ಡೆವಿಲ್ ಸಿನಿಮಾ ಕಂಪ್ಲೀಟ್ ಆಗಿತ್ತಾ? ದರ್ಶನ್ ಕೈಯಲ್ಲಿದ್ದ ಸಿನಿಮಾಗಳು ಎಷ್ಟು?

ರೇಣುಕಾಸ್ವಾಮಿ ಕೇಸ್ನಲ್ಲಿ ದಾಸನಿಗೆ ಹೈಕೋರ್ಟ್ ಕೊಟ್ಟ ಬೇಲ್ನನ್ನ ಸುಪ್ರೀಂ ಕೋರ್ಟ್ ಕ್ಯಾನ್ಸಲ್ ಮಾಡಿದೆ. ಇದು ಡೆವಿಲ್ ಸಿನಿಮಾ ಕಣ್ತುಂಬಿಕೊಳ್ಳುವುದ್ದಕ್ಕೆ ಕಾಯುತ್ತಿದ್ದ ಫ್ಯಾನ್ಸ್ ಶಾಕ್ ನೀಡಿದೆ. ಅದ್ರಲ್ಲೂ ಸ್ವತಂತ್ರದಿನಾಚರಣೆಯ ದಿನವೇ ಡೆವಿಲ್ ಸಿನಿಮಾದ ಸಾಂಗ್ ರಿಲೀಸ್ ಆಗುತ್ತೆ ಅನ್ನೋ ಖುಷಿಗಿಂತ ಬಾಸ್ ಮತ್ತೆ ಜೈಲಿಗೆ ಹೋದ್ರು ಅನ್ನೋ ದುಖಃ ಫ್ಯಾನ್ಸ್ಗೆ ಹೆಚ್ಚಾಗಿದೆ.
ಡೆವಿಲ್ ಶೂಟಿಂಗ್ ಕಂಪ್ಲೀಟ್ ಆಗಿದ್ಯಾ?
ರೇಣುಕಾಸ್ವಾಮಿ ಕೇಸ್ನಲ್ಲಿ ಮೊದಲು ದರ್ಶನ್ ಜೈಲಿಗೆ ಹೋದಾಗ ಡೆವಿಲ್ ಚಿತ್ರೀಕರಣ ಅರ್ಧಕ್ಕೆ ನಿಂತಿತ್ತು. ಬಳಿಕ ಹೈಕೋರ್ಟ್ನಲ್ಲಿ ಜಾಮೀನು ಸಿಗುತ್ತಿದ್ದಂತೆ ಹೊರ ಬಂದ ಕೂಡಲೇ ಡೆವಿಲ್ ನಿರ್ಮಾಪಕರಿಗೆ ಹೊದ ಜೀವ ಮತ್ತೆ ಬಂದಿತ್ತು.. ಯಾಕಂದ್ರೆ ದರ್ಶನ್ ನಂಬಿ ಕೋಟಿ ಕೋಟಿ ಹಣ ಹೂಡಿಕೆ ಮಾಡಿದ್ರಿಂದ ಭಯ ಆಗೇ ಆಗುತ್ತೆ. ಹೈಕೋರ್ಟ್ ಬೇಲ್ ಕೊಡುತ್ತಿದ್ದಂತೆ ಅಲರ್ಟ್ ಆದ ಡೆವಿಲ್ ಟೀಂ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡಿದೆ. ಸುಪ್ರೀಂ ಕೋರ್ಟ್ನಲ್ಲಿ ಬೇಲ್ ಸಿಗದಿದ್ರೆ ಡೆವಿಲ್ ಚಿತ್ರ ತಂಡಕ್ಕೆ ತೊಂದರೆ ಆಗುತ್ತೆ ಎಂದು ಶೂಟಿಂಗ್ ಮುಗಿಸಲಾಗಿದೆ. ನಿಂತು ಹೋಗಿದ್ದ ಡೆವಿಲ್ ಚಿತ್ರಿಕರಣ ಕಳೆದ 5 ತಿಂಗಳ ಹಿಂದೆ ಶುರುವಾಗಿತ್ತು. ಮೈಸೂರು, ರಾಜಸ್ಥಾನದಲ್ಲಿ ಚಿತ್ರದ ಚಿತ್ರೀಕರಣ ಮುಗಿಸಲಾಗಿತ್ತು. ಬಳಿಕ ಸ್ವಿಟ್ಜರ್ಲ್ಯಾಂಡ್ಗೆ ತೆರಳಿ ಸಾಂಗ್ ಶೂಟ್ ಮಾಡಲು ಪ್ಲ್ಯಾನ್ ಮಾಡಲಾಗಿತ್ತು. ಆದರೆ ದರ್ಶನ್ ಅಲ್ಲಿಗೆ ತೆರಳಲು ವೀಸಾ ಸಿಕ್ಕಿರಲಿಲ್ಲ. ಬಳಿಕ ಥಾಯ್ಲೆಂಡ್ ವೀಸಾ ಪಡೆದು ಹೋಗಿ ಚಿತ್ರೀಕರಣ ನಡೆಸಿದ್ದರು. 