ಕ್ಯಾಪ್ಟನ್ಸಿ ಹೋಯ್ತು.. ಫೀಲ್ಡಿಂಗ್ ನಲ್ಲೂ ಬೆಂಚ್ ಬಿಸಿ – ಐಪಿಎಲ್ ನಲ್ಲೂ ರೋಹಿತ್ ನಿವೃತ್ತಿಗೆ ಹತ್ತಿರವಾದ್ರಾ?

ಜಗತ್ತಿನ ಅತ್ಯಂತ ಶ್ರೀಮಂತ ಲೀಗ್ ಆಗಿರೋ ಐಪಿಎಲ್ನಲ್ಲಿ ಒನ್ ಆಫ್ ದಿ ಸ್ಟಾರ್ ಌಂಡ್ ಸಕ್ಸಸ್ಫುಲ್ ಪ್ಲೇಯರ್ ರೋಹಿತ್ ಶರ್ಮಾ. 2008 ರಲ್ಲಿ ಡೆಕ್ಕನ್ ಚಾರ್ಜರ್ಸ್ನೊಂದಿಗೆ ಐಪಿಎಲ್ಗೆ ಪ್ರವೇಶಿಸಿದ ರೋಹಿತ್ ಆ ಬಳಿಕ ಮುಂಬೈ ಇಂಡಿಯನ್ಸ್ನ ಐಕಾನಿಕ್ ಪ್ಲೇಯರ್ ಆದ್ರು. 18 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವೀ ಕ್ಯಾಪ್ಟನ್ ಆಗಿದ್ದಾರೆ. 2021ರಲ್ಲಿ ಮುಂಬೈ ಇಂಡಿಯನ್ಸ್ ಸೇರಿದ ರೋಹಿತ್ ಸೀಸನ್ನಿಂದ ಸೀಸನ್ಗೆ ಬೆಳೀತಾನೇ ಬಂದ್ರು. ರೋಹಿತ್ ನಾಯಕತ್ವದಲ್ಲೇ ಮುಂಬೈ ತಂಡ ಐದು ಬಾರಿ ಚಾಂಪಿಯನ್ ಪಟ್ಟಕ್ಕೂ ಏರಿದೆ.
ಇದನ್ನೂ ಓದಿ : ಪಾಕಿಸ್ತಾನದೊಂದಿಗೆ ಸಂಪರ್ಕ – ಮೂವರು ಭಯೋತ್ಪಾದಕ ಸಹಚರರು ಅರೆಸ್ಟ್
ರೋಹಿತ್ ಶರ್ಮಾ ಡೆಕ್ಕನ್ ಚಾರ್ಜರ್ಸ್ ತಂಡದೊಂದಿಗೆ ಐಪಿಎಲ್ಗೆ ಪಾದಾರ್ಪಣೆ ಮಾಡಿದರು. ಮೊದಲ ಸೀಸನ್ನಲ್ಲೇ 16 ಪಂದ್ಯಗಳಲ್ಲಿ 133.77 ಸ್ಟ್ರೈಕ್ ರೇಟ್ನಲ್ಲಿ 404 ರನ್ ಗಳಿಸಿದರು. 2011 ರಲ್ಲಿ, ಮುಂಬೈ ಇಂಡಿಯನ್ಸ್ ರೋಹಿತ್ ಅವರನ್ನು 9.2 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಆ ವರ್ಷ 16 ಪಂದ್ಯಗಳಲ್ಲಿ 33.81 ಸರಾಸರಿಯಲ್ಲಿ 372 ರನ್ ಗಳಿಸಿದರು. 2013 ರಲ್ಲಿ ರೋಹಿತ್ ಅವರನ್ನು ಮುಂಬೈ ಇಂಡಿಯನ್ಸ್ ತಂಡದ ನಾಯಕರನ್ನಾಗಿ ಮಾಡಲಾಯಿತು. ಆ ಬಳಿಕ ರೋಹಿತ್ ಹಿಂತಿರುಗಿ ನೋಡಿದ್ದೇ ಇಲ್ಲ. ತಮ್ಮ ನಾಯಕತ್ವದ ಅವಧಿಯಲ್ಲೇ ಅಂದ್ರೆ 2013, 2015, 2017, 2019 ಮತ್ತು 2020 ರಲ್ಲಿ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿದ್ರು.
ಇನ್ನು ಐಪಿಎಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಅತ್ಯಧಿಕ ಸ್ಕೋರ್ ಅಂದ್ರೆ 109 ರನ್ ಗಳಿಸಿ ನಾಟೌಟ್ ಆಗಿ ಉಳಿದಿರೋದು. 2012 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಈ ಸಾಧನೆ ಮಾಡಿದ್ರು. ಹಾಗೇ 2025 ರ ಪ್ರದರ್ಶನ ನೋಡೋದಾದ್ರೆ ಮುಂಬೈ ಪರ 15 ಪಂದ್ಯಗಳನ್ನು ಆಡಿದ್ದು 29.85 ಸರಾಸರಿ ಮತ್ತು 149.28 ಸ್ಟ್ರೈಕ್-ರೇಟ್ನಲ್ಲಿ 418 ರನ್ ಗಳಿಸಿದ್ದಾರೆ. ಒಟ್ಟಾರೆಯಾಗಿ ಐಪಿಎಲ್ ಜರ್ನಿಯಲ್ಲಿ 272 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 7046 ರನ್ ಕಲೆ ಹಾಕಿದ್ದಾರೆ. ಈ ಪೈಕಿ ಎರಡು ಶತಕ ಮತ್ತು 47 ಅರ್ಧಶತಕಗಳು ಸೇರಿವೆ. ಹೀಗೆ ಅತ್ಯದ್ಭುತ ಪ್ರದರ್ಶನ ನೀಡುತ್ಥಾ ಬಂದಿದ್ರೂ ರೋಹಿತ್ ಶರ್ಮಾರನ್ನ ಮುಂಬೈ ತಂಡ ಸೈಡ್ಲೈನ್ ಮಾಡ್ತಿದೆ.
ಐಪಿಎಲ್ ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಇರೋದು ನಿಮ್ಗೆಲ್ಲಾ ಗೊತ್ತೇ ಇದೆ. ಆದ್ರೆ ಈ ಅಸ್ತ್ರವನ್ನ ಎಂಐ ರೋಹಿತ್ ಶರ್ಮಾ ಮೇಲೆ ಪ್ರಯೋಗ ಮಾಡ್ತಿದೆ. ಬ್ಯಾಟಿಂಗ್ಗೆ ಬರೋ ರೋಹಿತ್ ಫೀಲ್ಡಿಂಗ್ ಟೈಮಲ್ಲಿ ಬೆಂಚ್ನಲ್ಲಿ ಕೂರಬೇಕಾಗಿದೆ. ಅಸಲಿಗೆ ರೋಹಿತ್ಗೆ ಈ ಥರ ಅವಮಾನ ಆಗಿದ್ದು ಹೊಸದೇನೂ ಅಲ್ಲ. 2024ರ ಸೀಸನ್ಗೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಹಿಟ್ಮ್ಯಾನ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿತ್ತು. ಅಲ್ಲದೆ ಅವರ ಬದಲಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿತ್ತು. ಈ ಬಗ್ಗೆ ಖುದ್ದು ಹಿಟ್ಮ್ಯಾನ್ ತಮ್ಮ ಅಸಮಾಧಾನ ಹೊರಹಾಕಿದ್ದರು. ಇದಾಗ್ಯೂ ಅವರು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯನ್ನು ತೊರೆದಿರಲಿಲ್ಲ. ಹೀಗಿದ್ರೂ 2025ರ ಐಪಿಎಲ್ನಲ್ಲೂ ರೋಹಿತ್ರನ್ನ ಸಮಾನವಾಗಿ ಬಳಸಿಕೊಂಡಿರಲಿಲ್ಲ. ಹೀಗಾಗಿ ಐಪಿಎಲ್ನಲ್ಲೂ ರೋಹಿತ್ರ ಜರ್ನಿ ಮುಗೀಯೋ ಹಂತಕ್ಕೆ ಬಂತಾ ಅನ್ನೋ ಅನುಮಾನ ಶುರುವಾಗಿದೆ.

ನೋಡಿರಿ

