಲಿ ಇರಲಿಲ್ಲ. ಮಧ್ಯಾಹ್ನದ ಬಳಿಕ ಅವರು ಬೆಂಗಳೂರಿನ ಹೊಸಕೆರೆಹಳ್ಳಿಗೆ ಬರುತ್ತಿದ್ದಂತೆ ಪೊಲೀಸರು ಬಂಧಿಸಿ, ಕೋರ್ಟ್ಗೆ ಹಾಜುರಪಡಿಸಿದರು. ನಂತರ ಪರಪ್ಪನ ಅಗ್ರಹಾರಕ್ಕೆ ಅವರನ್ನು ಕಳುಹಿಸಲಾಯಿತು. ಸದ್ಯ ದರ್ಶನ್ ಅವರನ್ನು ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ. ಇದೀಗ ಆರೋಪಿಗಳಿಗೆ ವಿಚಾರಣಾಧೀನ ಕೈದಿ ಸಂಖ್ಯೆ ನೀಡಲಾಗಿದೆ.
ದರ್ಶನ್ ಸೇರಿ ಐವರು ಆರೋಪಿಗಳಿಗೆ ವಿಚಾರಣಾಧೀನ ಕೈದಿ ನಂಬರ್ ನೀಡಲಾಗಿದೆ. ದರ್ಶನ್ ಕೈದಿ ಸಂಖ್ಯೆ 7314, ಪ್ರದೋಷ್ 7317, ನಾಗರಾಜ್ 7315, ಲಕ್ಷ್ಮಣ 7316, ಪವಿತ್ರ ಗೌಡ,7313 ನಂಬರ್ ನೀಡಲಾಗಿದೆ. ಪವಿತ್ರಾ ಗೌಡ ಪ್ರಕರಣದ ಎ1 ಆರೋಪಿ. ಈ ಕಾರಣದಿಂದಲೇ ಪವಿತ್ರಾಗೆ ಮೊದಲ ಸಂಖ್ಯೆ ನೀಡಲಾಗಿದೆ. ನಂತರದ ಸಂಖ್ಯೆಯನ್ನು ದರ್ಶನ್ಗೆ ಕೊಡಲಾಗಿದೆ.
ಕಳೆದ ಬಾರಿ ದರ್ಶನ್ ಅವರು ಬಂಧನಕ್ಕೆ ಒಳಗಾಗಾದ ವಿಚಾರಣಾಧೀನ ಕೈದಿ ಸಂಖ್ಯೆ ನೀಡಲಾಗಿತ್ತು. ಅನೇಕ ಅಭಿಮಾನಿಗಳು ಆಗ ಈ ಸಂಖ್ಯೆಯನ್ನು ಹಚ್ಚೆ ಹಾಕಿಸಿಕೊಂಡಿದ್ದರು. ಈಗ ದರ್ಶನ್ಗೆ ಬೇರೆ ಸಂಖ್ಯೆ ಸಿಕ್ಕಿದೆ. ಈ ಬಾರಿಯೂ ಫ್ಯಾನ್ಸ್ ಕೈದಿ ನಂಬರ್ನ ಹಚ್ಚೆ ಹಾಕಿಸಿಕೊಳ್ಳುತ್ತಾರಾ ಎನ್ನುವ ಕುತೂಹಲ ಮೂಡಿದೆ.

ನೋಡಿರಿ