10 ದಿನಗಳ ಕಾಲ ಅಲ್ಲಿ ದರ್ಶನ್ ಉಳಿದುಕೊಂಡಿದ್ದರು. ‘ಡೆವಿಲ್’ ಸಿನಿಮಾ ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯವಾಗಿದೆ. ದರ್ಶನ್ ಡಬ್ಬಿಂಗ್ ಸಹ ಮುಗಿಸಿದ್ದಾರೆ. ಮತ್ತೆ ಜೈಲಿಗೆ ಹೋದ್ರೆ ಮತ್ತೆ ಶೂಟಿಂಗ್ ಸಮಸ್ಯೆಗಳು ಆಗುತ್ತೆ ಅನ್ನೋ ಹಿನ್ನೆಲೆ ಪಟ ಪಟ ಅಂತ ಸಿನಿಮಾದ ಎಲ್ಲಾ ಕೆಲಸ ಮುಗಿಸಿದ್ದಾರೆ. ಸಿನಿಮಾದ ನಿರ್ಮಾಪಕರು ನಿರ್ದೇಶಕ ಪ್ರಕಾಶ್ಗೆ ತೊಂದರೆ ಆಗಬಾರದು ಎಂದು ಬೇಗ ಕೆಲಸ ಮುಗಿಸಿ ಈಗ ಮತ್ತೆ ಜೈಲಿಗೆ ಹೋಗುವಂತೆ ಆಗಿದೆ.
ದಾಸ ಜೈಲಿನಲ್ಲಿ ಇರ್ತಾನೆ ಡೆವಿಲ್ ರಿಲೀಸ್?
ಡೆವಿಲ್’ ಚಿತ್ರದಲ್ಲಿ ಗ್ರಾಫಿಕ್ಸ್ ಕೆಲಸ ಜಾಸ್ತಿಯಿದೆ. ಹಾಗಾಗಿ ಪೋಸ್ಟ್ ಪ್ರೊಡಕ್ಷನ್ ತಡವಾಗುತ್ತಿದೆ. ಆದ್ರೂ 2-3 ತಿಂಗಳೊಳಗೆ ಸಿನಿಮಾ ರಿಲೀಸ್ ಮಾಡೋಕೆ ಪ್ಲ್ಯಾನ್ ಮಾಡಲಾಗಿತ್ತು. ಆದ್ರೆ ದರ್ಶನ್ ಸದ್ಯಕ್ಕೆ ಜೈಲಿನಿಂದ ಹೊರಬರುವುದು ಕಷ್ಟ ಎನ್ನಲಾಗ್ತಿದ್ದು ‘ಡೆವಿಲ್’ ಸಿನಿಮಾ ಯಾವಾಗ ಬಿಡುಗಡೆ ಆಗುತ್ತಾ? ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. 14 ವರ್ಷಗಳ ಹಿಂದೆ ದರ್ಶನ್ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಅವರು ಜೈಲಿನೊಳಗೆ ಇದ್ದಾಗಲೇ ‘ಸಾರಥಿ’ ಸಿನಿಮಾ ತೆರೆಕಂಡು ಗೆದ್ದಿತ್ತು. ಬಳಿಕ ಜಾಮೀನು ಪಡೆದು ಹೊರ ಬಂದಿದ್ದರು. ರಾಜ್ಯಾದ್ಯಂತ ವಿಜಯಯಾತ್ರೆ ನಡೆಸಿದ್ದರು. ದರ್ಶನ್ ಜೈಲಿನಲ್ಲಿ ಇದ್ದರೂ ‘ಡೆವಿಲ್’ ಸಿನಿಮಾ ಬಿಡುಗಡೆ ಆಗುತ್ತಾ? ಅಥವಾ ಸಿನಿಮಾ ಬಿಡುಗಡೆ ವೇಳೆಗೆ ದರ್ಶನ್ ಜೈಲಿನಿಂದ ಹೊರಬರ್ತಾರಾ? ಅನ್ನೋ ಕೂತೂಹಲ ಮನೆ ಮಾಡಿದೆ. ಸುಪ್ರೀಂ ಬೇಲ್ ಕ್ಯಾನ್ಸಲ್ ಮಾಡಿದ್ರಿಂದ ಬೇಲ್ ಸದ್ಯಕ್ಕೆ ಸಿಗಲ್ಲ.. ಹೀಗಾಗಿ ದರ್ಶನ್ ಜೈಲಿನಲ್ಲಿ ಇರ್ತಾನೆ ಡೆವಿಲ್ ರಿಲೀಸ್ ಆಗೋದು ಪಕ್ಕಾ ಎನ್ನಲಾಗ್ತಿದೆ.
ದಾಸನ ಕೈಯಲ್ಲಿ ಬೇರೆ ಸಿನಿಮಾ ಇದ್ವಾ?
ದರ್ಶನ್ ಬಳಿ ಅಧಿಕೃತವಾಗಿ ಇದಿದ್ದು ಡೆವಿಲ್ ಸಿನಿಮಾ ಮಾತ್ರ. ಆದರೆ, ಅಧಿಕೃತವಾಗಿ ಘೋಷಣೆ ಆಗದ ಎರಡು ಸಿನಿಮಾಗಳು ಅವರ ಬಳಿ ಇದ್ದವು. ಅವು ಯಾವವು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ. ಸದ್ಯ ಈ ಸಿನಿಮಾಗಳ ಶೂಟಿಂಗ್ ಅರ್ಧಕ್ಕೆ ನಿಲ್ಲಲಿದೆ. ದರ್ಶನ್ ಅವರು ಶೈಲಜಾ ನಾಗ್ ಜೊತೆ ಒಂದು ಸಿನಿಮಾ ಮಾಡಬೇಕಿತ್ತು ಎನ್ನಲಾಗಿದೆ. ತರುಣ್ ಸುಧೀರ್ ಅವರು ಇದಕ್ಕೆ ನಿರ್ದೇಶನ ಮಾಡಬೇಕಿತ್ತು. ‘ವೀರ ಸಿಂಧೂರ ಲಕ್ಷ್ಮಣ’ ಎಂಬುದು ಚಿತ್ರದ ಟೈಟಲ್ ಎನ್ನಲಾಗಿದೆ. ಇನ್ನು, ದರ್ಶನ್ ಅಳಿಯ ಚಂದು ಸಿನಿಮಾಗೆ ದರ್ಶನ್ ವಿಲನ್ ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಕೂಡ ಇನ್ನೂ ಅಧಿಕೃತವಾಗಿ ಘೋಷಣೆ ಆಗಿಲ್ಲ. ಈಗ ದರ್ಶನ್ ಇಲ್ಲದೆ, ಈ ಸಿನಿಮಾ ಕೂಡ ಅರ್ಧಕ್ಕೆ ನಿಲ್ಲುವ ಸಾಧ್ಯತೆ ದಟ್ಟವಾಗಿದೆ. ಒಟ್ನಲ್ಲಿ ದರ್ಶನ್ ಜೀವನದ ಕೊನೆ ಸಿನಿಮಾ ಡೆವಿಲ್ ಆಗದಿರಲಿ, ಇನ್ನೂ ಬೇರೆ ಬೇರೆ ಸಿನಿಮಾಗಳನ್ನ ಅವರು ಕೊಡಲಿ.

ನೋಡಿರಿ

